Kayaka Kiran Yojana : ಕಾಯಕ ಕಿರಣ ಯೋಜನೆ 2026ರ ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಹತೆ, 2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಬಡ್ಡಿ ದರ, ಅಗತ್ಯ ದಾಖಲೆಗಳು, ಅರ್ಜಿ ವಿಧಾನ ಮತ್ತು ಮರುಪಾವತಿ ನಿಯಮಗಳನ್ನು ತಿಳಿಯಿರಿ.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುವ ಅರ್ಹ ಫಲಾನುಭವಿಗಳಿಗೆ ಕಾಯಕ ಕಿರಣ ಯೋಜನೆ ಮೂಲಕ ಸಾಲ ಮತ್ತು ಸಹಾಯಧನದ ನೆರವು ನೀಡಲಾಗುತ್ತದೆ.
ಸ್ವಯಂ ಉದ್ಯೋಗ ಆರಂಭಿಸಲು ಬಯಸುವ ಅರ್ಹ ವ್ಯಕ್ತಿಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ಜೊತೆಗೆ ಸಹಾಯಧನ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ವ್ಯಾಪಾರ, ಹೈನುಗಾರಿಕೆ, ಸಣ್ಣ ಉದ್ಯಮ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಈ ಯೋಜನೆ ಅಡಿ ಆರ್ಥಿಕ ನೆರವು ಪಡೆಯಬಹುದಾಗಿದೆ.
ಈ ಲೇಖನದಲ್ಲಿ ಕಾಯಕ ಕಿರಣ ಯೋಜನೆ ಯ ಉದ್ದೇಶ, ಅರ್ಹತೆ, ಆದಾಯ ಮಿತಿ, ವಯೋಮಿತಿ, ಸಾಲದ ಮೊತ್ತ, ಸಹಾಯಧನ, ಬಡ್ಡಿ ದರ, ಅಗತ್ಯ ದಾಖಲೆಗಳು, ಆಯ್ಕೆ ಪ್ರಕ್ರಿಯೆ, ಮರುಪಾವತಿ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Kayaka Kiran Yojana : ಕಾಯಕ ಕಿರಣ ಯೋಜನೆ ಎಂದರೇನು?
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಸಕಇ225ಬಿಸಿಎ2000, ದಿನಾಂಕ 30.03.2002 ರಲ್ಲಿ ಗುರುತಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ 3B ಗೆ ಸೇರಿದ ಕರ್ನಾಟಕ ವೀರಶೈವ ಲಿಂಗಾಯತ ಹಾಗೂ ಸಂಬಂಧಿತ ಉಪಜಾತಿಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯೇ ಕಾಯಕ ಕಿರಣ ಯೋಜನೆ.
ಈ ಯೋಜನೆ ಅಡಿ ಅರ್ಹ ಅಭ್ಯರ್ಥಿಗಳಿಗೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಯ ಘಟಕ ವೆಚ್ಚದ ಆಧಾರದ ಮೇಲೆ ಸಹಾಯಧನ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ.
ಯೋಜನೆಯ ಮುಖ್ಯ ಉದ್ದೇಶ?
ಅರ್ಹ ಸಮುದಾಯದ ಜನರು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವು ನೀಡುವುದು ಯೋಜನೆಯಾ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆ ಅಡಿ ವ್ಯಾಪಾರ, ಹೈನುಗಾರಿಕೆ, ಸಣ್ಣ ಉದ್ಯಮ ಮತ್ತು ಇತರೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಸಾಲ ಹಾಗೂ ಸಹಾಯಧನದ ನೆರವು ಪಡೆಯಬಹುದು.
ಅಭ್ಯರ್ಥಿಯು ತಾನು ಆಯ್ಕೆ ಮಾಡಿಕೊಳ್ಳುವ ಆರ್ಥಿಕ ಚಟುವಟಿಕೆಯ ಬಗ್ಗೆ ಅಗತ್ಯ ಜ್ಞಾನ ಅಥವಾ ತರಬೇತಿ ಹೊಂದಿರುವುದು ಮುಖ್ಯವಾಗಿದೆ.
Kayaka Kiran Yojana : ಕಾಯಕ ಕಿರಣ ಯೋಜನೆ ಅಡಿ ಎಷ್ಟು ಸಾಲ ಸಿಗುತ್ತದೆ?
ಈ ಯೋಜನೆ ಅಡಿ ಗರಿಷ್ಠ ₹2 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ.
ಘಟಕ ವೆಚ್ಚ ಮತ್ತು ಸಹಾಯಧನದ ಪ್ರಮಾಣಕ್ಕೆ ಅನುಗುಣವಾಗಿ ಸಾಲ ಹಾಗೂ ಸಹಾಯಧನವನ್ನು ಕೆಳಗಿನ ರೀತಿಯಲ್ಲಿ ನಿಗದಿಪಡಿಸಲಾಗಿದೆ.
ಉದಾಹರಣೆಗೆ : ₹2 ಲಕ್ಷದ ಘಟಕ ವೆಚ್ಚದ ಉದ್ಯಮವನ್ನು ಆರಂಭಿಸಲು ಅರ್ಹತೆ ಪಡೆದರೆ, ಯುವಜನೆಯ ನಿಯಮಾನುಸಾರ ಗರಿಷ್ಠ ₹30,000 ಸಹಾಯಧನ ಮತ್ತು ಉಳಿದ ಮೊತ್ತದಲ್ಲಿ ಗರಿಷ್ಟ 1.70 ಲಕ್ಷ ಸಾಲ ಪಡೆಯಲು ಅವಕಾಶವಿದೆ.
ಆದರೆ ಅಂತಿಮ ಮಂಜೂರಾತಿ ಅರ್ಜಿಯ ಅರ್ಹತೆ ಯೋಜನೆಯ ಗುರಿ, ದಾಖಲೆಗಳು ಮತ್ತು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
Kayaka Kiran Yojana: ಅರ್ಹತೆಗಳು
ಈ ಯೋಜನೆಯಲ್ಲಿ ಪ್ರಯೋಜನ ಪಡೆಯಲು ಅರ್ಜಿದಾರರು ಕೆಲವು ಪ್ರಮುಖ ಕಾರ್ಯಗಳನ್ನು ಹೊಂದಿರಬೇಕು.
- ಪ್ರವರ್ಗ -3ಬಿ ಸಮುದಾಯಕ್ಕೆ ಸೇರಿದವರಾಗಿರಬೇಕು : ಅರ್ಜಿದಾರರು ಸರ್ಕಾರದ ಆದೇಶ ಸಂಖ್ಯೆ ಸಕಇ225ಬಿಸಿಎ2000, ದಿನಾಂಕ 30.03.2002ರ ಪ್ರಕಾರ ಗುರುತಿಸಿರುವ ಪ್ರವರ್ಗ -3ಬಿ ಅಡಿಯಲ್ಲಿ ಬರುವ ಸಂಬಂಧಿತ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಮಿತಿ : ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶವಾಗಿದ್ದರೆ, ₹98,000. ನಗರ ಅಥವಾ ಪಟ್ಟಣ ಪ್ರದೇಶವಾಗಿದ್ದರೆ, ₹1,20,000. ಮಿತಿಯೊಳಗೆ ಇರಬೇಕು.
- ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು : ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
- ವಯೋಮಿತಿ : ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷ. ಇರಬೇಕು.
- ಹಿಂದಿನ ಯೋಜನೆಯ ಸೌಲಭ್ಯ ಪಡೆದಿರಬಾರದು : ಅರ್ಜಿದಾರರು ಈ ಹಿಂದೆ ಸರ್ಕಾರ ಅಥವಾ ಇತರೆ ನಿಯಮಗಳ ಯಾವುದೇ ಯೋಜನೆ ಅಡಿ ಸಾಲ, ಸಹಾಯಧನ ಅಥವಾ ಇತರೆ ಆರ್ಥಿಕ ಸೌಲಭ್ಯ ಪಡೆದಿರಬಾರದು.
- ಬ್ಯಾಂಕ್ ಖಾತೆ ಕಡ್ಡಾಯ : ಅರ್ಜಿದಾರರು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
- ಉದ್ಯಮದ ಬಗ್ಗೆ ಜ್ಞಾನ/ತರಬೇತಿ : ಅರ್ಜಿದಾರರು ಕೈಗೊಳ್ಳಲು ಉದ್ದೇಶಿಸಿರುವ ಆರ್ಥಿಕ ಚಟುವಟಿಕೆಯ ಬಗ್ಗೆ ಅನುಭವ, ಜ್ಞಾನ ಅಥವಾ ತರಬೇತಿ ಹೊಂದಿರಬೇಕು.
Kayaka Kiran Yojana : ಮಹಿಳೆಯರು ಮತ್ತು ಅಂಗವಿಕಲರಿಗೆ ಮೀಸಲಾತಿ
ಕಾಯಕ ಕಿರಣ ಯೋಜನೆಯಲ್ಲಿ ವಿಶೇಷ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
- ಮಹಿಳೆಯರಿಗೆ – 33%
- ಅಂಗವಿಕಲರಿಗೆ – 5%
ಮೀಸಲಾತಿ ನಿಗದಿಪಡಿಸಲಾಗಿದೆ.
ಒಂದು ಕುಟುಂಬಕ್ಕೆ ಎಷ್ಟು ಸೌಲಭ್ಯ?
ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಈ ಯೋಜನೆ ಅಡಿ ಸೌಲಭ್ಯ ನೀಡಲಾಗುತ್ತದೆ.
ಅಂದರೆ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ಈ ಯೋಜನೆಯಡಿ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
ವೈಯಕ್ತಿಕ ಹಾಗೂ ಸ್ವಸಹಾಯ ಗುಂಪುಗಳಿಗೆ ಅವಕಾಶ
ಈ ಯೋಜನೆ ಅಡಿ ಒಬ್ಬ ವ್ಯಕ್ತಿ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಜೊತೆಗೆ ಸ್ವಸಹಾಯ ಗುಂಪುಗಳು (Self Help Groups) ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೂ ನಿಯಮಾನುಸಾರ ಸೌಲಭ್ಯ ನೀಡಲಾಗುತ್ತದೆ.
Kayaka Kiran Yojana : ಈ ಯೋಜನೆ ಅಡಿ ಯಾವ ರೀತಿಯ ಚಟುವಟಿಕೆಗಳಿಗೆ ಸಾಲ ಸಿಗುತ್ತದೆ?
ಫಲಾನುಭವಿಗಳು ಸ್ವಯಂ ಉದ್ಯೋಗ ಅಥವಾ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಈ ಯೋಜನೆ ಅಡಿ ನೆರವು ಪಡೆಯಬಹುದು.
ಉದಾಹರಣೆಗೆ :
- ಸಣ್ಣ ವ್ಯಾಪಾರ
- ಹೈನುಗಾರಿಕೆ
- ಸ್ವಯಂ ಉದ್ಯೋಗ
- ಸಣ್ಣ ಉದ್ಯಮ
- ಯಂತ್ರೋಪಕರಣ ಆಧಾರಿತ ಉದ್ಯಮ
- ಇತರೆ ಅನುಮತಿಸಲಾದ ಆರ್ಥಿಕ ಚಟುವಟಿಕೆಗಳು
ಅರ್ಜಿದಾರರು ಕೈಗೊಳ್ಳುವ ಉದ್ಯಮಕ್ಕೆ ಅಗತ್ಯವಿರುವ ಪರವಾನಗಿ ಮತ್ತು ಅನುಮತಿಗಳನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದುಕೊಳ್ಳಬೇಕಾಗುತ್ತದೆ.
₹1 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಅಸ್ತಿ ಭದ್ರತೆ
₹1 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆಯುವ ಸಂದರ್ಭ ದಲ್ಲಿ ಸಾಲದ ಭದ್ರತೆಗಾಗಿ ಅರ್ಜಿದಾರರು ಅಥವಾ ಜಾಮೀನುದಾರರು ಸ್ಥಿರಾಸ್ತಿಯನ್ನು ಭದ್ರತೆಯಾಗಿ ನೀಡಬೇಕಾಗುತ್ತದೆ.
Simple Registered Mortgage Deed ಮೂಲಕ ನಿಗಮದ ಹೆಸರಿಗೆ ಆಸ್ತಿಯನ್ನು ಆಧಾರ ಮಾಡಿಕೊಡುವ ನಿಯಮವಿದೆ.
Kayaka Kiran Yojana : ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು
ಕಾಯಕ ಕಿರಣ ಯೋಜನೆ ಅಡಿ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಒದಗಿಸಬೇಕು.
ಪ್ರಮುಖ ದಾಖಲೆಗಳು :
- ಜಾತಿ ಮತ್ತು ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
- ವಾಸದ ಪುರಾವೆ
- ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್ ನ ದೃಢೀಕೃತ ಪ್ರತಿ
- ಇತ್ತೀಚಿನ ಮೂರು ಪಾಸ್ ಪೋರ್ಟ್ ಅಳತೆಯ ಫೋಟೋಗಳು.
- ಬ್ಯಾಂಕ್ ಖಾತೆ ವಿವರ.
- ಜಾಮೀನುದಾರರ ಒಪ್ಪಿಗೆ ಪತ್ರ.
- ಉದ್ಯಮದ ಅನುಭವ/ತರಬೇತಿ ಪ್ರಮಾಣ ಪತ್ರ ಅಥವಾ ಸ್ವಯಂ ಘೋಷಣೆ.
- ಯಂತ್ರ ಉಪಕರಣ ಖರೀದಿಗೆ ಸರಬರಾಜುದಾರರಿಂದ ಪಡೆದ Invoice.
- ಯೋಜನಾ ವರದಿ
- ಇತರ ಬ್ಯಾಂಕುಗಳಲ್ಲಿ ಸಾಲವಿಲ್ಲ ಎಂಬ ಬೇಬಾಕಿ ಪತ್ರ.
- ಉದ್ಯಮಕ್ಕೆ ಸಂಬಂಧಿಸಿದ ಅಗತ್ಯ ಪರವಾನಗಿ/ಲೈಸೆನ್ಸ್
- ಸಾರಿಗೆ ಉದ್ದೇಶಕ್ಕೆ ಸಾಲ ಭಯಸಿದರೆ ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಡ್ಜ್ .
- ಅರ್ಜಿದಾರರ ಮತ್ತು ಜಾಮೀನುದಾರರ ಆಸ್ತಿ ಹಾಗೂ ಋಣಭಾರಗಳ ಘೋಷಣೆ.
ಆಸ್ತಿ ಭದ್ರತೆಗೆ ಅಗತ್ಯ ದಾಖಲೆಗಳು
₹1 ಲಕ್ಷಕ್ಕಿಂತ ಹೆಚ್ಚಿನ ಸಾಲದ ಸಂದರ್ಭದಲ್ಲಿ ಸ್ಥಿರಾಸ್ತಿಯನ್ನು ಭದ್ರತೆಯಾಗಿ ನೀಡಬೇಕಾದರೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಅವುಗಳಲ್ಲಿ ಪ್ರಮುಖವಾದವು :
- ಸ್ಥಿರಾಸ್ತಿಯ ಮೂಲ ಪತ್ರ
- Mutation Register Extract
- ಆಸ್ತಿ ವಿಭಾಗ ಪತ್ರ
- MR Copy
- ಚಾಲ್ತಿ ವರ್ಷದ ಪಹಣಿ
- ಲಾವಣಿ ಪತ್ರ
- ಕಂದಾಯ ಪಾವತಿ ರಸೀದಿ
- ಖಾತ ಎಕ್ಸ್ತ್ರಾಕ್ಟ್
- ಪಟ್ಟಾ ಪುಸ್ತಕ
- ಸ್ಥಿರಾಸ್ತಿಯ ಚೆಕ್ಕು ಬಂದಿ
- 13 ವರ್ಷಗಳ EC – ನಮೂನೆ 15
- ಉಪ ನೋಂದಣಿ ಅಧಿಕಾರಿಗಳಿಂದ ಪಡೆದ ಆಸ್ತಿ ಮೌಲ್ಯ ನಿರ್ಣಯ ವರದಿ
- ನೋಟರಿ ಮಾಡಿಸಿದ ಜಾಮೀನುದಾರರ ಒಪ್ಪಿಗೆ ಪತ್ರ
- ಅರ್ಜಿದಾರರು /ಜಾಮೀನುದಾರರ ವಂಶವೃಕ್ಷ
- ಕಾನೂನು ಬದ್ಧ ಹಕ್ಕುದಾರರ ಒಪ್ಪಿಗೆ ಪತ್ರ.
Kayaka Kiran Yojana : ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಕಾಯಕ ಕಿರಣ ಯೋಜನೆ ಅಡಿ ಫಲಾಅನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ/ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಇದನ್ನು ಓದಿ
Kayaka Kiran Yojana : ಆಯ್ಕೆ ಸಮಿತಿಯ ಪ್ರಮುಖ ಜವಾಬ್ದಾರಿಗಳು
ಜಿಲ್ಲಾ ವ್ಯವಸ್ಥಾಪಕರು ಸ್ವೀಕರಿಸಿದ ಅರ್ಜಿಗಳನ್ನ ಮೊದಲು ಪರಿಶೀಲಿಸಲಾಗುತ್ತದೆ.
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಿವೆಯೇ? ಎಂಬುದನ್ನು ಪರಿಶೀಲಿಸಿ ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಲಾಗುತ್ತದೆ.
ಅಭ್ಯರ್ಥಿಯು:
- ಉದ್ಯಮದ ಅನುಭವ
- ಆಸಕ್ತಿ
- ಸಾಮರ್ಥ್ಯ
- ಉದ್ಯಮದ ಲಾಭದಾಯಕತೆ
- ಮರುಪಾವತಿ ಸಾಮರ್ಥ್ಯ
- ಸಾಲದ ಭದ್ರತೆ
- ಯೋಜನೆಯ ಸಮಂಜಸತೆ
ಮುಂತಾದ ಅಂಶಗಳನ್ನು ಪರಿಗಣಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
Kayaka Kiran Yojana : ಸಾಲ ಮಂಜೂರಾತಿ ಪ್ರಕ್ರಿಯೆ
ಕಾಯಕ ಕಿರಣ ಯೋಜನೆಯ ಸಾಲ ಮಂಜೂರಾತಿ ಸಾಮಾನ್ಯವಾಗಿ ಹಂತ ಹಂತವಾಗಿ ನಡೆಯುತ್ತದೆ.
- ಅರ್ಜಿ ಸಲ್ಲಿಕೆ : ನಿಗಮದ ಕೇಂದ್ರ ಕಚೇರಿಯಿಂದ ಅರ್ಜಿಗಳನ್ನು ಆಹ್ವಾನಿಸಿ ಜಾಹೀರಾತು ನೀಡಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
- ದಾಖಲೆ ಪರಿಶೀಲನೆ : ಜಿಲ್ಲಾ ವ್ಯವಸ್ಥಾಪಕರು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಲಾಗುತ್ತದೆ.
- ಫಲಾನುಭವಿಗಳ ಆಯ್ಕೆ : ಆಯ್ಕೆ ಸಮಿತಿಯು ಅರ್ಜಿದಾರರ ಉದ್ಯಮ ಯೋಜನೆ, ಅನುಭವ, ಸಾಮರ್ಥ್ಯ, ಮರುಪಾವತಿ ಇಚ್ಚಾ ಶಕ್ತಿ ಹಾಗೂ ಸಾಲದ ಭದ್ರತೆಯನ್ನು ಪರಿಗಣಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಸಾಲ ಮಂಜೂರಾತಿ : ಆಯ್ಕೆಯಾದ ಫಲಾನುಭವಿಗಳ ಪ್ರಸ್ತಾವನೆಗಳನ್ನು ನಿಯಮಾನುಸಾರ ಸಂಬಂಧಿಸಿದ ಕಚೇರಿಗಳಿಗೆ ಕಳುಹಿಸಲಾಗುತ್ತದೆ.
- ಸಾಲ ಮತ್ತು ಸಹಾಯಧನ ಬಿಡುಗಡೆ : ಅಗತ್ಯ ಕಾನೂನು ಬದ್ಧ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಮಂಜುರಾದ ಸಾಲ ಮತ್ತು ಸಹಾಯಧನದ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ RTGS ಮೂಲಕ ಜಮಾ ಮಾಡುವ ವ್ಯವಸ್ಥೆ ಇದೆ.
Kayaka Kiran Yojana : ₹1 ಲಕ್ಷದವರೆಗೆ ಸಾಲ
₹1 ಲಕ್ಷದವರೆಗೆ ಘಟಕ ವೆಚ್ಚ ಹೊಂದಿರುವ ಆಯ್ಕೆಯಾದ ಫಲಾನುಭವಿಗಳ ಪ್ರಸ್ತಾವನೆಗಳನ್ನು ನಿಯಮಾನಸಾರ ವಿಭಾಗೀಯ ಕಚೇರಿಗೆ ಕಳುಹಿಸಲಾಗುತ್ತದೆ.
ಅಲ್ಲಿ ಜಿಲ್ಲೆಗೆ ನಿಗದಿಪಡಿಸಿದ ಆರ್ಥಿಕ ಗುರಿಗೆ ಅನುಗುಣವಾಗಿ ಪ್ರಸ್ತಾವನೆ ಪರಿಶೀಲಿಸಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗುತ್ತದೆ.
ಅಗತ್ಯ ದಾಖಲೆಗಳ ದೃಡೀಕರಣದ ನಂತರ ಸಾಲ ಮತ್ತು ಸಹಾಯಧನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Kayaka Kiran Yojana : ₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲ
₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲ ಪಡೆಯುವ ಸಂದರ್ಭದಲ್ಲಿ ಅರ್ಜಿದಾರರು ಅಥವಾ ಜಮೀನುದಾರರಿಂದ ನೀಡಲಾಗುವ ಸ್ಥಿರಾಸ್ತಿಯ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ನಿಗಮದ ಕಾನೂನು ಸಲಹೆಗಾರರಿಂದ ಆಸ್ತಿ ದಾಖಲೆಗಳ ಕಾನೂನು ಪರಿಶೀಲನೆ ಮಾಡಿಸಲಾಗುತ್ತದೆ.
ಆಸ್ತಿ ಸಾಲದ ಭದ್ರತೆಗೆ ಸೂಕ್ತವಾಗಿದೆ ಎಂಬ ಅಭಿಪ್ರಾಯ ಬಂದ ನಂತರ ಆಡಳಿತಾತ್ಮಕ ಮಂಜೂರಾತಿ ನೀಡಲಾಗುತ್ತದೆ.
Kayaka Kiran Yojana : ಸಾಲದ ಭದ್ರತೆಗೆ ಪಡೆಯುವ ಪ್ರಮುಖ ದಾಖಲೆಗಳು
ಸಾಲ ಮಂಜೂರಾತಿಯ ಸಂದರ್ಭದಲ್ಲಿ ಫಲಾನುಭವಿಯಿಂದ/ಜಾಮೀನುದಾರರಿಂದ ವಿವಿಧ ದಾಖಲೆಗಳನ್ನು ಪಡೆಯಲಾಗುತ್ತದೆ.
ಅವುಗಳಲ್ಲಿ
- Promissory note
- D.P note
- Letter of repayment
- Hypothecation Deed
- Articles of agreement
- Letter of guarantee
- Memorandum of agreement – ಸ್ವಸಹಾಯ ಗುಂಪುಗಳಿಗೆ
- ಸಹಾಯಧನ ವಿವರಣೆ ಪ್ರಮಾಣ ಪತ್ರ
- ಸಹಾಯಧನ ಬಳಕೆ ಕುರಿತು ಘೋಷಣೆ
ಮುಖ್ಯವಾಗಿದೆ.
Kayaka Kiran Yojana : ಸಾಲ ಪಡೆದ ಹಣವನ್ನು ಹೇಗೆ ಬಳಸಬೇಕು?
ಫಲಾನುಭವಿಯು ಮಂಜೂರಾದ ಸಾಲವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಉದ್ದೇಶಕ್ಕಾಗಿ ಬಳಸಬೇಕು.
ಉದ್ಯಮ ಸ್ಥಾಪನೆ, ಯಂತ್ರೋಪಕರಣ ಖರೀದಿ ಅಥವಾ ಅನುಮೋದಿಸಲಾದ ಆರ್ಥಿಕ ಚಟುವಟಿಕೆಗೆ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಜಿಲ್ಲಾ ವ್ಯವಸ್ಥಾಪಕರು ಫಲಾನುಭವಿ ಸಾಲದ ಮೊತ್ತವನ್ನು ಉದ್ದೇಶಿತ ಚಟುವಟಿಕೆಗೆ ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬಹುದು.
ವಿಮೆ ಕಡ್ಡಾಯ
ಯೋಜನೆ ಅಡಿ ಸಾಲದ ಮೂಲಕ ಸೃಷ್ಟಿಯಾಗುವ ಆಸ್ತಿಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ.
ಬೆಂಕಿ, ನೀರು, ಭೂಕಂಪ, ಕಳ್ಳತನ ಮುಂತಾದ ಕಾರಣಗಳಿಂದ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಲು ವಿಮೆ ಮಾಡಿಸಬೇಕು.
ವಿಮಾ ಪ್ರೀಮಿಯಂ ಮೊತ್ತವನ್ನು ಫಲಾನುಭವಿಯೇ ಭರಿಸಬೇಕು.
Kayaka Kiran Yojana : ಸಾಲ ಮರುಪಾವತಿ ಅವಧಿ
ಯೋಜನೆ ಅಡಿ ಪಡೆದ ಸಾಲವನ್ನು ನಿಯಮಾನುಸಾರ ಮರುಪಾವತಿ ಮಾಡಬೇಕು.
ನೀಡಿರುವ ಮಾರ್ಗಸೂಚಿಗಳ ಪ್ರಕಾರ
- ವಾರ್ಷಿಕ ಬಡ್ಡಿ ದರ : 4%
- ಮರುಪಾವತಿ : 34 ಕಂತುಗಳು
- ವಿರಾಮ ಅವಧಿ : 2 ತಿಂಗಳು
ಸ್ವಸಹಾಯ ಗುಂಪುಗಳಿಗೂ ವಾರ್ಷಿಕ 4% ಬಡ್ಡಿ ದರದಲ್ಲಿ 34 ಕಂತುಗಳ ಮೂಲಕ ಸಾಲ ಮರುಪಾವತಿ ಮಾಡುವ ನಿಯಮವನ್ನು ಉಲ್ಲೇಖಿಸಲಾಗಿದೆ.
ಸೂಚನೆ : ₹1 ಲಕ್ಷದಿಂದ ₹2 ಲಕ್ಷದವರೆಗಿನ ಘಟಕಗಳಿಗೆ ಮೇಲಿನ ಪಟ್ಟಿಯಲ್ಲಿ ವಾರ್ಷಿಕ 2% ಬಡ್ಡಿದರವನ್ನು ಉಲ್ಲೇಖಿಸಲಾಗಿದೆ. ಆದ್ದರಿಂದ ಅರ್ಜಿದಾರರು ತಮ್ಮ ಮಂಜೂರಾತಿ ಆದೇಶದಲ್ಲಿ ನಮೂದಿಸಿರುವ ನಿಖರ ಬಡ್ಡಿದರ ಮತ್ತು ಮರುಪಾವತಿ ಶರತ್ತುಗಳನ್ನು ಪರಿಶೀಲಿಸುವುದು ಸೂಕ್ತ.
Kayaka Kiran Yojana : ಸಾಲದ ಕಂತು ಯಾವಾಗ ಪಾವತಿಸಬೇಕು?
ಸಾಲ ಮಂಜೂರಾತಿ ಆದೇಶದಲ್ಲಿ ನಿಗದಿಪಡಿಸಿದ ಕಂತಿನ ಪ್ರಕಾರ ಅಸಲು ಮತ್ತು ಬಡ್ಡಿಯನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪಾವತಿಸಬೇಕು.
ಕಂತು ಪಾವತಿಯಲ್ಲಿ ವಿಳಂಬವಾದರೆ ನಿಯಮಾನಸಾರ 2% ಸುಸ್ತಿ ಬಡ್ಡಿ ವಿಧಿಸಿ ವಸೂಲಿ ಮಾಡುವ ವ್ಯವಸ್ಥೆ ಇದೆ.
ಸಾಲವನ್ನು ದೀರ್ಘಕಾಲ ಮರುಪಾವತಿ ಮಾಡದೆ ಸುಸ್ತಿಯಾದರೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಬಹುದು.
ಉದ್ಯಮಶೀಲತಾ ತರಬೇತಿ
ಯೋಜನೆ ಅಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಉದ್ಯಮಶೀಲತಾ ತರಬೇತಿ ನೀಡುವ ವ್ಯವಸ್ಥೆಯು ಇದೆ.
ಈ ತರಬೇತಿಯಲ್ಲಿ
- ಉದ್ಯಮ ನಿರ್ವಹಣೆ
- ಘಟಕದ ಉಪಯೋಗ
- ಸಾಲದ ಸರಿಯಾದ ಬಳಕೆ
- ಸಾಲ ಮರುಪಾವತಿ
- ವಿಮೆ
- ಉದ್ಯಮ ನಿರ್ವಹಣೆಯ ಕುರಿತು ಅರಿವು
ಮೂಡಿಸುವ ಉದ್ದೇಶವಿದೆ.
ಇದನ್ನು ಓದಿ
Kayaka Kiran Yojana : ಸಾಲದ ಬಳಕೆಯ ಪರಿಶೀಲನೆ
ನಿಗಮದ ಜಿಲ್ಲಾ ವ್ಯವಸ್ಥಾಪಕರು ಫಲಾನುಭವಿ ಪಡೆದ ಸಾಲವನ್ನು ಸರಿಯಾದ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀದಿಸಬಹುದು.
ಉದ್ಯಮ ಸ್ಥಾಪನೆಯಾಗಿದೆಯೇ, ಯಂತ್ರೋಪಕರಣಗಳನ್ನು ಖರೀದಿಸಲಾಗಿದೆಯೇ ಮತ್ತು ಸಾಲದ ಮೊತ್ತವನ್ನು ಸದುಪಯೋಗಪಡಿಸಿಕೊಳ್ಳಲಾಗಿದೆಯೇ, ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇದೆ.
ಸಾರಿಗೆ ಉದ್ದೇಶಕ್ಕೆ ಸಾಲ
ಸಾರಿಗೆ ಚಟುವಟಿಕೆಗಾಗಿ ಸಾಲ ಪಡೆಯಲು ಬಯಸುವ ಅಭ್ಯರ್ಥಿಗಳು ಅಗತ್ಯವಾದ ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಡ್ಜ್ ಹೊಂದಿರಬೇಕು.
ಸಂಬಂಧಿತ ಉದ್ಯಮಕ್ಕೆ ಅಗತ್ಯವಿರುವ ಇತರೆ ಪರವಾನಗಿ ಗಳನ್ನು ಹೊಂದಿರಬೇಕು.
ಸ್ವಸಹಾಯ ಗುಂಪುಗಳಿಗೆ ಸೌಲಭ್ಯ
ಸ್ವಸಹಾಯ ಗುಂಪುಗಳು ಸಹ ಈ ಯೋಜನೆಯಡಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸೌಲಭ್ಯ ಪಡೆಯಬಹುದು.
ಅಂತಹ ಸಂದರ್ಭದಲ್ಲಿ ಸ್ವಸಹಾಯ ಗುಂಪಿನ ಅಗತ್ಯ ದಾಖಲೆಗಳು, ಸಾಲ ಪಡೆಯಲು ತೆಗೆದುಕೊಂಡಿರುವ ಠರಾವು ಹಾಗೂ ಇತರೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
Kayaka Kiran Yojana: ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು
ಕಾಯಕ ಕಿರಣ ಯೋಜನೆ ಅಡಿ ಅರ್ಜಿ ಸಲ್ಲಿಸುವವರು ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ನಿಮ್ಮ ಜಾತಿ ಅಥವಾ ಆದಾಯ ಪ್ರಮಾಣ ಪತ್ರ ಸರಿಯಾಗಿದೆಯೇ ಪರಿಶೀಲಿಸಿ.
- ಕುಟುಂಬದ ವಾರ್ಷಿಕ ಆದಾಯ ನಿಗದಿತ ಮಿತಿಯೊಳಗೆ ಇದೆಯೇ ಖಚಿತಪಡಿಸಿಕೊಳ್ಳಿ.
- ವಯೋಮಿತಿಯನ್ನು ಪರಿಶೀಲಿಸಿ.
- ಬ್ಯಾಂಕ್ ಖಾತೆ ವಿವರ ಸರಿಯಾಗಿರಲಿ.
- ಉದ್ಯಮಕ್ಕೆ ಸಂಬಂಧಿಸಿದ ಯೋಜನಾ ವರದಿ ಸಿದ್ದಪಡಿಸಿ.
- ಯಂತ್ರೋಪಕರಣ ಖರೀದಿಸುವುದಾದರೆ invoice/quotation ಮುಂತಾದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಅಗತ್ಯ ಲೈಸೆನ್ಸ್ ಮತ್ತು ಪರವಾಗಿಗಳನ್ನು ಪಡೆದುಕೊಳ್ಳಿ.
- 1 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಆಸ್ತಿ ಭದ್ರತೆಯ ದಾಖಲೆಗಳನ್ನು ಸಿದ್ಧಪಡಿಸಿ.
- ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಬೇಡಿ.
- ಒಂದೇ ಕುಟುಂಬದಿಂದ ಒಬ್ಬ ಅಭ್ಯರ್ಥಿ ಮಾತ್ರ ಸೌಲಭ್ಯ ಪಡೆಯಬಹುದು ಎಂಬ ನಿಯಮ ಗಮನದಲ್ಲಿರಲಿ.
- ಸಾಲ ಮಂಜೂರಾದ ನಂತರ ಹಣವನ್ನು ನಿಗದಿತ ಉದ್ದೇಶ ಕಷ್ಟೇ ಬಳಸಬೇಕು.
- ಮಂಜೂರಾತಿ ಆದೇಶದಲ್ಲಿರುವ ಮರುಪಾವತಿ ಷರತ್ತುಗಳನ್ನು ತಪ್ಪದೇ ಪಾಲಿಸಬೇಕು.
Kayaka Kiran Yojana : ಪ್ರಮುಖ ಸಮುದಾಯಗಳ ಕುರಿತು
ನೀಡಿರುವ ಮಾರ್ಗಸೂಚಿಗಳ ಪ್ರಕಾರ ಪ್ರವರ್ಗ -3ಬಿ ಅಡಿಯಲ್ಲಿ ಉಲ್ಲೇಖಿಸಿರುವ ಸಮುದಾಯಗಳಲ್ಲಿ ಹೆಳವ, ಅಂಬಿಗ, ಭೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಭಜಂತ್ರಿ, ಹಡಪದ, ಕ್ಷೌರಿಕ, ನವಲಿಗ ನಾವಿ, ಅಕ್ಕಸಾಲಿ, ಬಡಿಗಾರ್, ಕಮ್ಮಾರ, ಕಂಸಾಳ, ಪಂಚಾಳ, ಮೇದರ, ಉಪ್ಪಾರ, ಗೌಳಿ ಹಾಗೂ ವೀರಶೈವ ಪಂಚಮಸಾಲಿ ಸಮುದಾಯಗಳನ್ನು ಉಲ್ಲೇಖಿಸಲಾಗಿದೆ.
ಅರ್ಹತೆಯನ್ನು ಅಂತಿಮವಾಗಿ ಸಂಬಂಧಿಸಿದ ಅಧಿಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಜಾರಿಯಲ್ಲಿರುವ ಸರ್ಕಾರಿ ನಿಯಮಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಕಾಯಕ ಕಿರಣ ಯೋಜನೆ FAQ
1. ಕಾಯಕ ಕಿರಣ ಯೋಜನೆ ಎಂದರೇನು?
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮೂಲಕ ಅರ್ಹ ಫಲಾನುಭವಿಗಳು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಸಾಲ ಹಾಗೂ ಸಹಾಯಧನ ನೀಡುವ ಯೋಜನೆಯಾಗಿದೆ.
2. ಕಾಯಕ ಕಿರಣ ಯೋಜನೆ ಅಡಿ ಗರಿಷ್ಠ ಎಷ್ಟು ಹಣ ಸಿಗುತ್ತದೆ?
ಗರಿಷ್ಠ 2 ಲಕ್ಷದ ಘಟಕ ವೆಚ್ಚಕ್ಕೆ ನಿಯಮಾನುಸರ ಸಾಲ ಮತ್ತು ಸಹಾಯಧನದ ನೆರವು ಪಡೆಯಬಹುದು. ಗರಿಷ್ಠ ಸಹಾಯಧನ ₹30,000 ಮತ್ತು ಸಾಲದ ಭಾಗ ಗರಿಷ್ಠ 1.70 ಲಕ್ಷದವರೆಗೆ ಇರಬಹುದು.
3. ಈ ಯೋಜನೆಯಡಿ ಸಹಾಯಧನ ಎಷ್ಟು?
ಈ ಯೋಜನೆಯಡಿ ಸಹಾಯಧನ 30,000 ಸಿಗುತ್ತದೆ.
4.₹50,000 ಘಟಕ ವೆಚ್ಚಕ್ಕೆ ಎಷ್ಟು ಸಹಾಯಧನ?
ಗರಿಷ್ಠ ₹10,000 ಸಹಾಯಧನ ನೀಡುವ ನಿಯಮವಿದೆ.
5. ಮಹಿಳೆಯರಿಗೆ ಮೀಸಲಾತಿ ಇದೆಯೇ?
ಹೌದು. ಯೋಜನೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನಿಗದಿಪಡಿಸಲಾಗಿದೆ.
6. ಸಾಲ ಪಡೆದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಬಹುದೇ?
ಇಲ್ಲ. ಮಂಜೂರಾದ ಸಾಲವನ್ನು ಅರ್ಜಿಯಲ್ಲಿ ಉಲ್ಲೇಖಿಸಿ ಅನುಮೋದಿಸಿರುವ ಆರ್ಥಿಕ ಚಟುವಟಿಕೆಗೆ ಬಳಸಬೇಕು.
ಸೂಚನೆ : ಮೇಲಿನ ಮಾಹಿತಿಯನ್ನು ಅಧಿಕೃತ ಮಾಹಿತಿಯ ಮೂಲಕ ನೀಡಿರುವ ಕಾಯಕ ಕಿರಣ ಯೋಜನೆಯ ಮಾರ್ಗಸೂಚಿಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಪ್ರಸ್ತುತ ಅಧಿಕೃತ ಅಧಿಸೂಚನೆ, ಅರ್ಜಿ ಅಹ್ವಾನ ಮತ್ತು ಜಾರಿಯಲ್ಲಿರುವ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ. ಅಧಿಕೃತ ಮಾಹಿತಿಯ ಪ್ರಕಾರ 2026ರ ಯೋಜನೆಯ ಅರ್ಜಿ ಆಹ್ವಾನ ಅಕ್ಟೋಬರ್ 10 ಮುಕ್ತಾಯದ ದಿನಾಂಕವಾಗಿದೆ. ಅಲ್ಲಿಯವರೆಗೆ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಹಾಗೂ ಇದೇ ರೀತಿಯ ಸರ್ಕಾರಿ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಅಧಿಕೃತ ಜಾಲತಾಣ , ಅರ್ಜಿಯನ್ನು ಸಲ್ಲಿಸಲು
https://bcwdcorporations.karnataka.gov.in/KVLDCLPortal/Home
ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ
Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.
