RRB NTPC Recruitment 2026 : ರೈಲ್ವೆ ಇಲಾಖೆಯಲ್ಲಿ 3,548 ಭರ್ಜರಿ ಉದ್ಯೋಗಾವಕಾಶ, ಅಕ್ಟೋಬರ್ 8 ರಿಂದ ಅರ್ಜಿ ಶುರು, important update.

RRB NTPC Recruitment 2026RRB NTPC Recruitment 2026 : RRB NTPC Graduate 2026 ಅಧಿಸೂಚನೆ ಪ್ರಕಟ. 3,548 ರೈಲ್ವೆ ಹುದ್ದೆಗಳು, ಪದವಿ, ಅರ್ಹತೆ, ವಯೋಮಿತಿ, ₹29,200 – ₹35,400 ಮೂಲವೇತನ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಮತ್ತು ಆನ್ಲೈನ್  ಅರ್ಜಿ ವಿವರಗಳನ್ನು ತಿಳಿಯಿರಿ. 

ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಮಹತ್ವದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ರೈಲ್ವೆ ನೇಮಕಾತಿ ಮಂಡಳಿಗಳ (RRB )ವತಿಯಿಂದ Non -Technical Popular Categories (NTPC Graduate) ಹುದ್ದೆಗಳ ಭರ್ತಿಗಾಗಿ CEN no 6/2026 ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿ ದೇಶದಾದ್ಯಂತ ಒಟ್ಟು 3,548 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ಈ ನೇಮಕಾತಿಯಲ್ಲಿ chief commercial come ticket supervisor, goods train manager, junior accounts assistant come typist & senior clerk come typist ಹುದ್ದೆಗಳು ಸೇರಿವೆ.

ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಆಯೋಗದ ಲೆವೆಲ್-5 & ಲೆವೆಲ್-6 ರ ಆಡಿಯಲ್ಲಿ ಆರಂಭಿಕ ಮೂಲವೇತನ ₹29,200 ರಿಂದ ₹35,400 ರವರೆಗೆ ನಿಗದಿಪಡಿಸಲಾಗಿದೆ.

ಅಧಿಸೂಚನೆಯ ಪ್ರಕಾರ, ಆನ್ಲೈನ್ ಅರ್ಜಿ ಪ್ರಕ್ರಿಯೆಯು 8 ಅಕ್ಟೋಬರ್ 2026ರಂದು ಆರಂಭವಾಗಲಿದ್ದು, 6 ನವಂಬರ್ 2026 ರಂದು ಮುಕ್ತಾಯವಾಗಲಿದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಮತ್ತು ಹುದ್ದೆವಾರು ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ

Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.

RRB NTPC Recruitment 2026 : ನೇಮಕಾತಿಯ ಪ್ರಮುಖ ವಿವರಗಳು

  • ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ (RRB)
  • ಹುದ್ದೆಗಳ ಸಂಖ್ಯೆ : 3,548
  • ಹುದ್ದೆಯ ಸ್ಥಳ: ಅಖಿಲ ಭಾರತ
  • ಹುದ್ದೆಯ ಹೆಸರು : ಗೂಡ್ಸ್ ರೈಲು ವ್ಯವಸ್ಥಾಪಕ, ಹಿರಿಯ ಗುಮಾಸ್ತ, ಬೆರಳಚ್ಚುಗಾರ.
  • ಸಂಬಳ ತಿಂಗಳಿಗೆ : 29,200 – 35,400

ಹುದ್ದೆಗಳ ವಿವರ 

  1. Chief Commercial Cum Ticket Supervisor: 127
  2. Goods Train Manager: 2,750
  3. Junior Accounts Assistant Cum Typist: 300
  4. Senior Clerk Cum Typist : 371
  5. ಒಟ್ಟು  : 3,548 ಹುದ್ದೆಗಳು.

ಗಮನಿಸಿ : ಅಧಿಸೂಚನೆಯ ಪ್ರಕಾರ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ರೈಲ್ವೆ ಆಡಳಿತದ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು.

RRB NTPC Recruitment 2026 : ಶೈಕ್ಷಣಿಕ ಅರ್ಹತೆ 

  • RRB NTPC Graduate ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು ಅಥವಾ ಅದಕ್ಕೆ ಸಮಾನವಾದ ಅರ್ಹತೆಯನ್ನು ಹೊಂದಿರಬೇಕು.
  • ಅಧಿ ಸೂಚನೆಯ Annexure A ಪ್ರಕಾರ, ಪ್ರಕಟಿಸಿರುವ ನಾಲ್ಕು ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಅಥವಾ ಸಮಾನ ಅರ್ಹತೆಯನ್ನು ಮೂಲ ವಿದ್ಯಾರ್ಹತೆಯಾಗಿ ನಿಗದಿಪಡಿಸಲಾಗಿದೆ.
  • ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು : ನಿಗದಿತ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಹೊಂದಿರಬೇಕು. ಅಂತಿಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಅಲ್ಲ.
  • ದಾಖಲೆ ಪರಿಶೀಲನೆ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

RRB NTPC Recruitment 2026 : ಪ್ರಮುಖ ದಿನಾಂಕಗಳು 

  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಅಕ್ಟೋಬರ್ 8, 2026
  • ನೋಂದಣಿ ಕೊನೆಯ ದಿನಾಂಕ : ನವೆಂಬರ್ 6, 2026
  • ಶುಲ್ಕ ಪಾವತಿ ಕೊನೆಯ ದಿನಾಂಕ : ನಂಬರ್ 8, 2026
  • ಪರೀಕ್ಷೆ ನಗರದ ವಿವರಗಳು : ಪರೀಕ್ಷೆಗೆ 10 ದಿನಗಳ ಮೊದಲು
  • ಪ್ರವೇಶ ಪತ್ರ : ಪರೀಕ್ಷೆಗೆ ನಾಲ್ಕು ದಿನಗಳ ಮೊದಲು
  • CBT -1 ಪರೀಕ್ಷೆಯ ದಿನಾಂಕ : ನಂತರ ಸೂಚಿಸಲಾಗುತ್ತದೆ.

RRB NTPC Recruitment 2026 : ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ 

  • ಈ ನೇಮಕಾತಿಗೆ ವೈವಮಿತಿಯನ್ನು 1 ಜನವರಿ 2027ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
  • ಸಾಮಾನ್ಯ ವರ್ಗ (UR/EWS) : ಗರಿಷ್ಠ ವಯಸ್ಸು 33 ವರ್ಷ
  • OBC-NCL : 3 ವರ್ಷ
  • SC ST: 5 ವರ್ಷ
  • PWBD- UR/EWS : 10 ವರ್ಷ
  • PWBD- OBC- NCL: 13 ವರ್ಷ
  • PWBD- SC ST: 15 ವರ್ಷ

ಮಾಜಿ ಸೈನಿಕರು, ರೈಲ್ವೆ ಸಿಬ್ಬಂದಿ ಹಾಗೂ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಇತರ ಅರ್ಹ ವರ್ಗಗಳಿಗೆ ಪ್ರತ್ಯೇಕ ನಿಯಮಗಳು ಅನ್ವಯಿಸುತ್ತದೆ. ಒಂದಕ್ಕಿಂತ ಹೆಚ್ಚು ಆಧಾರಗಳಲ್ಲಿ ವಯೋಮಿತಿ ಸಡಿಲಿಕೆಗೆ ಅರ್ಹರಾಗಿದ್ದರೆ, ನಿಯಮಾನುಸಾರ ಅನ್ವಯವಾಗುವ ಗರಿಷ್ಠ ಸಡಿಲಿಕೆಯನ್ನು ಪರಿಗಣಿಸಲಾಗುತ್ತದೆ . ಸಡಿಲಿಕೆಗಳನ್ನು ಒಟ್ಟುಗೂಡಿಸಲಾಗುವುದಿಲ್ಲ.

RRB NTPC Recruitment 2026 : ವೇತನ ಮತ್ತು ಉದ್ಯೋಗದ ಸ್ವರೂಪ 

RRB NTPC Graduate ಹುದ್ದೆಗಳು ಕೇಂದ್ರ ಸರ್ಕಾರ ರೈಲ್ವೆ ಸೇವೆ ಅಡಿ ಬರುವ ಉದ್ಯೋಗಗಳಾಗಿವೆ. ಹುದ್ದೆಗಳಿಗೆ ಅನುಗುಣವಾಗಿ 7ನೇ ಕೇಂದ್ರ ವೇತನ ಆಯೋಗದ ವೇತನ ಮಟ್ಟಗಳನ್ನು ಅನ್ವಯಿಸಲಾಗುತ್ತದೆ.

  • Chief Commercial cum Ticket Supervisor : level -6 , ಆರಂಭಿಕ ಮೂಲವೇತನ : ₹35,400
  • Goods Train Manager : level 5 , ಆರಂಭಿಕ ಮೂಲವೇತನ : ₹29,200
  • Junior Accounts Assistant Cum Typist : level 5 , ಆರಂಭಿಕ ಮೂಲವೇತನ ₹29,200
  • Senior Clerk Cum Typist: level 5, ಆರಂಭಿಕ ಮೂಲವೇತನ :₹29,200

ಇವು ಅಧಿಸೂಚನೆಯಲ್ಲಿ ತಿಳಿಸಿರುವ ಆರಂಭಿಕ ಮೂಲವೇತನಗಳಾಗಿವೆ. ಕೈಗೆ ಸಿಗುವ ಒಟ್ಟು ವೇತನವು ಅನ್ವಯಿಸುವ ಭತ್ಯೆ ಗಳು, ಕಡಿತಗಳು, ಕೆಲಸದ ಸ್ಥಳ ಮತ್ತು ಇತರ ಸೇವೆ ನಿಯಮಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮೂಲವೇತನವನ್ನೇ ಅಂತಿಮ ವೇತನವೆಂದು ಪರಿಗಣಿಸಬಾರದು.

ಇದನ್ನು ಓದಿ

Shivamogga ಮಹಾನಗರ ಪಾಲಿಕೆ ನೇಮಕಾತಿ 2026 : 45 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ನವಂಬರ್ 7 ಕೊನೆಯ ದಿನ, important notice.

RRB NTPC Recruitment 2026 : ಅರ್ಜಿ ಶುಲ್ಕ ಎಷ್ಟು? 

ಅನ್ವಯಿಸುವ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ. ಮೊದಲ ಹಂತದ CBT ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಅಧಿ ಸೂಚನೆಯಲ್ಲಿ ತಿಳಿಸಿರುವ ಮರುಪಾವತಿ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? 

RRB NTPC Graduate ನೇಮಕಾತಿಯಲ್ಲಿ ಮುಖ್ಯವಾಗಿ ಕೆಳಗಿನ ಹಂತಗಳು ಇರುತ್ತವೆ.

  • ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT -1)
  • ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT -2)
  • ದಾಖಲೆ ಪರಿಶೀಲನೆ (documents verification)
  • ವೈದ್ಯಕೀಯ ಪರೀಕ್ಷೆ (Medical Examination)
  • CBT -1 ಪರೀಕ್ಷೆಯ ಮಾದರಿ : ಮೊದಲ ಹಂತದ CBT ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳಿದ್ದು, ಪರೀಕ್ಷೆಯ ಅವಧಿ 90 ನಿಮಿಷಗಳು. ಪ್ರತಿ ಪ್ರಶ್ನೆಗೆ ಒಂದು ಅಂಕ ಇರುತ್ತದೆ. ತಪ್ಪು ಉತ್ತರಕ್ಕೆ 1/3 ಅಂಕದ ಋಣಾತ್ಮಕ ಮೌಲ್ಯಮಾಪನ ಅನ್ವಯಿಸುತ್ತದೆ. ಸ್ಕೈಬ್ ಬಳಸುವ ಅರ್ಹರಾಗಿರುವ PWBD ಅಭ್ಯರ್ಥಿಗಳಿಗೆ ಪರೀಕ್ಷೆಯ ಅವಧಿ 120 ನಿಮಿಷಗಳಾಗಿರುತ್ತವ.
  • CBT -1 ಪರೀಕ್ಷೆಯ ಅಂಕಗಳ ಆಧಾರದ ಮೇಲೆ CBT -2 ಗೆ ಅಭ್ಯರ್ಥಿಗಳನ್ನು ಮೆರಿಟ್ ಅನುಸಾರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • CBT -2 ಪರೀಕ್ಷೆಯ ಮಾದರಿ : CBT -2 ಪರೀಕ್ಷೆಯಲ್ಲಿ ಒಟ್ಟು 120 ಪ್ರಶ್ನೆಗಳಿದ್ದು, ಪರೀಕ್ಷೆಯ ಅವಧಿ 90 ನಿಮಿಷಗಳು. ಸ್ಕೈಬ್ ಬಳಸಲು ಅರ್ಹರು ಆಗಿರುವ ಅಭ್ಯರ್ಥಿಗಳಿಗೆ 120 ನಿಮಿಷಗಳ ಅವಧಿ ನೀಡಲಾಗುತ್ತದೆ.

 

ಎರಡನೇ ಹಂತದ ಪರೀಕ್ಷೆಗೆ ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆಯನ್ನು ಸಾಮಾನ್ಯವಾಗಿ ಆಯಾ RRB ಯಲ್ಲಿ ಪ್ರಕಟಿಸಿದ ಸಮುದಾಯದವರು ಖಾಲಿ ಹುದ್ದೆಗಳ 15 ಪಟ್ಟು ಮಿತಿಯಲ್ಲಿ ನಿರ್ಧರಿಸಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಈ ಮಿತಿಯನ್ನು ಬದಲಾಯಿಸುವ ಹಕ್ಕು ರೈಲ್ವೆ ಇಲಾಖೆಗೆ ಇದೆ.

  • ದಾಖಲಾತಿ ಪರಿಶೀಲನೆ (DV)  : ಮೇಲಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.
  • ವೈದ್ಯಕೀಯ ಪರೀಕ್ಷೆ (medical Examination) : ಅಂತಿಮವಾಗಿ ರೈಲ್ವೆ ಮಾನದಂಡಗಳ ಪ್ರಕಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ದೃಷ್ಟಿ ದೋಷ ಸರಿಪಡಿಸಲು LASIK ಸರ್ಜರಿ ಮಾಡಿಸಿಕೊಂಡಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಘೋಷಣ ಪತ್ರ ಸಲ್ಲಿಸಬೇಕು.
RRB NTPC Recruitment 2026 : ಅರ್ಜಿ ಸಲ್ಲಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳು 
  • ಅಭ್ಯರ್ಥಿಗಳು ಕೇವಲ ಒಂದು RRB ವಲಯವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಹುದ್ದೆಗಳ ಆದ್ಯತೆಯನ್ನು ನಮೂದಿಸಬೇಕು.
  • ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ಮುನ್ನ ಮಾಹಿತಿಯನ್ನು ಮರುಪರಿಶೀಲಿಸಿಕೊಳ್ಳಬೇಕು.
  • ಕೊನೆಯ ಕ್ಷಣದ ಸರ್ವರ್ ದಟ್ಟಣೆಯನ್ನು ತಪ್ಪಿಸಲು ನಿಗದಿತ ದಿನಾಂಕದೊಳಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ.
RRB NTPC Recruitment 2026 : ಅರ್ಜಿ ಸಲ್ಲಿಸುವ ಹಂತಗಳು 
  1. ಅಧಿಕೃತ ಅರ್ಜಿ ಪೋರ್ಟಲ್ ತೆರೆಯಿರಿ. https://www.rrbapply.gov.in/#/auth/landing
  2. ಈಗಾಗಲೇ RRB ಖಾತೆ ಹೊಂದಿದ್ದರೆ ಅದೇ ಖಾತೆಯ ಮೂಲಕ ಲಾಗಿನ್ ಮಾಡಿ. ಹೊಸ ಅಭ್ಯರ್ಥಿಗಳು ಅಗತ್ಯವಿದ್ದರೆ ಖಾತೆ ರಚಿಸಬೇಕು.
  3. CEN no. 06/2026 NTPC Graduate ನೇಮಕಾತಿಯನ್ನು ಆಯ್ಕೆ ಮಾಡಿ.
  4. ವಯಕ್ತಿಕ ಮಾಹಿತಿ, ವಿದ್ಯಾರ್ಹತೆ, ವರ್ಗ ಮತ್ತು ಇತರ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  5. ಅಗತ್ಯವಿರುವ ಲೈವ್ ಫೋಟೋ, ಸಹಿ ಮತ್ತು ಇತರ ಮಾಹಿತಿಯನ್ನು ಸೂಚಿಸಿದ ರೀತಿಯಲ್ಲಿ ಸಲ್ಲಿಸಿ.
  6. ನಿಮಗೆ ಅರ್ಹತೆ ಇರುವ ಹುದ್ದೆಗಳು ಮತ್ತು ರೈಲ್ವೆ ವಲಯಗಳ ಆದ್ಯತೆಗಳನ್ನು ಆಯ್ಕೆ ಮಾಡಿ.
  7. ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ, ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.
  8. ಅಂತಿಮ ಅರ್ಜಿ ಮತ್ತು ಪಾವತಿಯ ದೃಡೀಕರಣವನ್ನು ಉಳಿಸಿಕೊಳ್ಳಿ.

ದೂರವಾಣಿ : 9592001188 / 01725653333

ಸಲಹೆ : ರೈಲ್ವೆ ಇಲಾಖೆಯಲ್ಲಿ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದೆ ಸಿದ್ಧತೆ ಆರಂಭಿಸಿ ಸಾಮಾನ್ಯ ಜ್ಞಾನ, ಕಂಪ್ಯೂಟರ್ ಬೇಸಿಕ್ಸ್ ಮತ್ತು ಪರಿಸರ ವಿಜ್ಞಾನದಂತಹ ವಿಷಯಗಳತ್ತ ಹೆಚ್ಚು ಗಮನ  ಹರಿಸಿ

ಇದೇ ರೀತಿಯ ಸರ್ಕಾರಿ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಇದನ್ನು ಓದಿ

B.com BA Scholarship : 5 ಲಕ್ಷದವರೆಗೆ ವಿದ್ಯಾರ್ಥಿ ವೇತನ, ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ important update.

 

Leave a Comment