Sainik School Kodagu Recruitment: ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಪದವಿ ಅಭ್ಯರ್ಥಿಗಳಿಗೆ important update.

Sainik School Kodagu Recruitment Sainik School Kodagu Recruitment : ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ PGT, TGT, ನರ್ಸಿಂಗ್ ಸಿಸ್ಟರ್ ಮತ್ತು ವಾರ್ಡ್ ಬಾಯ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಬಳ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ. 

ನೀವು ಶಿಕ್ಷಣ ಕ್ಷೇತ್ರದಲ್ಲಿ ಅಥವಾ ಬೋಧಕೇತರ ವಿಭಾಗದಲ್ಲಿ ಉತ್ತಮ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಆಗಿದ್ದಲ್ಲಿ ನಿಮಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಕೊಡಗು ಸೈನಿಕ ಶಾಲೆ (Sainik School Kodagu ) ಪ್ರಸಕ್ತ ಸಾಲಿನ ವಿವಿಧ ಬೋಧಕ ( Teaching) ಮತ್ತು ಬೋಧಕೇತರ (Non Teaching) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆಫ್ ಲೈನ್ (ಅಂಚೆ) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಉದ್ಯೋಗ ಪ್ರಕಟಣೆಯ ಒಟ್ಟು ಹುದ್ದೆಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ.

Sainik School Kodagu Recruitment : ಸಂಕ್ಷಿಪ್ತ ವಿವರಗಳು 

  • ಸಂಸ್ಥೆಯ ಹೆಸರು : ಕೊಡಗು ಸೈನಿಕ ಶಾಲೆ.(Sainik School Kodagu)
  • ಉದ್ಯೋಗ ವರ್ಗ : ಕೇಂದ್ರ ಸರ್ಕಾರಿ ಉದ್ಯೋಗ (ರಕ್ಷಣಾ ಸಚಿವಾಲಯ)
  • ಹುದ್ದೆಗಳ ಹೆಸರು : PGT, TGT, ನರ್ಸಿಂಗ್ ಸಿಸ್ಟರ್ ಮತ್ತು ವಾರ್ಡ್ ಬಾಯ್
  •  ಒಟ್ಟು ಹುದ್ದೆಗಳು : 07 ಖಾಲಿ ಹುದ್ದೆಗಳು.
  • ಕೆಲಸದ ಸ್ಥಳ : ಕುಡಿಗೆ, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ (ಕರ್ನಾಟಕ)
  • ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್ ( Speed Post, Register Post)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 06, 2026.

ಹುದ್ದೆಗಳ ವಿವರ ಮತ್ತು ಮಾಸಿಕ ವೇತನ (Vacancy Details and Salary)

1. PGT Physics (01 ಹುದ್ದೆ)

  • Level 8 : ಆರಂಭಿಕ ಮೂಲವೇತನ ₹47,600 + ಭತ್ಯೆ ಗಳು

2. TGT English (01 ಹುದ್ದೆ)

  • Level 7 : ಆರಂಭಿಕ ಮೂಲವೇತನ ₹44,900 + ಭತ್ಯೆ ಗಳು

3. TGT Hindi (01 ಹುದ್ದೆ)

  • Level 7 : ಆರಂಭಿಕ ಮೂಲವೇತನ ₹44,900 + ಭತ್ಯೆ ಗಳು

4. TGT Social Science (01 ಹುದ್ದೆ)

  • Level 7: ಆರಂಭಿಕ ಮೂಲವೇತನ ₹44,900 + ಭತ್ಯೆ ಗಳು

5. Nursing Sister (Female) (01 ಹುದ್ದೆ)

  • ₹27,000 (ಸ್ಥಿರ ಮಾಸಿಕ ವೇತನ)

6. Ward Boy (02 ಹುದ್ದೆಗಳು)

  • ₹25,000 (ಸ್ಥಿರ ಮಾಸಿಕ ವೇತನ)

Sainik School Kodagu Recruitment : ಶೈಕ್ಷಣಿಕ ಅರ್ಹತೆಗಳು 

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • PGT Physics : ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (M.sc Physics) ಮತ್ತು ಬಿ.ಇಡಿ (B.ed) ಪದವಿ ಕಡ್ಡಾಯ.
  • TGT ಹುದ್ದೆಗಳು (English, Hindi, Social Science) : ಕನಿಷ್ಠ 50% ಅಂಕಗಳೊಂದಿಗೆ ಆಯಾ ವಿಷಯದಲ್ಲಿ ಪದವಿ (Graduation) ಮುಗಿಸಿರಬೇಕು ಹಾಗೂ ಬಿ.ಇಡಿ (B.ed) ಜೊತೆಗೆ CTET or TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • Nursing Sister : ಮಾನ್ಯತೆ ಪಡೆದ ಸಂಸ್ಥೆಯಿಂದ ನರ್ಸಿಂಗ್ ಡಿಪ್ಲೋಮಾ ಅಥವಾ ಬಿ ಎಸ್ ಸಿ ನರ್ಸಿಂಗ್ (Nursing Diploma/Degree) ಮುಗಿಸಿರಬೇಕು ಮತ್ತು ಕನಿಷ್ಠ 5 ವರ್ಷಗಳ ಅನುಭವ ಇರಬೇಕು.
  • Ward Boy : ಕನಿಷ್ಠ 10ನೇ ತರಗತಿ (Matriculation ) ಪಾಸಾಗಿರಬೇಕು. ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಬರಬೇಕು ಹಾಗೂ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ವಿವರ (Age Limit)

Sainik School Kodagu Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.

  • PGT ಹುದ್ದೆಗಳಿಗೆ : ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷಗಳು.
  • TGT ಹುದ್ದೆಗಳಿಗೆ : ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷಗಳು.
  • Nursing Sister & Ward Boy : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷಗಳು .

ಅರ್ಜಿ ಶುಲ್ಕದ ವಿವರ (Application Fee)

Sainik School Kodagu Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ನಮೂನೆ ಯೊಂದಿಗೆ ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದ ಡಿಮ್ಯಾಂಡ್ ಡ್ರಾಫ್ಟ್ (Demand Draft – DD) ಅನ್ನು ಲಗತ್ತಿಸಬೇಕು.

  • ಸಾಮಾನ್ಯ ಮತ್ತು ಓಬಿಸಿ (General & OBC) ಅಭ್ಯರ್ಥಿಗಳಿಗೆ : ₹500
  • ಎಸ್ ಸಿ ಮತ್ತು ಎಸ್ ಟಿ (SC, ST) ಅಭ್ಯರ್ಥಿಗಳಿಗೆ : ₹350

(ಗಮನಿಸಿ : The Principal, “Sainik School Kodagu ” ಇವರ ಹೆಸರಿನಲ್ಲಿ, ಕುಶಾಲನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ (Branch Code:11721) ಪಾವತಿಯಾಗುವಂತೆ ಪಡೆದುಕೊಳ್ಳಬೇಕು.

ಇದನ್ನು ಓದಿ

Karnataka Teacher Recruitment 2026 : 15,000 ಶಿಕ್ಷಕರ ಹುದ್ದೆಗಳ ಭರ್ತಿ, ಸಂಪೂರ್ಣ ಹಾಗೂ Important ಮಾಹಿತಿ ಇಲ್ಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)

Sainik School Kodagu Recruitment ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಅರ್ಹರನ್ನು ಮಾತ್ರ ಮುಂದಿನ ಪ್ರಕ್ರಿಯೆಗೆ ಕರೆಯಲಾಗುತ್ತದೆ.

1. ಲಿಖಿತ ಪರೀಕ್ಷೆ (Written Exam)

  • ಅಭ್ಯರ್ಥಿಗಳ ವಿಷಯಜ್ಞಾನವನ್ನು ಪರೀಕ್ಷಿಸಲು ಲಿಖಿತ ಪರೀಕ್ಷೆ ಇರುತ್ತದೆ.

2. ಕೌಶಲ್ಯ ಪರೀಕ್ಷೆ/ಬೋಧನಾ ಪ್ರಾತ್ಯಕ್ಷಿಕೆ (Skill Test/ Class Demo)

  • ಬೋಧಕ ಹುದ್ದೆಗಳಿಗೆ ಡೆಮೋ ಕ್ಲಾಸ್ ಮತ್ತು ಇತರ ಹುದ್ದೆಗಳಿಗೆ ಪ್ರಾಯೋಗಿಕ ಕೌಶಲ್ಯ ಪರೀಕ್ಷೆ ಇರುತ್ತದೆ.

3. ಸಂದರ್ಶನ (Interview)

  • ಅಂತಿಮ ಹಂತದಲ್ಲಿ ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Sainik School Kodagu Recruitment ಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಈ ನೇಮಕಾತಿಗೆ ಕೇವಲ ಆಫ್ ಲೈನ್ (ಅಂಚೆ ಮೂಲಕ) ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. ಸೈನಿಕ ಶಾಲೆ ಕೊಡಗಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ http://www.sainikschoolkodagu.edu.in/. ಅಧಿಕೃತ ಅರ್ಜಿ ನಮೂನೆಯನ್ನು (Application Form)ಡೌನ್ಲೋಡ್ ಮಾಡಿಕೊಳ್ಳಿ.
  2. ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು (ಹೆಸರು, ವಿಳಾಸ, ವಿದ್ಯಾರ್ಹತೆ ಇತ್ಯಾದಿ) ಯಾವುದೇ ತಪ್ಪುಗಳಿಲ್ಲದೆ ಸ್ಪಷ್ಟವಾಗಿ ಭರ್ತಿ ಮಾಡಿ.
  3. ಅರ್ಜಿಯ ನಿಗದಿತ ಜಾಗದಲ್ಲಿ ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಹಚ್ಚಿ ಸಹಿ ಮಾಡಿ.
  4. ನಿಮ್ಮ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು, ಜನ್ಮ ದಿನಾಂಕ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ಅನುಭವದ ಪತ್ರಗಳ ಜೆರಾಕ್ಸ್ ಪ್ರತಿಗಳ ಮೇಲೆ ಸ್ವಯಂ ದೃಢೀಕರಣ (Self Attested) ಮಾಡಿ ಅರ್ಜಿಯೊಂದಿಗೆ ಲಗತ್ತಿಸಿ.
  5. ಬ್ಯಾಂಕಿನಿಂದ ಪಡೆದ ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಅರ್ಜಿಯೊಂದಿಗೆ ಸುರಕ್ಷಿತವಾಗಿ ಪಿನ್ ಮಾಡಿ.
  6. ಇವೆಲ್ಲವನ್ನು ಒಂದು ಲಕೋಟೆಯಲ್ಲಿ (envelope) ಹಾಕಿ, ಲಕೋಟೆಯ ಮೇಲ್ಭಾಗದಲ್ಲಿ “APPLICATION FOR THE POST OF – (ನೀವು ಅರ್ಜಿ ಸಲ್ಲಿಸುವ ಹುದ್ದೆಯ ಹೆಸರು) ಎಂದು ದಪ್ಪ ಅಕ್ಷರಗಳಲ್ಲಿ ಬರೆಯಿರಿ.
  7. ಭರ್ತಿ ಮಾಡಿದ ಲಕೋಟೆಯನ್ನು ನವೆಂಬರ್ 06, 2026 ರ ಒಳಗೆ ತಲುಪುವಂತೆ ಕೇವಲ speed Post or Registered post ಮೂಲಕ ಕೆಳಗಿನ ಅಧಿಕೃತ ವಿಳಾಸಕ್ಕೆ ಕಳುಹಿಸಿಕೊಡಿ.

 

ಅರ್ಜಿ ತಲುಪಿಸಬೇಕಾದ ವಿಳಾಸ

  • The Principal, Sainik School Kodagu, Village & Post: Kudige, Taluk: Kushalnagar, Kodagu District, Karnataka – 571232

ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡುವಲ್ಲಿ ಗೊಂದಲವಿದ್ದರೆ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು..

ಇದನ್ನು ಓದಿ

BHEL ನೇಮಕಾತಿ 2027 : BHEL ನಲ್ಲಿ 660 ಆರ್ಟಿಸನ್ ಹುದ್ದೆಗಳ ನೇಮಕಾತಿ, 10th, ITI ವಿದ್ಯಾರ್ಥಿಗಳಿಗೆ important update.

Sainik School Kodagu Recruitment : FAQs 

1. ಕೊಡಗು ಸೈನಿಕ ಶಾಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 6, 2026 ಕೊನೆಯ ದಿನಾಂಕವಾಗಿದೆ. ನಿಮ್ಮ ಅರ್ಜಿಗಳು ಅಂಚೆ ಮೂಲಕ ಅಂದು ಸಂಜೆಯೊಳಗೆ ಶಾಲೆಯನ್ನು ತಲುಪಬೇಕು.

2. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೇ? 

ಇಲ್ಲ, ಈ ನೇಮಕಾತಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟಿನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು Speed Post ಅಥವಾ Registered post ಮೂಲಕ ಮಾತ್ರ ಕಳುಹಿಸಬೇಕು.

3. ಸಾಮಾನ್ಯ (General )ಮತ್ತು ಓಬಿಸಿ (OBC) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟಿದೆ?

ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ಇರುತ್ತದೆ. ಇದನ್ನು “The Principal, Sainik School Kodagu” ಇವರ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ ಪಾವತಿಸಬೇಕು.

4. SC, ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆಯೇ? 

ಹೌದು. SC, ST ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದ್ದು, ಅವರು ಕೇವಲ ₹350 ರ ಡಿಮ್ಯಾಂಡ್ ಡ್ರಾಫ್ಟ್ ಲಗತ್ತಿಸಿದರೆ ಸಾಕು.

5. ವಾರ್ಡ್ ಬಾಯ್ (Ward Boy) ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನಾಗಿರಬೇಕು? 

ವಾರ್ಡ್ ಬಾಯ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (Matriculation) ಪಾಸಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಲು ತಿಳಿದಿರಬೇಕು.

6.  Sainik School Kodagu Recruitment ಖಾಯಂ ಹುದ್ದೆಗಳೆ? 

ಈ ನೇಮಕಾತಿಯಲ್ಲಿ PGT Physics & TGT ಹುದ್ದೆಗಳು ಖಾಯಂ (Regular) ಹುದ್ದೆಗಳಾಗಿವೆ. ಆದರೆ Nursing Sister & Ward Boy ಹುದ್ದೆಗಳನ್ನು ಒಪ್ಪಂದದ ಆಧಾರದ (Contract Basis) ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

Sainik School Kodagu Recruitment ಕೊನೆಯ ಮಾತು : ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಇಂತಹ ಪ್ರತಿಷ್ಠಿತ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕ ವರೆಗೆ ಕಾಯದೆ ತಕ್ಷಣವೇ ತಮ್ಮ ಅರ್ಜಿಗಳನ್ನು ಅಂಚೆ ಮೂಲಕ ರವಾನಿಸಿ. ಈ ಮಾಹಿತಿ ನಿಮ್ಮ ಸ್ನೇಹಿತರಿಗೂ ಉಪಯುಕ್ತವಾಗಬಹುದು ತಕ್ಷಣವೇ ಅವರೊಂದಿಗೆ ಶೇರ್ ಮಾಡಿ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

APS Belgaum Recruitment 2026: ಬೆಳಗಾವಿಯ ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ಸೈನ್ಸ್ ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ, ಪಿಯುಸಿ ಅಭ್ಯರ್ಥಿಗಳಿಗೆ important update.

Leave a Comment