ಉಚಿತ ಹೊಲಿಗೆ ಯಂತ್ರ 2026 : ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಹಾಗೂ ಸೇವಾ ಸಿಂಧು ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಕುಳಿತು ಹೊಲಿಗೆ ಕೆಲಸ ಮಾಡಿಕೊಂಡು ಆದಾಯ ಗಳಿಸಬೇಕು ಎನ್ನುವ ಮಹಿಳೆಯರಿಗೆ, ಒಳ್ಳೆಯ ಅವಕಾಶ ಒಂದು ಬಂದಿದೆ. ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026 27ನೇ ಸಾಲಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆ ಅಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಟೈಲರಿಂಗ್ ಕೆಲಸ ಗೊತ್ತಿದ್ದು ಸ್ವಂತವಾಗಿ ಹೊಲಿಗೆ ಯಂತ್ರ ಖರೀದಿಸಲು ಸಾಧ್ಯವಾಗದ ಮಹಿಳೆಯರಿಗೆ ಈ ಯೋಜನೆ ನೆರವಾಗಲಿದೆ. ಹೊಲಿಗೆ ಯಂತ್ರ ದೊರೆತರೆ, ಮನೆಯಿಂದಲೇ ಕೆಲಸ ಆರಂಭಿಸಿ, ಸ್ವಲ್ಪ ಸ್ವಲ್ಪವಾಗಿ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ.
ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನವಾಗಿದೆ. ಹೀಗಾಗಿ ಅರ್ಹರು ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನು ಓದಿ
ಉಚಿತ ಹೊಲಿಗೆ ಯಂತ್ರ 2026 : ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆ ಎಲ್ಲರಿಗೂ ಅನ್ವಯಿಸುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಕೆಲವು ಅರ್ಹತ ನಿಯಮಗಳನ್ನು ಪೂರೈಸುವವರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು.
- ಹಿಂದುಳಿದ ವರ್ಗಗಳ ಪ್ರವರ್ಗ -1 , 2A,2B,3A,3B ವರ್ಗಕ್ಕೆ ಸೇರಿದವರಾಗರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯಕ್ಕೂ ಮಿತಿ ನಿಗದಿಪಡಿಸಲಾಗಿದೆ.
- ಗ್ರಾಮೀಣ ಪ್ರದೇಶದ ಕುಟುಂಬಗಳ ವಾರ್ಷಿಕ ಆದಾಯ ₹98,000 ಒಳಗೆ ಇರಬೇಕು.
- ಪಟ್ಟಣ ಪ್ರದೇಶದ ಕುಟುಂಬಗಳ ವಾರ್ಷಿಕ ಆದಾಯ ₹1.20 ಲಕ್ಷದೊಳಗಿರಬೇಕು.
ಅರ್ಜಿದಾರರು ಟೈಲರಿಂಗ್ ಅಥವಾ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. ಅಂದರೆ ಕೇವಲ ಹೊಲಿಗೆ ಯಂತ್ರ ಬೇಕೆಂದು ಅರ್ಜಿ ಸಲ್ಲಿಸುವುದಕ್ಕಿಂತ, ಹೊಲಿಗೆ ವೃತ್ತಿಯನ್ನು ಮಾಡುತ್ತಿರುವ ಬಗ್ಗೆ ಅಗತ್ಯ ದೃಢೀಕರಣ ಹೊಂದಿರುವುದು ಮುಖ್ಯ.
ಸರ್ಕಾರಿ ನೌಕರರು ಅಥವಾ ಅವರ ಮೇಲೆ ಅವಲಂಬಿತರಾಗಿರುವ ಕುಟುಂಬದ ಸದಸ್ಯರಿಗೆ ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೆಯೇ ನಿಗಮದ ಯಾವುದೇ ಯೋಜನೆಯಿಂದ ಈ ಹಿಂದೆ ಪ್ರಯೋಜನ ಪಡೆದಿದ್ದರೆ ಮತ್ತೆ ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಇದನ್ನು ಓದಿ
SSC SI Recruitment 2026 : 1,871 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ, important update.
ಉಚಿತ ಹೊಲಿಗೆ ಯಂತ್ರ 2026 : ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಅರ್ಜಿ ಸಲ್ಲಿಸಲು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಜನ್ಮ ದಿನಾಂಕದ ದಾಖಲೆ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪತ್ರ.
- ಶೈಕ್ಷಣಿಕ ಅರ್ಹತೆಯ ದಾಖಲೆ.
- ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಬೇಕಾಗುತ್ತದೆ.
ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಬೇಕು. ಇದರ ಜೊತೆಗೆ ಅರ್ಜಿದಾರರು ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ (PDO) ಪಡೆದ ದೃಡೀಕರಣ ಪ್ರಮಾಣ ಪತ್ರವು ಅಗತ್ಯವಾಗಿರುತ್ತದೆ.
ದಾಖಲೆಗಳಲ್ಲಿ ಹೆಸರು, ಜನ್ಮ ದಿನಾಂಕ ಹಾಗೂ ಇತರ ಮಾಹಿತಿಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿವೆಯೇ? ಎಂಬುದನ್ನು ಅರ್ಜಿ ಸಲ್ಲಿಸುವ ಮುನ್ನ ಪರಿಶೀಲಿಸಿಕೊಳ್ಳುವುದು ಉತ್ತಮ.
ಉಚಿತ ಹೊಲಿಗೆ ಯಂತ್ರ 2026 : ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹರು ಸೇವಾಸಿಂದು ಪೋರ್ಟಲ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾಗುವವರು ನಿಮ್ಮ ಹತ್ತಿರದ ಗ್ರಾಮ ಓನ್ ಅಥವಾ ಸೈಬರ್ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ ದೊರೆಯುವ ಅರ್ಜಿ ಸಂಖ್ಯಾ ಅಥವಾ ಸ್ವೀಕೃತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ. ಮುಂದಿನ ದಿನಗಳಲ್ಲಿ ಅರ್ಜಿಯ ಸ್ಥಿತಿ ಪರಿಶೀಲಿಸಲು ಇದು ಸಹಾಯಕವಾಗಬಹುದು.
ಇದನ್ನು ಓದಿ
SSC CHSL 2026 : 2,536 ಹುದ್ದೆಗಳಿಗೆ ಅರ್ಜಿ ಆರಂಭ, 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ. Important update.
ಉಚಿತ ಹೊಲಿಗೆ ಯಂತ್ರ 2026 : ಸೆಪ್ಟೆಂಬರ್ 30ರೊಳಗೆ ಅರ್ಜಿಯನ್ನು ಸಲ್ಲಿಸಿ.
ಹೊಲಿಗೆ ಕೆಲಸದಲ್ಲಿ ಆಸಕ್ತಿ ಹೊಂದಿರುವ ಹಾಗೂ ಈಗಾಗಲೇ ಟೈಲರಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅರ್ಹ ಮಹಿಳೆಯರಿಗೆ ಈ ಯೋಜನೆ ಸ್ವಂತ ಉದ್ಯೋಗ ಆರಂಭಿಸಲು ನೆರವಾಗಬಹುದು. ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅವಕಾಶ ಸಿಗುವುದರಿಂದ ಕುಟುಂಬದ ಜವಾಬ್ದಾರಿಗಳೊಂದಿಗೆ ವೃತ್ತಿಯನ್ನು ಮುಂದುವರಿಸಲು ಅನುಕೂಲವಾಗುತ್ತದೆ.
ಹೀಗಾಗಿ ಯೋಜನೆ ನಿಯಮಗಳಿಗೆ ಒಳಪಡುವವರು ಅಗತ್ಯದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೆಪ್ಟೆಂಬರ್ 30, 2026 ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಸೇವಾ ಸಿಂಧು ಪೋರ್ಟಲ್ ನಲ್ಲಿ ಯೋಜನೆಯ ಇತ್ತೀಚಿನ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಉಚಿತ ಹೊಲಿಗೆ ಯಂತ್ರ 2026: ಇದೇ ರೀತಿಯ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ. ಇದರಿಂದ ಯೋಜನೆಯ ಅರ್ಜಿ ಪ್ರಾರಂಭವಾದ ತಕ್ಷಣ ಮಾಹಿತಿ ನಿಮಗೆ ತಲುಪುತ್ತದೆ.
ಸಹಾಯವಾಣಿ ಸಂಖ್ಯೆಗಳು : 080-22374832
ಅಧಿಕೃತ ಜಾಲತಾಣ : https://dbcdc.karnataka.gov.in/36/tailoring-machine-scheme/kn
- ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ದೊರೆಯುತ್ತದೆ.
- ಹೊಲಿಗೆ ಕೆಲಸದ ಮೂಲಕ ಸ್ವಯಂ ಉದ್ಯೋಗ ಆರಂಭಿಸಲು ಸಹಾಯಕವಾಗುತ್ತದೆ.
- ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶ ಸಿಗುತ್ತದೆ.
- ಮಹಿಳೆಯರಲ್ಲಿ ಆತ್ಮ ನಿರ್ಭರತೆ ಮತ್ತು ಸ್ವಾವಲಂಬನೆ ಬೆಳೆಸಲು ನೆರವಾಗುತ್ತದೆ.
- ಮನೆಯಲ್ಲಿಯೇ ಕೆಲಸ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು.
- ನಿರುದ್ಯೋಗ ಕಡಿಮೆ ಮಾಡಿ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.
ಉಚಿತ ಹೊಲಿಗೆ ಯಂತ್ರ 2026 : ಡಿ ದೇವರಾಜ ಅರಸು ಉಚಿತ ಹೊಲಿಗೆ ಯಂತ್ರ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುತ್ತದೆ. ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ದೊರೆಯುವುದರಿಂದ ಮನೆಯಲ್ಲಿಯೇ ಹೊಲಿಗೆ ಕೆಲಸ ಆರಂಭಿಸಿ ಆದಾಯ ಗಳಿಸಬಹುದು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯಕವಾಗುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ನಿರುದ್ಯೋಗ ಕಡಿಮೆಯಾಗುವುದರ ಜೊತೆಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯ ಹೆಚ್ಚುತ್ತದೆ. ಬಟ್ಟೆ ಹೊಲಿಗೆ, ಬ್ಲೌಸ್, ಮಕ್ಕಳ ಉಡುಪು ಮುಂತಾದ ಕೆಲಸಗಳನ್ನು ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದು. ಹೀಗಾಗಿ ಈ ಯೋಜನೆ ಬಡ ಕುಟುಂಬಗಳ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಯೋಜನೆಯ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ