senior citizen card benefits: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರ ನೀಡುವ ವಿಶೇಷ ಸೌಲಭ್ಯಗಳು ಯಾವುವು? Senior citizen card ಹೇಗೆ ಪಡೆಯಬೇಕು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ….
ಹಿರಿಯರು ಎಂದರೆ ಅವರು ಕೇವಲ ವಯಸ್ಸಾದವರು ಮಾತ್ರವಲ್ಲ ಅವರು ನಮ್ಮ ಮನೆಯ ಅನುಭವದ ಭಂಡಾರ ಜೀವನಪೂರ್ತಿ ತಮ್ಮ ಕುಟುಂಬಕ್ಕಾಗಿ ದುಡಿದು, ಮಕ್ಕಳನ್ನು ಬೆಳೆಸಿ 60 ವರ್ಷಗಳ ನಂತರದ ಜೀವನವನ್ನು ನೆಮ್ಮದಿಯಿಂದ ಆರ್ಥಿಕ ಭದ್ರತೆಯೊಂದಿಗೆ ಕಳೆಯಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿರುತ್ತದೆ.
ಇದನ್ನು ಮನಗಂಡು ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ ಗುರುತಿನ ಚೀಟಿ (senior citizen identity card) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಲವರು ಇದನ್ನು ಕೇವಲ ವಯಸ್ಸಿನ ಪ್ರಾಣ ಎಂದು ಭಾವಿಸುತ್ತಾರೆ.
ಇದು ಹಿರಿಯರಿಗೆ ಹಲವಾರು ಸರ್ಕಾರಿ ಮತ್ತು ಖಾಸಗಿ ಸೌಲಭ್ಯಗಳನ್ನು ಪಡೆಯಲು ಸಹಾಯಕವಾಗುವ ಒಂದು ಮಹತ್ವದ ಗುರುತಿನ ಚೀಟಿ. ಕೆಲವೊಮ್ಮೆ ಕಷ್ಟದ ಸಂದರ್ಭಗಳಲ್ಲಿ ಇದು ಆರ್ಥಿಕವಾಗಿ ಸಹಾಯ ಮಾಡುವ ಕಾರ್ಡ್.
ಹಿರಿಯ ನಾಗರಿಕರ ಗುರುತಿನ ಚೀಟಿ ಎಂದರೇನು?
ಹಿರಿಯ ನಾಗರೀಕರ ಗುರುತಿನ ಚೀಟಿ (senior citizen card) ಎನ್ನುವುದು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕರ್ನಾಟಕದ ನಾಗರಿಕರಿಗೆ ನೀಡಲಾಗುವ ಅಧಿಕೃತ ಗುರುತಿನ ಚೀಟಿ.
ಇದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ (department of empowerment of differently abled and senior citizens) ಅದೀನದಲ್ಲಿ ನೀಡಲಾಗುತ್ತದೆ.
ಈ ಕಾರ್ಡ್ ಕೇವಲ ವಯಸ್ಸಿನ ಪ್ರಾದೇ ಮಾತ್ರವಲ್ಲ ಸರ್ಕಾರಿ ಯೋಜನೆಗಳು, ರಿಯಾಯಿತಿಗಳು ,ಪಿಂಚಣಿ ಯೋಜನೆಗಳು ,ಆರೋಗ್ಯ ಸೇವೆಗಳು, ಸಾರಿಗೆ ಸೌಲಭ್ಯಗಳು, ಮತ್ತು ಬ್ಯಾಂಕಿಂಗ್ ಸೌಲಭ್ಯಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಪಡೆಯಲು ಇದು ಅಧಿಕೃತ ದಾಖಲೆಯಾಗಿದೆ.
ಈ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು?
ಹಿರಿಯ ನಾಗರೀಕರ ಗುರುತಿನ ಚೀಟಿ ಪಡೆಯಲು ಕೆಳಗಿನ ಅರ್ಹತೆಗಳು ಇರಬೇಕು.
- ಅರ್ಜಿದಾರರು ಕರ್ನಾಟಕದ ಕಾಯಂಪ್ರಜೆಯಾಗಿರಬೇಕು
- ಅರ್ಜಿದಾರರ ವಯಸ್ಸು ಕನಿಷ್ಠ 60 ವರ್ಷ ಪೂರ್ತಿ ಆಗಿರಬೇಕು
- ವಿಕಲಚೇತನ ಹಿರಿಯರು ಕೂಡ ಈ ಕಾಡುಪಡೆಯಲು ಅರ್ಹರಾಗಿದ್ದಾರೆ
ಈ ಅರ್ಹತೆಗಳನ್ನು ಪೂರೈಸಿದ ಯಾವುದೇ ಹಿರಿಯರು ಈ ಕಾರ್ಡ್ ಪಡೆಯಬಹುದು. ಇದು ಪ್ರತಿಯೊಬ್ಬ ಹಿರಿಯ ನಾಗರೀಕರ ಹಕ್ಕಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
ಹಿರಿಯ ನಾಗರೀಕರ ಕಾರ್ಡಿಗೆ ಅರ್ಜಿ ಸಲ್ಲಿಸಲು ಕೆಳಗಿನ ದಾಖಲೆಗಳು ಅಗತ್ಯ.
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಜನನ ಪ್ರಮಾಣ ಪತ್ರ ಅಥವಾ ವಯಸ್ಸಿನ ಪುರಾವೆ
- ವಿಳಾಸದ ಪುರಾವೆ
- ರೇಷನ್ ಕಾರ್ಡ್
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಅರ್ಜಿ ಪ್ರಕ್ರಿಯೆ ಸುಲಭವಾಗಿ ಪೂರ್ಣಗೊಳ್ಳುತ್ತದೆ.
ಹಿರಿಯ ನಾಗರೀಕರ ಕಾರ್ಡಿನ ಪ್ರಮುಖ ಪ್ರಯೋಜನಗಳು
1. ಸಾರಿಗೆ ರಿಯಾಯಿತಿಗಳು ( travel concession)
ಕೆ ಎಸ್ ಆರ್ ಟಿ ಸಿ ಬಸ್ ಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ 25 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದು ನಿಯಮಿತವಾಗಿ ಪ್ರಯಾಣಿಸುವವರಿಗೆ ಆರ್ಥಿಕವಾಗಿ ಬಹಳ ಸಹಾಯಕವಾಗಿದೆ.
ರೈಲ್ವೆ ಸೌಲಭ್ಯ: ಇಂಡಿಯನ್ ರೈಲ್ವೆ ವತಿಯಿಂದ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ಗಳು ಹಾಗೂ ಕೆಳಮಟ್ಟದ ಸೀಟುಗಳಿಗೆ ಆದ್ಯತೆ ನೀಡಲಾಗುತ್ತದೆ ಟಿಕೆಟ್ ದರ ರಿಯಾಯಿತಿಗಳು ಕೇಂದ್ರ ಸರ್ಕಾರದ ನಿಯಮಗಳಿಗೆ ಒಳಪಟ್ಟಿರುತ್ತದೆ.
ವಿಮಾನಯಾನ ಸೌಲಭ್ಯ: ಏರ್ ಇಂಡಿಯಾ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳು ಹಿರಿಯರಿಗೆ ಮೂಲ ದರದಲ್ಲಿ ರಿಯಾಯಿತಿ ನೀಡುತ್ತದೆ ಇದು ದೂರ ಪ್ರಯಾಣ ಮಾಡುವ ಹಿರಿಯರಿಗೆ ಅನುಕೂಲಕರವಾಗಿದೆ.
2. ಆರೋಗ್ಯ ಮತ್ತು ಚಿಕಿತ್ಸೆ(healthcare benefits)
- ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ
- ಕೆಲವು ಖಾಸಗಿ ಆಸ್ಪತ್ರೆಗಳು ಮತ್ತು ಡಯಾಕ್ನೋಸ್ಟಿಕ್ ಕೇಂದ್ರಗಳಲ್ಲಿ 10% ರಿಂದ 30% ವರೆಗೆ ರಿಯಾಯಿತಿ.
- ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಅರ್ಹ ಹಿರಿಯರಿಗೆ ಆರೋಗ್ಯ ವಿಮೆ ಸೌಲಭ್ಯ.
- ಆರೋಗ್ಯ ವೆಚ್ಚಗಳು ಹೆಚ್ಚುತ್ತಿರುವ ಹಿಂದಿನ ಕಾಲದಲ್ಲಿ ಈ ಸೌಲಭ್ಯಗಳು ಬಹಳ ಮಹತ್ವದ್ದಾಗಿದೆ.
3. ಬ್ಯಾಂಕಿಂಗ್ ಮತ್ತು ಹಣಕಾಸು ಸೌಲಭ್ಯಗಳು(banking and financial benefits)
ಹೆಚ್ಚುವರಿ ಬಡ್ಡಿ: ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿಗಳ (fixed deposits) ಮೇಲೆ ಹಿರಿಯರಿಗೆ ಸಾಮಾನ್ಯ ಜನರಿಗಿಂತ ಸುಮಾರು 0.50 % ಬಡ್ಡಿ ನೀಡಲಾಗುತ್ತದೆ.
ಆದಾಯ ತೆರಿಗೆ ವಿನಾಯಿತಿ: ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಮಿತಿ (Income tax exemption limit) ಹೆಚ್ಚು ಇರುತ್ತದೆ ಇದರಿಂದ ತೆರಿಗೆ ಬಾರ ಕಡಿಮೆಯಾಗುತ್ತದೆ.
ಪಿಂಚಣಿ ಯೋಜನೆಗಳು: ಬಡತನ ರೇಖೆಗಿಂತ ಕೆಳಗಿರುವ ಹಿರಿಯರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವೃದ್ಯಾಪ್ಯ ವೇತನ (old age pension) ಸೌಲಭ್ಯ ಲಭ್ಯವಿದೆ.
4. ಕಾನೂನು ಮತ್ತು ಆಡಳಿತಾತ್ಮಕ ಆದ್ಯತೆ
- ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳಿಗೆ ಆದ್ಯತೆ.
- ಸರ್ಕಾರಿ ಕಚೇರಿಗಳಲ್ಲಿ ದೀರ್ಘಕಾಲ ಕಾಯಬೇಕಾದ ಅಗತ್ಯವಿಲ್ಲ.
- ಸಾರ್ವಜನಿಕ ಸೇವೆಗಳಲ್ಲಿ ಗೌರವಯುತ ವರ್ತನೆ.
ಅರ್ಜಿ ಸಲ್ಲಿಸುವ ವಿಧಾನ (how to apply)
ಆಫ್ ಲೈನ್ ವಿಧಾನ: ಹಿರಿಯ ನಾಗರಿಕರು ತಮ್ಮ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. Karnataka one Bangalore one grama one centres ಅಥವಾ ಜಿಲ್ಲಾಮಟ್ಟದ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಆನ್ಲೈನ್ ವಿಧಾನ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಬಳಸಬಹುದು. ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.
- 1.ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- 2.ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಆಯ್ಕೆ ಮಾಡಿ
- 3.ಹಿರಿಯ ನಾಗರೀಕರ ಗುರುತಿನ ಚೀಟಿ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ
- 4.ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- 5.ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಸಂಖ್ಯೆ (acknowledgement number) ಪಡೆಯಿರಿ.
ಈ ಸಂಖ್ಯೆ ಮೂಲಕ ನಿಮ್ಮ ಅರ್ಜಿಯ ಸ್ಥಿತಿ (application status) ಪರಿಶೀಲಿಸಬಹುದು.
60 ವರ್ಷ ದಾಟಿದ ನಂತರದ ಜೀವನವನ್ನು ಸೆಕೆಂಡ್ ಇನ್ನಿಂಗ್ಸ್ ಆಫ್ ಲೈಫ್ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಮಾಸಿಕ ನೆಮ್ಮದಿ ಆರೋಗ್ಯ ಭದ್ರತೆ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಗೌರವ ಬಹಳ ಮುಖ್ಯ. ಹಿರಿಯ ನಾಗರೀಕರ ಗುರುತಿನ ಚೀಟಿ ಈ ಎಲ್ಲಾ ಅಂಶಗಳಲ್ಲಿ ಸಹಾಯಕವಾಗುತ್ತದೆ.
ಇದು ಕೇವಲ ಒಂದು ಕಾರ್ಡ್ ಅಲ್ಲ ಇದು ಸರ್ಕಾರದಿಂದ ದೊರೆಯುವ ಗೌರವದ ಚಿಹ್ನೆ ಕುಟುಂಬದವರು ತಮ್ಮ ಮನೆಯ ಹಿರಿಯರಿಗೆ ಈ ಕಾರ್ಡ್ ಮಾಡಿಸಿ ಕೊಡುವುದು ಒಂದು ಹೊಣೆಗಾರಿಕೆ.
ಹೀಗಾಗಿ ನಿಮ್ಮ ಮನೆಯ ಹಿರಿಯರು 60 ವರ್ಷ ದಾಟಿದ್ದರೆ ತಕ್ಷಣವೇ ಈ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ, ಸರ್ಕಾರ ನೀಡಿರುವ ಈ ಅವಕಾಶವನ್ನು ಬಳಸಿಕೊಂಡು ಅವರ ಜೀವನವನ್ನು ಇನ್ನಷ್ಟು ಸುಖಮಯ ಮತ್ತು ಭದ್ರವಾಗಿಸಿ.
ಬೇಗ ಅರ್ಜಿ ಸಲ್ಲಿಸಿ
ಹಿರಿಯರು ನಮ್ಮ ಸಮಾಜದ ಅಮೂಲ್ಯ ಸಂಪತ್ತು ಅವರ ಅನುಭವ ಜ್ಞಾನ ಮತ್ತು ತ್ಯಾಗಕ್ಕೆ ಪ್ರತಿಫಲವಾಗಿ ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಪಡೆಯುವುದು ಅವರ ಹಕ್ಕು.
ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವುದರಿಂದ ಪ್ರಯಾಣದ ರಿಯಾಯಿತಿ ಆರೋಗ್ಯ ಸೌಲಭ್ಯ ಬ್ಯಾಂಕಿಂಗ್ ಲಾಭ ಪಿಂಚಣಿ ಯೋಜನೆ ಕಾನೂನು ಆದ್ಯತೆ ಸೇರಿದಂತೆ ಅನೇಕ ಪ್ರಯೋಜನಗಳು ದೊರೆಯುತ್ತವೆ.
ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಜೀವನದ ಎರಡನೇ ಇನಿಂಗ್ಸ್ ಅನ್ನು ಗೌರವ ಮತ್ತು ನೆಮ್ಮದಿಯಿಂದ ಆರಂಭಿಸಿ.