Indian Coast Guard Recruitment 2026 : ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಭಾರತೀಯ ತಟರಕ್ಷಕ ಪಡೆ CGEPT 01/2027 & 2/2027 ಬ್ಯಾಚ್ಗಳ ನಾವಿಕ್, ಯಾಂತ್ರಿಕ್ ಸೇರಿದಂತೆ ಒಟ್ಟು 365 ಹುದ್ದೆಗಳ ಭರ್ತಿಗೆ Staff Selection commission (SSC) ಮೂಲಕ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಮತ್ತು 12ನೇ ತರಗತಿ ಹಾಗೂ ಡಿಪ್ಲೋಮಾ ಮುಗಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ದೇಶ ಸೇವೆ ಮಾಡುವುದರೊಂದಿಗೆ ಉತ್ತಮ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣ ಅವಕಾಶವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ 18 ರಿಂದ 22 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, ಆಯ್ಕೆಯಾದ ಉದ್ಯೋಗಿಗಳಿಗೆ ಪ್ರತಿ ತಿಂಗಳು ₹21,700 ರಿಂದ ₹29,200 ವರೆಗೆ ಮೂಲವೇತನ ಹಾಗೂ ಇತರ ಭತ್ಯೆ ಗಳು ಸಿಗಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SSC ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ದಿನಾಂಕ 21 ಅಕ್ಟೋಬರ್ 2026ರ ಒಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ನೇಮಕಾತಿಯ ಕಂಪ್ಲೀಟ್ ವಿವರಗಳು, ಹುದ್ದೆಗಳ ಹಂಚಿಕೆ, ದೈಹಿಕ ಪರೀಕ್ಷೆ ಹಾಗೂ ಅರ್ಜಿ ಸಲ್ಲಿಸುವ ಹಂತ ಹಂತದ ಉಚಿತ ಮಾರ್ಗದರ್ಶನಕ್ಕಾಗಿ ನಮ್ಮ ವಾಟ್ಸಪ್ ಚಾನಲ್ ಅನ್ನು ಫಾಲೋ ಮಾಡಿಕೊಳ್ಳಿ ಏಕೆಂದರೆ ಕರ್ನಾಟಕದ ಉದ್ಯೋಗ ಆಕಾಂಕ್ಷಿಗಳಿಗೆ ಕ್ಷಣಾರ್ಧದಲ್ಲಿ ನಿಖರ ಸರ್ಕಾರಿ ಉದ್ಯೋಗದ ಅಪ್ಡೇಟ್ಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
ಇದನ್ನು ಓದಿ
Indian Coast Guard Recruitment 2026 : ಪ್ರಮುಖ ವಿವರಗಳು
- ನೇಮಕಾತಿ ಸಂಸ್ಥೆ : Indian Coast Guard (ICG)
- ಪರೀಕ್ಷಾ ನಡೆಸುವ ಸಂಸ್ಥೆ : Staff Selection commission (SSC)
- ಬ್ಯಾಚ್ ಗಳು : CGEPT 01/2027& CGEPT 02/2027
- ಒಟ್ಟು ಕಾಲಿ ಹುದ್ದೆಗಳು : 365 ಹುದ್ದೆಗಳು
- ಹುದ್ದೆಗಳ ಹೆಸರು : Navik (GD) , Navik (DB) , Yantrik , Hygienist-1
- ಅರ್ಜಿ ವಿಧಾನ : ಆನ್ಲೈನ್
ಪ್ರಮುಖ ದಿನಾಂಕಗಳು (Important Dates)
- ಅಧಿಸೂಚನೆ ಪ್ರಕಟಣೆ ದಿನಾಂಕ : ಅಕ್ಟೋಬರ್ 2026
- ಆನ್ಲೈನ್ ಅರ್ಜಿ ಆರಂಭ ದಿನಾಂಕ : ಅಕ್ಟೋಬರ್ 6,2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಅಕ್ಟೋಬರ್ 2026
- Stage -1 ಪರೀಕ್ಷಾ ದಿನಾಂಕ : ಅಧಿಕೃತ ವೆಬ್ಸೈಟ್ನಲ್ಲಿ ಶೀಘ್ರದಲ್ಲಿ ಪ್ರಕಟಿಸಲಾಗುವುದು.
Indian Coast Guard Recruitment 2026 : ಹುದ್ದೆಗಳ ವಿಂಗಡಣೆ
- Navik (General Duty) : 260(ಪುರುಷ 234, ಮಹಿಳೆ 26)
- Navik (Domestic Branch) : 25 ಪುರುಷ ಮಾತ್ರ
- Yantrik (mech/elec/ECE) : 60 ಪುರುಷ ಮಾತ್ರ
- Hygienist : 20 ಪುರುಷ ಮಾತ್ರ
- ಒಟ್ಟು ಹುದ್ದೆಗಳು : 365 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು (Educational Qualification)
1. Navik (General Duty)
- COBSE (council of boards for school education) ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC -science ) ತೇರ್ಗಡೆಯಾಗಿರಬೇಕು .
- ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕು.
2. Navik (Domestic Branch)
- ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ತೇರ್ಗಡೆಯಾಗಿರಬೇಕು.
3. Hygienist
- 10ನೇ ತರಗತಿಯ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.
4.Yantrik (mechanical/electrical/electronics and telecommunication)
- 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು AICTE ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ಅಥವಾ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿರಬೇಕು.
- ಅಥವಾ 10 ಹಾಗೂ 12ನೇ ತರಗತಿ ನಂತರ ಎರಡು ಅಥವಾ ಮೂರು ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಇದನ್ನು ಓದಿ
Indian Coast Guard Recruitment 2026 : ವಯೋಮಿತಿ ಮತ್ತು ಸಡಿಲಿಕೆ
- ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 22 ವರ್ಷಗಳು.(ಹುದ್ದೆವಾರು ಜನ್ಮ ದಿನಾಂಕದ ವ್ಯಾಪ್ತಿ ಈ ಕೆಳಗಿನಂತಿದೆ.)
- Navik (GD) : 1 ನವಂಬರ್ 2005 ರಿಂದ 1 ಮೇ 2009ರ ನಡುವೆ ಜನಿಸಿರಬೇಕು.
- Yantrik: 01 ಮೇ 2005 ರಿಂದ 1 ಮೇ 2009ರ ನಡುವೆ ಜನಿಸಿರಬೇಕು.
- Navik (DB) : 1 ನವೆಂಬರ್ 2005 ರಿಂದ 1 ಅಕ್ಟೋಬರ್ 2009ರ ನಡುವೆ ಜನಿಸಿರಬೇಕು.
- Hygienist: 1 ನವಂಬರ್ 2002 ರಿಂದ 1 ಅಕ್ಟೋಬರ್ 2009ರ ನಡುವೆ ಜನಿಸಿರಬೇಕು.
ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ :
- OBC (Non Creamy Layer) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ.
- SC ST ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ
Indian Coast Guard Recruitment 2026 : ವೇತನ ಶ್ರೇಣಿ ಮತ್ತು ಇತರೆ ಭತ್ಯೆ ಗಳು
- Yantrik: Basic Pay – ₹29,200 + Yantrik Pay ₹6,200
- Navik (GD/DB) & Hygienist: Basic Pay – ₹21,700
- ಇತರ ಸೌಲಭ್ಯಗಳು ,: ಉಚಿತ ರೇಶನ್, ವೈದ್ಯಕೀಯ ಸೌಲಭ್ಯ, ಉಚಿತ ಸಮವಸ್ತ್ರ, ಕ್ಯಾಂಟೀನ್ ಸೌಲಭ್ಯ, ಮತ್ತು ಪ್ರವಾಸ ಭತ್ಯೆ ಗಳು ಸರ್ಕಾರಿ ನಿಯಮಾವಳಿಗಳಂತೆ ಲಭ್ಯವಿರುತ್ತದೆ.
Indian Coast Guard Recruitment 2026 :ಆಯ್ಕೆ ಪ್ರಕ್ರಿಯೆ ಹಂತಗಳು
ಆಯ್ಕೆ ಪ್ರಕ್ರಿಯೆಯನ್ನು ಒಟ್ಟು 4 ಹಂತಗಳಲ್ಲಿ ವಿಂಗಡಿಸಲಾಗಿದೆ.
1. ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ (CBE)
- ಅಭ್ಯರ್ಥಿಯ ಹುದ್ದೆಗೆ ಅನುಗುಣವಾಗಿ ಲಿಖಿತ ಪರೀಕ್ಷೆ ನಡೆಯಲಿದೆ.
- ಆಬ್ಜೆಕ್ಟಿವ್ ಮಾದರಿಯ (MCQ) ಪ್ರಶ್ನೆಗಳಿರುತ್ತವೆ.
2. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ
- Physical fitness test (PFT) :
- ಅಸೆಸ್ಮೆಂಟ್ ಟೆಸ್ಟ್ ಮತ್ತು ದಾಖಲೆ ಪರಿಶೀಲನೆ (document verification)
- ಪ್ರಾಥಮಿಕ ವೈದ್ಯಕೀಯ ತಪಾಸಣೆ (initial medical examination)
3. INS ಚಿಲ್ಕ ಕೇಂದ್ರದಲ್ಲಿ
- ಅಂತಿಮ ದಾಖಲಾತಿ ಪರಿಶೀಲನೆ ಮತ್ತು INS ಚಿಲ್ಕಾದಲ್ಲಿ ತರಬೇತಿಗೆ ಮುನ್ನ ಪ್ರಿ ಎನ್ರೋಲ್ಮೆಂಟ್ ವೈದ್ಯಕೀಯ ಪರೀಕ್ಷೆ (pre enrollment medicals)
4. ಅಂತಿಮ ಹಂತ
- ಮೂಲ ಶೈಕ್ಷಣಿಕ ಪ್ರಮಾಣ ಪತ್ರಗಳ ದೃಢೀಕರಣ ಮತ್ತು ತರಬೇತಿಯ ಪ್ರಾರಂಭ
Indian Coast Guard Recruitment 2026 : ಅರ್ಜಿ ಶುಲ್ಕ
- SC ST ಅಭ್ಯರ್ಥಿಗಳು : ಶುಲ್ಕವಿಲ್ಲ
- UR/OBC/EWS ಅಭ್ಯರ್ಥಿಗಳು : ₹550
- ಆನ್ಲೈನ್ ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹಾಗೂ ಯುಪಿಐ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ದಾಖಲೆಗಳು (Required Documents)
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಅಭ್ಯರ್ಥಿಯ ಡಿಜಿಟಲ್ ಸಹಿ
- 10ನೇ ತರಗತಿಯ ಅಂಕಪಟ್ಟಿ
- 12ನೇ ತರಗತಿಯ ಅಂಕಪಟ್ಟಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ
- ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ
- ಸರ್ಕಾರಿ ಗುರುತಿನ ಚೀಟಿ (ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್)
- ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ.
Indian Coast Guard Recruitment 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ (How to Apply)
- SSC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. https://ssc.gov.in/
- ನೀವು ಹೊಸ ಬಳಕೆದಾರರಾಗಿದ್ದರೆ New Registration ಪೂರ್ಣಗೊಳಿಸಿ.
- ಲಾಗಿನ್ ಆದ ನಂತರ Indian coast guard CGEPT 01/2027&02/2027 ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಶೈಕ್ಷಣಿಕ ವಿವರಗಳು, ವಿಳಾಸ ಮತ್ತು ಇತರೆ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ನಿಮ್ಮ ಸಹಿ ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ಸೈಜ್ ನಲ್ಲಿ ಅಪ್ಲೋಡ್ ಮಾಡಿ, ಲೈವ್ ವೆಬ್ ಕ್ಯಾಮ್ ಫೋಟೋವನ್ನು ಸರಿಯಿಡಿಯಿರಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿಯನ್ನು ಒಮ್ಮೆ ಮರು ಪರಿಶೀಲಿಸಿ Submit ಬಟನ್ ಒತ್ತಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ
