Karnataka Drought Declaration 2026: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ, ಬರಪೀಡಿತ ತಾಲೂಕುಗಳ ಘೋಷಣೆ, ರೈತರಿಗೆ ಸಿಗುವ ಬೆಳೆ ಹಾನಿ ಪರಿಹಾರ ಹಾಗೂ ಸರ್ಕಾರದ ಪ್ರಮುಖ ಕ್ರಮಗಳ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ತೀವ್ರ ಮಳೆ (rainfall deficit) ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿದೆ.
ಈ ತಿಂಗಳ ಅಂತ್ಯದ ವೇಳೆಗೆ ಬರಪೀಡಿತ ತಾಲೂಕುಗಳನ್ನು (Drought Hit Taluks) ಅಧಿಕೃತವಾಗಿ ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ (Farmer Compensation)ಒದಗಿಸಲು ಸರ್ಕಾರ ತೀರ್ಮಾನಿಸಿದೆ.
Karnataka Drought Declaration 2026: ಬರ ಘೋಷಣೆಗೆ ತೀರಾ ಅಂತ್ಯದವರೆಗೆ ಕಾಯುತ್ತಿರುವುದು ಏಕೆ?
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಈಗಲೇ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದರೆ ಕೆಲವು ತಾಲೂಕುಗಳು ಪಟ್ಟಿಯಿಂದ ಕೈ ಬಿಟ್ಟು ಹೋಗುವ ಅಪಾಯವಿದೆ.
ಹೀಗಾಗಿ ನಿಖರವಾದ ಮಾಹಿತಿಯೊಂದಿಗೆ (accurate data) ತಿಂಗಳ ಕೊನೆಗೆ ಬರ ಘೋಷಣೆ ಮಾಡೋಣ ಎಂದು ತಿಳಿಸಿದ್ದಾರೆ. ಇದಕ್ಕೆ ಸಂಪುಟದ ಇತರ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನು ಓದಿ
Karnataka Drought Declaration 2026: ರಾಜ್ಯದ ಪ್ರಸ್ತುತ ಜಲ ಮತ್ತು ಮಳೆಯ ಪರಿಸ್ಥಿತಿ.
ರಾಜ್ಯದಲ್ಲಿ ಈ ಬಾರಿ ಶೇಕಡ 60ರಷ್ಟು ಮಳೆ ಕೊರತೆಯಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ ಸ್ಥಿತಿಗತಿ ಹೀಗಿದೆ.
- ಮಳೆ ಕೊರತೆ: ಒಟ್ಟು 178 ತಾಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದ್ದು ಮಲೆನಾಡಿನಲ್ಲಿ ಶೇ. 43 ಹಾಗೂ ಕರಾವಳಿಯಲ್ಲಿ ಶೇ.35 ರಷ್ಟು ಮಳೆ ಕಡಿಮೆಯಾಗಿದೆ. ಕೇವಲ 158 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
- ಗಂಭೀರ ಪರಿಸ್ಥಿತಿ: 20 ತಾಲೂಕುಗಳಲ್ಲಿ ಮಳೆಯಾಗಿಲ್ಲ. ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ ಪರಿಸ್ಥಿತಿಯ ಅತ್ಯಂತ ಗಂಭೀರವಾಗಿದೆ.
- ಜಲಾಶಯಗಳ ಸ್ಥಿತಿ: ರಾಜ್ಯದ ಪ್ರಮುಖ ಆಣೆಕಟ್ಟುಗಳಲ್ಲಿ ಕೇವಲ ಶೇಕಡ 40ರಷ್ಟು ಮಾತ್ರ ನೀರು ಸಂಗ್ರಹವಿದೆ. ಜಲವಿದ್ ಜಲಾಶಯಗಳಲ್ಲಿ ಇದು ಕೇವಲ ಶೇಕಡ 23ರಷ್ಟಿದೆ.
- ಕೆರೆಗಳ ಒಡಲು ಬರಿದು: 3,235 ಸಣ್ಣ ನೀರಾವರಿ ಕೆರೆಗಳು ಹಾಗೂ 32,504 ಜಿಲ್ಲಾ ಪಂಚಾಯಿತಿ ಕೆರೆಗಳ ಪೈಕಿ ಬಹುಪಾಲು ಶೇಕಡ 50ಕ್ಕಿಂತ ಕಡಿಮೆ ನೀರು ಹೊಂದಿದೆ.
ರೈತರಿಗೆ ಸಿಎಂ ಮನವಿ: ಜಲಾಶಯಗಳಲ್ಲಿ ನೀರಿಲ್ಲದ ಕಾರಣ ಈಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ. ಹಾಗಾಗಿ ಅಣೆಕಟ್ಟಿನ ನೀರಿನ ಭರವಸೆಯ ಮೇಲೆ ರೈತರು ಬೆಳೆ ಹಾಕಬಾರದೆಂದು ಸಿಎಂ ಮನವಿ ಮಾಡಿದ್ದಾರೆ.
ಇದನ್ನು ಓದಿ
Karnataka Drought Declaration 2026: ಕುಡಿಯುವ ನೀರು ಮತ್ತು ಅನುದಾನ ಬಿಡುಗಡೆ.
ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಈಗಾಗಲೇ ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.
- ಅನುದಾನ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೋಟಿ ರೂ ನಂತೆ 379 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
- ಹೆಚ್ಚುವರಿ ಹಣ: ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ಹೆಚ್ಚುವರಿ ಯಾಗಿ ಮತ್ತೊಂದು ಒಂದು ಕೋಟಿ ರೂಪಾಯಿ ನೀಡಲಾಗುತ್ತದೆ. ಶಾಸಕರ ನೇತೃತ್ವದಲ್ಲಿ ಈ ಹಣವನ್ನು ಸಮರ್ಪಕವಾಗಿ ಬಳಸಲು ಸೂಚಿಸಲಾಗಿದೆ.
- ಕೇಂದ್ರದ ನೆರವು: ಕೇಂದ್ರ ಸರ್ಕಾರಕ್ಕೆ ಮುಂದಿನ 15 ದಿನಗಳಲ್ಲಿ ಬರ ಪರಿಸ್ಥಿತಿಯ ವರದಿ ಸಲ್ಲಿಸಲು ನಿರ್ಧರಿಸಲಾಗಿದ್ದು ಕೇಂದ್ರದ ತಂಡ ಭೇಟಿ ನೀಡಿದಾಗ ನಿಖರ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನು ಓದಿ
Karnataka Drought Declaration 2026 : ಅಧಿಕಾರಿಗಳಿಗೆ ಸರ್ಕಾರದ ಖಡಕ್ ಸೂಚನೆಗಳು
ಬರ ನಿರ್ವಹಣೆಯಲ್ಲಿ ಯಾವುದೋ ಲೋಪ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
- ನಕಲಿ ಬಿಲ್ ಗಳಿಗೆ ಬ್ರೇಕ್; ಗುತ್ತಿಗೆದಾರರ ಹಳೆಯ ಕಾಮಗಾರಿಗಳಿಗೆ ಹೊಸ ಬಿಲ್ ಮಾಡಿದರೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.
- ವಿಡಿಯೋ ಕಡ್ಡಾಯ: ಹೊಸದಾಗಿ ಕೊಳವೆ ಬಾವಿ ಕೊರೆಯಿಸುವಾಗ ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯ.
- ರೈತರ ಹಿತರಕ್ಷಣೆ: ಸಣ್ಣ ಮತ್ತು ಅತಿ ಸಣ್ಣ ರೈತರ ( small and marginal formers) ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ.
- ಗುಳೆ ತಡೆ (preventing migration): ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಶುರು ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಮೂಲಕ ಜನರು ಕೆಲಸ ಆರಸಿ, ಬೇರೆಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕು.
Karnataka Drought Declaration 2026: ಯಾವ ಯಾವ ರೈತರಿಗೆ ಏನೇನು ಪರಿಹಾರ ಸಿಗಲಿದೆ?
ಕಳೆದ 2023ರಲ್ಲಿ ತೀವ್ರ ಬರ ಉಂಟಾದಾಗ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಆ ಸಮಯದಲ್ಲಿ ಗರಿಷ್ಠ ಐದು ಎಕರೆ ಜಮೀನಿನ ಮಿತಿಯೊಳಗೆ ರೈತರಿಗೆ ಈ ಕೆಳಗಿನಂತೆ ಬೆಳೆ ಆನೆ ಪರಿಹಾರವನ್ನು ನೀಡಲಾಗಿತ್ತು. ಈ ಬಾರಿಯೂ ಇದೇ ಮಾದರಿಯ ಪರಿಹಾರ ಸಿಗುವ ನಿರೀಕ್ಷೆ ಇದೆ.
- ಮಳೆಯಾಶ್ರಿತ ಜಮೀನು : ₹8500
- ನೀರಾವರಿ ಜಮೀನು : ₹17000
- ಬಹು ವಾರ್ಷಿಕ ತೋಟಗಾರಿಕೆ ಬೆಳೆ: ₹22,500
ಒಟ್ಟಾರೆಯಾಗಿ, ಮಳೆ ಕೊರತೆಯಿಂದ ಕಂಗಲಾಗಿರುವ ಅನ್ನದಾತರಿಗೆ ನೆರವಾಗಲು ರಾಜ್ಯ ಸರ್ಕಾರವು ಸಮೀಕ್ಷೆಯನ್ನು ಚುರುಕುಗೊಳಿಸಿದೆ. ಮುಂಬರುವ ಕೆಲವೇ ವಾರಗಳಲ್ಲಿ ಅಧಿಕೃತವಾಗಿ ಬರ ಘೋಷಣೆ ಆಗಲಿದ್ದು, ಪರಿಹಾರ ಪ್ಯಾಕೇಜ್ ಕುರಿತ ಸ್ಪಷ್ಟ ಚಿತ್ರಣ ರೈತರಿಗೆ ಸಿಗಲಿದೆ.
ಇದನ್ನು ಓದಿ
Karnataka Drought Declaration 2026: ಬರ ಘೋಷಣೆ ರೈತರಿಗೆ ಎಷ್ಟು ಮುಖ್ಯ?
ಬರ ಘೋಷಣೆ ರೈತರಿಗೆ ಅತ್ಯಂತ ಮುಖ್ಯವಾಗಿದೆ. ಮಳೆ ಕೊರತೆಯಿಂದ ಬೆಳೆಗಳು ಹಾನಿಗೊಳಗಾದಾಗ ಸರ್ಕಾರ ಒಂದು ಪ್ರದೇಶವನ್ನು ಬರಪೀಡಿತ ಎಂದು ಘೋಷಿಸುತ್ತದೆ. ಈ ಘೋಷಣೆಯಿಂದ ರೈತರಿಗೆ ವಿವಿಧ ರೀತಿಯ ನೆರವು ಮತ್ತು ಸೌಲಭ್ಯಗಳು ದೊರೆಯುತ್ತವೆ.
ಬೆಳೆ ಹಾನಿಗೆ ಪರಿಹಾರ ಧನ, ಕೃಷಿ ಸಾಲ ಮರುಪಾವತಿಗೆ ಅವಧಿ ವಿಸ್ತರಣೆ, ಬಡ್ಡಿ ದರದಲ್ಲಿ ರಿಯಾಯಿತಿ ಹಾಗೂ ಕೆಲ ಸಂದರ್ಭಗಳಲ್ಲಿ ಸಾಲ ಮನ್ನಾದಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ.
ಜೊತೆಗೆ ಮೇವು, ಕುಡಿಯುವ ನೀರು, ಬೀಜ ಮತ್ತು ರಸಗೊಬ್ಬರಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಿಂದ ರೈತರ ಆರ್ಥಿಕ ಸಂಕಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಮತ್ತು ಮುಂದಿನ ಹಂಗಾಮಿನಲ್ಲಿ ಮತ್ತೆ ಕೃಷಿ ಆರಂಭಿಸಲು ಧೈರ್ಯ ಸಿಗುತ್ತದೆ.
ಬರ ಘೋಷಣೆ ರೈತರ ಜೀವನೋಪಾಯ ವನ್ನು ರಕ್ಷಿಸುವುದರ ಜೊತೆಗೆ ಕೃಷಿ ಕ್ಷೇತ್ರದ ಸ್ಥಿರತೆಯನ್ನು ಕಾಪಾಡಲು ಸಹ ಸಹಕಾರಿಯಾಗಿದೆ. ಆದ್ದರಿಂದ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಯೋಚಿತ ಬರ ಘೋಷಣೆ ಮತ್ತು ಪರಿಣಾಮಕಾರಿ ಪರಿಹಾರ ಕ್ರಮಗಳು ಅತ್ಯಗತ್ಯವಾಗಿದೆ.
ಬರ ಘೋಷಣೆ ಆದನಂತರ ಆದ ನಂತರ ಸರ್ಕಾರದ Official website ನಲ್ಲಿ ಅಪ್ ಡೇಟ್ ಆಗುತ್ತದೆ.
ಇದನ್ನು ಓದಿ
ನವೋದಯ ವಿದ್ಯಾಲಯ ಪ್ರವೇಶ 2027 : Important 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ