B.com, BA Scholarship : 2026 27 ನೇ ಸಾಲಿನ B.com,BA , BBA,BFIA,BMS,IPM, BBS ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಮನ್ ಕಾಂತ್ ಮುಂಜಾಲ್ ವಿದ್ಯಾರ್ಥಿವೇತನದ ಅಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ಲಗತ್ತಿಸಬೇಕು? ಅರ್ಜಿ ಸಲ್ಲಿಸುವ ವಿಧಾನಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಇದನ್ನು ಓದಿ
B.com, BA Scholarship : ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿ ವೇತನವನ್ನು ಪಡೆಯಬಹುದು?
ರಾಮನ್ ಕಾಂತ್ ಮುಂಜಾಲ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ಅವರ ಶಿಕ್ಷಣವನ್ನು ಪೂರ್ಣಗೊಳಿಸಲು 3 ವರ್ಷಗಳವರೆಗೆ ವರ್ಷಕ್ಕೆ 40,000 ರಿಂದ 5,50,000 ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅಕ್ಟೋಬರ್ 15, 2026 ಕೊನೆಯ ದಿನಾಂಕವಾಗಿದೆ.
B.com, BA Scholarship : ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?
- ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಬಿಬಿಎ, ಬಿ ಎಫ್ ಐ ಎ, ಬಿಕಾಂ (ಎಚ್,ಈ), ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಬಿ ಎಂ ಎಸ್), ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ (ಐಪಿಎಂ) , ಬಿ ಎ (ಅರ್ಥಶಾಸ್ತ್ರ) , ಬ್ಯಾಚುಲರ್ ಇನ್ ಬಿಸಿನೆಸ್ ಸ್ಟಡೀಸ್ (ಬಿ ಬಿ ಎಸ್) , ಅಥವಾ ಯಾವುದೇ ಇತರ ಹಣಕಾಸು ಸಂಬಂಧಿತ ಪದವಿ ಕೋರ್ಸ್ ನ ಮೊದಲ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಯು 10 ಹಾಗೂ 12 ನೇ ತರಗತಿಯಲ್ಲಿ ಕನಿಷ್ಠ 80% ಅಂಕಗಳನ್ನು ಗಳಿಸಿರಬೇಕು.
- ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯದ ಮಿತಿಯು 6 ಲಕ್ಷದೊಳಗೆ ಇರಬೇಕು.
- ಹೀರೋ ಫಿನ್ಕಾರ್ಪ್, ರಾಮನ್ ಕಾಂತ್ ಮುಂಜಾಲ್ ಮತ್ತು Buddy4study ಉದ್ಯೋಗಿಗಳು/ಗುತ್ತಿಗೆ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
B.com, BA Scholarship : ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್
- ಪ್ರಸ್ತುತ ಶೈಕ್ಷಣಿಕ ದಾಖಲಾತಿಯ ಪುರಾವೆ
- ಆದಾಯ ಪ್ರಮಾಣ ಪತ್ರ
- 10 ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು
- ಅರ್ಜಿದಾರರ ಲಿಂಕ್ಡ್ ಇನ್ ಪ್ರೊಫೈಲ್ ನ URL
- ಬ್ಯಾಂಕ್ ಪಾಸ್ ಪುಸ್ತಕ
- ಮೊಬೈಲ್ ನಂಬರ್
B.com, BA Scholarship : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳು
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
Step 1. ಅರ್ಹ ಅಭ್ಯರ್ಥಿಗಳು ರಾಮನ್ ಕಾಂತ್ ಮುಂಜಾಲ್ ವಿದ್ಯಾರ್ಥಿವೇತನದ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ. https://www.buddy4study.com/page/raman-kant-munjal-scholarships
Step 2. ತದನಂತರ Apply Now ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ, Create an Account ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.
Step 3. ನಂತರ Login ಬಟನ್ ಮೂಲಕ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಲಾಗಿನ್ ಆಗಬೇಕು ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step 4. ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಓನ್, ಕರ್ನಾಟಕ ಒನ್ ಅಥವಾ ಯಾವುದಾದರೂ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು.
B.com, BA Scholarship : ಈ ವಿದ್ಯಾರ್ಥಿ ವೇತನದಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ
- ಹಣಕಾಸಿನ ಬಾರಿ ನೆರವು : ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹40,000 ರಿಂದ ₹5,50,000 ವರೆಗೆ ಆರ್ಥಿಕ ಸಹಾಯ ದೊರೆಯುತ್ತದೆ. ಈ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- ಮೂರು ವರ್ಷಗಳ ನಿರಂತರ ಬೆಂಬಲ : ಪದವಿ ಶಿಕ್ಷಣದ ಅವಧಿಯಲ್ಲಿ, ಅಂದರೆ ಸತತ ಮೂರು ವರ್ಷಗಳವರೆಗೆ ಈ ವಿದ್ಯಾರ್ಥಿವೇತನದ ಸೌಲಭ್ಯ ಸಿಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಯಾವುದೇ ಅಡಚಣೆ ಇಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬಹುದು.
- ಶೈಕ್ಷಣಿಕ ವೆಚ್ಚಗಳ ಭರ್ತಿ : ಇದು ಕೇವಲ ಕಾಲೇಜು ಬೋಧನಾ ಶುಲ್ಕ (Tution fees) ಮಾತ್ರವಲ್ಲದೆ, ಪರೀಕ್ಷಾ ಶುಲ್ಕ, ಪುಸ್ತಕಗಳು, ಸ್ಟೇಷನರಿ ಮತ್ತು ಇತರ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.
- ಹಣಕಾಸು ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಆದ್ಯತೆ : ಬಿಕಾಂ, ಬಿಬಿಎ, ಬಿಎಂಎಸ್, ಬಿ ಎ ಎಕನಾಮಿಕ್ಸ್ ಅಂತಹ ಹಣಕಾಸು ಮತ್ತು ವಾಣಿಜ್ಯ ಆಧಾರಿತ ಕೋರ್ಸ್ ಗಳನ್ನು ಕಲಿಯುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ನೆರವಾಗುತ್ತದೆ.
- ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆ : ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಇರುವ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಥವಾ ಸಣ್ಣ ನಗರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಇದು ಉತ್ತಮ ಅವಕಾಶ ಕಲ್ಪಿಸುತ್ತದೆ.
- ಬಡತನದ ಕಾರಣದಿಂದಾಗಿ ವಿದ್ಯಾರ್ಥಿಗಳು ತಮ್ಮ ಕನಸಿನ ಉನ್ನತ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುತ್ತದೆ.
- ಅರ್ಜಿದಾರರ ವಯಸ್ಸು ಗರಿಷ್ಠ 20 ವರ್ಷಗಳ ಒಳಗೆ ಇರಬೇಕು.
- ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹6 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿಶೇಷ ಆದ್ಯತೆ : ಗ್ರಾಮೀಣ ಭಾಗದ (Tier 3 &Tier 4 ನಗರಗಳ) ವಿದ್ಯಾರ್ಥಿಗಳಿಗೆ, ರೈತರ ಮತ್ತು ದಿನಗೂಲಿ ಕಾರ್ಮಿಕರ ಮಕ್ಕಳಿಗೆ ಈ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ
B.com, BA Scholarship : ಆಯ್ಕೆ ವಿಧಾನ
- ಅರ್ಜಿಗಳ ಪರಿಶೀಲನೆ : ಅಂಕಗಳು ಮತ್ತು ಆದಾಯದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಪ್ರಬಂಧ ಬರೆಯುವುದು (Essay) : ವಿದ್ಯಾರ್ಥಿಗಳ ಆಲೋಚನೆ ಮತ್ತು ಉದ್ದೇಶವನ್ನು ತಿಳಿಯಲು ಪ್ರಬಂಧದ ಫಾರ್ಮ್ ತುಂಬ ಬೇಕಾಗುತ್ತದೆ.
- ದೂರವಾಣಿ ಸಂದರ್ಶನ (telephonic interview) : ಮೊದಲ ಸುತ್ತಿನಲ್ಲಿ ದೂರವಾಣಿ ಮೂಲಕ ಸಂದರ್ಶನ ನಡೆಸಲಾಗುತ್ತದೆ.
- ಅಂತಿಮ ಸಂದರ್ಶನ : ಮುಖಾಮುಖಿ ಅಥವಾ ವಿಡಿಯೋ ಕಾಲ್ ಮೂಲಕ ಅಂತಿಮ ಸುತ್ತಿನ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಇದೇ ರೀತಿಯ ವಿದ್ಯಾರ್ಥಿ ವೇತನ ಹಾಗೂ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಈ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ವಿದ್ಯಾರ್ಥಿ ವೇತನದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ
ಇದನ್ನು ಓದಿ
Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.
