SCI Court Master Recruitment 2026 : ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (SCI) ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹತೆ, ವೇತನ ಶ್ರೇಣಿ, ಆಯ್ಕೆ ಪ್ರಕ್ರಿಯೆ, ಸಿಲಬಸ್ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಗೈಡ್ ಇಲ್ಲಿದೆ.
ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (SCI) ಖಾಲಿ ಇರುವ ಕೋರ್ಟ್ ಮಾಸ್ಟರ್ (ಹಾರ್ಟ್ ಹ್ಯಾಂಡ್) – Court Master (Shorthand) ಹುದ್ದೆಗಳ ಭರ್ತಿಗಾಗಿ, ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಭಾರತದ ಅತ್ಯುನ್ನತ ನ್ಯಾಯಾಲಯದಲ್ಲಿ ಗೌರವಾನ್ವಿತ ಮತ್ತು ಉನ್ನತ ಮಟ್ಟದ ಅಧಿಕಾರ ಅವಧಿಯ ವೃತ್ತಿ ಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಒಂದು ಸುವರ್ಣ ಅವಕಾಶವಾಗಿದೆ. ಈ ಲೇಖನದಲ್ಲಿ ನೇಮಕಾತಿಯ ಪ್ರಮುಖ ದಿನಾಂಕಗಳು, ಅರ್ಹತೆಗಳು, ಸಂಬಳದ ವಿವರಗಳು, ಪರೀಕ್ಷಾ ವಿಧಾನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಹಂತಗಳನ್ನು ವಿವರವಾಗಿ ತಿಳಿಯೋಣ.
SCI Court Master Recruitment 2026 : ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
- ಅಧಿ ಸೂಚನೆ ಮತ್ತು ಅರ್ಜಿ ಸಲ್ಲಿಕೆ ಆರಂಭ : 25 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ನವೆಂಬರ್ 2026 (ರಾತ್ರಿ 11:55 ರವರೆಗೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ : 15 ನವೆಂಬರ್ 2026
- ಪರೀಕ್ಷಾ ದಿನಾಂಕ : ಅಧಿಕೃತವಾಗಿ ಇನ್ನು ಪ್ರಕಟಿಸಬೇಕಾಗಿದೆ (ತಾತ್ಕಾಲಿಕವಾಗಿ 7 ಡಿಸೆಂಬರ್ 2026 ರಂದು ನಡೆಯುವ ಸಾಧ್ಯತೆ ಇದೆ.)
ಹುದ್ದೆಯ ವಿವರಗಳು ಮತ್ತು ಸಂಬಳ (Vacancy & Salary Structure)
- ಹುದ್ದೆಯ ಹೆಸರು : ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್) – Court Master (Shorthand)
- ಒಟ್ಟು ಖಾಲಿ ಇರುವ ಹುದ್ದೆಗಳು : 20 (ತಾತ್ಕಾಲಿಕ-ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು)
- ವೇತನ ಶ್ರೇಣಿ : ಈ ಹುದ್ದೆಯು 7ನೇ ವೇತನ ಆಯೋಗದ ಪೇ ಲೆವೆಲ್ 11 (Pay Level 11) ರ ಅಡಿಯಲ್ಲಿ ಬರುತ್ತದೆ. ಆರಂಭಿಕ ಮೂಲವೇತನ ₹67,700 ರಿಂದ ₹2,08,700 ವರೆಗೆ ಇರಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ತುಟ್ಟಿ ಭತ್ಯೆ (DA) , ಮನೆ ಬಾಡಿಗೆ ಭತ್ಯೆ (HRA) , ಸಾರಿಗೆ ಭತ್ಯೆ (TA) ಸೇರಿದಂತೆ ಇತರಿ ಸೌಲಭ್ಯಗಳು ಲಭ್ಯವಿವೆ.
ಅರ್ಹತಾ ಮಾನದಂಡಗಳು ( Detailed Eligibility Criteria)
SCI Court Master Recruitment 2026 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇವಲ ಶೈಕ್ಷಣಿಕ ಅರ್ಹತೆ ಮಾತ್ರವಲ್ಲದೆ ನಿರ್ದಿಷ್ಟ ತಾಂತ್ರಿಕ ಮತ್ತು ಕೌಶಲ್ಯದ ಅರ್ಹತೆಗಳನ್ನು ಹೊಂದಿರಬೇಕು.
1. ಶೈಕ್ಷಣಿಕ ಅರ್ಹತೆ (Educational Qualification)
ಅಭ್ಯರ್ಥಿಯು ಭಾರತದಲ್ಲಿ ಕಾನೂನು ಬದ್ಧವಾಗಿ ಸ್ಥಾಪಿತವಾಗಿರುವ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation Degree) ಹೊಂದಿರಬೇಕು.
2. ತಾಂತ್ರಿಕ ಮತ್ತು ಕೌಶಲ್ಯದ ಅರ್ಹತೆಗಳು
- ಇಂಗ್ಲಿಷ್ ಶಾರ್ಟ್ ಹ್ಯಾಂಡ್ (English Shorthand) : ನಿಮಿಷಕ್ಕೆ ಕನಿಷ್ಠ 120 ಪದಗಳ (120 WPM ) ವೇಗವನ್ನು ಹೊಂದಿರಬೇಕು ಮತ್ತು ಅದನ್ನು ನಿಖರವಾಗಿ ಲಿಪ್ಯಂತರ (Transcribe) ಮಾಡುವ ಸಾಮರ್ಥ್ಯ ಇರಬೇಕು.
- ಕಂಪ್ಯೂಟರ್ ಟೈಪಿಂಗ್ (Computer Typing) : ಕಂಪ್ಯೂಟರ್ನಲ್ಲಿ ನಿಮಿಷಕ್ಕೆ ಕನಿಷ್ಠ 40 ಪದಗಳ (40 WPM) ಟೈಪಿಂಗ್ ವೇಗವನ್ನು ಹೊಂದಿರಬೇಕು.
- ಕಂಪ್ಯೂಟರ್ ಜ್ಞಾನ : ಕಂಪ್ಯೂಟರ್ ಕಾರ್ಯಾಚರಣೆಗಳ (MS office, ಇಂಟರ್ನೆಟ್ ಇತ್ಯಾದಿ) ಮೂಲಭೂತ ಜ್ಞಾನ ಕಡ್ಡಾಯ.
3. ಅಗತ್ಯವಿರುವ ಅನುಭವ (Experience)
ಸಂಬಂಧಪಟ್ಟ ನ್ಯಾಯಾಂಗ ವಿಭಾಗ ಅಥವಾ ಕೇಡರ್ ಗಳಲ್ಲಿ (ಕೋರ್ಟ್ ಗಳು ಅಥವಾ ಸರ್ಕಾರಿ ಇಲಾಖೆಗಳಲ್ಲಿ ಶಾರ್ಟ್ ಹ್ಯಾಂಡ್/ಸ್ಟೆನೋಗ್ರಾಫಿ ಹುದ್ದೆಯಲ್ಲಿ) ಕನಿಷ್ಠ ಐದು ವರ್ಷಗಳ ನಿಯಮಿತ ಸೇವೆ ಅನುಭವ ಹೊಂದಿರಬೇಕು.
ವಯೋಮಿತಿ ಮತ್ತು ಸಡಿಲಿಕೆ ( Age Limit & Relaxation)
- ಕನಿಷ್ಠ ವಯಸ್ಸು : 30 ವರ್ಷಗಳು
- ಗರಿಷ್ಠ ವಯಸ್ಸು : 45 ವರ್ಷಗಳು
- ವಯೋಮಿತಿ ಸಡಿಲಿಕೆ : ಸುಪ್ರೀಂ ಕೋರ್ಟ್ ನ ಅಧಿಕೃತ ನಿಯಮಗಳ ಪ್ರಕಾರ, ಎಸ್ ಸಿ, ಎಸ್ ಟಿ, ಓಬಿಸಿ, ವಿಕಲಚೇತನರು ಹಾಗೂ ಸುಪ್ರೀಂ ಕೋರ್ಟ್ ನ ಹಾಲಿ ಸಿಬ್ಬಂದಿಗೆ ಗರಿಷ್ಠ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ನೀಡಲಾಗುತ್ತದೆ.
SCI Court Master Recruitment 2026: ಅರ್ಜಿ ಶುಲ್ಕದ ವಿವರ
SCI Court Master Recruitment 2026 ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು.
- ಸಾಮಾನ್ಯ ಮತ್ತು ಅನ್ ರಿಸರ್ವ್ಡ್ (General/ UR) ಅಭ್ಯರ್ಥಿಗಳಿಗೆ : ₹1,500 + ಬ್ಯಾಂಕ್ ಶುಲ್ಕ
- SC, ST, OBC (Non – Creamy Layer) /ಮಾಜಿ ಸೈನಿಕರಿಗೆ : ₹750 +ಬ್ಯಾಂಕ್ ಶುಲ್ಕ
- ಗಮನಿಸಿ : ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ (Refund) ಮಾಡಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process & Exam Pattern)
ಅಭ್ಯರ್ಥಿಗಳ ಅರ್ಹತೆಯನ್ನು ಪರೀಕ್ಷಿಸಲು ಸುಪ್ರೀಂ ಕೋರ್ಟ್ ಕಠಿಣವಾದ 4 ಹಂತಗಳ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ.
1. ಆಬ್ಜೆಕ್ಟಿವೆ ಟೆಸ್ಟ್ (Objective Test)
ಇದರಲ್ಲಿ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.
2. ಇಂಗ್ಲಿಷ್ ಶಾರ್ಟ್ ಹ್ಯಾಂಡ್ ಟೆಸ್ಟ್ (Shorthand Dictation & Transcription)
ಅಭ್ಯರ್ಥಿಗಳಿಗೆ 120 wpm ವೇಗದಲ್ಲಿ ಡಿಕ್ಟೇಶನ್ ನೀಡಲಾಗುತ್ತದೆ. ಅದನ್ನು ನಿಗದಿತ ಅವಧಿಯಲ್ಲಿ ಕಂಪ್ಯೂಟರ್ನಲ್ಲಿ ಲಿಪ್ಯಂತರ ಮಾಡಬೇಕು.
3. ಕಂಪ್ಯೂಟರ್ ಟೈಪಿಂಗ್ ಟೆಸ್ಟ್ (Computer Typing Test)
ಅಭ್ಯರ್ಥಿಗಳ ನಿಖರತೆ ಮತ್ತು 40 WPM ಟೈಪಿಂಗ್ ವೇಗವನ್ನು ಪರೀಕ್ಷಿಸಲಾಗುತ್ತದೆ.
4. ವೈಯಕ್ತಿಕ ಸಂದರ್ಶನ (Interview)
ಮೇಲಿನ ಮೂರು ಹಂತಗಳಲ್ಲಿ ತೇರ್ಗಡೆಯಾದವರನ್ನು ಅಂತಿಮವಾಗಿ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಇದನ್ನು ಓದಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ? (Step By step Application Process)
SCI Court Master Recruitment 2026 ಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭಿಸುವ ಮುನ್ನ ನಿಮ್ಮ ಇತ್ತೀಚಿನ ಫೋಟೋ (Photo) , ಸಹಿ (Signature) , ಪದವಿ ಪ್ರಮಾಣ ಪತ್ರ ಮತ್ತು 5 ವರ್ಷದ ಅನುಭವದ ಪ್ರಮಾಣ ಪತ್ರ (Experience Certificate) ಸ್ಕ್ಯಾನ್ ಪ್ರತಿಗಳನ್ನು ಜೆಪಿಇಜಿ (JPEG) ಅಥವಾ ಪಿಡಿಎಫ್ (PDF) ಫಾರ್ಮೆಟ್ ನಲ್ಲಿ ಸಿದ್ಧವಾಗಿಟ್ಟುಕೊಳ್ಳಿ.
- ಮೊದಲು ಸುಪ್ರೀಂ ಕೋರ್ಟ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ https://www.sci.gov.in/recruitments/ ಭೇಟಿ ನೀಡಿ.
- ಹೋಂ ಪೇಜ್ ನಲ್ಲಿ ಕೆಳಭಾಗದಲ್ಲಿರುವ “Recruitment” ಸೆಕ್ಷನ್ ಕ್ಲಿಕ್ ಮಾಡಿ. ಅಲ್ಲಿ “Online Application for Court Master (Shorthand)” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ, “New Registration” ಬಟನ್ ಕ್ಲಿಕ್ ಮಾಡಿ. ನಿಮ್ಮ ಹೆಸರು, ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿ. ನಿಮ್ಮ ಮೊಬೈಲಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬರಲಿದೆ.
- ಪಡೆದ ಲಾಗಿನ್ ವಿವರಗಳನ್ನು ಬಳಸಿ ಸೈನ್ ಇನ್ ಆಗಿ. ನಿಮ್ಮ ವೈಯಕ್ತಿಕ ವಿವರಗಳು, ಕಮ್ಯುನಿಕೇಷನ್ ವಿಳಾಸ, ಶೈಕ್ಷಣಿಕ ಅರ್ಹತೆ ಮತ್ತು ಕಡ್ಡಾಯ ಕೆಲಸದ ಅನುಭವದ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ನಿಮ್ಮ ಸ್ಕ್ಯಾನ್ ಮಾಡಿದ ಫೋಟೋ, ಸಹಿ ಮತ್ತು ಅಗತ್ಯವಿರುವ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿದ ಗಾತ್ರದಲ್ಲಿ (File Size) ಅಪ್ಲೋಡ್ ಮಾಡಿ.
- “Preview Application” ಬಟನ್ ಕ್ಲಿಕ್ ಮಾಡಿ ನೀವು ಭರ್ತಿ ಮಾಡಿದ ಎಲ್ಲಾ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಒಮ್ಮೆ ಸಬ್ಮಿಟ್ ಮಾಡಿದರೆ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
- ಎಲ್ಲವೂ ಸರಿಯಾಗಿದ್ದರೆ, “Pay Fee” ಆಪ್ಷನ್ ಬಳಸಿ ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಶುಲ್ಕವನ್ನು ಪಾವತಿಸಿ.
- ಶುಲ್ಕ ಪಾವತಿ ಯಶಸ್ವಿಯಾದ ನಂತರ ಅರ್ಜಿಯನ್ನು “Final Submit” ಮಾಡಿ. ಭವಿಷ್ಯದ ರೆಫ್ರೆನ್ಸ್ ಗಾಗಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ಅಥವಾ PDF ಅನ್ನು ಡೌನ್ಲೋಡ್ ಮಾಡಿ ಸುರಕ್ಷಿತವಾಗಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ
SCI Court Master Recruitment 2026 : FAQs
1. ಸುಪ್ರೀಂ ಕೋರ್ಟ್ ಕೋರ್ಟ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ?
SCI Court Master Recruitment 2026 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 15 ನವೆಂಬರ್ 2026 (ರಾತ್ರಿ 11:55ರವರೆಗೆ) ಕೊನೆಯ ದಿನಾಂಕವಾಗಿದೆ.
2. ಈ ಹುದ್ದೆಗೆ ಫ್ರೆಷರ್ಸ್ (ಅನುಭವ ಇಲ್ಲದವರು) ಅರ್ಜಿ ಸಲ್ಲಿಸಬಹುದೇ?
ಇಲ್ಲ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ನ್ಯಾಯಾಂಗ ವಿಭಾಗ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಕನಿಷ್ಠ ಐದು ವರ್ಷಗಳ ನಿಯಮಿತ ಕೆಲಸದ ಅನುಭವ ಇರಬೇಕು.
3. ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ವೇಗ ಎಷ್ಟಿರಬೇಕು?
ಇಂಗ್ಲಿಷ್ ಶಾರ್ಟ್ ಹ್ಯಾಂಡ್ ನಲ್ಲಿ ನಿಮಿಷಕ್ಕೆ 120 ಪದಗಳ (120 wpm) ವೇಗ ಮತ್ತು ಕಂಪ್ಯೂಟರ್ ಟೈಪಿಂಗ್ ನಲ್ಲಿ ನಿಮಿಷಕ್ಕೆ 40 ಪದಗಳ (40wpm) ವೇಗ ಇರಬೇಕು.
4. SCI Court Master Recruitment 2026 ಹುದ್ದೆಯ ಸಂಬಳ ಎಷ್ಟು ಇರಲಿದೆ?
ಇದು ಪೇ ಲೆವೆಲ್ 11ರ ಅಡಿಯ ಹುದ್ದೆಯಾಗಿದ್ದು, ಆರಂಭಿಕ ಮೂಲವೇತನ ₹67,700 ರಿಂದ ₹2,08,700 ರ ವರೆಗೆ ಇರಲಿದೆ ಮತ್ತು ಇತರೆ ಭತ್ಯೆ ಗಳು ಇರಲಿವೆ.
5. ಅರ್ಜಿ ಸಲ್ಲಿಕೆಯಲ್ಲಿ ತಪ್ಪುಗಳಾದರೆ ತಿದ್ದಿಕೊಳ್ಳಲು ಎಡಿಟ್ ವಿಂಡೋ ಇರುತ್ತದೆಯೇ?
ಇಲ್ಲ, ಒಮ್ಮೆ ಅರ್ಜಿಯನ್ನು “Final Submit” ಮಾಡಿದ ನಂತರ ಯಾವುದೇ ಬದಲಾವಣೆಗಳಿಗೆ ಸುಪ್ರೀಂಕೋರ್ಟ್ ಅವಕಾಶ ನೀಡುವುದಿಲ್ಲ. ಆದ್ದರಿಂದ ಸಬ್ಮಿಟ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ.
SCI Court Master Recruitment 2026 ಕೊನೆಯ ಮಾತು : ಈ ಲೇಖನವನ್ನು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಹಂಚಿಕೊಂಡು ಸುಪ್ರೀಂ ಕೋರ್ಟ್ ನಲ್ಲಿ ಅವರ ವೃತ್ತಿ ಜೀವನ ಸಾಗಿಸಲು ಅವಕಾಶ ಮಾಡಿಕೊಡಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ