Udyam Loan Scheme 2026: ಸ್ವಂತ ಉದ್ಯಮ ಆರಂಭಿಸಲು 2 ಲಕ್ಷ ನೆರವು.40,000 ಸಬ್ಸಿಡಿ ಸಿಗುತ್ತೆ- ಅರ್ಜಿ ಸಲ್ಲಿಸಿ, Important update.

WhatsAppಫಾಲೋ ಮಾಡಿ

Udyam Loan Scheme 2026 Udyam Loan Scheme 2026: 2026- 27 ನೇ ಸಾಲಿನ (Vipra self -employment direct loan scheme) ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ ಅಡಿ ಅರ್ಹ ಅಭ್ಯರ್ಥಿಗಳಿಂದ (from eligible candidates) ಆನ್ಲೈನ್ ಮೂಲಕ (applications) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯು ಸಣ್ಣ ಮತ್ತು ಗುಡಿ ಕೈಗಾರಿಕೆ, ಕ್ಯಾಟರಿಂಗ್ ಹಾಗೂ ಹೋಟೆಲ್ ಉದ್ಯಮ, ಚಿಲ್ಲರೆ ಅಂಗಡಿ ಸ್ಥಾಪನೆ, ಟೈಲರಿಂಗ್, ಟ್ಯಾಕ್ಸಿ ಖರೀದಿ, ಹಸು ಸಾಕಾಣಿಕೆ ಮುಂತಾದ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತದೆ.

ಸರ್ಕಾರವು ಈ ಯೋಜನೆಯನ್ನು 2025-26 ನೇ ಸಾಲಿನಲ್ಲಿ ಆರಂಭಿಸಿತ್ತು. ಮೊದಲ ವರ್ಷದಲ್ಲಿ 1,333 ಅರ್ಜಿಗಳು ಬಂದಿದ್ದು, 1048 ಫಲಾನುಭವಿಗಳಿಗೆ ಒಟ್ಟು ರೂ 20.60 ಕೋಟಿ ಸಾಲ ಸಹಾಯಧನ ಮಂಜೂರಾಗಿದೆ.

ಮೊದಲ ಮತ್ತು ಎರಡನೇ ಕಂತುಗಳಲ್ಲಿ ಶೇಕಡ 98 ರಷ್ಟು ಮರುಪಾವತಿ ದರ ಸಾಧಿಸಿರುವುದು ಯೋಜನೆ ಯಶಸ್ಸನ್ನು ತೋರಿಸುತ್ತದೆ.

ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದರಿಂದ ಹೆಚ್ಚು ಜನರಿಗೆ ಈ ಅವಕಾಶ ಸಿಗುವುದು ಸಾಧ್ಯವಾಗುತ್ತದೆ.

Udyam Loan Scheme 2026: ಸಾಲ ಸೌಲಭ್ಯ ಮತ್ತು ಸಹಾಯಧನದ ವಿವರ? 

ಯೋಜನೆಯಲ್ಲಿ ಎರಡು ರೀತಿಯ ಘಟಕ ವೆಚ್ಚಗಳಿವೆ.1,00,000 ವೆಚ್ಚದ ಘಟಕಕ್ಕೆ 20,000 ಸಹಾಯಧನ (ಸಬ್ಸಿಡಿ) ಮತ್ತು ಉಳಿದ 80,000 ಸಾಲದ ರೂಪದಲ್ಲಿ ಸಿಗುತ್ತದೆ.

ಅದೇ ರೀತಿ 2,00,000 ವೆಚ್ಚದ ಘಟಕಕ್ಕೆ 40,000 ಸಹಾಯಧನ ಹಾಗೂ 1,60,000 ಸಾಲ ದೊರೆಯುತ್ತದೆ.

ಸಾಲದ ಮೊತ್ತಕ್ಕೆ ವಾರ್ಷಿಕ ಕೇವಲ ಶೇಕಡ 4 ರಷ್ಟು ಕನಿಷ್ಠ ಬಡ್ಡಿದರ ವಿಧಿಸಲಾಗುತ್ತದೆ. ಒಟ್ಟು 34 ಕಂತುಗಳಲ್ಲಿ ಮರುಪಾವತಿ ಮಾಡುವ ಅವಕಾಶವಿದೆ. ಇದು ಸಣ್ಣ ಉದ್ಯಮಿಗಳಿಗೆ ಹೊರೆಯಾಗದಂತೆ ವಿನ್ಯಾಸಗೊಳಿಸಲಾಗಿದೆ.

ಈ ನೆರವು ಕೇವಲ ಹಣಕಾಸಿನ ಬೆಂಬಲವಲ್ಲ ಸ್ವಯಂ ಉದ್ಯೋಗ ಆರಂಭಿಸಿ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಲು, ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲು ಮತ್ತು ಸಾಮಾಜಿಕವಾಗಿ ಸ್ವಾವಲಂಬಿಯಾಗಲು ಸಹಾಯಕವಾಗುತ್ತದೆ.

ಹಸು ಸಾಕಾಣಿಕೆ, ಚಿಲ್ಲರೆ ವ್ಯಾಪಾರ ಅಥವಾ ಕೈಗಾರಿಕಾ ಚಟುವಟಿಕೆಗಳ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಇದನ್ನು ಓದಿ

SBI Sthree Shakti Package Loan: ಎಸ್ ಬಿ ಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್, ಮಹಿಳೆಯರಿಗೆ ₹10 ಲಕ್ಷದವರೆಗೆ ಮೇಲಾಧಾರ ರಹಿತ ಸಾಲ, Important Update.

Udyam Loan Scheme 2026: ಯಾರು ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ (EWS )ಪ್ರಮಾಣ ಪತ್ರ ಹೊಂದಿರಬೇಕು.

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು
  • ವಯಸ್ಸು 18ರಿಂದ 65 ವರ್ಷದೊಳಗೆ ಇರಬೇಕು.
  • ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ.
  • ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರಲ್ಲ
  • ಅರ್ಜಿದಾರರ ಆಧಾರ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು

Udyam Loan Scheme 2026: ಮೀಸಲಾತಿ 

ಮಹಿಳೆಯರಿಗೆ ಶೇಕಡ 33 ಹಾಗೂ ದಿವ್ಯಾಂಗರಿಗೆ ಶೇಕಡ 5 ರಷ್ಟು ವಿಶೇಷ ಮೀಸಲಾತಿ ನೀಡಲಾಗಿದೆ.

ಇದು ಮಹಿಳಾ ಉದ್ಯಮಿಗಳು ಮತ್ತು ವಿಶೇಷ ಅಗತ್ಯ ಹೊಂದಿರುವವರು ಸಮಾನವಾಗಿ ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ.

ಇದನ್ನು ಓದಿ

Honey Bee Farm Subsidy 2026 : ಜೇನು ಸಾಕಾಣಿಕೆಗೆ ಸರ್ಕಾರದಿಂದ ಭರ್ಜರಿ ಸಹಾಯಧನ. ಮೊಬೈಲ್ ಮೂಲಕ ಅಪ್ಲೈ ಮಾಡಿ. Important.

Udyam Loan Scheme 2026: ಅರ್ಜಿ ಸಲ್ಲಿಸುವ ವಿಧಾನ? 

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು .

  1. ಮೊದಲು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ
  2. ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
  3. ಓಟಿಪಿ (OTP) ಪಡೆದು ಲಾಗಿನ್ ಆಗಿ.
  4. ಅಗತ್ಯ ವಿವರಗಳನ್ನು ಭರ್ತಿ ಮಾಡಿ
  5. ದಾಖಲೆಗಳನ್ನು ಅಪ್ಲೋಡ್ ಮಾಡಿ
  6. ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಅದರ ಪ್ರತಿ ಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಕಾದಿರಿಸಿಕೊಳ್ಳಿ.
Udyam Loan Scheme 2026: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅಧಿಕೃತ ವೆಬ್ಸೈಟ್ 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2026 ಸಂಜೆ 5:30 ಗಂಟೆ.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್

https://ksbdb.co.in/Loan/

ಹೆಚ್ಚಿನ ಮಾಹಿತಿಗಾಗಿ ಅಥವಾ ಸಂದೇಹಗಳಿದ್ದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಗಂಟೆವರೆಗೆ 08029605888 ಅಥವಾ 8762249230 ಸಂಖ್ಯೆಯನ್ನು ಸಂಪರ್ಕಿಸಬಹುದು. ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಹ ಭೇಟಿ ಮಾಡಬಹುದು.

ಈ ಯೋಜನೆಯು ಕೇವಲ ಸಾಲ ನೀಡುವುದು ಅಷ್ಟೇ ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಸಮುದಾಯದವರು ತಮ್ಮ ಕೌಶಲ್ಯ ಮತ್ತು ಆಸಕ್ತಿಯನ್ನು ಬಳಸಿಕೊಂಡು ಸ್ವಂತ ಉದ್ಯಮ ಆರಂಭಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರುವಂತೆ ಪ್ರೋತ್ಸಾಹಿಸುತ್ತದೆ.

ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಈ ಅವಕಾಶವನ್ನು ಬಳಸಿಕೊಳ್ಳಿ.

ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಇಂದಿನ ಅಗತ್ಯವಾಗಿದೆ.

ಇದನ್ನು ಓದಿ

Karnataka Old Pension Scheme: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಹಳೆ ಪಿಂಚಣಿ ಜಾರಿಗೆ ಸರ್ಕಾರದ ಹೆಜ್ಜೆ.ಸಿಎಂ ಡಿಕೆಶಿ ಸೂಚನೆ.Important update.

Udyam Loan Scheme 2026: ಈ ಯೋಜನೆಯ ಪ್ರಯೋಜನಗಳು 

ಈ ಯೋಜನೆಯ ಪ್ರಮುಖ ಉದ್ದೇಶವು ಆರ್ಥಿಕವಾಗಿ ದುರ್ಬಲ ವರ್ಗದ ಬ್ರಾಹ್ಮಣ ಸಮುದಾಯದ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಆರಂಭಿಸಲು ಹಾಗೂ ಹೀಗಿರುವ ಸಣ್ಣ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಸಾಲ ಸೌಲಭ್ಯ ಒದಗಿಸುವುದಾಗಿದೆ.

ಯೋಚನೆಯ ಮೂಲಕ ಯುವಕರು, ಮಹಿಳೆಯರು ಹಾಗೂ ನಿರುದ್ಯೋಗಿಗಳು ತಮ್ಮದೇ ಆದ ವ್ಯಾಪಾರ, ಸೇವ ಘಟಕ, ಕೈಗಾರಿಕೆ ಅಥವಾ ಇತರ ಆದಾಯ ತರುವ ಚಟುವಟಿಕೆಗಳನ್ನು ಆರಂಭಿಸಲು ಆರ್ಥಿಕ ನೆರವು ಪಡೆಯಬಹುದು.

ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭ್ಯವಾಗುವುದರಿಂದ ಫಲಾನುಭವಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇದರಿಂದ ಸ್ವಾವಲಂಬನೆ ಹೆಚ್ಚಾಗಿ ಕುಟುಂಬದ ಆದಾಯ ವೃದ್ಧಿ ಆಗುತ್ತದೆ. ಹಾಗೂ ಜೀವನಮಟ್ಟ ಸುಧಾರಿಸುತ್ತದೆ.

ಉದ್ಯೋಗಕ್ಕಾಗಿ ಇತರರ ಮೇಲೆ ಅವಲಂಬಿತರಾಗುವ ಬದಲು ಸ್ವಂತ ಉದ್ಯಮ ಸ್ಥಾಪಿಸಿ ಇತರರಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅವಕಾಶ ದೊರೆಯುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಯುವ ಉದ್ಯಮಿಗಳಿಗೆ ಈ ಯೋಜನೆ ಉತ್ತೇಜನ ನೀಡುತ್ತದೆ.

ಆರ್ಥಿಕ ಸಬಲೀಕರಣದ ಜೊತೆಗೆ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ಸರ್ಕಾರದ ಈ ಸಾಲ ಯೋಜನೆ ಸಮಾಜದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಫಲಾನುಭವಿಗಳು ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಬಳಸಿಕೊಂಡು ಶಾಶ್ವತ ಜೀವನೋಪಾಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗುವ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೂ ಉತ್ತೇಜನ ಸಿಗುತ್ತದೆ.

ಯೋಜನೆಯ ಅರ್ಹತ ನಿಯಮಗಳನ್ನು ಪೂರೈಸುವವರು ಅರ್ಜಿ ಸಲ್ಲಿಸಿ, ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.

ಇದನ್ನು ಓದಿKFD Recruitment 2026 : 750 ಅರಣ್ಯ ವೀಕ್ಷಕ ಹುದ್ದೆಗಳು; ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, Important update.

Leave a Comment