Ramanagara Court Stenographer Recruitment : ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ (Stenographer) ಹುದ್ದೆಗಳ ನೇಮಕಾತಿಯ ಅಧಿಸೂಚನೆ 2026 ಪ್ರಕಟವಾಗಿದೆ. ಅರ್ಹತೆ, ವೇತನ ಶ್ರೇಣಿ, ವಯೋಮಿತಿ ಸಡಿಲಿಕೆ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳನ್ನು ಈಗಲೇ ಓದಿ.
ನೀವು ಕೌಶಲ್ಯ ದಾರಿತ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ. ಕರ್ನಾಟಕ ಸರ್ಕಾರದ ನ್ಯಾಯಾಂಗ ಇಲಾಖೆಯಡಿ ಬರುವ ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರ ಗ್ರೇಡ್-3 (Stenographer Grade -|||) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ (Notification No.ADM/18/2026) ಹೊರಬಿದ್ದಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ರಾಮನಗರ ಜಿಲ್ಲಾ ನ್ಯಾಯಾಲಯದ ಸ್ಟೆನೋಗ್ರಾಫರ್, ನೇಮಕಾತಿಯ ಪ್ರಮುಖ ದಿನಾಂಕಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Ramanagara Court Stenographer Recruitment: ಪ್ರಮುಖ ವಿವರಗಳು
- ಇಲಾಖೆಯ ಹೆಸರು : ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Ramanagara District Court)
- ಹುದ್ದೆಯ ಹೆಸರು : ಶೀಘ್ರ ಲಿಪಿಗಾರ ಗ್ರೇಡ್ -3 (Stenographer Grade -|||)
- ಒಟ್ಟು ಹುದ್ದೆಗಳು : 03
- ಉದ್ಯೋಗ ಸ್ಥಳ : ರಾಮನಗರ, ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online)
ಪ್ರಮುಖ ದಿನಾಂಕಗಳು (Important Dates)
Ramanagara Court Stenographer Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ.
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಅಕ್ಟೋಬರ್ 30, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 30, 2026 (ರಾತ್ರಿ 11:59ರವರೆಗೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 1, 2026.
Ramanagara Court Stenographer Recruitment : ಶೈಕ್ಷಣಿಕ ಅರ್ಹತೆ
Ramanagara Court Stenographer Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇವಲ ಪಿಯುಸಿ ಪಾಸ್ ಆಗಿದ್ದರೆ ಸಾಲದು. ಅದರೊಂದಿಗೆ ತಾಂತ್ರಿಕ ಅರ್ಹತೆ ಇರಬೇಕಾಗುತ್ತದೆ.
- ಪಿಯುಸಿ (PUC) : ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಶೀಘ್ರ ಲಿಪಿ ಮತ್ತು ಬೆರಳಚ್ಚು ಅರ್ಹತೆ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಹಿರಿಯ ದರ್ಜೆ (Senior Grade) ಶೀಘ್ರ ಲಿಪಿ (Shorthand) ಹಾಗೂ ಬೆರಳಚ್ಚು (Typewriting) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ (Age Limit & Relaxation)
Ramanagara Court Stenographer Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆ ವಿವರಗಳು ಹೀಗಿವೆ. (ವಯಸ್ಸನ್ನು ಲೆಕ್ಕ ಹಾಕಲು ಕೊನೆಯ ದಿನಾಂಕ 30 ನವೆಂಬರ್ 2026)
- ಸಾಮಾನ್ಯ ವರ್ಗ (General Merit) : ಗರಿಷ್ಠ 35 ವರ್ಷ .
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 38 ವರ್ಷಗಳು (ಮೂರು ವರ್ಷಗಳ ಸಡಿಲಿಕೆ )
- SC, ST, ಪ್ರವರ್ಗ 1 ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷಗಳು (5 ವರ್ಷಗಳ ಸಡಿಲಿಕೆ)
- ವಿಶೇಷ ಅಭ್ಯರ್ಥಿಗಳಿಗೆ (ವಿಧವೆಯರು ಮತ್ತು ವಿಕಲಚೇತನರು) : ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳವರೆಗೆ ಹೆಚ್ಚುವರಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ (Salary Details)
ಆಯ್ಕೆಯಾಗುವ ಶೀಘ್ರ ಲಿಪಿಕಾರ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ನಿಯಮಗಳ ಪ್ರಕಾರ ಅತ್ಯುತ್ತಮ ವೇತನ ದೊರೆಯಲಿದೆ.
- ಮಾಸಿಕ ವೇತನ : ₹44,425 ರಿಂದ ₹83,700 (ಇದರೊಂದಿಗೆ ನಿಯಮಾನುಸಾರ ಮನೆ ಬಾಡಿಗೆ ಭತ್ಯೆ, ತುಟಿ ಭತ್ಯೆ ಮತ್ತು ಇತರ ಸವಲತ್ತುಗಳು ಸಿಗಲಿದೆ.)
ಅರ್ಜಿ ಶುಲ್ಕ (Application Fee)
Ramanagara Court Stenographer Recruitment ಗೆ ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಗೇಟ್ವೇ ಅಥವಾ ಎಸ್ ಬಿ ಐ ಚಲನ್ ಮೂಲಕ ಪಾವತಿಸಬೇಕು.
- ಸಾಮಾನ್ಯ ವರ್ಗ (General) : ₹200
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ₹100
- SC, ST, ಪ್ರವರ್ಗ -1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಸಂಪೂರ್ಣ ವಿನಾಯಿತಿ)
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)
Ramanagara Court Stenographer Recruitment ಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ ಆಯ್ಕೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ.
- ಶೀಘ್ರ ಲಿಪಿ ಕೌಶಲ್ಯ ಪರೀಕ್ಷೆ (Shorthand Skill Test) : ಅಭ್ಯರ್ಥಿಗಳಿಗೆ ನಿಮಿಷಕ್ಕೆ 120 ಪದಗಳ ವೇಗದಲ್ಲಿ ಡಿಕ್ಟೇಶನ್ ನೀಡಲಾಗುತ್ತದೆ. ಇದನ್ನು ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಟ್ರಾನ್ಸ್ಕ್ರಿಪ್ಟ್ ಮಾಡಬೇಕಾಗುತ್ತದೆ. (ಗರಿಷ್ಠ ಅಂಕಗಳು 100, ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳಿಸಬೇಕು.)
- ಸಂದರ್ಶನ (Interview) : ಕೌಶಲ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ 5 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಇದನ್ನು ಓದಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನ (How To Apply Online)
- ಮೊದಲು ರಾಮನಗರ ನ್ಯಾಯಾಲಯದ ಅಧಿಕೃತ ಆನ್ಲೈನ್ ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ.
- “Stenographer Grade -||| ” ಹುದ್ದೆಯ ಮುಂದಿರುವ “Click here To Apply” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ತೆರೆದುಕೊಳ್ಳುವ ಪುಟದಲ್ಲಿ ನಿಯಮಗಳನ್ನು ಓದಿ “I Accept” ಬಾಕ್ಸ್ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ವಿವರಗಳು, ಸಂಪರ್ಕ ಮಾಹಿತಿ (ಮೊಬೈಲ್ ಮತ್ತು ಇ-ಮೇಲ್) ಹಾಗೂ ಶೈಕ್ಷಣಿಕ ಅಂಕಗಳನ್ನು ನಿಖರವಾಗಿ ಭರ್ತಿ ಮಾಡಿ.
- ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಎಲ್ಲಾ ವಿವರಗಳನ್ನು ಮರುಪರಿಶೀಲಿಸಿ “Submit” ಬಟನ್ ಒತ್ತಿ ನಿಮ್ಮ ಅಪ್ಲಿಕೇಶನ್ ನಂಬರ್ ಪಡೆದುಕೊಳ್ಳಿ.
- ನಿಮ್ಮ ಪ್ರವರ್ಗಕ್ಕೆ ಅನ್ವಯವಾಗುವ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಕೊನೆಯಲ್ಲಿ ಅರ್ಜಿಯ ಪ್ರಿಂಟ್ ಔಟ್ ಪ್ರತಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
ಇದನ್ನು ಓದಿ
Ramanagara Court Stenographer Recruitment : FAQs
1. ರಾಮನಗರ ಜಿಲ್ಲಾ ನ್ಯಾಯಾಲಯದ ಶೀಘ್ರ ಲಿಪಿಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2026 (ರಾತ್ರಿ 1159ರವರೆಗೆ). ಅರ್ಜಿ ಶುಲ್ಕವನ್ನು ಪಾವತಿಸಲು ಡಿಸೆಂಬರ್ 1,2026 ರ ವರೆಗೆ ಅವಕಾಶವಿರುತ್ತದೆ.
2. ಕೇವಲ ದ್ವಿತೀಯ ಪಿಯುಸಿ (12th) ಪಾಸ್ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ. ಪಿಯುಸಿ ಪಾಸ್ ಆಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಹಿರಿಯ ದರ್ಜೆ (Senior Grade) ಶೀಘ್ರ ಲಿಪಿ (Shorthand) ಹಾಗೂ ಬೆರಳಚ್ಚು (Typewriting) ಪರೀಕ್ಷೆಗಳ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
3. ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ (Written Exam)ಇರುತ್ತದೆಯೇ?
ಇಲ್ಲ. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು 100 ಅಂಕಗಳ ಶೀಘ್ರ ಲಿಪಿ ಕೌಶಲ್ಯ ಪರೀಕ್ಷೆ (Shorthand Skill Test) ಮತ್ತು 5 ಅಂಕಗಳ ನೇರ ಸಂದರ್ಶನ (Interview) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
4. ಈ ಹುದ್ದೆಗೆ ವಯೋಮಿತಿ ಸಡಿಲಿಕೆ (Age Relaxation)ಇದೆಯೇ?
ಹೌದು, ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
5. ಆಯ್ಕೆಯಾದ ಶೀಘ್ರ ಲಿಪಿ ಗಾರ ಗ್ರೇಡ್-3 ಹುದ್ದೆಯ ಮಾಸಿಕ ವೇತನ ಎಷ್ಟು?
ಕರ್ನಾಟಕ ಸರ್ಕಾರದ 7ನೇ ವೇತನ ಆಯೋಗದ ನಿಯಮಾವಳಿಗಳ ಪ್ರಕಾರ ಈ ಹುದ್ದೆಗೆ ಅತ್ಯುತ್ತಮ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಮಾಸಿಕ ವೇತನವು ₹44,425 ರಿಂದ ₹83,700 ರ ವರೆಗೆ ಇರಲಿದ್ದು, ಜೊತೆಗೆ ಸರ್ಕಾರದ ಇತರೆ ಭತ್ಯೆ ಗಳು ಲಭ್ಯವಿರುತ್ತವೆ.
ಕೊನೆಯ ಮಾತು : ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರ ಲಿಪಿ ಗಾರರಾಗಿ ಕೆಲಸ ಮಾಡಲು ಇದು ಅತ್ಯುತ್ತಮ ಅವಕಾಶವಾಗಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕವಾದ ನವೆಂಬರ್ 30, 2026ರ ಒಳಗೆ ಅರ್ಜಿ ಸಲ್ಲಿಸಿ. ಈ ಮಾಹಿತಿ ನಿಮ್ಮ ಸ್ನೇಹಿತರಿಗೂ ಉಪಯುಕ್ತವಾಗಬಹುದು. ಆದ್ದರಿಂದ ಅವರೊಂದಿಗೆ ಶೇರ್ ಮಾಡಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಸೇರಿ.
ಇದನ್ನು ಓದಿ