Shivamogga Zilla Panchayat Recruitment: ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ. ಜಿಲ್ಲಾ ಪಂಚಾಯತ್ ಹುದ್ದೆಗಳ ನೇಮಕಾತಿ ವಿವರ ಇಲ್ಲಿದೆ. Important update.

WhatsAppಫಾಲೋ ಮಾಡಿ

Shivamogga Zilla Panchayat RecruitmentShivamogga Zilla Panchayat Recruitment : ಶಿವಮೊಗ್ಗ ಜಿಲ್ಲಾ ಪಂಚಾಯಿತಿನಲ್ಲಿ 52 ಹುದ್ದೆ- ಬಿಲ್ ಕಲೆಕ್ಟರ್, ಕ್ಲರ್ಕ್-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 25 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ, ವಯೋಮಿತಿ, ದಾಖಲೆಗಳು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಅರ್ಜಿ ಸಲ್ಲಿಕೆ ಆಗಸ್ಟ್ 27ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನ ಸೆಪ್ಟೆಂಬರ್ 25 2026. ಪಿಯುಸಿ ಅಥವಾ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹುದ್ದೆಗಳು ಜಿಲ್ಲೆಯ 7 ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಭರ್ತಿಯಾಗಲಿವೆ. ಗ್ರಾಮೀಣ ಯುವಕರಿಗೆ ಸ್ಥಳೀಯವಾಗಿ ಸರ್ಕಾರಿ ಸೇವೆ ಸೇರುವ ಅವಕಾಶವಿದ್ದು, ಅರ್ಜಿ ವಿಳಾಸ, ರೋಸ್ಟರ್, ಕಂಪ್ಯೂಟರ್ ಪ್ರಮಾಣ ಪತ್ರ ಮುಂತಾದ ವಿವರಗಳು ಅಧಿಸೂಚನೆಯಲ್ಲಿ ಬದಲಾಗಬಹುದು. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆಯನ್ನು ಪೂರ್ತಿಯಾಗಿ ಓದುವುದು ಅಗತ್ಯ.

ಇದನ್ನು ಓದಿ

Labour Card Scholarship 2026 : ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ , ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. Important update.

Shivamogga Zilla Panchayat Recruitment : ನೇಮಕಾತಿ ವಿವರ 

  • ಸಂಸ್ಥೆ : ಜಿಲ್ಲಾ ಪಂಚಾಯತ್ ಶಿವಮೊಗ್ಗ.
  • ಹುದ್ದೆಗಳು : ಬಿಲ್ ಕಲೆಕ್ಟರ್ 21, ಕ್ಲರ್ಕ್-ಡೇಟಾ ಎಂಟ್ರಿ ಆಪರೇಟರ್ 31, ಒಟ್ಟು ಹುದ್ದೆಗಳು 52.
  • ಕೆಲಸದ ಸ್ಥಳ : ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳು.
  • ವೇತನ : ಕರ್ನಾಟಕ ಸರ್ಕಾರದ ನಿಯಮ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿಯಮಗಳ ಪ್ರಕಾರ. ಅಂದಾಜು ವೇತನ 30,000 ವರೆಗೆ ಇರಬಹುದು.

 

ಬಿಲ್ ಕಲೆಕ್ಟರ್ ಕೆಲಸ ಮಾಡುವವರು ನೀರು, ಆಸ್ತಿ ತೆರಿಗೆ ಮತ್ತು ಇತರೆ ಬಾಕಿ ವಸೂಲಿ ರಶೀದಿ ನೀಡುವ ಕೆಲಸವನ್ನು ನಿರ್ವಹಣೆ ಮಾಡಬೇಕು.

ಕ್ಲರ್ಕ್-ಡೇಟಾ ಎಂಟ್ರಿ ಆಪರೇಟರ್ ಕೆಲಸ ಮಾಡುವವರು ಕಚೇರಿ ಪತ್ರ ವ್ಯವಹಾರ, ಕಂಪ್ಯೂಟರ್ನಲ್ಲಿ ದಾಖಲೆ ಅಪ್ಲೋಡ್ ಮಾಡುವುದು, ಪಂಚಾಯತ್ ಸಾಫ್ಟ್ವೇರ್ ನಿರ್ವಹಣೆ ಕೆಲಸವನ್ನು ಮಾಡಬೇಕಾಗುತ್ತದೆ.

ಎರಡು ಹುದ್ದೆಗಳು ಗ್ರಾಮಮಟ್ಟದ ಆಡಳಿತಕ್ಕೆ ನೇರ ಸಂಬಂಧ ಹೊಂದಿದೆ.

ಇದನ್ನು ಓದಿ

Swavalambi Saarathi Yojana 2026 : ಸ್ವಾವಲಂಬಿ ಸಾರಥಿ ಯೋಜನೆ, ವಾಹನ ಖರೀದಿಗೆ 3 ಲಕ್ಷ ರೂ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ. Important update.

Shivamogga Zilla Panchayat Recruitment : ಅರ್ಹತೆ 

ಶೈಕ್ಷಣಿಕ ಅರ್ಹತೆ

  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ (ಪಿಯುಸಿ) ಅಥವಾ ಸಮಾನ ಡಿಪ್ಲೋಮಾ ಪೂರ್ಣಗೊಂಡಿರಬೇಕು.
  • ಡೇಟಾ ಎಂಟ್ರಿ ಹುದ್ದೆಗೆ ಸಾಮಾನ್ಯವಾಗಿ ಮೂರು ತಿಂಗಳ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.
  • ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

 

Shivamogga Zilla Panchayat Recruitment : ವಯೋಮಿತಿ 

  • ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ.
  • 2A,2B,3A,3B ವರ್ಗಕ್ಕೆ ಮೂರು ವರ್ಷಗಳ ಸಡಿಲಿಕೆ ಇದೆ.
  • SC, ST, ಪ್ರವರ್ಗ -1 ಕುಕ್ಕೆ ಐದು ವರ್ಷಗಳ ಸಡಿಲಿಕೆ ಇದೆ.
  • ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
  • ಮಹಿಳಾ ಅಥವಾ ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಅಧಿಸೂಚನೆಯಂತೆ ಅನ್ವಯ.

Shivamogga Zilla Panchayat Recruitment : ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ.

  • SC, ST ಅಭ್ಯರ್ಥಿಗಳಿಗೆ ರೂ 50
  • ಇತರ ಅಭ್ಯರ್ಥಿಗಳಿಗೆ ರೂ 100
  • ಪಾವತಿಯ ವಿಧಾನ ಡಿಮ್ಯಾಂಡ್ ಡ್ರಾಫ್ಟ್ (DD)
  • ಡಿಡಿ ಯಾರ ಹೆಸರಿಗೆ, ಯಾವ ಬ್ಯಾಂಕ್ ನಲ್ಲಿ ತೆಗೆಯಬೇಕು ಎಂಬುದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುತ್ತದೆ.
  • ಡಿಡಿ ತಪ್ಪಾಗಿದ್ದರೆ ಅರ್ಜಿ ತಿರಸ್ಕರಿಸಬಹುದಾದ ಸಾಧ್ಯತೆಗಳಿರುತ್ತವೆ.

ಆಯ್ಕೆ

  • ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ.
  • ತದನಂತರದಲ್ಲಿ ಮೂಲ ದಾಖಲೆ ಪರಿಶೀಲನೆ ನಡೆಯುತ್ತದೆ.
  • ಅಂಕಗಳು ಸಮಾನವಾದರೆ ವಯಸ್ಸು, ಮೀಸಲಾತಿ ಮತ್ತು ಅಧಿಸೂಚನೆಯಲ್ಲಿ ಹೇಳಿರುವ ಇತರ ಮಾನದಂಡ ಅನ್ವಯಿಸುತ್ತದೆ.

ಇದನ್ನು ಓದಿ

KSRLPS ಉಡುಪಿ ಜಿಲ್ಲಾ ನೇಮಕಾತಿ 2026 : ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. IMPORTANT Update.

Shivamogga Zilla Panchayat Recruitment : ಅರ್ಜಿ ಸಲ್ಲಿಸುವುದು ಹೇಗೆ?
  1. ಅರ್ಜಿ ಆಫ್ ಲೈನ್, ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಬೇಕು.
  2. ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಡೌನ್ಲೋಡ್ ಮಾಡಿ.
  3. ವೈಯಕ್ತಿಕ, ಶೈಕ್ಷಣಿಕ, ಮೀಸಲಾತಿ ವಿವರ ಸರಿಯಾಗಿ ಭರ್ತಿ ಮಾಡಿ.
  4. ಎಸ್ ಎಸ್ ಎಲ್ ಸಿ/ಪಿಯುಸಿ ಅಂಕಪಟ್ಟಿ, ಜನ್ಮ ದಿನಾಂಕ ಪುರಾವೆ, ಜಾತಿ/ಆದಾಯ ಪ್ರಮಾಣ ಪತ್ರ, ಫೋಟೋ, ಕಂಪ್ಯೂಟರ್ ಪ್ರಮಾಣ ಪತ್ರ ಹಾಗೂ ಸ್ವಯಂ ದೃಢೀಕೃತ ಪ್ರತಿಯನ್ನು ಲಗತ್ತಿಸಿ.
  5. ನಿಗದಿತ ಶುಲ್ಕದ ಡಿ ಡಿ ಜೊತೆಗೆ ಸೆಪ್ಟೆಂಬರ್ 25ರೊಳಗೆ ತಲುಪುವಂತೆ ಕಳುಹಿಸಿ. ಲಕೋಟೆಯ ಮೇಲೆ ಹುದ್ದೆಯ ಹೆಸರು ಬರೆಯಿರಿ.
  6. ಈ ಅರ್ಜಿ ಬರೆಯಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಗೆ ಸಂಪರ್ಕಿಸಿ ಅಲ್ಲಿ ಮಾಹಿತಿಯನ್ನು ಪಡೆದು ಅರ್ಜಿಯನ್ನು ಬರೆದು ಸಲ್ಲಿಸಿ.

ಕೆಲವು ಪ್ರಕಟಣೆಗಳಲ್ಲಿ ಬೆಂಗಳೂರಿನ ಬಹು ಮಹಡಿ ಕಟ್ಟಡದ ವಿಳಾಸ ಕಾಣಿಸುತ್ತದೆ. ಆದರೆ ಜಿಲ್ಲಾ ಮಟ್ಟದ ನೇಮಕಾತಿಯಲ್ಲಿ ಸಾಮಾನ್ಯವಾಗಿ ಅರ್ಜಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ, ಕುವೆಂಪು ರಸ್ತೆ ಶಿವಮೊಗ್ಗ. ಅಥವಾ ಅಧಿಸೂಚನೆಯಲ್ಲಿ ಹೇಳಿರುವ ಅಧಿಕಾರಿಗೆ ಈ ಅರ್ಜಿಯನ್ನು ಸಲ್ಲಿಸಬೇಕು. ತಪ್ಪು ವಿಳಾಸಕ್ಕೆ ಕಳುಹಿಸಿದರೆ ಅರ್ಜಿ ತಿರಸ್ಕಾರ ವಾಗುವ ಸಾಧ್ಯತೆಗಳಿವೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿ, ಕುವೆಂಪುರ ರಸ್ತೆ, ಶಿವಮೊಗ್ಗ (ದೂರವಾಣಿ 08182-267207) ಸಂಪರ್ಕಿಸಬಹುದು.

Shivamogga Zilla Panchayat Recruitment : ಪ್ರಮುಖ ದಿನಾಂಕಗಳು 
  • ಅರ್ಜಿ ಪ್ರಾರಂಭ ದಿನಾಂಕ ಆಗಸ್ಟ್ 27 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25 2026

ಅಧಿಕೃತ ವೆಬ್ಸೈಟ್ : ಅಧಿ ಸೂಚನೆ ನೋಡಲು ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ.

https://shivamogga.nic.in/en/notice_category/recruitme

ಯಾವುದೇ ರೀತಿಯ ನಕಲಿ ದಾಖಲೆ ಪತ್ತೆಯಾದರೆ ಅರ್ಜಿ ರದ್ದಾಗುವ ಸಾಧ್ಯತೆ ಇರುತ್ತದೆ. ತಾಲೂಕುವಾರು ಹುದ್ದೆ ಪಟ್ಟಿ ಮತ್ತು ಮೀಸಲಾತಿ ನೋಡಿ, ನಿಗದಿತ ನಮೂನೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಿ.. ಕೊನೆಯ ದಿನದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸಲು ಸಿದ್ಧತೆಯನ್ನು ಮಾಡಿಕೊಳ್ಳಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಯನ್ನು ಮಾಡಿಕೊಳ್ಳಿ. ಆದಷ್ಟು ಅರ್ಹತೆ ಇರುವ ಜನರಿಗೆ ಶೇರ್ ಮಾಡಿ. ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ, ನಿರಂತರವಾದ ಅಪ್ಡೇಟ್ಗಳು ನಮ್ಮ ವಾಟ್ಸಪ್ ಗ್ರೂಪ್ ಮೂಲಕ ಪ್ರತಿದಿನ ನಿಮಗೆ ತಲುಪುತ್ತದೆ. ಪಿಯುಸಿ ಪಾಸಾಗಿ ಮನೆಯಲ್ಲಿಯೇ ಕುಳಿತಂತಹ ಶಿವಮೊಗ್ಗ ಸ್ಥಳೀಯ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮವಾದ ಅವಕಾಶವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಅಥವಾ ಅಭ್ಯರ್ಥಿಗಳಿಗೆ ಈ ಪೋಸ್ಟನ್ನು ಶೇರ್ ಮಾಡುವ ಮೂಲಕ ಅರ್ಜಿ ನೋಂದಣಿ ಮಾಡಲು ಹೇಳಿ.

ಇದನ್ನು ಓದಿ

Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.

ಇದನ್ನು ಓದಿ

India Post Direct Selection 2026 : ಇಂಡಿಯಾ ಪೋಸ್ಟ್ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000+ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇರ Important update.

Leave a Comment