IBPS ನೇಮಕಾತಿ 2026 : 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ. Important update.

WhatsAppಫಾಲೋ ಮಾಡಿ

IBPS ನೇಮಕಾತಿ 2026 IBPS ನೇಮಕಾತಿ 2026 : IBPS RRB ನೇಮಕಾತಿ 2026ರ ಅಡಿಯಲ್ಲಿ ದೇಶದಾದ್ಯಂತ ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳ ಬರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ 579 ಹುದ್ದೆಗಳು ಲಭ್ಯವಿದ್ದು, ಪದವೀಧರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

  • ಒಟ್ಟು ಹುದ್ದೆಗಳು : 13,706 – ಕರ್ನಾಟಕದಲ್ಲಿ 579 ಹುದ್ದೆಗಳು
  • ಹುದ್ದೆಗಳು ಮತ್ತು ಅರ್ಹತೆ : office assistant (multipurpose) & officer – scale -1, 11 & 111 ಪದವಿ /ಹುದ್ದೆಗೆ ಅನುಗುಣವಾದ ವೃತ್ತಿಪರ.
  • ಅರ್ಹತೆ ಆಯ್ಕೆ : ಆನ್ಲೈನ್ ಪರೀಕ್ಷೆ ಹಾಗೂ ಅಗತ್ಯವಿರುವ ಹುದ್ದೆಗಳಿಗೆ ಸಂದರ್ಶನ.
  • ಅರ್ಜಿಯ ಕೊನೆಯ ದಿನಾಂಕ : 21 ಸೆಪ್ಟೆಂಬರ್ 2026

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ದೇಶದಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಟ್ಟು 13,706 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 15ನೇ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಅಡಿಯಲ್ಲಿ ಅಧಿಕೃತ ಅಧಿಸಚನೆ ಪ್ರಕಟಿಸಿದೆ.

ಈ ನೇಮಕಾತಿಯಲ್ಲಿ ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ ಹಾಗೂ ಗ್ರೂಪ್ ‘ಎ’ ಆಫೀಸರ್ ಹುದ್ದೆಗಳು ಸೇರಿವೆ. ಕರ್ನಾಟಕದಲ್ಲಿ ಒಟ್ಟು 579 ಹುದ್ದೆಗಳು ಲಭ್ಯವಿದ್ದು, ಹುದ್ದೆಗೆ ಅನುಗುಣವಾದ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 1 , 2026 ರಿಂದ ಸೆಪ್ಟೆಂಬರ್ 21, 2026 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿಂಗಡಣೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.

ಇದನ್ನು ಓದಿ

KSRLPS ಉಡುಪಿ ಜಿಲ್ಲಾ ನೇಮಕಾತಿ 2026 : ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. IMPORTANT Update.

IBPS ನೇಮಕಾತಿ 2026 : ಹುದ್ದೆಗಳ ವಿವರ ಮತ್ತು ರಾಜ್ಯವಾರು ವಿಂಗಡಣೆ 

  • ನೇಮಕಾತಿ ಸಂಸ್ಥೆ : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್
  • ಒಟ್ಟು ಹುದ್ದೆಗಳು : 13,706
  • ಉದ್ಯೋಗ ಸ್ಥಳ : ಅಖಿಲ ಭಾರತ

ಹುದ್ದೆವಾರು ವಿಂಗಡಣೆ 

  • ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) : 8,183 ಹುದ್ದೆಗಳು
  • ಆಫೀಸರ್ ಸ್ಕೇಲ್-1 : 4,256 ಹುದ್ದೆಗಳು
  • ಆಫೀಸರ್ ಸ್ಕೇಲ್ -11 :  1,704 ಹುದ್ದೆಗಳು
  • ಆಫೀಸರ್ ಸ್ಕೇಲ್ – ||| : 220 ಹುದ್ದೆಗಳು

ಕೆಲವು ಪ್ರಮುಖ ರಾಜ್ಯಗಳ ಹುದ್ದೆಗಳ ವಿವರ 

  • ಕರ್ನಾಟಕ : 579 ಹುದ್ದೆಗಳು
  • ಆಂಧ್ರ ಪ್ರದೇಶ : 1,300 ಹುದ್ದೆಗಳು
  • ಮಹಾರಾಷ್ಟ್ರ : 500 ಹುದ್ದೆಗಳು
  • ಉತ್ತರ ಪ್ರದೇಶ : 1,650 ಹುದ್ದೆಗಳು (ಸೂಚನೆ : ರಾಜ್ಯವಾರು ಹುದ್ದೆಗಳಲ್ಲಿ ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳು ಸೇರಿರುತ್ತದೆ. ಅಭ್ಯರ್ಥಿಗಳು ಕೇವಲ ಒಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. )

ಇದನ್ನು ಓದಿ

Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.

IBPS ನೇಮಕಾತಿ 2026 : ಶೈಕ್ಷಣಿಕ ಅರ್ಹತೆ ಮತ್ತು ಅನುಭವ 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21/09/2026 ರೊಳಗೆ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  1. ಆಫೀಸ್ ಅಸಿಸ್ಟೆಂಟ್ ಹಾಗೂ ಆಫೀಸರ್ ಸ್ಕೇಲ್ – | : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು. ಜೊತೆಗೆ ಸ್ಥಳೀಯ ಭಾಷೆಯ ಪರಿಜ್ಞಾನ ಕಡ್ಡಾಯವಾಗಿರುತ್ತದೆ. (ಕರ್ನಾಟಕದಲ್ಲಿ ಕನ್ನಡ/ಕೊಂಕಣಿ)
  2. ಆಫೀಸರ್ ಸ್ಕೇಲ್ -|| ( ಜನರಲ್ ಬ್ಯಾಂಕಿಂಗ್ ಆಫೀಸರ್) : ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಪದವಿ ಮತ್ತು ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಅನುಭವ.
  3. ಆಫೀಸರ್ ಸ್ಕೇಲ್ -||| : ಕನಿಷ್ಠ 50 ಪರ್ಸೆಂಟ್ ಅಂಕಗಳೊಂದಿಗೆ ಪದವಿ ಜೊತೆಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಸೇವಾ ಅನುಭವ.

IBPS ನೇಮಕಾತಿ 2026 : ವಯೋಮಿತಿ ವಿವರ 

  • ಆಫೀಸ್ ಅಸಿಸ್ಟೆಂಟ್ : ಕನಿಷ್ಠ 18 ವರ್ಷ ಗರಿಷ್ಠ 28 ವರ್ಷ
  • ಆಫೀಸರ್ ಸ್ಕೇಲ್ – | : ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ
  • ಆಫೀಸರ್ ಸ್ಕೇಲ್ – || : ಕನಿಷ್ಠ 21 ವರ್ಷ ಗರಿಷ್ಠ 32 ವರ್ಷ
  • ಆಫೀಸರ್ ಸ್ಕೇಲ್ -||| : ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ

ವಯೋಮಿತಿ ಸಡಿಲಿಕೆ 

  • ಓಬಿಸಿ ಅಭ್ಯರ್ಥಿಗಳಿಗೆ : 3 ವರ್ಷಗಳು
  • SC, ST ಅಭ್ಯರ್ಥಿಗಳಿಗೆ : 5 ವರ್ಷಗಳು
  • ವಿಕಲಚೇತನ ಅಭ್ಯರ್ಥಿಗಳಿಗೆ : 10 ವರ್ಷಗಳು
  • ಮಾಜಿ ಸೈನಿಕರಿಗೆ ,ವಿಧವೆಯರಿಗೆ : ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

IBPS ನೇಮಕಾತಿ 2026 : ಅರ್ಜಿ ಶುಲ್ಕ 

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

  • General, OBC, EWS ಅಭ್ಯರ್ಥಿಗಳಿಗೆ : ₹850
  • SC, ST/pwbd/ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ₹175

ಇದನ್ನು ಓದಿ

India Post Direct Selection 2026 : ಇಂಡಿಯಾ ಪೋಸ್ಟ್ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000+ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇರ Important update.

IBPS ನೇಮಕಾತಿ 2026 : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ 

ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನಗಳನ್ನು ಒಳಗೊಂಡಿರುತ್ತದೆ.

  1. ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆ (preliminary exam) : ಆಫೀಸ್ ಅಸಿಸ್ಟೆಂಟ್ ಮತ್ತು ಸ್ಕೇಲ್ -| ಹುದ್ದೆಗಳಿಗೆ 80 ಅಂಕಗಳಿಗೆ (ರೀಸನಿಂಗ್ ಮತ್ತು ಗಣಿತ) 45 ನಿಮಿಷಗಳ ಪರೀಕ್ಷೆ ಇರುತ್ತದೆ.
  2. ಆನ್ಲೈನ್ ಮೈನ್ ಪರೀಕ್ಷೆ (main exam) : ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 200 ಅಂಕಗಳ ಮುಖ್ಯ ಪರೀಕ್ಷೆ ನಡೆಯಲಿದ್ದು, ಇದೇ ಅಂಕಗಳ ಆಧಾರದ ಮೇಲೆ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
  3. ಸಂದರ್ಶನ : ಆಫೀಸರ್ ಸ್ಕೇಲ್ -| ,||, |||ಹುದ್ದೆಗಳಿಗೆ ಮಾತ್ರ ನಬಾರ್ಡ್ ಮತ್ತು ಐಬಿಪಿಎಸ್ ನೆರವಿನೊಂದಿಗೆ ಸಂದರ್ಶನ ನಡೆಯುತ್ತದೆ. ಸ್ಕೇಲ್ -|| ಮತ್ತು ||| ಹುದ್ದೆಗಳಿಗೆ ಒಂದೇ ಹಂತದ ಆನ್ಲೈನ್ ಪರೀಕ್ಷೆ ಇರುತ್ತದೆ.
  4. ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ವೈದ್ಯಕೀಯ ಪರೀಕ್ಷೆ : (ಸೂಚನೆ : ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.)
IBPS ನೇಮಕಾತಿ 2026 : ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ 
  1. IBPS ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ . https://www.ibps.in/
  2. ಮುಖಪುಟದಲ್ಲಿರುವ “CRP for RRBs” ಲಿಂಕ್ ಮೇಲೆ ಕ್ಲಿಕ್ ಮಾಡಿ ಆಫೀಸ್ ಅಸಿಸ್ಟೆಂಟ್ ಅಥವಾ ಆಫೀಸರ್ ಸ್ಕೇಲ್ ಲಿಂಕ್ ಆಯ್ಕೆ ಮಾಡಿ.
  3. ‘Click here for new registration’ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೂಲ ವಿವರಗಳನ್ನು ನಮೂದಿಸಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  4. ಲಾಗಿನ್ ಆಗಿ ನಿಮ್ಮ ಶೈಕ್ಷಣಿಕ, ಮೀಸಲಾತಿ ಹಾಗೂ ಸಂವಹನ ವಿವರಗಳನ್ನು ಭರ್ತಿ ಮಾಡಿ.
  5. ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಸ್ವಯಂ ಲಿಖಿತ ಘೋಷಣಾ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  6. ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಿ.
  7. ಎಲ್ಲಾ ವಿವರಗಳನ್ನು ಪರಿಶೀಲಿಸಿ submit ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು 

  • ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಪ್ರಾರಂಭ : 01 ಸೆಪ್ಟೆಂಬರ್ 2026
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2026
  • ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆ : ನವೆಂಬರ್/ಡಿಸೆಂಬರ್ 2026
  • ಆನ್ಲೈನ್ ಮೇನ್ ಪರೀಕ್ಷೆ (main exam) : ಡಿಸೆಂಬರ್ 2026/ಫೆಬ್ರವರಿ 2027
  • ಸಂದರ್ಶನ (ಆಫೀಸರ್ ಹುದ್ದೆಗಳಿಗೆ ಮಾತ್ರ) : ಜನವರಿ/ಫೆಬ್ರವರಿ 2027
  • ತಾತ್ಕಾಲಿಕ ನೇಮಕಾತಿ (provisional allotment) : ಫೆಬ್ರವರಿ/ಮಾರ್ಚ್ 2027

ಈ ವಿಷಯವನ್ನು ಅಗತ್ಯವಿರುವ ಅಭ್ಯರ್ಥಿಗಳಿಗೆ ಶೇರ್ ಮಾಡಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ತಿಳಿಯಲು.

ಇದನ್ನು ಓದಿ

Hassan Court Recruitment 2026 : SSLC ಪಾಸಾಗಿದ್ದರೆ ಸಾಕು, ಹಾಸನ ಕೋರ್ಟ್ ನಲ್ಲಿ 48 ಹುದ್ದೆಗಳ ನೇರ ನೇಮಕಾತಿ, 46,675 ವರೆಗೆ ವೇತನ, important update.

Leave a Comment