Karnataka Old Pension Scheme: ಕರ್ನಾಟಕ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಜಾರಿಗೆ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾಯುತ್ತಿದ್ದ ಹಳೇ ಪಿಂಚಣಿ ಯೋಜನೆ ( old pension scheme -ops) ಮರು ಜಾರಿಗೆ ಸಂಬಂಧಿಸಿದಂತೆ ಮತ್ತೆ ಚರ್ಚೆ ಶುರುವಾಗಿದೆ.
ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಒಪಿಎಸ್ ಜಾರಿಗೆ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿರುವುದು ನೌಕರರಲ್ಲಿ ಹೊಸ ನೀರಿಕ್ಷೆ ಮೂಡಿಸಿದೆ.
Karnataka Old Pension Scheme: ಮುಖ್ಯಮಂತ್ರಿ ಸೂಚನೆ ಯಿಂದ ಮತ್ತೆ ಚರ್ಚೆಗೆ ವೇಗ:
ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಗಮನ ಸೆಳೆದಿತ್ತು.
ಈ ವೇಳೆ ಸಂಘ ಸಲ್ಲಿಸಿದ ಮನವಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದರಿಂದ ಓಪಿಎಸ್ ಸಂಬಂದಿಸಿದ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ಮತ್ತೆ ವೇಗ ಪಡೆದಿವೆ .
ಇದನ್ನು ಓದಿ
Karnataka Old Pension Scheme : ರಾಜ್ಯದಲ್ಲಿ ಎಷ್ಟು ನೌಕರರಿಗೆ ಇದರ ಲಾಭ?
ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 5.7 ಲಕ್ಷ ಸರ್ಕಾರಿ ನೌಕರರು ಸೇವೆಯಲ್ಲಿದ್ದಾರೆ. ಇದರಲ್ಲಿ 2.8 ಲಕ್ಷಕ್ಕೂ ಹೆಚ್ಚು ನೌಕರರು ಹೊಸ ಪಿಂಚಣಿ ಯೋಜನೆ (National pension system) ವ್ಯಾಪ್ತಿಯಲ್ಲಿದ್ದಾರೆ.
2006 ರ ನಂತರ ಸರಕಾರಿ ಸೇವೆಗೆ ಸೇರಿದ ಎಲ್ಲ ನೌಕರರು ಎನ್‌ಪಿಎಸ್ (NPS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓಪಿಎಸ್ ಮರುಜರಿಯಾದರೆ ಈ ನೌಕರರಿಗೆ ಹೆಚ್ಚಿನ ಭದ್ರತೆ ದೊರೆಯುವ ಸಾಧ್ಯತೆ ಇದೆ ಎಂದು ನೌಕರರ ಸಂಘಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.
Karnataka Old Pension Scheme: ಸರ್ಕಾರದ ಮೇಲೆ ಎಷ್ಟು ಆರ್ಥಿಕ ಹೊರೆ?
ಪ್ರಸ್ತುತ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಾಗಿ ವರ್ಷಕ್ಕೆ ಸುಮಾರು 1.2 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಓ ಪಿ ಎಸ್ ಜಾರಿಯಾದರೆ ಆರಂಭದಲ್ಲಿ ಹೆಚ್ಚಿನ ಪರಿಣಾಮ ಕಾಣಿಸದಿದ್ದರೂ, ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ನೌಕರರು ನಿವೃತ್ತಿಯಾಗುತ್ತಿದ್ದಂತೆ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಅಂದಾಜಿಸಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಈ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ.
ಇದನ್ನು ಓದಿ
Karnataka Old Pension Scheme: ನಾಲ್ಕು ರಾಜ್ಯಗಳ ಮಾದರಿ ಅಧ್ಯಯನ
ಹಳೆಯ ಪಿಂಚಣಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿರುವ ರಾಜಸ್ಥಾನ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅನುಭವವನ್ನು ಅಧ್ಯಯನ ಮಾಡಲು ಕರ್ನಾಟಕ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
ಈ ಸಮಿತಿ ಸಂಬಂಧಿತ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಇನ್ನೂ ಸಲ್ಲಿಸಿಲ್ಲ. ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದುವರೆಗೆ ಏನೇನಾಗಿದೆ?
ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿತ್ತು. ಸರ್ಕಾರಿ ನೌಕರರ ಸಂಘವು ಮತ್ತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮನವಿಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ
Karnataka Old Pension Scheme: ನೌಕರರ ಸಂಘದ ವಿಶ್ವಾಸ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ಪ್ರಕಾರ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳೆಯ ಪಿಂಚಣಿ ಯೋಜನೆ ಕುರಿತು ಸಕಾರಾತ್ಮಕ ಭರವಸೆ ನೀಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು ಶೀಘ್ರದಲ್ಲಿ ಅನುಕೂಲಕರ ತೀರ್ಮಾನ ಹೊರ ಬರಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಹಳೆ ಪಿಂಚಣಿ ಯೋಜನೆ ಕುರಿತು ಸರ್ಕಾರ ಇನ್ನು ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಮನವಿಯನ್ನು ಪರಿಶೀಲಿಸುವಂತೆ ಸೂಚನೆ ನೀಡಿರುವುದು ಮತ್ತು ಅಧ್ಯಯನ ಸಮಿತಿಯ ವರದಿ ನಿರೀಕ್ಷೆಯಲ್ಲಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಹೀಗಾಗಿ ಓ ಪಿ ಎಸ್ ಜಾರಿಯ ಬಗ್ಗೆ ಅಂತಿಮ ಘೋಷಣೆ ಹೊರಬರುವವರಿಗೆ ಸರ್ಕಾರಿ ನೌಕರರು ಸರ್ಕಾರದ ಅಧಿಕೃತ ಪ್ರಕಟಣೆಯನ್ನು ಗಮನಿಸುವುದು ಸೂಕ್ತ. ಈ ಬೆಳವಣಿಗೆ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಮಹತ್ವದ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Karnataka Old Pension Scheme : ಹಳೆ ಪಿಂಚಣಿ ಯೋಜನೆಯ ಪ್ರಯೋಜನಗಳು (Advantages).
ಹಳೆ ಪಿಂಚಣಿ ಯೋಜನೆ ಎನ್ನುವುದು ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ನೌಕರರು ನಿವೃತ್ತಿಯಾದ ನಂತರ ಅವರ ಕೊನೆಯ ವೇತನದ ನಿರ್ದಿಷ್ಟ ಶೇಕಡವಾರು ಮೊತ್ತವನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ಈ ಯೋಜನೆಯ ಪ್ರಮುಖ ಪ್ರಯೋಜನಗಳು ಇಂತಿವೆ.
ಮೊದಲನೆಯದಾಗಿ, ನಿವೃತ್ತಿಯ ನಂತರ ಜೀವನಪರ್ಯಂತ ಖಚಿತ ಮಾಸಿಕ ಆದಾಯ ದೊರೆಯುತ್ತದೆ. ಇದರಿಂದ ನಿವೃತ್ತ ನೌಕರರು ತಮ್ಮ ದೈನಂದಿನ ಖರ್ಚುಗಳನ್ನು ಯಾವುದೇ ಆರ್ಥಿಕ ಅನಿಶ್ಚಿತತೆ ಇಲ್ಲದೆ ನಿರ್ವಹಿಸಬಹುದು. ಎರಡನೇದಾಗಿ, ಸರ್ಕಾರದಿಂದ ಪಿಂಚಣಿ ನೀಡಲಾಗುವುದರಿಂದ ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಪಿಂಚಣಿ ಮೊತ್ತದ ಮೇಲೆ ಬೀರುವುದಿಲ್ಲ. ಇದರಿಂದ ಆರ್ಥಿಕ ಭದ್ರತೆ ಹೆಚ್ಚುತ್ತದೆ.
ಮೂರನೆಯದಾಗಿ, ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪಿಂಚಣಿ ಮುತ್ತೂ ಹೆಚ್ಚಾಗುತ್ತದೆ. ಹೀಗಾಗಿ ಹಣದುಬ್ಬರದ ಪರಿಣಾಮವನ್ನು ಎದುರಿಸಲು ನಿವೃತ್ತಿ ನೌಕರರಿಗೆ ಸಹಾಯವಾಗುತ್ತದೆ. ನಾಲ್ಕನೇದಾಗಿ ನೌಕರರ ಮರಣದ ನಂತರ ಕುಟುಂಬದ ಅರ್ಹ ಸದಸ್ಯರಿಗೆ ಕುಟುಂಬ ಪಿಂಚಣಿ ಸಿಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿರತೆ ಕಾಪಾಡಲು ನೆರವಾಗುತ್ತದೆ.
ಇದಲ್ಲದೆ ಈ ಯೋಜನೆಯಿಂದ ನಿವೃತ್ತಿಯ ನಂತರ ಗೌರವಯುತ ಜೀವನ ನಡೆಸಲು ಅವಕಾಶ ದೊರೆಯುತ್ತದೆ. ಭವಿಷ್ಯದ ಆದಾಯದ ಬಗ್ಗೆ ಹೆಚ್ಚಿನ ಆತಂಕ ಇರುವುದಿಲ್ಲ. ಇದರಿಂದ ನೌಕರರು ಸೇವಾ ಅವಧಿಯಲ್ಲಿಯೇ ಮನಶಾಂತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿವೃತ್ತಿಯ ನಂತರ ವೈದ್ಯಕೀಯ ವೆಚ್ಚಗಳು ಮತ್ತು ಇತರ ಅಗತ್ಯಗಳನ್ನು ಪೂರೈಸಲು ನಿಯಮಿತ ಆದಾಯ ಸಹಕಾರಿಯಾಗುತ್ತದೆ.
ಅದಾಗಿಯೂ, ಹಳೆ ಪಿಂಚಣಿ ಯೋಜನೆಯ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಬೆಂಬಲಿಸುವವರು ಇದು ನೌಕರರ ಸಾಮಾಜಿಕ ಭದ್ರತೆಗೆ ಅತ್ಯಂತ ಅಗತ್ಯವೆಂದು ವಾದಿಸಿದರೆ, ವಿರೋಧಿಸುವವರು ಸರ್ಕಾರದ ಮೇಲಿನ ದೀರ್ಘಕಾಲಿನ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಒಟ್ಟಾರೆ, ಹಳೆ ಪಿಂಚಣಿ ಯೋಜನೆ ನಿವೃತ್ತ ಸರ್ಕಾರಿ ನೌಕರರಿಗೆ ಆರ್ಥಿಕ ಭದ್ರತೆ ಸ್ಥಿರ ಆದಾಯ ಕುಟುಂಬದ ರಕ್ಷಣೆ ಹಾಗೂ ಹಣದುಬ್ಬರದಿಂದ ಭಾಗಶಃ ರಕ್ಷಣೆ ಒದಗಿಸುವ ಮಹತ್ವದ ಕಲ್ಯಾಣ ಯೋಜನೆಯಾಗಿದೆ. ಆದ್ದರಿಂದ ಅನೇಕ ನೌಕರರು ಈ ಯೋಜನೆಯನ್ನು ತಮ್ಮ ನಿವೃತ್ತಿ ಜೀವನಕ್ಕೆ ಹೆಚ್ಚು ಸುರಕ್ಷಿತವಾದ ವ್ಯವಸ್ಥೆ ಎಂದು ಪರಿಗಣಿಸುತ್ತಾರೆ.
Old pension scheme official website