PM Kissan 24th Installment Date 2026 : ಪಿಎಂ ಕಿಸಾನ್ 24ನೇ ಕಂತು ಯಾವಾಗ ಬರುತ್ತೆ? ₹2000 ಸ್ಟೇಟಸ್ ಪರಿಶೀಲಿಸುವ Important update.

PM Kissan 24th Installment Date 2026PM Kissan 24th Installment Date 2026 : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 24ನೇ ಕಂತಿನ ₹2,000 ಹಣ ಯಾವಾಗ ಬಿಡುಗಡೆಯಾಗಲಿದೆ? ನಿಮ್ಮ ಖಾತೆಯ ಸ್ಟೇಟಸ್ ಹಾಗೂ ಇ-ಕೆ ವೈ ಸಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಸುಲಭವಾಗಿ ಪರಿಶೀಲಿಸುವುದು ಹೇಗೆ ಎಂದು ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದ ಕೋಟ್ಯಾಂತರ ರೈತ ಕುಟುಂಬಗಳಿಗೆ ಆಸರೆಯಾಗಿರುವ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ ಒಟ್ಟು ₹6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ.

ತಲಾ ₹2,000 ರೂಪಾಯಿಗಳಂತೆ ವರ್ಷದಲ್ಲಿ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ (Direct Benifit Transfer – DBT) ಹಣವನ್ನು ಜಮಾ ಮಾಡಲಾಗುತ್ತದೆ.

ಈಗಾಗಲೇ ದೇಶದ ರೈತರು ಯಶಸ್ವಿಯಾಗಿ 23 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಕೋಟ್ಯಾಂತರ ಫಲಾನುಭವಿಗಳು ಪಿಎಂ ಕಿಸಾನ್ 24ನೇ ಕಂತಿನ ಹಣ (PM Kissan 24th Installment Date 2026) ಯಾವಾಗ ಬಿಡುಗಡೆಯಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಲೇಖನದಲ್ಲಿ 24ನೇ ಕಂತಿನ ನಿರೀಕ್ಷಿತ ದಿನಾಂಕ, ಸ್ಟೇಟಸ್ ಚೆಕ್ ಮಾಡುವ ವಿಧಾನ ಮತ್ತು ಹಣ ಬರದೆ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ವಿಸ್ತಾರವಾಗಿ ನೀಡಲಾಗಿದೆ.

PM Kissan 24th Installment Date 2026 : ನಿರೀಕ್ಷಿತ ದಿನಾಂಕ 

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ (₹2,000) ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಆದರೆ, ಪಿ ಎಂ ಕಿಸಾನ್ ಯೋಜನೆಯ ನಿಯಮಾವಳಿಗಳ ಪ್ರಕಾರ, ಪ್ರತಿ  ಕಂತಿನ ನಡುವೆ ಕನಿಷ್ಠ 4 ತಿಂಗಳ ಅಂತರವಿರಬೇಕು. ಈ ಹಿಂದಿನ 23ನೇ ಕಂತಿನ ಹಣವನ್ನು ಸರ್ಕಾರವು ಜೂನ್ 30, 2026ರಂದು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. 4 ತಿಂಗಳ ಈ ಹಬ್ಬದ ಸೀಸನ್ ಹಾಗೂ ಬಿಡುಗಡೆಯ ಇತಿಹಾಸವನ್ನು ಗಮನಿಸಿದರೆ , 24ನೇ ಕಂತಿನ ಹಣವು 2026ರ ಅಕ್ಟೋಬರ್ ಕೊನೆಯ ವಾರದಲ್ಲಿ ಅಥವಾ ನವೆಂಬರ್ ಮೊದಲ ವಾರದ (ದೀಪಾವಳಿ ಹಬ್ಬದ ಸೀಸನ್) ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಗಳು ಅತಿ ಹೆಚ್ಚಾಗಿವೆ.

ಪಿಎಂ ಕಿಸಾನ್ 24ನೇ ಕಂತಿನ ಹಣ ಪಡೆಯಲು ಈ 3 ಪ್ರಕ್ರಿಯೆಗಳು ಕಡ್ಡಾಯ (Eligibility Criteria)

ಹಲವು ರೈತರಿಗೆ ಕಂತಿನ ಹಣ ಬಿಡುಗಡೆಯಾದರೂ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಪ್ರೊಫೈಲ್ ಅಪ್ಡೇಟ್ ಆಗದೆ ಇರುವುದು. ನಿಮ್ಮ ಖಾತೆಗೆ ಯಾವುದೇ ಅಡಚಣೆ ಇಲ್ಲದೆ ಹಣ ಬರಬೇಕಾದರೆ ಈ ಮೂರು ಪ್ರಕ್ರಿಯೆಗಳು ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.

1.ಇ-ಕೆ ವೈ ಸಿ (e-KYC) ಪ್ರಕ್ರಿಯೆ 

ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಪ್ರತಿಯೊಬ್ಬ ಫಲಾನುಭವಿಯು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇದನ್ನು ನೀವು ನಿಮ್ಮ ಮೊಬೈಲ್ ಮೂಲಕ ಓ ಟಿ ಪಿ (OTP) ಬಳಸಿ ಉಚಿತವಾಗಿ ಮಾಡಬಹುದು ಅಥವಾ ಹತ್ತಿರದ ಸಿ ಎಸ್ ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಮಾಡಿಸಬಹುದು.

2. ಭೂ ದಾಖಲೆಗಳ ಜೋಡಣೆ (Land Seeding)

ನಿಮ್ಮ ಹೆಸರಿನಲ್ಲಿರುವ ಕೃಷಿ ಜಮೀನಿನ ಪಹಣಿ (RTC/ನಿಮ್ಮ ಜಮೀನಿನ ದಾಖಲೆ) ಪಿಎಂ ಕಿಸಾನ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು. ಭೂ ದಾಖಲೆಗಳ ಜೋಡಣೆಯಾಗಿದ್ದರೆ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.

3. ಆಧಾರ್ ಬ್ಯಾಂಕ್ ಲಿಂಕಿಂಗ್ ( Adhaar Seeding & DBT)

PM Kissan 24th Installment Date 2026 : ಕೇಂದ್ರ ಸರ್ಕಾರವು ಡಿ ಬಿ ಟಿ (DBT) ತಂತ್ರಜ್ಞಾನದ ಮೂಲಕ ಹಣ ಕಳುಹಿಸುವುದರಿಂದ, ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮುಖ್ಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಹಾಗೂ ಆ ಖಾತೆಯಲ್ಲಿ (Direct Benifit Transfer) ಸಕ್ರಿಯವಾಗಿರಬೇಕು.

ಇದನ್ನು ಓದಿ

Kayaka Kiran Yojana: ₹2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಅರ್ಹತೆ ದಾಖಲೆಗಳ important Notice.

PM Kissan 24th Installment Date 2026: ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

ನಿಮ್ಮ ಖಾತೆಯ ಸ್ಥಿತಿ (Status) ಏನಿದೆ ಮತ್ತು ನಿಮಗೆ ಮುಂದಿನ ಕಂತಿನ ಹಣ ಬರುತ್ತದೆಯೇ ಎಂದು ತಿಳಿಯಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.

  1. ಮೊದಲ ಹಂತ : ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. https://pmkisan.gov.in/
  2. ಎರಡನೇ ಹಂತ : ಮುಖಪುಟದಲ್ಲಿರುವ “Farmers Corner” ವಿಭಾಗದಲ್ಲಿರುವ “Know Your Status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ಮೂರನೇ ಹಂತ : ಈಗ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆ (Registration Number) ಮತ್ತು ಅಲ್ಲಿ ಕಾಣಿಸುವ ಕ್ಯಾಪ್ಚ ಕೋಡ್ (CAPTCHA Code) ಅನ್ನು ನಮೂದಿಸಿ. (ಒಂದು ವೇಳೆ ರಿಜಿಸ್ಟ್ರೇಷನ್ ನಂಬರ್ ನೆನಪಿಲ್ಲದಿದ್ದರೆ, Know Your Registration Number ಲಿಂಕ್ ಬಳಸಿ ಮೊಬೈಲ್ ನಂಬರ್ ಮೂಲಕ ಪಡೆಯಬಹುದು.
  4. 4 ನೇ ಹಂತ : ನಂತರ “Get Data” ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಪ್ರೊಫೈಲ್ ಪರದೆಯ ಮೇಲೆ ಕಾಣಿಸುತ್ತದೆ. ಅಲ್ಲಿ “Eligibility Status ” ಮೇಲೆ ಕ್ಲಿಕ್ ಮಾಡಿ, ಅಲ್ಲಿ Land Seeding, e-KYC, Adhaar Bank Seeding ಇವುಗಳ ಮುಂದೆ” Yes”ಎಂಬ ಹಸಿರು ಬಣ್ಣದ ಗುರುತು ಇದ್ದರೆ, ನಿಮಗೆ ಮುಂದಿನ ಕಂತಿನ ಹಣ 100% ಖಚಿತ ವಾಗಿ ಬರುತ್ತದೆ.

ನಿಮ್ಮ ಸ್ಟೇಟಸ್ ನಲ್ಲಿ “FTO Generated” ಎಂದಿದ್ದರೆ ಏನರ್ಥ? 

PM Kissan 24th Installment Date 2026 ಸ್ಟೇಟಸ್ ಚೆಕ್ ಮಾಡುವಾಗ FTO Generated – Yes ಅಥವಾ Waiting for Approval By State ಎಂದು ಬರೆದಿರುವುದನ್ನು ಗಮನಿಸಿರುತ್ತಾರೆ .

  • FTO Generated – Yes: ಎಂದರೆ “Fund Transfer Order “ಎಂದರ್ಥ. ನಿಮ್ಮ ಎಲ್ಲಾ ದಾಖಲೆಗಳು ಸಂಪೂರ್ಣ ಸರಿಯಾಗಿದ್ದು, ಕೇಂದ್ರ ಸರ್ಕಾರವು ನಿಮ್ಮ ಖಾತೆಗೆ ಹಣ ಕಳುಹಿಸಲು ಡಿಜಿಟಲ್ ಆದೇಶ ಸಿದ್ದಪಡಿಸಿದೆ ಎಂದರ್ಥ. ಕಂತು ಬಿಡುಗಡೆಯಾದ ದಿನವೇ ನಿಮ್ಮ ಖಾತೆಗೆ ಹಣ ಬರುತ್ತದೆ.
  • FTO Generated – No: ಎಂದಿದ್ದರೆ ನಿಮ್ಮ ದಾಖಲೆಗಳ ಪರಿಶೀಲನೆ ಇನ್ನು ಬಾಕಿ ಇದೆ ಅಥವಾ ಇ-ಕೆ ವೈ ಸಿ ಸಮಸ್ಯೆಯಾಗಿದೆ ಎಂದರ್ಥ ಇದನ್ನು ತಕ್ಷಣವೇ ಸರಿ ಪಡಿಸಿಕೊಳ್ಳಬೇಕು.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ (Beneficiary List) ನೋಡುವುದು ಹೇಗೆ? 

PM Kissan 24th Installment Date 2026 ರಲ್ಲಿ ನಿಮ್ಮ ಗ್ರಾಮದ ಪಿಎಂ ಕಿಸಾನ್ ಫಲಾನುಭವಿಗಳ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಪರಿಶೀಲಿಸಿಕೊಳ್ಳಲು ಹೀಗೆ ಮಾಡಿ.

  • ಪೋರ್ಟಲ್ ನಲ್ಲಿರುವ “Beneficiary List” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ (State), ಜಿಲ್ಲೆ (District) ,ಉಪ ಜಿಲ್ಲೆ/ತಾಲೂಕು, ಬ್ಲಾಕ್ ಮತ್ತು ನಿಮ್ಮ ಗ್ರಾಮವನ್ನು (Village) ಆಯ್ಕೆ ಮಾಡಿ.
  • “GET REPORT” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಅರ್ಹ ರೈತರ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

PM Kissan 24th Installment Date 2026 ಸಹಾಯವಾಣಿ 

ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದರೂ ಹಣ ಬರದೆ ಇದ್ದರೆ ಅಥವಾ ಯಾವುದೇ ತಾಂತ್ರಿಕ ತೊಂದರೆ ಎದುರಾದರೆ ರೈತರು ನೇರವಾಗಿ ಕೇಂದ್ರ ಸರ್ಕಾರದ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಬಹುದು.

  • ಟೋಲ್ ಫ್ರೀ ಸಂಖ್ಯೆ : 155261/1800115526
  • ಹೆಲ್ಪ್ ಲೈನ್ ಸಂಖ್ಯೆಗಳು: 011-24300606/011-23381092
  • ಅಧಿಕೃತ ಇ-ಮೇಲ್ : pmkisan-ict@gov.in

ಇದನ್ನು ಓದಿ

ಮಹಿಳಾ ಸ್ವಸಹಾಯ ಸಂಘ Subsidy : SHG Subsidy Scheme -ಮಹಿಳಾ ಸ್ವಸಹಾಯ ಗುಂಪುಗಳಿಗೆ 2 ಲಕ್ಷ ಸಹಾಯಧನ, important update.

PM Kissan 24th Installment Date 2026: FAQs

1. ಪಿ ಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಬರಬಹುದು? 

ಕೇಂದ್ರ ಸರ್ಕಾರವು ಇನ್ನು ಅಧಿಕೃತ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ, ಕಳೆದ 23ನೇ ಕಂತು ಜೂನ್ 20, 2026 ರಂದು ಬಂದಿರುವುದರಿಂದ, ಮುಂದಿನ 24ನೇ ಕಂತಿನ ₹2,000 ಹಣವು 2026ರ ಅಕ್ಟೋಬರ್ ಕೊನೆಯ ವಾರದಲ್ಲಿ ಅಥವಾ ನವೆಂಬರ್ ಮೊದಲ ವಾರದ (ದೀಪಾವಳಿ ಹಬ್ಬದ ವೇಳೆಗೆ) ಬಿಡುಗಡೆಯಾಗುವ ಸಾಧ್ಯತೆ ಇದೆ.

2. ನನ್ನ ಪಿಎಂ ಕಿಸಾನ್ ಖಾತೆಗೆ ಹಣ ಬಂದಿದೆಯೇ ಎಂದು ಮೊಬೈಲ್ ನಲ್ಲಿ ಪರಿಶೀಲಿಸುವುದು ಹೇಗೆ? 

ನೀವು ಪಿ ಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.”Know Your Status” ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಮತ್ತು ಕ್ಯಾಪ್ಚ ಕೋಡ್ ನಮೂದಿಸಿ “Get Data” ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಪರಿಶೀಲಿಸಬಹುದು.

3. ಪಿಎಂ ಕಿಸಾನ್ ಯೋಜನೆಗೆ ಇ-ಕೆವೈಸಿ (e-KYC) ಮಾಡುವುದು ಕಡ್ಡಾಯವೇ? 

ಹೌದು. ಪಿಎಂ ಕಿಸಾನ್ ಯೋಜನೆ ಅಡಿ ₹2,000 ಕಂತಿನ ಹಣವನ್ನು ಪಡೆಯಲು ಪ್ರತಿಯೊಬ್ಬ ರೈತರು ಇ-ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ.ಇ-ಕೆ ವೈ ಸಿ ಆಗದಿದ್ದರೆ ಸರ್ಕಾರ ಹಣವನ್ನು ತಡೆ ಹಿಡಿಯುತ್ತದೆ.

4. ನನ್ನ ಸ್ಟೇಟಸ್ ನಲ್ಲಿ “FTO Generated -yes” ಎಂದು ತೋರಿಸುತ್ತಿದ್ದರೆ ಏನರ್ಥ? 

FTO ಎಂದರೆ “Fund Transfer Order ” ಎಂದರ್ಥ. ಇದರ ಅರ್ಥ ನಿಮ್ಮ ದಾಖಲೆಗಳೆಲ್ಲವೂ ಸರಿಯಾಗಿದೆಯೇ ಮತ್ತು ಕೇಂದ್ರ ಸರ್ಕಾರವು ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲು ಆದೇಶವನ್ನು ಸಿದ್ಧಪಡಿಸಿದೆ. ಕಂತು ಬಿಡುಗಡೆಯಾದ ದಿನವೇ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ.

5. ಪಿಎಂ ಕಿಸಾನ್ ಯೋಜನೆ ಅಡಿ ವಾರ್ಷಿಕವಾಗಿ ಎಷ್ಟು ಹಣ ಸಿಗುತ್ತದೆ? 

ಈ ಯೋಜನೆ ಅಡಿ ಅರ್ಹ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಒಟ್ಟು ₹6,000 ಸಿಗುತ್ತದೆ. ಇದನ್ನು ತಲಾ ₹2,000 ರಂತೆ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

6. ಎಲ್ಲವೂ ಸರಿಯಾಗಿದ್ದರೂ ಪಿಎಂ ಕಿಸಾನ್ ಹಣ ಬರದಿದ್ದರೆ ಯಾರನ್ನು ಸಂಪರ್ಕಿಸಬೇಕು? 

PM Kissan 24th Installment Date 2026 ಕ್ಕೆ ನಿಮ್ಮ ಖಾತೆಯಲ್ಲಿ ಇ-ಕೆವೈಸಿ ಮತ್ತು ಲ್ಯಾಂಡ್ ಸೀಡಿಂಗ್ ಸರಿಯಾಗಿದ್ದರೂ ಹಣ ಬರದಿದ್ದರೆ, ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಪಿಎಂ ಕಿಸಾನ್ ಹೆಲ್ಪ್ ಲೈನ್ ಸಂಖ್ಯೆಗಳು 011-24300606/155261 ಗೆ ಕರೆ ಮಾಡಿ ದೂರು ದಾಖಲಿಸಬಹುದು.

ಇದೇ ರೀತಿಯ ಸರ್ಕಾರಿ ಯೋಜನೆಗಳ ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಇದನ್ನು ಓದಿ

Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.

 

Leave a Comment