ಮಹಿಳಾ ಸ್ವಸಹಾಯ ಸಂಘ Subsidy : ಕ್ರಿಶ್ಚಿಯನ್ ಸಮುದಾಯದ ಸ್ವಸಹಾಯ ಗುಂಪುಗಳಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆಯಡಿಯಲ್ಲಿ ಶೇಕಡ 50ರಷ್ಟು ಅಥವಾ ಗರಿಷ್ಠ 2 ಲಕ್ಷ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾವಲಂಬಿ ಯನ್ನಾಗಿ ಮಾಡುವ ಸಲುವಾಗಿ, ರಾಷ್ಟ್ರೀಕೃತ/ಶೆಡ್ಯೂಲ್ ಬ್ಯಾಂಕ್/ಆರ್ ಬಿ ಐ ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇಕಡ 50 ಅಥವಾ ಗರಿಷ್ಠ 2 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು.
ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕ ಬ್ಯಾಂಕುಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.
ಸಹಾಯಧನವನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನಗಳು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನು ಓದಿ
ಮಹಿಳಾ ಸ್ವಸಹಾಯ ಸಂಘ Subsidy : ಯಾರು ಅರ್ಜಿ ಸಲ್ಲಿಸಬಹುದು?
ಈ ನಿಗಮದ ಸಹಾಯಧನವನ್ನು ಪಡೆಯಲು ಈ ಕೆಳಗಿನ ಅರ್ಹತೆಯ ಮಾನದಂಡಗಳನ್ನು ಹೊಂದಿರಬೇಕು.
- ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯುವ ಸ್ವಸಹಾಯ ಗುಂಪುಗಳು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಹಿಳೆಯರಾಗಿರಬೇಕು.
- ಮಹಿಳಾ ಸ್ವಸಹಾಯ ಸಂಘದ ಸದಸ್ಯರು ರಾಜ್ಯದ ಖಾಯಂ ನಿವಾಸಿಗಳಾಗಿರತಕ್ಕದ್ದು.
- ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20 ರೊಳಗೆ ಇರಬೇಕು.
- ಮಹಿಳಾ ಸ್ವಸಹಾಯ ಸಂಘದಲ್ಲಿ ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ.
- ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಕುಟುಂಬದ ಆದಾಯ ರೂ 6 ಲಕ್ಷ ಮೀರಿರಬಾರದು.
- ಸ್ವಸಹಾಯ ಸಂಘದ ಸದಸ್ಯರ ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು.
- ಮಹಿಳಾ ಸ್ವಸಹಾಯ ಸಂಘವು NRLM/NULM ಅಡಿಯಲ್ಲಿ ನೋಂದಾಯಿತರಾಗಿರಬೇಕು.
- ಸ್ವಸಹಾಯ ಸದಸ್ಯರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಗಳಾಗಿರಬಾರದು.
- ಸಂಘದ ಸದಸ್ಯರು ಅಥವಾ ಅವರ ಕುಟುಂಬದ ಸದಸ್ಯರು ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಗಳನ್ನು ಹೊರತುಪಡಿಸಿ ಕಳೆದ ಐದು ವರ್ಷಗಳಲ್ಲಿ ನಿಗಮದಿಂದ ಯಾವುದೇ ಸಾಲ/ಸಹಾಯಧನ ಸೌಲಭ್ಯ ಪಡೆದಿರಬಾರದು.
- ಸ್ವಸಹಾಯ ಸಂಘದ ಸದಸ್ಯರು ನಿಗಮದ ಸುಸ್ತಿದಾರರಾಗಿರಬಾರದು.
- ಮಹಿಳಾ ಸ್ವಸಹಾಯ ಗುಂಪು ನಿಯಮಿತವಾಗಿ ಸಭೆಗಳನ್ನು ನಡೆಸತಕ್ಕದ್ದು (ಕನಿಷ್ಠ ತಿಂಗಳಿಗೆ ಒಂದು ಸಭೆ)
- ಸ್ವಸಹಾಯ ಗುಂಪು ನಿಗದಿತವಾಗಿ ಉಳಿತಾಯ ಮಾಡುವುದು ಮತ್ತು ಸ್ವಸಹಾಯ ಗುಂಪಿನ ಉಳಿತಾಯ ಮೊತ್ತದಿಂದ ಗುಂಪಿನ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಆಂತರಿಕ ಸಾಲವನ್ನು ನೀಡುವುದು.
- ಆಂತರಿಕ ಸಾಲದ ಮರುಪಾವತಿಗೆ ಒತ್ತು ನೀಡಿ ಸಾಲದ ಮರುಪಾವತಿ ಉತ್ತಮವಾಗಿರುವ ಸ್ವಸಹಾಯ ಸಂಘಗಳಿಗೆ ನಿಗಮದಿಂದ ಸಹಾಯಧನ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದು.
- ಸ್ವಸಹಾಯ ಗುಂಪಿನ, ದಾಖಲೆ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
- ಮಹಿಳಾ ಸ್ವಸಹಾಯ ಸಂಘ Subsidy ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ ಆರು ತಿಂಗಳ ಆಗಿರಬೇಕು.
ಇದನ್ನು ಓದಿ
Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.
ಮಹಿಳಾ ಸ್ವಸಹಾಯ ಸಂಘ Subsidy : ಅಗತ್ಯವಿರುವ ಪ್ರಮಾಣ ಪತ್ರಗಳು ಮತ್ತು ದಾಖಲೆಗಳು
ಈ ನಿಗಮದ ಸಹಾಯಧನವನ್ನು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
- ಸ್ವಸಹಾಯ ಗುಂಪಿನ ಸ್ವಯಂ ಉದ್ಯೋಗ ಚಟುವಟಿಕೆಯ ಯೋಜನಾ ವರದಿ
- ಸ್ವಸಹಾಯ ಗುಂಪಿನ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ.
- ಸ್ವಸಹಾಯ ಸಂಘದ ಎಲ್ಲಾ ಸದಸ್ಯರ ಸಾಮೂಹಿಕ ಫೋಟೋ.
- ಸ್ವಸಹಾಯ ಸಂಘದ ಸಾಮಾನ್ಯ ಸಭೆ ನಡವಳಿ ಪುಸ್ತಕದ ಪ್ರತಿ
- NRLM/NULM ನಿಂದ ಪಡೆದ ಸ್ವಸಹಾಯ ಸಂಘದ ನೋಂದಣಿ ಪ್ರಮಾಣ ಪತ್ರ.
- ರೂ 100 ರ ಇ- ಸ್ಟ್ಯಾಂಪ್ ಪೇಪರ್ ನಲ್ಲಿ ಮಾಡಲಾದ ಅಫಿಡವಿಟ್
ಜಿಲ್ಲಾ ಪ್ರಕರಣ ನಿರ್ವಾಹಕರಿಂದ ದಾಖಲೆ ಪರಿಶೀಲನೆ ಮತ್ತು ಶಿಫಾರಸ್ಸು ಈ ಹಂತದಲ್ಲಿ ಅರ್ಜಿದಾರರು ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ.
ಮಹಿಳಾ ಸ್ವಸಹಾಯ ಸಂಘ Subsidy : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈ ನಿಗಮದ ಸಹಾಯಧನವನ್ನು ಪಡೆಯಲು ಸೆಪ್ಟೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವವರು ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಅಥವಾ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಮಹಿಳಾ ಸ್ವಸಹಾಯ ಸಂಘ Subsidy : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನಗಳು.
ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಆಯ್ಕೆಯಾದ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Step 1. ಅರ್ಜಿದಾರರು ನಮ್ಮ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
Step 2. ನಂತರ ಅದೇ ಪುಟದಲ್ಲಿ ಕಾಣುವ “ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ”ಯಾ ಮುಂದೆ ಕಾಣಿಸುವ ಅರ್ಜಿ ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step 3. ಅರ್ಜಿದಾರರು ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿದ್ದರೆ, ನೊಂದಾಯಿಸಿ (Registration) ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಒಟಿಪಿ ಅನ್ನು ಪಡೆದು ಬಳಕೆದಾರ ಐಡಿಯನ್ನು ನೋಂದಣಿ ಮಾಡಿಕೊಂಡು Password ಅನ್ನು ಸಿದ್ದ ಮಾಡಿಕೊಂಡು Log in ಆಗಬೇಕು.
Step 4. ಲಾಗಿನ್ ಆದ ನಂತರ ಅಧಿಕೃತ ಅರ್ಜಿ ಪ್ರತಿ ಓಪನ್ ಆಗುತ್ತದೆ. ನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಇದೇ ರೀತಿಯ ಸಹಾಯಧನ ಮತ್ತು ಸಬ್ಸಿಡಿ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಮಹಿಳಾ ಸ್ವಸಹಾಯ ಸಂಘ Subsidy : ಅಧಿಕೃತ ವೆಬ್ಸೈಟ್ ಲಿಂಕ್
https://kccdclonline.karnataka.gov.in/Portal/SchemeDetail/9
ಮಹಿಳಾ ಸ್ವಸಹಾಯ ಸಂಘ Subsidy : ಸಹಾಯಧನದಿಂದ ಆಗುವ ಪ್ರಯೋಜನಗಳು
- ಆರ್ಥಿಕ ಸ್ವಾವಲಂಬನೆ : ಮಹಿಳೆಯರು ಸ್ವಂತ ಆದಾಯ ಗಳಿಸಲು ಸಹಾಯವಾಗುತ್ತದೆ.
- ಉದ್ಯೋಗಾವಕಾಶಗಳು ಸೃಷ್ಟಿ : ಹೊಲಿಗೆ, ಆಹಾರ ಸಂಸ್ಕರಣೆ, ಹೈನುಗಾರಿಕೆ, ಸಣ್ಣ ವ್ಯಾಪಾರ ಮುಂತಾದ ಉದ್ಯಮಗಳನ್ನು ಆರಂಭಿಸಲು ನೆರವಾಗುತ್ತದೆ.
- ಸಾಲದ ಹೊರೆ ಕಡಿಮೆ : ಸ್ವಂತ ಬಂಡವಾಳದ ಕೊರತೆಯನ್ನು ಸಹಾಯಧನದ ಮೂಲಕ ಭಾಗಶಹ ತುಂಬಿಕೊಳ್ಳಬಹುದು..
- ಸಣ್ಣ ಉದ್ಯಮಗಳ ಬೆಳವಣಿಗೆ : ಈಗಾಗಲೇ ನಡೆಸುತ್ತಿರುವ ವ್ಯಾಪಾರವನ್ನು ವಿಸ್ತರಿಸಲು ಸಹಾಯವಾಗುತ್ತದೆ.
- ಉಳಿತಾಯದ ಅಭ್ಯಾಸ : ಗುಂಪಿನ ಸದಸ್ಯರಲ್ಲಿ ನಿಯಮಿತ ಉಳಿತಾಯ ಮತ್ತು ಹಣಕಾಸಿನ ಶಿಸ್ತು ಬೆಳೆಸಲು ಸಹಕಾರಿಯಾಗುತ್ತದೆ.
- ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ : ಮಹಿಳೆಯರ ಆದಾಯ ಹೆಚ್ಚುವುದರಿಂದ ಕುಟುಂಬದ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ.
- ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಳ : ಆರ್ಥಿಕವಾಗಿ ಸ್ವತಂತ್ರ ಆಗುವುದರಿಂದ ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಬಹುದು.
- ಗುಂಪಿನ ಒಗ್ಗಟ್ಟು ಮತ್ತು ಸಹಕಾರ : ಸದಸ್ಯರು ಒಟ್ಟಾಗಿ ಉದ್ಯಮ ನಡೆಸುವುದರಿಂದ ಪರಸ್ಪರ ಸಹಕಾರ ಹೆಚ್ಚುತ್ತದೆ.
- ಕೌಶಲ್ಯ ಅಭಿವೃದ್ಧಿ : ತರಬೇತಿ, ಮಾರುಕಟ್ಟೆ ಸಂಪರ್ಕ ಮತ್ತು ಉದ್ಯಮ ನಿರ್ವಹಣೆಯ ಅವಕಾಶಗಳು ದೊರೆಯಬಹುದು.
- ಗ್ರಾಮೀಣ ಆರ್ಥಿಕ ಅಭಿವೃದ್ಧಿ : ಮಹಿಳಾ ಗುಂಪುಗಳು ಸ್ಥಳೀಯವಾಗಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ.
ಇದನ್ನು ಓದಿ
