E- Swatthu New Committee 2026: ಇ – ಸ್ವತ್ತು ಪಡೆಯುವ ಪ್ರಕ್ರಿಯೆ ಸುಲಭಗೊಳಿಸಲು ರಾಜ್ಯ ಸರ್ಕಾರ ಐವರು ಸದಸ್ಯರ ಉನ್ನತ ಸಮಿತಿ ರಚಿಸಿದೆ. ಹೊಸ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಇ ಸ್ವತ್ತು ಪಡೆಯಲು ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದೆ. ಇ ಸ್ವತ್ತು ಅರ್ಜಿಗಳ ವಿಲೇವಾರಿ ವಿಳಂಬ, ತಾಂತ್ರಿಕ ಸಮಸ್ಯೆಗಳು ಹಾಗೂ ನಿಯಮಗಳ ಗೊಂದಲ ನಿವಾರಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಇ-ಸ್ವತ್ತು ಗಾಗಿ ಜನರು ಮತ್ತೆ ಮತ್ತೆ ಪಂಚಾಯಿತಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ತಪ್ಪಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಇ ಸ್ವತ್ತು ಪ್ರಕ್ರಿಯೆಯನ್ನು ಇನ್ನಷ್ಟು ಸರಳವಾಗಿ ಮತ್ತು ವೇಗವಾಗಿ ಮಾಡುವ ಉದ್ದೇಶದಿಂದ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಲು ಸೂಚನೆ ನೀಡಲಾಗಿದೆ.
ಇದನ್ನು ಓದಿ
E- Swatthu New Committee 2026 : ಇ ಸ್ವತ್ತು ತೊಡಕು ನಿವಾರಣೆಗೆ ಐವರು ಸದಸ್ಯರ ಸಮಿತಿ
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.
ಸಮಿತಿಯಲ್ಲಿ ಬೆಂಗಳೂರು, ಮಂಗಳೂರು, ಕಲಬುರ್ಗಿ ಹಾಗೂ ಬೆಳಗಾವಿ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗಳು ಸದಸ್ಯರಾಗಲಿದ್ದಾರೆ.ಇ ಸ್ವತ್ತು ಪ್ರಕ್ರಿಯೆಯಲ್ಲಿ ಇರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಶೀಲಿಸಿ, ಯಾವ ನಿಯಮಗಳಲ್ಲಿ ಬದಲಾವಣೆ ಅಗತ್ಯವಿದೆ ಎಂಬ ಕುರಿತು 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
E- Swatthu New Committee 2026: ಸಾವಿರಾರು ಅರ್ಜಿಗಳು ಬಾಕಿ ಉಳಿದಿರುವುದು ಯಾಕೆ?
ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸರ್ವರ್ (Server ) ಸಮಸ್ಯೆ ಹಾಗೂ ತಂತ್ರಾಂಶ (Software ) ದೋಷಗಳಿಂದ ಸಾವಿರಾರು ಇ ಸ್ವತ್ತು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ.
ಇದರಿಂದ ಅರ್ಜಿದಾರರು ಹಲವು ಬಾರಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕಾಗುತ್ತಿದ್ದು , ಸಾಕಷ್ಟು ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ.
ಇದನ್ನು ಓದಿ
E- Swatthu New Committee 2026: ಮನೆ ಬಾಗಿಲಿಗೆ ಇ- ಸ್ವತ್ತು ನೀಡುವ ಗುರಿ
ಇ ಸ್ವತ್ತು ಸೇವೆಯನ್ನು ಜನಸ್ನೇಹಿ ಆಗಿಸಲು ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ. ಸಾಧ್ಯವಾದಷ್ಟು ಜನರಿಗೆ ಮನೆ ಬಾಗಿಲಲ್ಲೇ ಇ ಸ್ವತ್ತು ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಕಚೇರಿಗಳ ಸುತ್ತಾಟ ಕಡಿಮೆಯಾಗುವ ನಿರೀಕ್ಷೆ ಇದೆ.
E- Swatthu New Committee 2026 : ಗ್ರಾಮ ಠಾಣಾ ಆಸ್ತಿಗಳಿಗೆ ಸಿಗಲಿದೆ ಇ ಸ್ವತ್ತು?
ರಾಜ್ಯದ ಗ್ರಾಮ ಠಾಣಾ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಹಾಗೂ ತಲೆಮಾರುಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ತಮ್ಮ ಆಸ್ತಿಯ ಅಧಿಕೃತ ದಾಖಲೆಗಳೇ ಇಲ್ಲ. ಈ ಕಾರಣದಿಂದ ಅವರಿಗೆ ಇ ಸ್ವತ್ತು ದೊರೆಯುತ್ತಿಲ್ಲ. ಪರಿಣಾಮವಾಗಿ:
- ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ
- ಮನೆ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ.
- ಕಟ್ಟಡ ನಕ್ಷೆ ಅನುಮೋದನೆ ಸಿಗುತ್ತಿಲ್ಲ
- ಆಸ್ತಿಯನ್ನು ಮಾರಾಟ ಅಥವಾ ವರ್ಗಾವಣೆ ಮಾಡಲು ಅಡಚಣೆ ಉಂಟಾಗುತ್ತದೆ.
ಈ ಸಮಸ್ಯೆ ನಿವಾರಣೆಗೆ ಮನೆ ಮನೆ ಸಮೀಕ್ಷೆ ನಡೆಸಿ ಅರ್ಹರಿಗೆ ಇ ಸ್ವತ್ತು ನೀಡುವ ಕುರಿತು ಮಾರ್ಗೋಪಾಯ ರೂಪಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಇದನ್ನು ಓದಿ
E- Swatthu New Committee 2026: ಬಿ ಖಾತೆ ನೀಡುವ ಸಾಧ್ಯತೆ ಪರಿಶೀಲನೆ.
ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿನ ಹಲವು ಪ್ರದೇಶಗಳಲ್ಲಿ ಭೂ ಪರಿವರ್ತಿತ ಹಾಗೂ ಭೂ ಪರಿವರ್ತನೆ ಆಗದ ಕಂದಾಯ ಭೂಮಿಗಳ ಮೇಲೆ ಬಡಾವಣೆಗಳು ಮತ್ತು ಕಟ್ಟಡಗಳು ನಿರ್ಮಾಣವಾಗಿದೆ.
ಕೆಲವೇಡೆ ಸರ್ಕಾರಿ ಭೂಮಿ, ಬಿ ಖರಾಬು(B Kharab) ಹಾಗೂ ಗೋಮಾಳ ಭೂಮಿಯನ್ನು ಒಳಗೊಂಡ ಪ್ರದೇಶಗಳಲ್ಲೂ ವಸತಿ ಪ್ರದೇಶಗಳು ನಿರ್ಮಾಣವಾಗಿರುವುದರಿಂದ ನಮೂನೆ 11 (Form 11B) ನೀಡಲು ತೊಂದರೆ ಎದುರಾಗುತ್ತಿದೆ.
ಇಂತಹ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿಗಳು ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದರು, ಅಧಿಕೃತ ದಾಖಲೆಗಳ ಕೊರತೆಯಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಇಂತಹ ಆಸ್ತಿಗಳಿಗೆ ಬಿ ಖಾತೆ (B Khata ) ನೀಡುವ ಸಾಧ್ಯತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಜನರಿಗೆ ಏನು ಪ್ರಯೋಜನ?
ಸಮಿತಿ ನೀಡುವ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಅಗತ್ಯ ನಿಯಮಗಳಲ್ಲಿ ಬದಲಾವಣೆ ಮಾಡಿದರೆ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಮುಖ್ಯವಾಗಿ:
- ಇ ಸ್ವತ್ತು ಪಡೆಯುವ ಪ್ರಕ್ರಿಯೆ ಸರಳವಾಗಬಹುದು.
- ಬಾಕಿ ಇರುವ ಅರ್ಜಿಗಳ ವಿಲೇವಾರಿ ವೇಗಗೊಳ್ಳಬಹುದು.
- ಗ್ರಾಮ ಠಾಣಾ ಆಸ್ತಿಗಳಿಗೂ ಇ ಸ್ವತ್ತು ಸಿಗುವ ಅವಕಾಶ ಹೆಚ್ಚಾಗಬಹುದು.
- ಬ್ಯಾಂಕ್ ಸಾಲ ಹಾಗೂ ಕಟ್ಟಡ ಅನುಮೋದನೆ ಪಡೆಯುವುದು ಸುಲಭವಾಗಬಹುದು.
- ಪಂಚಾಯಿತಿಗಳಿಗೂ ಆಸ್ತಿ ತೆರಿಗೆ ಸಂಗ್ರಹಿಸಲು ಅನುಕೂಲವಾಗಲಿದೆ.
ರಾಜ್ಯದಲ್ಲಿ ಇ ಸ್ವತ್ತು ವ್ಯವಸ್ಥೆ ಆರಂಭವಾದ ನಂತರ ಅನೇಕ ಜನರಿಗೆ ಪ್ರಯೋಜನವಾಗಿದ್ದರು, ತಾಂತ್ರಿಕ ದೋಷಗಳು ಹಾಗೂ ದಾಖಲೆ ಸಮಸ್ಯೆಯಿಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದವು. ಈಗ ಸರ್ಕಾರ ಐವರು ಸದಸ್ಯರ ಉನ್ನತ ಸಮಿತಿ ರಚಿಸಿರುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ. ಸಮಿತಿಯ ವರದಿಯ ಬಳಿಕ ಇ ಸ್ವತ್ತು ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಯಾಗುವ ಸಾಧ್ಯತೆ ಇದೆ.
ಇದನ್ನು ಓದಿ
Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
E- Swatthu New Committee 2026: ಇ ಸ್ವತ್ತು ಉದ್ದೇಶ ಮತ್ತು ಪ್ರಯೋಜನಗಳು.
ಉದ್ದೇಶ:
- ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವುದು.
- ಆಸ್ತಿಗಳಿಗೆ ಪಾರದರ್ಶಕ ಮತ್ತು ಸರಿಯಾದ ದಾಖಲೆಗಳನ್ನು ನಿರ್ವಹಿಸುವುದು.
- ಆಸ್ತಿ ಮಲಿಕರಿಗೆ ಸುಲಭವಾಗಿ ದಾಖಲೆಗಳನ್ನು ಒದಗಿಸುವುದು.
- ತೆರಿಗೆ ನಿರ್ವಹಣೆ ಮತ್ತು ಆಡಳಿತವನ್ನು ಪರಿಣಾಮಕಾರಿಯಾಗಿಸುವುದು.
ಪ್ರಯೋಜನಗಳು:
- ಆಸ್ತಿ ನೊಂದಣಿ ಮತ್ತು ದಾಖಲೆಗಳನ್ನು ಆನ್ಲೈನ್ನಲ್ಲಿ ಪಡೆಯಬಹುದು.
- ನಕಲಿ ಅಥವಾ ತಪ್ಪು ದಾಖಲೆಗಳ ಸಾಧ್ಯತೆ ಕಡಿಮೆಯಾಗುತ್ತದೆ.
- ಮಾಲೀಕತ್ವದ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
- ಆಸ್ತಿ ಖರೀದಿ, ಮಾರಾಟ ಮತ್ತು ಬ್ಯಾಂಕ್ ಸಾಲ ದಂತಹ ಪ್ರಕ್ರಿಯೆಗಳಲ್ಲಿ ದಾಖಲೆಗಳು ಉಪಯುಕ್ತವಾಗುತ್ತವೆ.
- ಸರ್ಕಾರಿ ಸೇವೆಗಳನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಪಡೆಯಲು ಸಹಾಯವಾಗುತ್ತದೆ.
ಸಂಕ್ಷಿಪ್ತವಾಗಿ, ಇ ಸ್ವತ್ತು ಗ್ರಾಮ
ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಡಿಜಿಟಲ್ ದಾಖಲಾತಿ ವ್ಯವಸ್ಥೆಯಾಗಿದ್ದು, ಆಸ್ತಿ ನಿರ್ವಹಣೆಯನ್ನು ಸುಲಭ, ಸುರಕ್ಷಿತ ಮತ್ತು ಪಾರದರ್ಶಕವಾಗಿಸುತ್ತದೆ.ಇ ಸ್ವತ್ತು ಅಫಿಶಿಯಲ್ ವೆಬ್ಸೈಟ್
https://eswathu.karnataka.gov.in/
ಇದನ್ನು ಓದಿ