PM Awas Yojana subsidy: ಪ್ರಧಾನ ಮಂತ್ರಿ ಆವಾಸ್ ಯೋಜನೆ. ಸ್ವಂತ ಮನೆ ಕಟ್ಟಲು ಸರ್ಕಾರದ ಸಬ್ಸಿಡಿ ಪಡೆಯುವ ಸಂಪೂರ್ಣ ಮಾಹಿತಿ

WhatsAppಫಾಲೋ ಮಾಡಿ

 

PM Awas Yojana house subsidy: ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)  ಅಡಿ ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರ ಮಹತ್ವದ ಹೋಂ ಲೋನ್ ಸಬ್ಸಿಡಿ ನೀಡುತ್ತಿದೆ .ಈ ಯೋಜನೆ ಅಡಿ ಸಾಲ ಮತ್ತು ಸಹಾಯಧನ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಂತ ಮನೆ ಎಂಬುದು ಪ್ರತಿಯೊಬ್ಬ ಭಾರತೀಯನ ಜೀವನದ ಅತಿ ದೊಡ್ಡ ಕನಸು ಆದರೆ ಇಂದಿನ ದುಬಾರಿ ಜೀವನಶೈಲಿ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಸಾಲದ ಬಡ್ಡಿ ದರಗಳು ಮನೆ ನಿರ್ಮಾಣವನ್ನು ಸಾಮಾನ್ಯ ಜನರಿಗೆ ದೊಡ್ಡ ಸವಾಲಾಗಿ ಮಾಡಿದೆ

ವರ್ಷಗಳ ಕಾಲ ದುಡಿದು ಕೂಡಿಟ್ಟ ಹಣ ಹಾಗೂ ನಿವೃತ್ತಿಯ ನಂತರ ದೊರೆಯುವ ಮೊತ್ತವನ್ನು ಒಟ್ಟುಗೂಡಿಸಿದರೂ, ಸಾಲವಿಲ್ಲದೆ ಮನೆ ಕಟ್ಟುವುದು ಬಹುತೇಕ ಅಸಾಧ್ಯವೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಶಾಕಿರಣವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ಪ್ರಧಾನಮಂತ್ರಿ ಅವಾಜ್ ಯೋಜನೆ(PMAY). ಸ್ವಂತ ಮನೆ ಹೊಂದಬೇಕೆಂಬ ಲಕ್ಷಾಂತರ ಜನರ ಕನಸನ್ನು ನನಸು ಮಾಡುತ್ತಿರುವ ಈ ಯೋಜನೆ ನಿಜಕ್ಕೂ ಒಂದು ವರದಾನವಾಗಿದೆ.

ಮನೆ ಕನಸನ್ನು ನನಸಾಗಿಸುವ ಪ್ರಧಾನಮಂತ್ರಿಯ ಆವಾಸ್ ಯೋಜನೆ 

ಪ್ರಧಾನಮಂತ್ರಿ ಆವಾಜ್ ಯೋಜನೆ ಕಳೆದ 2014ರಲ್ಲಿ ಪ್ರಾರಂಭಗೊಂಡಿದ್ದು ಎಲ್ಲರಿಗೂ ಮನೆ ಎಂಬ ಮಹತ್ವಕಾಂಕ್ಷೆಯ ಗುರಿಯನ್ನು ಹೊಂದಿದೆ. ಈ ಯೋಜನೆ ಅಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಾಲ ಮತ್ತು ಸರ್ಕಾರದಿಂದ ಸಬ್ಸಿಡಿ ಒದಗಿಸಲಾಗುತ್ತದೆ.

ಯೋಜನೆ ಆರಂಭವಾದ ಬಳಿಕ ಇದುವರೆಗೆ ಲಕ್ಷಾಂತರ ಕಾಂಕ್ರೀಟ್ ಮನೆಗಳು ನಿರ್ಮಾಣಗೊಂಡಿದೆ ಒಟ್ಟು ಒಂದು ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಸರ್ಕಾರ ಪ್ರತಿ ವರ್ಷವೂ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುತ್ತದೆ.

ಸಾಲ ಮತ್ತು ಸಬ್ಸಿಡಿ ನೆರವಿನ ಸಂಪೂರ್ಣ ವಿವರ 

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿಶೇಷತೆ ಎಂದರೆ ಮನೆ ಕಟ್ಟಲು ಸಾಲ ಸಿಗುವುದರ ಜೊತೆಗೆ ಸರ್ಕಾರದಿಂದ ನೇರವಾಗಿ ಸಬ್ಸಿಡಿ ಸಹಾಯಧನ ದೊರೆಯುವುದು.

ಈ ಸಬ್ಸಿಡಿಯನ್ನು ಬ್ಯಾಂಕುಗಳು ಸರ್ಕಾರಿ ಹಣಕಾಸು ಸಂಸ್ಥೆಗಳು ಹಾಗೂ ವಾಣಿಜ್ಯ ಬ್ಯಾಂಕುಗಳ ಮೂಲಕ ನೀಡಲಾಗುತ್ತದೆ. ಫಲಾನುಭವಿಗಳನ್ನು ಅವರ ವಾರ್ಷಿಕ ಆದಾಯದ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವಿಭಜಿಸಲಾಗಿದೆ.

EWS-ಆರ್ಥಿಕವಾಗಿ ಹಿಂದುಳಿದ ವರ್ಗ

  • ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಮನೆಯ ಕಾರ್ಪೆಟ್ ಪ್ರದೇಶ 30 ಚದರ ಮೀಟರ್
  • ಮನೆಯ ಆಸ್ತಿ ಮಹಿಳೆಯ ಹೆಸರಿನಲ್ಲಿ ಇರಬೇಕು
  • ಗರಿಷ್ಠ 6 ಲಕ್ಷ ರೂಪಾಯಿ ಸಾಲ
  • ಗರಿಷ್ಠ 2.67 ಲಕ್ಷ ರೂಪಾಯಿ ಸಬ್ಸಿಡಿ
  • ಸಬ್ಸಿಡಿ ಮೊತ್ತವನ್ನು ನೇರವಾಗಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

LIG- ಕಡಿಮೆ ಆದಾಯ ವರ್ಗ

  • ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷ ರೂಪಾಯಿ ಒಳಗೆ ಇರಬೇಕು.
  • ಮನೆಯ ವಿಸ್ತೀರ್ಣ 60 ಚದರ ಮೀಟರ್
  • ಮಹಿಳೆ ಮನೆಯ ಯಜಮಾನಳಾಗಿರಬೇಕೆಂಬ ಷರತ್ತು ಇಲ್ಲ.
  • ಗರಿಷ್ಠ 9 ಲಕ್ಷ ರೂಪಾಯಿ ಸಾಲ.
  • ಗರಿಷ್ಠ 2.35 ಲಕ್ಷ ರೂಪಾಯಿ ಸಬ್ಸಿಡಿ.

MIG- | (ಮಧ್ಯಮ ಆದಾಯ ವರ್ಗ-|)

  • ವಾರ್ಷಿಕ ಆದಾಯ 12 ಲಕ್ಷದಿಂದ 18 ಲಕ್ಷ ರೂಪಾಯಿ ಒಳಗೆ ಇರಬೇಕು.
  • ನಿವೇಶನ ವಿಸ್ತೀರ್ಣ 160 ಚದರ ಮೀಟರ್ ವರೆಗೆ.
  • ಮಹಿಳೆಯ ಹೆಸರಿನ ಕಡ್ಡಾಯವಿಲ್ಲ.
  • ಗರಿಷ್ಠ 12 ಲಕ್ಷ ರೂಪಾಯಿ ಸಾಲ.
  • ಗರಿಷ್ಠ 2.30 ಲಕ್ಷ ರೂಪಾಯಿ ಸಬ್ಸಿಡಿ.

ಅರ್ಜಿ  ಸಲ್ಲಿಸಲು ಅಗತ್ಯವಿರುವ ಪ್ರಮುಖ ದಾಖಲೆಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

  • ಅರ್ಜಿದಾರರ ಆಧಾರ್ ಕಾರ್ಡ್.
  • ವಿಳಾಸ ಪ್ರಮಾಣ ಪತ್ರ.(Address proof).
  • ಆದಾಯ ಪ್ರಮಾಣ ಪತ್ರ
  • ಮಾನ್ಯ ವಾದ ಮೊಬೈಲ್ ನಂಬರ್.
  • ಬ್ಯಾಂಕ್ ಖಾತೆ ಪುಸ್ತಕ (Bank Passbook).
  • Passport size photo.

ಅರ್ಜಿ ಸಲ್ಲಿಸುವ ವಿಧಾನ

ಪ್ರಧಾನಮಂತ್ರಿ ಆವಾಜ್ ಯೋಜನೆಗೆ ಅರ್ಜಿ ಸಲ್ಲಿಸುವುದು ಬಹಳ ಸುಲಭವಾಗಿದೆ. ಯೋಜನೆಯ ಅಧಿಕೃತ ಜಾಲತಾಣದ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು.

ಸ್ವತಹ ನೀವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗದಿದ್ದರೆ ಸಮೀಪದ ಗ್ರಾಮವನ್ನು ಕರ್ನಾಟಕವನ್ನು ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿನ ಸಿಬ್ಬಂದಿ ನಿಮ್ಮ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಲು ನೆರವಾಗುತ್ತಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಭದ್ರತೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ.  ನೀವು ಅರ್ಹರಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ತಪ್ಪದೆ ಪಡೆಯಿರಿ. ನಿಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ.

 

Leave a Comment