Ration Card e-KYC at Home : ಮನೆಯಲ್ಲೇ ಮೊಬೈಲ್ ಮೂಲಕ e-KYC ಮಾಡಲು ‘ಅನ್ನ ಸೇವೆ’ ಆಪ್, important update.

Ration Card e-KYC at HomeRation Card e-KYC at Home : ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ- ಕೆ ವೈ ಸಿ ಮಾಡಲು ‘ಅನ್ನ ಸೇವೆ’ಆಪ್ ಬಿಡುಗಡೆ. Adhar Face Authentication ಮೂಲಕ ಮನೆಯಲ್ಲಿ ಇ-ಕೆವೈಸಿ ಮಾಡುವ ವಿಧಾನ. 8 ಜಿಲ್ಲೆಗಳ ಪಟ್ಟಿ ಮತ್ತು ಮುಂದಿನ ವಿಸ್ತರಣೆ ಮಾಹಿತಿ ಇಲ್ಲಿದೆ. 

ರೇಷನ್ ಕಾರ್ಡ್ ಇ- ಕೆ ವೈ ಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ಇದೀಗ ಪರಿಹಾರ ಸಿಗುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ’ (Anna Seve) ಎಂಬ ಹೊಸ ಮೊಬೈಲ್ ಆಪ್ ಪರಿಚಯಿಸಿದ್ದು, Adhar ಆಧಾರಿತ Face Authentication ಮೂಲಕ ಮನೆಯಲ್ಲಿ ರೇಷನ್ ಕಾರ್ಡ್ ಇ-ಕೆ ವೈ ಸಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಸದ್ಯ ಈ ಸೌಲಭ್ಯವನ್ನು ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು ಮುಂದಿನ ಹಂತದಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಇದೆ.

ಕರ್ನಾಟಕ ರೇಷನ್ ಕಾರ್ಡು ದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ. ಪಡಿತರ ಚೀಟಿಯ ಇ-ಕೆ ವೈ ಸಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ‘ಅನ್ನ ಸೇವೆ’ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ.

ಈ ಆಪ್ ನ ಸಹಾಯದಿಂದ ಅರ್ಹ ಪಡಿತರ ಚೀಟಿ ಸದಸ್ಯರು ಆಧಾರ್ ಆಧಾರಿತ Face Authentication ಮೂಲಕ ಮೊಬೈಲ್ ನಲ್ಲಿಯೇ ಇ-ಕೆ ವೈ ಸಿ ಪೂರ್ಣಗೊಳಿಸುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಪ್ರತಿಯೊಂದು ಇ- ಕೆ ವೈ ಸಿ ಕೆಲಸಕ್ಕೂ ನ್ಯಾಯಬೆಲೆ ಅಂಗಡಿಗೆ ತೆರಳಿ, ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಕಡಿಮೆಯಾಗುವ ನಿರೀಕ್ಷೆ ಇದೆ.

Ration Card e-KYC at Home : “ಅನ್ನ ಸೇವೆ” ಆಪ್ ಎಂದರೇನು? 

ಕರ್ನಾಟಕ ಆಹಾರ ಇಲಾಖೆಯು ರೇಷನ್ ಕಾರ್ಡ್ ಫಲಾನುಭವಿಗಳ ಇ- ಕೆ ವೈ ಸಿ ಪ್ರಕ್ರಿಯೆಯನ್ನು ಡಿಜಿಟಲ್ ರೀತಿಯಲ್ಲಿ ಸುಲಭಗೊಳಿಸಲು Anna Seve ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು  ಅಭಿವೃದ್ಧಿಪಡಿಸಿದೆ.

Google Play Store ನಲ್ಲಿರುವ ಅಧಿಕೃತ ಮಾಹಿತಿಯ ಪ್ರಕಾರ ಈ ಆಪ್ ಅನ್ನು Adhar Based Face Authentication ಬಳಸಿ ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳ ಇ- ಕೆ ವೈ ಸಿ ಪರಿಶೀಲನೆಗಾಗಿ ವಿನ್ಯಾಸಗೊಳಿಸಲಾಗಿದೆ.

ಇದರಿಂದ ಮೊಬೈಲ್ ಕ್ಯಾಮೆರಾ ಮೂಲಕ ಮುಖದೃಢೀಕರಣ ನಡೆಸಿ ಇ- ಕೆ ವೈ ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಸಿಗಲಿದೆ.

Ration Card e-KYC at Home :ಯಾರಿಗೆ ಈ ಸೌಲಭ್ಯ ಸಿಗಲಿದೆ ?

ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಅರ್ಹ ಕುಟುಂಬ ಸದಸ್ಯರಿಗೆ ಇ- ಕೆ ವೈ ಸಿ ಅಗತ್ಯವಿದೆ. ಅಧಿಕೃತ ಆಪ್ ಮಾಹಿತಿಯ ಪ್ರಕಾರ, ಕೇವಲ ಕುಟುಂಬದ ಮುಖ್ಯಸ್ಥರ ಇ- ಕೆ ವೈ ಸಿ ಪೂರ್ಣಗೊಳಿಸುವುದು ಸಾಕಾಗುವುದಿಲ್ಲ. ರೇಷನ್ ಕಾರ್ಡ್ ನಲ್ಲಿ ಸೇರಿರುವ ಅರ್ಹ ಪ್ರತಿಯೊಬ್ಬ ಕುಟುಂಬ ಸದಸ್ಯರ ಇ- ಕೆ ವೈ ಸಿ ಪೂರ್ಣಗೊಳಿಸಬೇಕಾಗುತ್ತದೆ.

ಆದ್ದರಿಂದ ನಿಮ್ಮ ಕುಟುಂಬದ ರೇಷನ್ ಕಾರ್ಡ್ ನಲ್ಲಿ ಎಷ್ಟು ಅರ್ಹ ಸದಸ್ಯರ ಹೆಸರುಗಳಿಗೆ ಎಂಬುದನ್ನು ಪರಿಶೀಲಿಸಿ ಅವರ ಇ- ಕೆ ವೈ ಸಿ ಸ್ಥಿತಿಯನ್ನು ಗಮನಿಸುವುದು ಮುಖ್ಯ.

ಇದನ್ನು ಓದಿ

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : 86 ಹುದ್ದೆಗಳಿಗೆ ಅರ್ಜಿ ಆಹ್ವಾನ – ವೇತನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ, important update.

Ration Card e-KYC at Home : ಮೊದಲ ಹಂತದಲ್ಲಿ ಈ 8 ಜಿಲ್ಲೆಗಳಲ್ಲಿ ಸೇವೆ 

‘ಅನ್ನ ಸೇವೆ’ ಆಪ್ ಅನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.

ಮೊದಲ ಹಂತದಲ್ಲಿ ಸೇವ ಲಭ್ಯವಿರುವ ಜಿಲ್ಲೆಗಳು:

  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಉಡುಪಿ
  • ಹಾವೇರಿ
  • ಉತ್ತರ ಕನ್ನಡ
  • ಬಳ್ಳಾರಿ
  • ಬೀದರ್
  • ಕೊಪ್ಪಳ

ಈ ಜಿಲ್ಲೆಗಳ ಫಲಾನುಭವಿಗಳು ಹೊಸ ವ್ಯವಸ್ಥೆಯ ಮೂಲಕ ಇ- ಕೆ ವೈ ಸಿ ಪೂರ್ಣಗೊಳಿಸುವ ಅವಕಾಶ ಪಡೆಯುತ್ತಿದ್ದಾರೆ.

Ration Card e-KYC at Home:  ಅಕ್ಟೋಬರ್ 10 ರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಣೆ 

ಮೊದಲ ಹಂತದ ಅನುಷ್ಠಾನದ ನಂತರ 2026ರ ಅಕ್ಟೋಬರ್ 10 ರಿಂದ ರಾಜ್ಯದ ಉಳಿದ ಜಿಲ್ಲೆಗಳಿಗೂ ‘ಅನ್ನ ಸೇವೆ’ ಆಪ್ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ವರದಿಯಾಗಿದೆ.

ಹೀಗಾಗಿ ಪ್ರಸ್ತುತ 8 ಜಿಲ್ಲೆಗಳಲ್ಲಿ ಸೇವೆ ಕಾಣಿಸದಿದ್ದರೆ, ನಿಮ್ಮ ಜಿಲ್ಲೆಗೆ ಸೇವೆ ಲಭ್ಯವಾಗುವ ದಿನಾಂಕದವರೆಗೆ ಕಾಯುವುದು ಸೂಕ್ತ.

Ration Card e-KYC at Home : ಮೊಬೈಲ್ ಮೂಲಕ e-KYC ಹೇಗೆ ಮಾಡುವುದು? 

‘ಅನ್ನ ಸೇವೆ ‘ ಮೂಲಕ ಇ- ಕೆ ವೈ ಸಿ ಮಾಡಲು ಸಾಮಾನ್ಯವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

  1. ಅಗತ್ಯ ಆಪ್ ಗಳನ್ನು ಡೌನ್ಲೋಡ್ ಮಾಡಿ : ಮೊಬೈಲ್ ನಲ್ಲಿ ಇಲಾಖೆಯು ಸೂಚಿಸಿರುವ Anna Seve, AdhaarFaceRD ಮತ್ತು ಅಗತ್ಯವಿರುವ ಅಧಿಕೃತ Face KYC ಅಪ್ಲಿಕೇಶನ್ಗಳನ್ನು ಸ್ಥಾಪಿಸಬೇಕು. Face Authentication ಗಾಗಿ AdhaarFaceRD ಬಳಕೆಯಾಗುತ್ತದೆ.
  2. ‘ಅನ್ನ ಸೇವೆ’ಆಪ್ ತೆರೆಯಿರಿ : ಆಪ್ ತೆರೆಯುವ ಬಳಿಕ ಕೇಳಲಾಗುವ ಮಾಹಿತಿಯನ್ನು ನಮೂದಿಸಿ ನಿಮ್ಮ ರೇಷನ್ ಕಾರ್ಡ್ ವಿವರಗಳನ್ನು ಪರಿಶೀಲಿಸಬೇಕು.
  3. e-KYC ಆಯ್ಕೆಯನ್ನು ಆರಿಸಿ : ರೇಷನ್ ಕಾರ್ಡ್ ವಿವರಗಳು ಪರಿಶೀಲನೆಯಾದ ನಂತರ ಇ- ಕೆ ವೈ ಸಿ ಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಬೇಕು.
  4. Face Authentication ಪೂರ್ಣಗೊಳಿಸಿ : ಮೊಬೈಲ್ ಕ್ಯಾಮೆರಾ ಮೂಲಕ ಮುಖದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. Adhar ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಮುಖದ ದೃಢೀಕರಣ ನಡೆಯುತ್ತದೆ.
  5. ಕುಟುಂಬದ ಇತರ ಸದಸ್ಯರ ಇ- ಕೆ ವೈ ಸಿ ಪರಿಶೀಲಿಸಿ  : ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಅರ್ಹ ಕುಟುಂಬ ಸದಸ್ಯರ ಇ- ಕೆ ವೈ ಸಿ ಸ್ಥಿತಿಯನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಸದಸ್ಯರಿಗೂ ಅಗತ್ಯವಿದ್ದರೆ ಪ್ರತ್ಯೇಕವಾಗಿ ಇ- ಕೆ ವೈ ಸಿ ಪೂರ್ಣಗೊಳಿಸಬೇಕಾಗುತ್ತದೆ..

Ration Card e-KYC at Home:   ಹಿರಿಯ ನಾಗರಿಕರಿಗೆ Face Authentication ಉಪಯುಕ್ತ 

ಕೆಲವು ಹಿರಿಯ ನಾಗರಿಕರ ಬೆರಳಚ್ಚು ಸರಿಯಾಗಿ ದಾಖಲಾಗದಿರುವ ಸಂದರ್ಭಗಳಲ್ಲಿ Biometric Authentication ಸಮಸ್ಯೆ Face Authentication ವ್ಯವಸ್ಥೆಯು ಇಂತಹ ಸಂದರ್ಭಗಳಲ್ಲಿ ಪರ್ಯಾಯ ಡಿಜಿಟಲ್ ದೃಢೀಕರಣ ವಿಧಾನವಾಗಿ ಸಹಾಯ ಮಾಡಬಹುದು.

ಆದರೆ ಮುಖ ದೃಢೀಕರಣ ವಿಫಲವಾದರೆ ಅಥವಾ ತಾಂತ್ರಿಕ ಸಮಸ್ಯೆ ಎದುರಾದರೆ, ಇಲಾಖೆಯ ಅನುಮೋದಿತ ಇತರ ಇ- ಕೆ ವೈ ಸಿ ವಿಧಾನಗಳ ಮೂಲಕ ಪ್ರಕ್ರಿಯ ಪೂರ್ಣಗೊಳಿಸಬೇಕಾಗಬಹುದು.

ಇದನ್ನು ಓದಿ

Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.

Ration Card e-KYC at Home : e-KYC ಮಾಡಲು ಹಣ ಪಾವತಿಸಬೇಕೇ? 

e-KYC ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಅಥವಾ ಖಾಸಗಿ ಆಪ್ ಗಳಿಗೆ ಹಣ ಪಾವತಿಸುವ ಮೊದಲು ಎಚ್ಚರಿಕೆವಹಿಸಿ.

ವಿಶೇಷವಾಗಿ ಅಪರಿಚಿತ APK ಫೈಲ್ ಗಳು , WhatsApp ಮೂಲಕ ಬರುವ ಆಪ್ ಲಿಂಕ್ ಗಳು ಅಥವಾ ನಕಲಿ ಇ- ಕೆ ವೈ ಸಿ ಆಪ್ ಗಳನ್ನು ಡೌನ್ಲೋಡ್ ಮಾಡಬೇಡಿ. ನಿಮ್ಮ ಆಧಾರ್ ಸಂಖ್ಯೆ, ಓಟಿಪಿ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಡಿ.

‘ಅನ್ನ ಸೇವೆ’ ಯಂತಹ ಅಧಿಕೃತ ಸೇವೆಗಳನ್ನು ಬಳಸುವಾಗ google play store ಅಥವಾ ಆಹಾರ ಇಲಾಖೆಯ ಅಧಿಕೃತ ಮೂಲಗಳನ್ನೇ ಅವಲಂಬಿಸುವುದು ಸುರಕ್ಷಿತ.

Ration Card e-KYC at Home : ರೇಷನ್ ಕಾರ್ಡ್ e-KYC ಏಕೆ ಮುಖ್ಯ? 

e-KYC ಪ್ರಕ್ರಿಯೆಯ ಉದ್ದೇಶ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವುದು ಮತ್ತು ರೇಷನ್ ಕಾರ್ಡ್ ಡೇಟಾಬೇಸ್ ಅನ್ನು ಹೆಚ್ಚು ನಿಖರವಾಗಿರುವುದಾಗಿದೆ.

ಅಧಿಕೃತ Anna Seve Play Store ಮಾಹಿತಿಯ ಪ್ರಕಾರ, ಇ- ಕೆ ವೈ ಸಿ ಪರಿಶೀಲನೆಯನ್ನು 5 ವರ್ಷಕ್ಕೊಮ್ಮೆ ಮಾಡಬೇಕಾದ ವ್ಯವಸ್ಥೆಯನ್ನು ವಿವರಿಸಲಾಗಿದೆ. ಅಲ್ಲದೆ ರೇಷನ್ ಕಾರ್ಡ್ ನಲ್ಲಿರುವ ಅರ್ಹ ಕುಟುಂಬ ಸದಸ್ಯರ ಇ- ಕೆ ವೈ ಸಿ ಕೂಡ ಅಗತ್ಯವಾಗಿದೆ.

ಆಹಾರ ಇಲಾಖೆಯು ರಾಜ್ಯದಲ್ಲಿ ಇ- ಕೆ ವೈ ಸಿ ಪ್ರಕ್ರಿಯೆಯನ್ನು ಮುಂದುವರಿಸುತ್ತಿದ್ದು, ಬಾಕಿ ಇರುವ ಫಲಾನುಭವಿಗಳು ತಮ್ಮ ಇ- ಕೆ ವೈ ಸಿ ಪೂರ್ಣಗೊಳಿಸುವಂತೆ ಸೂಚಿಸಿದೆ. ಸೆಪ್ಟೆಂಬರ್ 29ರ ವೇಳೆಗೆ ರಾಜ್ಯದ 2,67,64,276 ಫಲಾನುಭವಿಗಳ ಪೈಕಿ 1,56,21,608 ಮಂದಿ ಇ- ಕೆ ವೈ ಸಿ ಪೂರ್ಣಗೊಳಿಸಿದ್ದರು ಎಂದು ಸಚಿವರು ತಿಳಿಸಿರುವುದಾಗಿ ವರದಿಯಾಗಿದೆ.

Ration Card e-KYC at Home : ‘ಅನ್ನ ಸೇವೆ ‘ ಆಪ್ ಎಲ್ಲಿಂದ ಡೌನ್ಲೋಡ್ ಮಾಡಬೇಕು ?

Anna Seve ಆಪ್ Google Play Store ನಲ್ಲಿ ಲಭ್ಯವಿದೆ. ಡೌನ್ಲೋಡ್ ಮಾಡುವಾಗ ಆಪ್ ನ Developer ಮತ್ತು ಅಧಿಕೃತ ವಿವರಗಳನ್ನು ಪರಿಶೀಲಿಸಿ, ನಂತರವೇ ಸ್ಥಾಪಿಸಿ.

ಅಧಿಕೃತ Google Play Store App

https://play.google.com/store/apps/details?id=in.gov.karnataka.ahara.annaseva

ನಿಮ್ಮ ಜಿಲ್ಲೆಯಲ್ಲಿ ಆಪ್ ಕೆಲಸ ಮಾಡುತ್ತಿಲ್ಲವೇ?

‘ಅನ್ನ ಸೇವೆ’ಆಪ್ ಪ್ರಸ್ತುತ ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಆದ್ದರಿಂದ ನಿಮ್ಮ ಜಿಲ್ಲೆಯಲ್ಲಿ ಇ- ಕೆ ವೈ ಸಿ ಆಯ್ಕೆ ಕಾಣಿಸದಿದ್ದರೆ, ತಕ್ಷಣವೇ ಆಪ್ ನಕಲಿ ಅಥವಾ ದೋಷಪೂರಿತ ಎಂದು ನಿರ್ಧರಿಸಬೇಡಿ. ಆಹಾರ ಇಲಾಖೆಯ ಅಧಿಕೃತ ಮಾಹಿತಿ ಮತ್ತು ಇತ್ತೀಚಿನ update ಅನ್ನು ಪರಿಶೀಲಿಸಿ. ಮೊದಲ ಹಂತದಲ್ಲಿ 8 ಜಿಲ್ಲೆಗಳಿಗೆ ಮಾತ್ರ pilot rollout ಮಾಡಲಾಗಿದೆ.

ಅದೇ ರೀತಿ, ನಕಲಿ ಇ- ಕೆ ವೈ ಸಿ ಆಪ್ ಗಳಿಂದ ಎಚ್ಚರವಾಗಿರಿ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಆಪ್ ಮೂಲಗಳಿಂದಲೇ ಇತ್ತೀಚಿನ ಸೂಚನೆಗಳನ್ನು ಪರಿಶೀಲಿಸಿ.

FAQ

  1. ಅನ್ನ ಸೇವೆ ಆಪ್ ಮೂಲಕ ಮನೆಯಲ್ಲಿ ರೇಷನ್ ಕಾರ್ಡ್ ಇ-ಕೆ ವೈ ಸಿ ಮಾಡಬಹುದೇ?  : ಹೌದು. ಆಹಾರ ಇಲಾಖೆಯ ಹೊಸ Anna Seve app Adhaar Based Face Authentication ಮೂಲಕ e-KYC ಮಾಡಲು ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ ಸೇವೆ ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ.
  2. ಮೊದಲ ಹಂತದಲ್ಲಿ ಯಾವ ಜಿಲ್ಲೆಗಳಲ್ಲಿ ‘ಅನ್ನಸೇವೆ’ ಲಭ್ಯವಿದೆ?  : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಸೇವೆ ಜಾರಿಗೆ ಬಂದಿದೆ.
  3. ಉಳಿದ ಜಿಲ್ಲೆಗೆ ಯಾವಾಗ ಸೇವೆ ಬರಲಿದೆ? : ವರದಿಗಳ ಪ್ರಕಾರ 2026ರ ಅಕ್ಟೋಬರ್ 10 ರಿಂದ ಉಳಿದ ಜಿಲ್ಲೆಗಳಿಗೂ ಸೇವೆ ವಿಸ್ತರಿಸುವ ಯೋಜನೆ ಇದೆ.
  4. Face Authentication ಎಂದರೇನು? : ಇದು Adhar ಆಧಾರಿತ ಮುಖದೃಢೀಕರಣ ವಿಧಾನವಾಗಿದ್ದು, ಮೊಬೈಲ್ ಕ್ಯಾಮೆರಾ ಮೂಲಕ ಪಲಾನುಭವಿಯ ಗುರುತನ್ನು ಪರಿಶೀಲಿಸಲು ಬಳಸಲಾಗುತ್ತದೆ.

ಇದನ್ನು ಓದಿ

Aditya Birla Scholarship 2026-27 : ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್, ಅರ್ಜಿ ಲಿಂಕ್ Important update.

Leave a Comment