Karnataka Prisons Department Recruitment 2026 : ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ 869 ಜೈಲರ್ & ವಾರ್ಡರ್ ಹುದ್ದೆಗಳ ಬ್ರಹತ್ ನೇಮಕಾತಿ, Important update.

Karnataka Prisons Department Recruitment 2026Karnataka Prisons Department Recruitment 2026 : ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿನ 5 Jailor & 835 Jail Police (ವಾರ್ಡರ್) ಸೇರಿದಂತೆ 869 ಹುದ್ದೆಗಳ ನೇಮಕಾತಿಗೆ KEA ಇದೀಗ ಅರ್ಜಿ ಆಹ್ವಾನಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸೆ ಪಡುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್ ಮತ್ತು ಜೈಲ್ ಪೊಲೀಸ್/ವಾರ್ಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು KEA ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಎಸ್ ಎಸ್ ಎಲ್ ಸಿ ಹಾಗೂ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ.ಈ ಬ್ರಹತ್ ನೇಮಕಾತಿಯ ಹುದ್ದೆಗಳ ವಿಂಗಡಣೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ದೈಹಿಕ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನು ಓದಿ

Mahindra EmpowerHer Scholarship : ಮಹೀಂದ್ರಾ ಎಂಪವರ್ಹರ್ ಸ್ಕಾಲರ್ಶಿಪ್ ಯೋಜನೆ ಅಡಿ ವಿದ್ಯಾರ್ಥಿ ವೇತನ, important update.

Karnataka Prisons Department Recruitment 2026 : ಹುದ್ದೆಗಳ ವಿವರ 

ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಾರ್ಡರ್ (ವೀಕ್ಷಕರು) ಮತ್ತು ದ್ವಿತೀಯ ದರ್ಜೆ ಬೋಧಕರು (Instructor Grade -||) ಹುದ್ದೆಗಳ ವಿವರ: 

  • ಜೈಲರ್ : 05 ಹುದ್ದೆಗಳು
  • ವಾರ್ಡರ್ : 275 ಹುದ್ದೆಗಳು
  • ದ್ವಿತೀಯ ದರ್ಜೆ ಬೋಧಕರು : 08 ಹುದ್ದೆಗಳು
  • ವಾರ್ಡರ್ ಕಂ ನರ್ಸಿಂಗ್ : 05 ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ : 293

Karnataka Prisons Department Recruitment 2026 : ವೇತನ ಶ್ರೇಣಿ 

  • ಜೈಲರ್ : 61,300 – 1,12,900
  • ವಾರ್ಡರ್ : 37,500 – 76,100
  • ದ್ವಿತೀಯ ದರ್ಜೆ ಬೋಧಕರು :  37,500 – 76,100
  • ವಾರ್ಡರ್ ಕಮ್ ನರ್ಸಿಂಗ್ : 34,100 – 67,600

Karnataka Prisons Department Recruitment 2026 : ಉಳಿಕೆ ಮೂಲ ವೃಂದದಲ್ಲಿ ವಾರ್ಡರ್ ಮತ್ತು ದ್ವಿತೀಯ ದರ್ಜೆ ಬೋಧಕರ ಹುದ್ದೆಗಳ ವಿವರ 

  • ವಾರ್ಡರ್ : 560 ಹುದ್ದೆಗಳು
  • ದ್ವಿತೀಯ ದರ್ಜೆ ಬೋಧಕರು : 16 ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ : 576

ವೇತನ ಶ್ರೇಣಿ 

  • ವಾರ್ಡರ್ : 37,500 – 76,100
  • ದ್ವಿತೀಯ ದರ್ಜೆ ಬೋಧಕರು : 37,500 – 76,100

Karnataka Prisons Department Recruitment 2026 : ಶೈಕ್ಷಣಿಕ ವಿದ್ಯಾರ್ಹತೆ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ಈ ಕೆಳಗಿನ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಜೈಲರ್ : ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಸಮಾಜಶಾಸ್ತ್ರ ಅಥವಾ ಶರೀರ ಶಾಸ್ತ್ರ ಅಥವಾ ಅಪರಾಧಶಾಸ್ತ್ರ ಅಥವಾ ತಿದ್ದುಪಡಿ ಆಡಳಿತ ಅಥವಾ ತತ್ಸಮಾನ ಅರ್ಹತೆಯಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ವಾರ್ಡರ್ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು.

ದ್ವಿತೀಯ ದರ್ಜೆ ಬೋಧಕರು : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ಮತ್ತು ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟ್ರಿ/ಟೈಲರಿಂಗ್/ಜವಳಿ/ನೈಗೆ/ಕಾರ್ಪೆಟ್ ತಯಾರಿಕೆ ಇತ್ಯಾದಿಗಳಲ್ಲಿ ಡಿಪ್ಲೋಮಾ ಅಥವಾ ಪ್ರಮಾಣ ಪತ್ರವನ್ನು ಹೊಂದಿರಬೇಕು.

ವಾರ್ಡರ್ ಕಮ್ ನರ್ಸಿಂಗ್ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು ಪ್ರಥಮ ಚಿಕಿತ್ಸೆಯಲ್ಲಿ ಪ್ರಮಾಣಿಕರಿಸಲ್ಪಟ್ಟಿರಬೇಕು.

ಪ್ರಮುಖ ದಿನಾಂಕಗಳು (important dates)

  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 19/09/2026
  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/10/2026
  • ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 16/10/2026

ವಯೋಮಿತಿ ವಿವರ (age limit)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯು ಪ್ರವರ್ಗಗಳ ಆಧಾರದ ಮೇಲೆ ಈ ಕೆಳಗಿನಂತಿರುತ್ತದೆ.

  • ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ : ಗರಿಷ್ಟ 27 ವರ್ಷಗಳು
  • 2A,2B,3A,3B ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಟ 29 ವರ್ಷಗಳು
  • ಎಸ್ ಸಿ, ಎಸ್ ಟಿ, ಪ್ರವರ್ಗ -1 ರ ಅಭ್ಯರ್ಥಿಗಳಿಗೆ : ಗರಿಷ್ಠ 32 ವರ್ಷಗಳು
  • (ಸೂಚನೆ : ಕರ್ನಾಟಕ ಸರ್ಕಾರದ ಆದೇಶದಂತೆ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯವಿದ್ದಲ್ಲಿ ಅಧಿಸೂಚನೆಯನ್ನು ಕೂಲಂಕುಶವಾಗಿ ಪರಿಶೀಲಿಸಿ)

ಅರ್ಜಿ ಶುಲ್ಕ (application fees)

ಆನ್ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕಾಗಿರುತ್ತದೆ.

  • ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (2A,2B,3A,3B) : ₹750
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು : ₹500
  • ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ

ಇದನ್ನು ಓದಿ

JK Tyre Scholarship 2026 : ಜೆ ಕೆ ಟೈರ್ ಶಿಕ್ಷಾ ಸಾರಥಿ ಯೋಜನೆ ಅಡಿ 25,000 ವಿದ್ಯಾರ್ಥಿ ವೇತನ, Important update.

Karnataka Prisons Department Recruitment 2026 :ದೈಹಿಕ ಮಾನದಂಡಗಳು  (physical standards)

ಕಾರಾಗೃಹ ಇಲಾಖೆಯ ಹುದ್ದೆಗಳಾಗಿರುವುದರಿಂದ, ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ದೈಹಿಕ ಮಾನದಂಡಗಳನ್ನು ಹೊಂದಿರಬೇಕು.

ಪುರುಷ ಅಭ್ಯರ್ಥಿಗಳಿಗೆ 

  • ಕನಿಷ್ಠ ಎತ್ತರ : 168 ಸೆಂಟಿಮೀಟರ್
  • ಎದೆ ಸುತ್ತಳತೆ : 86 ಸೆಂಟಿಮೀಟರ್ (ಕನಿಷ್ಠ ಐದು ಸೆಂಟಿಮೀಟರ್ ವಿಸ್ತರಣೆ ಸಾಮರ್ಥ್ಯ)

ಮಹಿಳಾ ಅಭ್ಯರ್ಥಿಗಳಿಗೆ 

  • ಕನಿಷ್ಠ ಎತ್ತರ : 157 ಸೆಂಟಿಮೀಟರ್
  • ಕನಿಷ್ಠ ತೂಕ : 46 ಕೆಜಿ

ಆಯ್ಕೆ ಪ್ರಕ್ರಿಯೆ 

ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಕರ್ನಾಟಕ ಪರೀಕ್ಷಾ ಪಧಿಕಾರ ಈ ಕೆಳಗಿನ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

  1. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (written exam) :  100 ಅಂಕಗಳ ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆ ನಡೆಯಲಿದೆ.
  2. ದೇಹದಾರ್ಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ (PST& ET) : ಲಿಖಿತ ಪರೀಕ್ಷೆಯಲ್ಲಿ ಮೆರಿಟ್ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಓಟ, ಹೈಜಂಪ್, ಲಾಂಗ್ ಜಂಪ್ ಮತ್ತು ಶಾರ್ಟ್ ಪುಟ್ ಪರೀಕ್ಷೆಗಳಿಗೆ ಕರೆಯಲಾಗುತ್ತದೆ.
  3. ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ
Karnataka Prisons Department Recruitment 2026 : ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಡೆದಿಟ್ಟುಕೊಳ್ಳಬೇಕಾದ ಪ್ರಮಾಣ ಪತ್ರಗಳು 
  1. ಆಧಾರ್ ಕಾರ್ಡ್
  2. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದ ಆಯಾ ಹುದ್ದೆಗಳಿಗೆ ನಿಗದಿಪಡಿಸಲಾದ/ವಿದ್ಯಾರ್ಹತೆಯ ಎಲ್ಲಾ ವಿಷಯಗಳ/ಸೆಮಿಸ್ಟರ್ ಅಂಕಪಟ್ಟಿಗಳು ಅಥವಾ ತತ್ಸಮಾನ ವಿದ್ಯಾರ್ಹತೆ ಅಂಕಪಟ್ಟಿಗಳು/ಪ್ರಮಾಣ ಪತ್ರಗಳು.
  3. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ/ಶಾಲೆಯ ವರ್ಗಾವಣೆ ಪ್ರಮಾಣ ಪತ್ರ/ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ದತ ಭಾಗ.
  4. ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಮತ್ತು ಪಿಂಚಣಿ/ಗ್ರಾಚುಟಿ ಪಡೆಯುತ್ತಿರುವ ಪ್ರಮಾಣ ಪತ್ರಗಳು/ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಶಾಶ್ವತವಾಗಿ ಅಂಗವಿಕಲರಾದ ಪ್ರಮಾಣ ಪತ್ರ. (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ).
  5. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1, 2A,2B,3A,3B ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ.
  6. ಕನ್ನಡ ಮತ್ತು ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರಗಳು (ಮೀಸಲಾತಿ ಕೋರಿದ್ದಲ್ಲಿ)
  7. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಪಡೆದ ತೃತೀಯ ಲಿಂಗದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)

ಇದನ್ನು ಓದಿ

Kodagu District Court Recruitment 2026 : 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

Karnataka Prisons Department Recruitment 2026 : ಅರ್ಜಿ ಸಲ್ಲಿಸುವ ವಿಧಾನ 
  1. ಈ ಕೆಳಗೆ ನೀಡಿರುವ ಕೆಇಎ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://cetonline.karnataka.gov.in/kea/indexnew
  2. Recruitment ವಿಭಾಗದಲ್ಲಿ ಕಾರಾಗೃಹ ಇಲಾಖೆಯ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಮೊದಲು ನಿಮ್ಮ ಮೂಲ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ.
  4. ಲಾಗಿನ್ ಆಗಿ, ಶೈಕ್ಷಣಿಕ ಮಾಹಿತಿ ಮತ್ತು ಮೀಸಲಾತಿ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.
  5. ನಿಗದಿತ ಅಳತೆಯಲ್ಲಿ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಅಪ್ಲೋಡ್ ಮಾಡಿ.
  6. ಆನ್ಲೈನ್ ಮುಖಾಂತರವೇ ಅರ್ಜಿ ಶುಲ್ಕ ಪಾವತಿಸಿ, ಅಂತಿಮ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ, ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಎಸ್ ಎಸ್ ಎಲ್ ಸಿ ಪಾಸಾದ ಯುವ ಜನತೆಗೆ ಇದೊಂದು ಸುವರ್ಣ ಅವಕಾಶ. ದೈಹಿಕ ಪರೀಕ್ಷೆಗಳು ಕಠಿಣವಾಗಿರುವುದರಿಂದ ಇಂದಿನಿಂದಲೇ ಲಿಖಿತ ಪರೀಕ್ಷೆಯ ಜೊತೆಗೆ ಮೈದಾನದ ಅಭ್ಯಾಸವನ್ನು ಪ್ರಾರಂಭಿಸಿ.

ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿಕೊಳ್ಳಿ. ನಿರಂತರವಾಗಿ ಅಪ್ಡೇಟ್ ಪಡೆದುಕೊಳ್ಳಿ.

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

SSC SI Recruitment 2026 : 1,871 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ, important update.

Leave a Comment