SSC CHSL 2026 : 2,536 ಹುದ್ದೆಗಳಿಗೆ ಅರ್ಜಿ ಆರಂಭ, 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ. Important update.

SSC CHSL 2026SSC CHSL 2026 : ನೀವು 12ನೇ ತರಗತಿ ಪಾಸ್ ಆಗಿದ್ದು ಕೇಂದ್ರ ಸರ್ಕಾರದ ಕಚೇರಿಯಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದರೆ, SSC CHSL 2026 ನೇಮಕಾತಿ ನಿಮಗೆ ಗಮನಿಸಬೇಕಾದ ಪ್ರಮುಖ ಅವಕಾಶವಾಗಿದೆ.

Staff Selection commission (SSC) 2026 Combined Higher Secondary (10+2) Level Examination (CHSL) ಅಧಿಸೂಚನೆಯನ್ನು ಸೆಪ್ಟೆಂಬರ್ 7, 2026ರಂದು ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಪ್ರಸ್ತುತ ಸುಮಾರು 2,536 ತಾತ್ಕಾಲಿಕ ಹುದ್ದೆಗಳು ಲಭ್ಯವಿದೆ.

LDC/JSA,DEO & DEO Grade ‘A’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ Online Application ಸ್ವೀಕರಿಸಲಾಗುತ್ತಿದೆ.

ನೀವು ಅರ್ಜಿ ಹಾಕುವ ಯೋಜನೆಯಲ್ಲಿದ್ದರೆ, ಕೇವಲ ಕೊನೆಯ ದಿನಾಂಕ ಯಾವುದು? ತಿಳಿದುಕೊಂಡರೆ ಸಾಕಾಗುವುದಿಲ್ಲ. ಯಾವ ಪೋಸ್ಟ್ ಗೆ ನೀವು ಅರ್ಹರು, ಪರೀಕ್ಷೆಯಲ್ಲಿ ಎಷ್ಟು ಪ್ರಶ್ನೆಗಳು ಬರುತ್ತವೆ, ನೆಗೆಟಿವ್ ಮಾರ್ಕಿಂಗ್ ಹೇಗಿದೆ, ಟೈಪಿಂಗ್ ಟೆಸ್ಟ್ ಇದೆಯಾ?, ಅಪ್ಲಿಕೇಶನ್ ನಲ್ಲಿ ಯಾವ ತಪ್ಪು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು.

ಅದಕ್ಕಾಗಿ ಈ ಲೇಖನದಲ್ಲಿ SSC CHSL 2026 ರ ಮಾಹಿತಿಯನ್ನು ಅಭ್ಯರ್ಥಿಯ ದೃಷ್ಟಿಯಿಂದ ಸರಳವಾಗಿ ವಿವರಿಸಲಾಗಿದೆ.

SSC CHSL ಎಂದರೆ Combined Higher Secondary (10+2) Level Examination.

ಸರಳವಾಗಿ ಹೇಳುವುದಾದರೆ, 12ನೇ ತರಗತಿ ಪಾಸ್ ಅಭ್ಯರ್ಥಿಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ Clerical & Data Entry ಹುದ್ದೆಗಳಿಗೆ ನೇಮಕ ಮಾಡಲು SSC ನಡೆಸುವ ಪರೀಕ್ಷೆ ಇದು.

ಈ ಬಾರಿ ಪ್ರಸ್ತುತ ಸುಮಾರು 2,536  Tentative Vacancies ಪ್ರಕಟಿಸಲಾಗಿದೆ.

ಇಲ್ಲಿ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ. 2,536 ಹುದ್ದೆಗಳು ಅಂತಿಮ ಸಂಖ್ಯೆ ಅಲ್ಲ. ಇದು ಪ್ರಸ್ತುತ ನೀಡಿರುವ Tentative Vacancy. ಇಲಾಖೆಗಳ ವೇಕೆನ್ಸಿ ಡೀಟೇಲ್ಸ್ ಬದಲಾಗುವ ಸಾಧ್ಯತೆ ಇರುವುದರಿಂದ ಅಂತಿಮ ಸಂಖ್ಯೆ ನಂತರ ಬದಲಾಗಬಹುದು.

SSC CHSL 2026 : ಪ್ರಮುಖ ದಿನಾಂಕಗಳು 

  • ಅಧಿಸೂಚನೆ ಪ್ರಕಟಣೆ ದಿನಾಂಕ : ಸೆಪ್ಟೆಂಬರ್ 7, 2026
  • ಅರ್ಜಿ ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 7, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 7, 2026
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಅಕ್ಟೋಬರ್ 8 , 2026
  • Correction Window : 14-16 ಅಕ್ಟೋಬರ್ 2026.
  • Tier -| Exam: ತದನಂತರದಲ್ಲಿ ಪ್ರಕಟಿಸಲಾಗುವುದು.
  • Tier -|| : ತದನಂತರದಲ್ಲಿ ಪ್ರಕಟಿಸಲಾಗುವುದು.

ನೀವು ಅರ್ಜಿ ಹಾಕಲು ಅರ್ಹರಾಗಿದ್ದರೆ, ಅಕ್ಟೋಬರ್ 7 ರ ವರೆಗೆ ಕಾಯಬೇಡಿ. ಕೊನೆಯ ದಿನದಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

  • Website Slow ಆಗಬಹುದು
  • OTP ತಡವಾಗಬಹುದು
  • Payment Fail ಆಗಬಹುದು
  • Photo Capture ಸಮಸ್ಯೆ ಬರಬಹುದು
  • Internet ಸಮಸ್ಯೆ ಉಂಟಾಗಬಹುದು

ಆದ್ದರಿಂದ ಆದಷ್ಟು ಬೇಗ ಅಪ್ಲಿಕೇಶನ್ ಕಂಪ್ಲೀಟ್ ಮಾಡುವುದು ಉತ್ತಮ.

SSC CHSL 2026 : ಯಾವ ಹುದ್ದೆಗಳು ಸಿಗುತ್ತವೆ? 

ಈ ನೇಮಕಾತಿಯಲ್ಲಿ ಮುಖ್ಯವಾಗಿ ಮೂರು ರೀತಿಯ post’s ಬಗ್ಗೆ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು.

  1. LDC – Lower Division Clerk : LDC ಹುದ್ದೆಯಲ್ಲಿ ಸಾಮಾನ್ಯವಾಗಿ ಕಚೇರಿ ಸಂಬಂಧಿತ Clerical ಕೆಲಸ, ದಾಖಲೆ ನಿರ್ವಹಣೆ, File work, Data Entry ಮತ್ತು ಇತರೆ administrative ಕೆಲಸಗಳನ್ನು ಮಾಡಬೇಕಾಗುತ್ತದೆ.
  2. JSA – Junior Secretariat Assistant : JSA ಕೂಡ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ Clerical & administrative ಕೆಲಸಗಳಿಗೆ ಸಂಬಂಧಿಸಿದ post
  3. DEO – Data Entry Operator : DEO ಹುದ್ದೆಯಲ್ಲಿ ಕಂಪ್ಯೂಟರ್ ಮೂಲಕ Data Entry, Digital Records Update ಮಾಡುವುದು ಮತ್ತು ಇಲಾಖೆಗೆ ಸಂಬಂಧಿಸಿದ Data Handling ಕೆಲಸಗಳು ಪ್ರಮುಖವಾಗಿರುತ್ತದೆ.

SSC CHSL 2026 : ವೇತನ ಶ್ರೇಣಿ 

SSC CHSL ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ 7 ನೇ ವೇತನ ಆಯೋಗದ ( 7th pay commission) Pay Matrix ಪ್ರಕಾರ ವೇತನ ನಿಗದಿಪಡಿಸಲಾಗಿದೆ. ಹುದ್ದೆಗೆ ಅನುಗುಣವಾಗಿ Pay Level ಮತ್ತು Basic Pay ಶ್ರೇಣಿ ಬದಲಾಗುತ್ತದೆ.

  1. LDA/JSA : LDA & JSA ಹುದ್ದೆಗಳಿಗೆ pay level -2 ಅನ್ವಯಿಸುತ್ತದೆ. ಈ ಹುದ್ದೆಗಳ Basic Pay ₹19,900 ರಿಂದ ₹63,200 ರ ವರೆಗೆ ಇರುತ್ತದೆ.
  2. Data Entry Operator (DEO) : DEO ಹುದ್ದೆಗೆ ಇಲಾಖೆಯ/ಹುದ್ದೆಯ ಪ್ರಕಾರ Pay Level -4 ಅಥವಾ Pay Level -5 ಇರಬಹುದು. Pay level -4 ಇದ್ದರೆ ₹25,500- ₹81,100 ರ ವರೆಗೆ ಇರುತ್ತದೆ. Pay level -5 ಇದ್ದರೆ ₹29,200 – ₹92,300 ರ ವರೆಗೆ ಇರುತ್ತದೆ.
  3. Data Entry Operator, Grade ‘A’ : DEO Grade ‘A’ ಹುದ್ದೆಗೆ Pay Level -4 ಅನ್ವಯಿಸುತ್ತದೆ. ಇದರ Basic Pay ₹25,500 – ₹81,100 ಆಗಿದೆ.

ನೇಮಕಾತಿಯ ನಂತರ Basic Pay ಜೊತೆಗೆ ನಿಯಮಾನುಸಾರ Dearness allowance (DA) , House Rent Allowance (HRA) , Transport Allowance (TA) ಸೇರಿದಂತೆ ಇತರೆ ಭತ್ಯೆ ಗಳು ಸೇರಬಹುದು. ಅದೇ ಸಮಯದಲ್ಲಿ NPS ಮತ್ತು ಇತರೆ ಅನ್ಮಯವಾಗುವ Deductions ಕಡಿತವಾಗಬಹುದು.

ಹೀಗಾಗಿ ಅಭ್ಯರ್ಥಿಯ ಮಾಸಿಕ ಸಂಬಳ (in hand Salary) ಅವರು ಕೆಲಸ ಮಾಡುವ ನಗರ, ಇಲಾಖೆ ಅನ್ವಯವಾಗುವ ಭತ್ಯೆ ಗಳು ಮತ್ತು Deductions ಆದರಿಸಿ ಬದಲಾಗಬಹುದು.

SSC CHSL 2026 : ಶೈಕ್ಷಣಿಕ ವಿದ್ಯಾರ್ಹತೆ 

ಸಾಮಾನ್ಯವಾಗಿ 12 ನೇ ತರಗತಿ ಪಾಸ್ ಆಗಿರುವುದು SSC CHSL ನ ಮುಖ್ಯ Educational Qualification.

ಆದರೆ ಇಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ.

LDA / JSA

ಮಾನ್ಯತೆ ಪಡೆದ ಬೋರ್ಡ್ ನಿಂದ 12ನೇ ತರಗತಿ ಅಥವಾ ಸಮಾನ ಪರೀಕ್ಷೆ ಪಾಸ್ ಆಗಿರಬೇಕು.

DEO

ಬಹುತೇಕ DEO Post ಗೆ 12 ನೇ ತರಗತಿ ಪಾಸ್ ಅರ್ಹತೆ ಇದೆ.

ಆದರೆ ಕೆಲವು ನಿರ್ದಿಷ್ಟ ಸಚಿವಾಲಯ/ವಿಭಾಗಗಳ DEO ಮತ್ತು DEO Grade ‘A’ post ಗೆ Science Stream ನಲ್ಲಿ Mathematics ವಿಷಯದೊಂದಿಗೆ 12ನೇ ತರಗತಿ ಪಾಸ್ ಆಗಿರಬೇಕು.

ಆದ್ದರಿಂದ ನೀವು 12ನೇ ತರಗತಿ ಪಾಸ್ ಆಗಿದ್ದರೆ, ಎಲ್ಲಾ CHSL ಪೋಸ್ಟ್ ಗೆ ಅರ್ಹ ಎಂದು ನಿರ್ಧರಿಸಬೇಡಿ. ನೀವು ಯಾವ ಪೋಸ್ಟ್ ಆಯ್ಕೆ ಮಾಡುತ್ತಿದ್ದೀರಿ ಎಂಬುದನ್ನು ನೋಡಿ ಅದರ ಎಜುಕೇಶನಲ್ ಕ್ವಾಲಿಫಿಕೇಷನ್ ಚೆಕ್ ಮಾಡಿ.

SSC CHSL 2026 : ವಯೋಮಿತಿ 

SSC CHSL ಗೆ ಸಾಮಾನ್ಯವಾಗಿ

  • ಕನಿಷ್ಠ ವಯಸ್ಸು -18 ವರ್ಷ
  • ಗರಿಷ್ಠ ವಯಸ್ಸು – 27 ವರ್ಷ

Age ಅನ್ನು 1 ಆಗಸ್ಟ್ 2026ರಂತೆ ಪರಿಗಣಿಸಲಾಗುತ್ತದೆ.

ಸಾಮಾನ್ಯ ವಯೋಮಿತಿಯ ಪ್ರಕಾರ 2 ಆಗಸ್ಟ್ 1999 ರಿಂದ 1 ಆಗಸ್ಟ್ 2008 ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಹರಾಗಬಹುದು.

ಮೀಸಲಾತಿ ಮತ್ತು ಇತರೆ ಅರ್ಹ ವರ್ಗಗಳಿಗೆ ಸರ್ಕಾರದ ನಿಯಮದಂತೆ Age Relaxation ಸಿಗುತ್ತದೆ.

Age Relaxation

  • SC/ST : 5 ವರ್ಷ
  • OBC : 3 ವರ್ಷ
  • PWBD: ನಿಯಮಾನುಸಾರ
  • Ex Servicemen : ನಿಯಮಾನುಸಾರ
  • ಇತರ ವಿಶೇಷ ವರ್ಗಗಳು SSC  ನಿಯಮಾನುಸಾರ

SSC CHSL 2026 : Application Fee 

ಸಾಮಾನ್ಯ Application Fee  : 100

ಆದರೆ ಕೆಲವು ಅಭ್ಯರ್ಥಿಗಳಿಗೆ Fee Exemption ಇದೆ.

Fee Exemption

  • ಮಹಿಳಾ ಅಭ್ಯರ್ಥಿಗಳು
  • ಪರಿಶಿಷ್ಟ ಜಾತಿ
  • ಪರಿಶಿಷ್ಟ ವರ್ಗ
  • ವಿಕಲಚೇತನರು
  • ಅರ್ಹ ex servicemen

Fee ಪಾವತಿಸಬೇಕಾದ ಅಭ್ಯರ್ಥಿಗಳು 8 ಅಕ್ಟೋಬರ್ 2026 ರೊಳಗೆ ಪೇಮೆಂಟ್ ಪೂರ್ಣಗೊಳಿಸಬೇಕು.

SSC CHSL 2026 : ಆಯ್ಕೆ ಪ್ರಕ್ರಿಯೆ 

ಸರಳವಾಗಿ ಹೇಳುವುದಾದರೆ

Tier – |  >  Tier -||  > Skill /Typing Test  > Final selection.

ನೆನಪಿಡಬೇಕಾದ ವಿಷಯವೇನೆಂದರೆ

Tier – | ಕ್ಲಿಯರ್ ಮಾಡುವುದು ಮಾತ್ರ ಸಾಕಾಗುವುದಿಲ್ಲ.

ನೀವು ಆಯ್ಕೆ ಮಾಡುತ್ತಿರುವ Post ಗೆ ಅಗತ್ಯವಿರುವ Tier – || ಮತ್ತು Skill / Typing Requirement ಕೂಡ ಪೂರ್ಣಗೊಳಿಸಬೇಕು.

Final Selection ನಲ್ಲಿ Merit, Post Preference, Category, Vacancies & SSC ಯ ಸಂಬಂಧಿತ ನಿಯಮಗಳು ಪ್ರಮುಖವಾಗುತ್ತದೆ.

SSC CHSL 2026 : ಕರ್ನಾಟಕದ ಅಭ್ಯರ್ಥಿಗಳು ಗಮನಿಸಬೇಕಾದದ್ದು. 

ಕರ್ನಾಟಕದಿಂದ SSC CHSL 2026 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Karnataka – Kerala Region (KKR) ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಆದ್ಯತೆ ನೀಡಬಹುದು.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮೂರು ಪರೀಕ್ಷಾ ಕೇಂದ್ರಗಳನ್ನು ಆದ್ಯತೆಯ ಕ್ರಮದಲ್ಲಿ ಆಯ್ಕೆ ಮಾಡುವ ಅವಕಾಶ ಇರುತ್ತದೆ. ನೀವು ಆಯ್ಕೆ ಮಾಡಿದ ಮೂರು ಕೇಂದ್ರಗಳಲ್ಲಿ SSC ಲಭ್ಯತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಆಧಾರದ ಮೇಲೆ ಒಂದು ಪರೀಕ್ಷಾ ಕೇಂದ್ರವನ್ನು ಅಂತಿಮವಾಗಿ ಹಂಚಿಕೆ ಮಾಡುತ್ತದೆ.

ಆದ್ದರಿಂದ ಅರ್ಜಿ ಸಲ್ಲಿಸುವಾಗ ನಿಮಗೆ ಪ್ರಯಾಣಿಸಲು ಅನುಕೂಲವಾಗುವ ಮೂರು ಕೇಂದ್ರಗಳನ್ನು ಆದ್ಯತೆಯ ಕ್ರಮದಲ್ಲಿ ಆಯ್ಕೆ ಮಾಡುವುದು ಉತ್ತಮ.

ಇದನ್ನು ಓದಿ

Karnataka Prisons Department Recruitment 2026 : ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ 869 ಜೈಲರ್ & ವಾರ್ಡರ್ ಹುದ್ದೆಗಳ ಬ್ರಹತ್ ನೇಮಕಾತಿ, Important update.

ಕರ್ನಾಟಕದಲ್ಲಿರುವ SSC CHSL 2026 ಪರೀಕ್ಷಾ ಕೇಂದ್ರಗಳು ಮತ್ತು ಕೇಂದ್ರದ ಕೋಡ್ 

  • ಬೆಂಗಳೂರು : 9001
  • ಬೆಳಗಾವಿ : 9002
  • ಕಲಬುರಗಿ: 9005
  • ಮಂಗಳೂರು: 9008
  • ಮೈಸೂರು : 9009
  • ಶಿವಮೊಗ್ಗ : 9010
  • ಹುಬ್ಬಳ್ಳಿ ಧಾರವಾಡ : 9011
  • ಉಡುಪಿ : 9012

ಪರೀಕ್ಷಾ ಕೇಂದ್ರ ಆಯ್ಕೆ ಮಾಡುವಾಗ ನೀವು ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗ ಎಂಬ ಮೂರು ಕೇಂದ್ರಗಳನ್ನು ಆಯ್ಕೆ ಮಾಡಿದರೆ, ಈ ಮೂರರಲ್ಲಿ ಒಂದನ್ನು SSC ಅಂತಿಮವಾಗಿ ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಬಹುದು.

ಹೀಗಾಗಿ ಕೇವಲ ನಿಮಗೆ ಇಷ್ಟವಾದ ಒಂದು ಕೇಂದ್ರವನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ. ಮೂರು ಆದ್ಯತೆಗಳನ್ನು ಎಚ್ಚರಿಕೆಯಿಂದ ನೀಡುವುದು ಮುಖ್ಯ.

ಅದೇ ರೀತಿ, ನೀವು ಆಯ್ಕೆ ಮಾಡಿದ ಮೊದಲ ಆದ್ಯತೆಯ ಕೇಂದ್ರವೇ ಖಂಡಿತವಾಗಿ ಸಿಗುತ್ತದೆ ಎಂದು ಭಾವಿಸಬೇಡಿ. ಪರೀಕ್ಷಾ ಕೇಂದ್ರದ ಅಂತಿಮ ಹಂಚಿಕೆ SSC ಯ ಲಭ್ಯತೆ ಮತ್ತು ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ.

SSC CHSL 2026 : ಅರ್ಜಿ ಸಲ್ಲಿಸುವ ವಿಧಾನ 

Online Application ಹಾಕುವುದು ಕಷ್ಟವಲ್ಲ. ಆದರೆ ಡೀಟೇಲ್ಸ್ ತಪ್ಪಾಗಿ ಹಾಕಿದರೆ ಸಮಸ್ಯೆ ಆಗಬಹುದು.

Step 1 : SSC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. https://ssc.gov.in/login

Step 2 : ಹೊಸ ಅಭ್ಯರ್ಥಿಯಾಗಿದ್ದರೆ ಅಗತ್ಯ Registration ಪೂರ್ಣಗೊಳಿಸಿ.

Step 3 : Combined Higher Secondary (10+2) Level Examination,2026 Application Link ಆಯ್ಕೆ ಮಾಡಿ.

Step 4 : ಹೆಸರು , ಜನ್ಮ ದಿನಾಂಕ, ತಂದೆ ತಾಯಿ ಹೆಸರು ಸೇರಿದಂತೆ ವಿವರಗಳನ್ನು Certificate ನಲ್ಲಿ ಇರುವಂತೆಯೇ ನಮೂದಿಸಿ.

Step 5 : 12ನೇ ತರಗತಿಯ Board, Roll Number ಮತ್ತು ಕೇಳಿರುವ ಇತರೆ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

Step 6 : ಅರ್ಹತೆ ಮತ್ತು ನಿಮ್ಮ Preference ಗೆ ಅನುಗುಣವಾಗಿ post/ department  ಆಯ್ಕೆ ಮಾಡಿ.

Step 7 : SSC ಸೂಚಿಸಿರುವ ವಿಧಾನದಲ್ಲಿ Application ಸಮಯದಲ್ಲೇ Live Photograph Capture ಮಾಡಿ.

Step 8 : SSC ಸೂಚಿಸಿರುವ format & Size ಗೆ ಅನುಗುಣವಾಗಿ Signature Upload ಮಾಡಿ.

Step 9 : Fee ಅನ್ವಯಿಸಿದರೆ ₹ 100 online ಮೂಲಕ ಪಾವತಿಸಿ.

Step 10 : Submit ಮಾಡುವ ಮೊದಲು ಪ್ರತಿ Details ಮತ್ತೊಮ್ಮೆ ಪರಿಶೀಲಿಸಿ.

Application Submit ಆದ ನಂತರ Confirmation/Application Details ಅನ್ನು save ಮಾಡಿಕೊಂಡಿರಿ.

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

SSC CHSL 2026 : ಯಾವ Syllabus ಓದಬೇಕು? 

English

  • Grammar
  • Vocabulary
  • Synonyms and antonyms
  • Error detection
  • Sentence improvement
  • Idioms and phrases
  • Reading comprehension

Reasoning

  • Analogy
  • Classification
  • Series
  • Coding decoding
  • Venn diagram
  • Logical reasoning
  • Non verbal reasoning

Maths

  • Number system
  • Percentage
  • Ratio
  • Average
  • Profit and loss
  • Simple and compound interest
  • Time and work
  • Time, speed and distance
  • Geometry
  • Mensuration
  • Data interpretation

General Awareness

  • Indian history
  • Geography
  • Indian polity
  • Economy
  • General science
  • Culture
  • Current affairs

Computer

  • Computer basics
  • Hardware
  • Software
  • Operating system
  • Internet
  • Email
  • Networking
  • Cyber security

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನೇಮಕಾತಿ 2026 : UIIC ಯಲ್ಲಿ 225 ಆಡಳಿತಾಧಿಕಾರಿ ಹುದ್ದೆಗಳ ಬೃಹತ್ Important update.

 

 

Leave a Comment