Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.

Muskaan Scholarship 2026Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ, ದಾಖಲೆಗಳು, ಅರ್ಜಿ ವಿಧಾನ ಮತ್ತು ಅಕ್ಟೋಬರ್ 30 ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ. 

2026-27 ನೇ ಶೈಕ್ಷಣಿಕ ಸಾಲಿನಲ್ಲಿ 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ವಿದ್ಯಾರ್ಥಿ ವೇತನ ಅವಕಾಶ ಒಂದು ಲಭ್ಯವಿದೆ. Valvoline Cummins Private Ltd. (VCPL) ವತಿಯಿಂದ ನೀಡಲಾಗುವ Muskaan Scholarship Program 2.0 (2026-27) ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚಗಳಿಗಾಗಿ ₹12,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಕರ್ನಾಟಕ ಸೇರಿದಂತೆ ಆಯ್ದ ರಾಜ್ಯಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30 ಅಕ್ಟೋಬರ್ 2026 ಆಗಿದ್ದು, ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ Buddy4study ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು ? ಎಷ್ಟು ಹಣ ಸಿಗುತ್ತದೆ? ಯಾವ ದಾಖಲೆಗಳು ಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನು ಓದಿ

ಗದಗ ಜಿಲ್ಲಾ ನ್ಯಾಯಾಲಯ Recruitment: SSLC ಪಾಸಾದವರಿಗೆ ಸರ್ಕಾರಿ ಉದ್ಯೋಗಾವಕಾಶ – ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, important update 2026.

Muskaan Scholarship 2026 : ಮುಸ್ಕಾನ್ ವಿದ್ಯಾರ್ಥಿ ವೇತನ ಎಂದರೇನು? 

Muskaan Scholarship Program 2.0 (2026-27) ಅನ್ನು Valvoline Cummins Private Ltd. ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಗೆ ನೆರವಾಗುವ ಉದ್ದೇಶದಿಂದ ನಡೆಸುತ್ತಿದೆ.

ಈ ಕಾರ್ಯಕ್ರಮದಡಿ ಹಣಕಾಸಿನ ನೆರವಿನ ಜೊತೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ Mentorship Support ಕೂಡ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಸವಾಲುಗಳನ್ನು ಎದುರಿಸಲು, ಗುರಿಗಳನ್ನು ರೂಪಿಸಿಕೊಳ್ಳಲು ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಲು ಈ ಮಾರ್ಗದರ್ಶನ ಸಹಾಯ ಮಾಡುತ್ತದೆ.

ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ? 

ಈ ಕಾರ್ಯಕ್ರಮದ ಡಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ₹12,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ.

ಆದರೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ₹12,000 ಸಿಗುತ್ತದೆ ಎಂದಲ್ಲ. Buddy4study ನೀಡಿರುವ ಮಾಹಿತಿಯ ಪ್ರಕಾರ, ಹಣಕಾಸಿನ ನೆರವು ವಿದ್ಯಾರ್ಥಿಯ ನಿಜವಾದ ಶೈಕ್ಷಣಿಕ ವೆಚ್ಚಗಳ ಆಧಾರದ ಮೇಲೆ ನೀಡಲಾಗುತ್ತದೆ.

ಇದರ ಜೊತೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ Mentorship Support ಕೂಡ ದೊರೆಯಲಿದೆ.

Muskaan Scholarship 2026 : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

Muskaan Scholarship Program 2.0 (2026-27) ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಅಕ್ಟೋಬರ್ 2026.

ಕೊನೆಯ ದಿನದವರೆಗೆ ಕಾಯದೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

Muskaan Scholarship 2026: ಕರ್ನಾಟಕದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?

ಹೌದು . ಕರ್ನಾಟಕ ಈ ವಿದ್ಯಾರ್ಥಿ ವೇತನಕ್ಕೆ ಅರ್ಹವಾಗಿರುವ ರಾಜ್ಯಗಳ ಪಟ್ಟಿಯಲ್ಲಿದೆ.

ಈ ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಆಂಧ್ರ ಪ್ರದೇಶ
  • ಅರುಣಾಚಲ ಪ್ರದೇಶ
  • ಅಸ್ಸಾಂ
  • ಬಿಹಾರ
  • ಛತ್ತೀಸ್ಗಡ
  • ಜಾರ್ಖಂಡ್
  • ಕರ್ನಾಟಕ
  • ಕೇರಳ
  • ಮಣಿಪುರ
  • ಮೇಘಾಲಯ
  • ಮಿಜೋರಾಂ
  • ನಾಗಲ್ಯಾಂಡ್
  • ಒಡಿಸ್ಸಾ
  • ತ್ರಿಪುರ
  • ಪುದುಚೇರಿ
  • ಸಿಕ್ಕಿಂ
  • ತಮಿಳುನಾಡು
  • ತೆಲಂಗಾಣ
  • ಪಶ್ಚಿಮ ಬಂಗಾಳ

Muskaan Scholarship 2026: ಯಾರು ಅರ್ಜಿ ಸಲ್ಲಿಸಬಹುದು?

ಮುಸ್ಕಾನ್ ವಿದ್ಯಾರ್ಥಿ ವೇತನಕ್ಕೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

  1. ವಿದ್ಯಾರ್ಥಿಯು 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  2. ವಿದ್ಯಾರ್ಥಿಯು ಮೇಲಿನ ಪಟ್ಟಿಯಲ್ಲಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  3. ಅರ್ಜಿದಾರರು ಕೆಳಗಿನ ವರ್ಗಗಳಲ್ಲಿ ಒಂದಕ್ಕೆ ಸೇರಿರಬೇಕು. : 1. ವಾಣಿಜ್ಯ ವಾಹನ ಚಾಲಕರ ಮಕ್ಕಳು. 2. ಮೆಕಾನಿಕ್ ಗಳ ಮಕ್ಕಳು. Economically Weeker Sections (EWS) ವರ್ಗದ ವಿದ್ಯಾರ್ಥಿಗಳು.
  4. ಹಿಂದಿನ ತರಗತಿಯಲ್ಲಿ ಕನಿಷ್ಠ 60 % ಅಂಕಗಳನ್ನು ಪಡೆದಿರಬೇಕು.
  5. ಕುಟುಂಬದ ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ 8 ಲಕ್ಷ ಮೀರಿರಬಾರದು.
  6. Valvoline Cummins Private Ltd. (VCPL) & Buddy4study ಉದ್ಯೋಗಿಗಳ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ.

Muskaan Scholarship 2026 : ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

ವಿದ್ಯಾರ್ಥಿಯ ದಾಖಲೆಗಳು 

  • ಗುರುತಿನ ಪುರಾವೆ (ಆಧಾರ್ ಕಾರ್ಡ್)
  • ಪ್ರಸ್ತುತ ವರ್ಷದ ಪ್ರವೇಶ ಪುರಾವೆ
  • ಹಿಂದಿನ ತರಗತಿಯ ಅಂಕಪಟ್ಟಿ
  • ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
  • ವಿದ್ಯಾರ್ಥಿಯ ಸ್ವಂತ ಬ್ಯಾಂಕ್ ಖಾತೆಯ ವಿವರಗಳು

ಪ್ರಸ್ತುತ ವರ್ಷದ Admission Proof,Fee Receipt, Admission Letter, Institution ID, Bonafide certificate ಬಳಸಬಹುದು. ಹಿಂದಿನ ತರಗತಿಯ ಅಂಕಪಟ್ಟಿ ಸಹಿ ಮತ್ತು ಮುದ್ರೆಯೊಂದಿಗೆ ಇರಬೇಕೆಂದು ಅರ್ಜಿ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ

50 ಸಾವಿರ ಸ್ಕಾಲರ್ಶಿಪ್ 2026-27 : Infocepts Innovate For Impact Scholarship ಗೆ ಅರ್ಜಿ ಆಹ್ವಾನ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ Important update.

ಪೋಷಕರ ವೃತ್ತಿಗೆ ಸಂಬಂಧಿಸಿದ ದಾಖಲೆ 

ವಿದ್ಯಾರ್ಥಿಯು Commercial Driver OR Mechanic ಕುಟುಂಬದಿಂದ ಬಂದಿದ್ದರೆ, ಅದಕ್ಕೆ ಸಂಬಂಧಿಸಿದ ಪುರಾವೆ ನೀಡಬೇಕಾಗುತ್ತದೆ.

ಉದಾಹರಣೆಗೆ

  • Commercial Driving licence – ಚಾಲಕರ ಮಕ್ಕಳಿಗೆ
  • Shramik Card
  • ಉದ್ಯೋಗ ದಾತರಿಂದ ದೃಡೀಕರಣ
  • ಅಗತ್ಯವಿದ್ದಲ್ಲಿ ಅಧಿಕೃತವಾಗಿ ದೃಢೀಕರಿಸಿದ Self Declaration

ಕುಟುಂಬದ ಆದಾಯದ ಪುರಾವೆ 

ಕೆಳಗಿನವುಗಳಲ್ಲಿ ಅನ್ವಯಿಸುವ ದಾಖಲೆಗಳನ್ನು ಬಳಸಬಹುದು.

  • Grama Panchayat/Ward Councillor/Sarpanch ರಿಂದ ಆದಾಯ ಪ್ರಮಾಣ ಪತ್ರ
  • SDM/DM/Co/Tehsildar ರಿಂದ ಆದಾಯ ಪ್ರಮಾಣ ಪತ್ರ
  • ಕಳೆದ ಮೂರು ತಿಂಗಳ salary slip
  • Income tax return (ITR)

ವಿದ್ಯಾರ್ಥಿಯ ಸ್ವಂತ ಬ್ಯಾಂಕ್ ಖಾತೆ 

ಅರ್ಜಿದಾರರು ಈ ಅಂಶವನ್ನು ವಿಶೇಷವಾಗಿ ಗಮನಿಸಬೇಕು.

ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಯ ಸ್ವಂತ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.

ಪೋಷಕರು ಅಥವಾ Gurdian ಅವರ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದರೆ Scholarship Processing ಗೆ ಸ್ವೀಕರಿಸಲಾಗುವುದಿಲ್ಲ ಎಂದು ಕಾರ್ಯಕ್ರಮದ ಮಾಹಿತಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅವಕಾಶ 

ಕೆಲವು ವಿದ್ಯಾರ್ಥಿಗಳಿಗೆ ಕಾಲೇಜು ಅಥವಾ ಶಾಲೆಯ ಶುಲ್ಕವನ್ನು ಮೊದಲು ಪಾವತಿಸಿ Fee Receipt ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇರಬಹುದು.

ಅಂತಹ ಸಂದರ್ಭದಲ್ಲಿ ಸಂಸ್ಥೆಯಿಂದ ನೀಡುವ Fee letter ಅನ್ನು ಸಲ್ಲಿಸಿ Scholarship Amount ಅನ್ನು ಮುಂಗಡವಾಗಿ ಪಡೆಯುವ ಅವಕಾಶವಿದೆ. ನಂತರ ಅಂತಿಮ Fee Receipt ಅನ್ನು Online Scholar Tracking System ಮೂಲಕ ಸಲ್ಲಿಸಬೇಕಾಗುತ್ತದೆ.

Muskaan Scholarship 2026 : ಮುಸ್ಕಾನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step 1. ಅಧಿಕೃತ ಸ್ಕಾಲರ್ಶಿಪ್ ಪುಟಕ್ಕೆ ಭೇಟಿ ನೀಡಿ. https://www.buddy4study.com/page/muskaan-scholarship-program

Step 2. ಪುಟದಲ್ಲಿರುವ ” Apply Now “ಬಟನ್ ಮೇಲೆ ಕ್ಲಿಕ್ ಮಾಡಿ.

Step 3. ಈಗಾಗಲೇ Buddy4study ಖಾತೆ ಹೊಂದಿದ್ದರೆ , login ಮಾಡಿ. ಹೊಸ ಅರ್ಜಿದಾರರು email ID, Mobile number OR Google account ಬಳಸಿ account ಸೃಷ್ಟಿಸಬಹುದು.

Step 4. “Start Application ” ಮೇಲೆ ಕ್ಲಿಕ್ ಮಾಡಿ ಅರ್ಜಿ ಪ್ರಕ್ರಿಯೆ ಆರಂಭಿಸಿ.

Step 5. ಅರ್ಜಿ ನಮೂನೆಯಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.

Step 6. ಕೇಳಲಾಗಿರುವ ದಾಖಲೆಗಳನ್ನು ಸರಿಯಾದ ರೂಪದಲ್ಲಿ ಅಪ್ಲೋಡ್ ಮಾಡಿ.

Step 7. Terms and conditions ಒಪ್ಪಿಕೊಂಡು preview ಆಯ್ಕೆಯ ಮೂಲಕ ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ.

Step 8. ಎಲ್ಲಾ ವಿವರಗಳು ಸರಿಯಾಗಿದ್ದರೆ , Submit ಬಟನ್ ಕ್ಲಿಕ್ ಮಾಡಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.

Muskaan Scholarship 2026: ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇದೆಯೇ ?

ಇಲ್ಲ. Muskaan Scholarship Program ಗೆ ಅರ್ಜಿ ಸಲ್ಲಿಸುವ ಅಥವಾ ಆಯ್ಕೆ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಅರ್ಜಿದಾರರಿಂದ ಶುಲ್ಕ ವಸೂಲಿ ಮಾಡಲಾಗುವುದಿಲ್ಲ.

ಯಾರಾದರೂ ಸ್ಕಾಲರ್ಶಿಪ್ ಕೊಡಿಸುವುದಾಗಿ ಹೇಳಿ ಹಣ ಕೇಳಿದರೆ ಎಚ್ಚರಿಕೆಯಿಂದ ಇರಿ.

ವಿದ್ಯಾರ್ಥಿ ವೇತನದ ಹಣವನ್ನು ಯಾವುದಕ್ಕೆ ಬಳಸಬಹುದು? 

ಈ ವಿದ್ಯಾರ್ಥಿ ವೇತನದ ಹಣವು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಗಳಿಗೆ ನೆರವಾಗುವ ಉದ್ದೇಶ ಹೊಂದಿದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ₹12,000 ವರೆಗೆ grant ನೀಡಲಾಗುತ್ತದೆ ಮತ್ತು ಮೊತ್ತವು ನಿಜವಾದ Academic Expenses ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.

ಇದೇ ರೀತಿಯ ವಿದ್ಯಾರ್ಥಿ ವೇತನ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

Aditya Birla Scholarship 2026-27 : ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್, ಅರ್ಜಿ ಲಿಂಕ್ Important update.

 

 

 

 

 

Leave a Comment