Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ, ’45 ಒಳ ಚರಂಡಿ ಸಹಾಯಕ’ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ.
ಶಿವಮೊಗ್ಗದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮಹತ್ವದ ಉದ್ಯೋಗಾವಕಾಶ ಲಭ್ಯವಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯು ಒಟ್ಟು 45 ಪೌರಕಾರ್ಮಿಕ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ವಿವಿಧ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ ಒದಗಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಅರ್ಹತಮಾನದಂಡಗಳು ಮತ್ತು ಅರ್ಜಿ ಸಲ್ಲಿಕೆಯ ನಿಯಮಗಳನ್ನು ಪರಿಶೀಲಿಸಬಹುದು.
ನೀಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ನೇಮಕಾತಿ ಪ್ರಕಟಣೆಯ ದಿನಾಂಕ ಅಕ್ಟೋಬರ್ 5, 2026 ಆಗಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ ಅಕ್ಟೋಬರ್ 8 , 2026 ಮತ್ತು ಕೊನೆಯ ದಿನಾಂಕ ನವಂಬರ್ 7, 2026 ಎಂದು ನಮೂದಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಯೋಮಿತಿ, ವಿದ್ಯಾರ್ಹತೆ, ಅನುಭವ, ಮೀಸಲಾತಿ ಮತ್ತು ಅಗತ್ಯ ದಾಖಲೆಗಳ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ಇದನ್ನು ಓದಿ
Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ಪ್ರಮುಖ ಮಾಹಿತಿ
- ಸಂಸ್ಥೆ ಹೆಸರು : ಶಿವಮೊಗ್ಗ ಮುನ್ಸಿಪಲ್ ಕಾರ್ಪೊರೇಷನ್
- ಹುದ್ದೆಗಳ ಸಂಖ್ಯೆ : 45
- ಉದ್ಯೋಗ ಸ್ಥಳ : ಶಿವಮೊಗ್ಗ, ಕರ್ನಾಟಕ
- ಪೋಸ್ಟ್ ಹೆಸರು : ಪೌರಕಾರ್ಮಿಕ (ನೈರ್ಮಲ್ಯ ಕಾರ್ಯಕರ್ತೆ)
- ವೇತನ : ರೂ ₹27,000- ₹46,675 ಪ್ರತಿ ತಿಂಗಳು
Shivamogga ಮಹಾನಗರ ಪಾಲಿಕೆ ನೇಮಕಾತಿ 2026: ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು?
ಈ ನೇಮಕಾತಿಯು ಸಾಮಾನ್ಯ ನಿಯಮಕಾತಿ ಯಾಗಿರದೆ ಈಗಾಗಲೇ ಪಾಲಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವಿಶೇಷ ಆದ್ಯತೆ ನೀಡುವ ನೇಮಕಾತಿ ಯಾಗಿದೆ.
ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು .
- ಭಾಷಾಜ್ಞಾನ : ಅಭ್ಯರ್ಥಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು.
- ಸೇವಾ ಅನುಭವ (ಅತಿ ಮುಖ್ಯ ) : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ನೇರ ಪಾವತಿ ವ್ಯವಸ್ಥೆ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ಹೊರಗುತ್ತಿಗೆ ಆಧಾರದ ಮೇಲೆ UGD ಹೆಲ್ಪರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. (ಸೂಚನೆ :ವೆಟ್ ವೆಲ್/STP ಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಹೊರತುಪಡಿಸಿ)
- ಗರಿಷ್ಠ ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 55 ವರ್ಷಗಳಿಗೆ ನಿಗದಿಪಡಿಸಲಾಗಿದೆ. (ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿ ಏನೇ ಇದ್ದರೂ, ಈ ವಿಶೇಷ ನೇಮಕಾತಿಗೆ 55 ವರ್ಷದವರೆಗೆ ಅವಕಾಶ ನೀಡಲಾಗಿದೆ.)
Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ವೇತನ ವಿವರ
ಅಧಿಸೂಚನೆಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ವೇತನ ಶ್ರೇಣಿಯನ್ನು ಈ ಕೆಳಗಿನಂತೆ ನಮೂದಿಸಲಾಗಿದೆ.
₹27,000 – ₹66,475
ಈ ವೇತನ ಶ್ರೇಣಿಯು ಮೂಲ ಅಧಿಸೂಚನೆಯಲ್ಲಿ ನೀಡಿರುವ ವಿವರವಾಗಿದೆ. ಆದರೆ ಆರಂಭಿಕ ಮೂಲವೇತನ, ಭತ್ಯೆ ಕಡಿತಗಳು ಮತ್ತು ಕೈಗೆ ಸಿಗುವ ನಿಖರವೇತನದ ವಿವರಗಳನ್ನು ನೇಮಕಾತಿ ನಿಯಮಗಳು ಮತ್ತು ಸಂಬಂಧಿತ ಸರ್ಕಾರಿ ಆದೇಶಗಳ ಆಧಾರದ ಮೇಲೆ ಪರಿಶೀಲಿಸಬೇಕು.
ಅರ್ಜಿ ಸಲ್ಲಿಸುವ ದಿನಾಂಕಗಳು :
- ಅಧಿಸೂಚನೆ ಪ್ರಕಟವಾದ ದಿನಾಂಕ: ಅಕ್ಟೋಬರ್ 5, 2026
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಅಕ್ಟೋಬರ್ 8, 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ನವಂಬರ್ 7, 2026
Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ಅರ್ಜಿ ಸಲ್ಲಿಸುವುದು ಹೇಗೆ?
ಅಧಿಸೂಚನೆಯಲ್ಲಿರುವ ಸೂಚನೆಗಳ ಪ್ರಕಾರ ಅರ್ಸಜಿ ಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
- ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕೃತ ವೆಬ್ಸೈಟ್ ತೆರೆಯಿರಿ.
- ನೇಮಕಾತಿ ಅಥವಾ ಪ್ರಕಟಣೆ ವಿಭಾಗದಲ್ಲಿ ಪೌರಕಾರ್ಮಿಕ ಹುದ್ದೆಗಳ ಅಧಿಸೂಚನೆಯನ್ನು ಹುಡುಕಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಪರಿಶೀಲಿಸಿ.
- ಅಗತ್ಯವಿರುವ ದಾಖಲೆಗಳು ಮತ್ತು ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ.
- ಅಧಿಸೂಚನೆಯಲ್ಲಿ ಸೂಚಿಸಿರುವ ವಿಧಾನದಲ್ಲೇ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವಾದ 7 ನವಂಬರ್ 2026 ರ ಒಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಗಮನಿಸಿ : ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕೆ? ಅಥವಾ ಅಧಿಸೂಚನೆಯಲ್ಲಿ ತಿಳಿಸಿರುವ ಬೇರೆ ವಿಧಾನವನ್ನು ಅನುಸರಿಸಬೇಕೆ? ಎಂಬುವುದನ್ನು ಅಧಿಕೃತ ಪ್ರಕಟಣೆಯಿಂದ ಖಚಿತಪಡಿಸಿಕೊಳ್ಳಿ. ಅರ್ಜಿ ಸಲ್ಲಿಕೆಯ ವಿಧಾನ ಮತ್ತು ವಿಳಾಸವನ್ನು ಊಹಿಸಿ.
ಇದನ್ನು ಓದಿ
Kayaka Kiran Yojana: ₹2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಅರ್ಹತೆ ದಾಖಲೆಗಳ important Notice.
Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
- ಒಟ್ಟು 45 ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್ 7,2026
- ಮೀಸಲಾತಿ ಅನ್ವಯ ಅಭ್ಯರ್ಥಿಗಳು ಅಗತ್ಯ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು.
- ಅರ್ಹತೆ, ಅನುಭವ ಮತ್ತು ವಯೋಮಿತಿಗೆ ಸಂಬಂಧಿಸಿದ ಷರತ್ತುಗಳನ್ನು ಮೂಲ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
- ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಆಯ್ಕೆ ಪ್ರಕ್ರಿಯೆಯನ್ನು ಅಧಿಕೃತ ಅಧಿಸೂಚನೆಯಂತೆ ಅನುಸರಿಸಬೇಕು.
- ನೇಮಕಾತಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಅಥವಾ ಹೊಸ ಸೂಚನೆಗಾಗಿ ಅಧಿಕೃತ ವೆಬ್ಸೈಟ್ ಪರಿಶೀಲಿಸುತ್ತಿರಬೇಕು.
ಹೆಚ್ಚಿನ ಮಾಹಿತಿಗಾಗಿ : ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ, ಮೀಸಲಾತಿಯ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ. ಕಚೇರಿಯ ಸಹಾಯವಾಣಿ ಸಂಖ್ಯೆ 08182-277677 ಸಂಪರ್ಕಿಸಬಹುದು.
ಅಧಿಕೃತ ವೆಬ್ಸೈಟ್
http://www.shivamoggacity.mrc.gov.in/kn/recuritment
ಈಗಾಗಲೇ ಪಾಲಿಕೆಯಲ್ಲಿ ಗುತ್ತಿಗೆ/ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ತಮ್ಮ ನೌಕರಿಯನ್ನು ಕಾಯಂಗ ಗೊಳಿಸಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನವಂಬರ್ 7 ಒಳಗೆ ನಿಮ್ಮ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಿ. ಉದ್ಯೋಗದ ನಿಖರ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಹೆಚ್ಚಿನ ಉದ್ಯೋಗ ಮಾಹಿತಿಯನ್ನು ಪಡೆದುಕೊಳ್ಳಿ.
Shivamogga ಮಹಾನಗರ ಪಾಲಿಕೆ ನೇಮಕಾತಿ 2026 : ಪೌರಕಾರ್ಮಿಕ ಕೆಲಸದ ಮಹತ್ವ
- ಸಾರ್ವಜನಿಕ ಆರೋಗ್ಯ ರಕ್ಷಣೆ : ದಿನ ನಿತ್ಯದ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿರುವ ಮೂಲಕ ರೋಗಗಳು ಹರಡದಂತೆ ತಡೆದು ಜನರ ಆರೋಗ್ಯವನ್ನು ಕಾಪಾಡುತ್ತಾರೆ.
- ನಗರದ ಸೌಂದರ್ಯೀಕರಣ : ಶಿವಮೊಗ್ಗವನ್ನು ಸುಂದರ ಮತ್ತು ಹಸಿರು ನಗರವಾಗಿ ಉಳಿಸಲು ಇವರ ಶ್ರಮ ದೊಡ್ಡದಾಗಿದೆ. ರಸ್ತೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನಗಳು ಸ್ವಚ್ಛಗೊಳಿಸಿ ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ಆಕರ್ಷಿಸುವಂತೆ ಮಾಡುತ್ತಾರೆ.
- ತ್ಯಾಜ್ಯ ನಿರ್ವಹಣೆ : ಮನೆ ಮನೆಗೆ ತೆರಳಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಇದು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಅಡಿಪಾಯವಾಗಿದೆ.
- ಮಳೆಗಾಲದ ಮುನ್ನೆಚ್ಚರಿಕೆ : ಮಳೆಗಾಲದಲ್ಲಿ ಶಿವಮೊಗ್ಗದ ರಾಜ ಕಾಲುವೆಗಳು ಮತ್ತು ಚರಂಡಿಗಳಲ್ಲಿ ಕಸ ತುಂಬಿ ನೀರು ಸರಗವಾಗಿ ಹರಿಯದೆ ರಸ್ತೆಗಳಿಗೆ ನುಗ್ಗದಂತೆ, ಇವರು ಮೊದಲೇ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಇದರಿಂದ ನಗರದಲ್ಲಿ ಕೃತಕ ಪ್ರವಾಹ ಉಂಟಾಗುವುದು ತಪ್ಪುತ್ತದೆ.
- ಪರಿಸರ ಸಂರಕ್ಷಣೆ : ಪ್ಲಾಸ್ಟಿಕ್ ಹಾಗೂ ಇತರ ಕೊಳೆಯದೆ ತ್ಯಾಜ್ಯಗಳು ಪರಿಸರ ಸೇರದಂತೆ ತಡೆದು, ತುಂಗಾ ನದಿ ಮತ್ತು ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುವುದನ್ನು ಇವರು ತಪ್ಪಿಸುತ್ತಾರೆ.
ನಾವು ಕಸ ಮುಟ್ಟಲು ಹಿಂಜರಿಯುವಾಗ, ಪೌರಕಾರ್ಮಿಕರು ಇಡೀ ನಗರದ ಕಸವನ್ನು ಸ್ವಚ್ಛಗೊಳಿಸಿ ನಮಗೆ ಆರೋಗ್ಯಕರ ವಾತಾವರಣವನ್ನು ನೀಡುತ್ತಾರೆ. ಆದ್ದರಿಂದ ಅವರ ಕೆಲಸಕ್ಕೆ ಗೌರವ ನೀಡುವುದು , ಅವರಿಗೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಇದನ್ನು ಓದಿ
