SDEF Scholarship 2026-27 : ವರ್ಷಕ್ಕೆ ₹50,000 ವಿದ್ಯಾರ್ಥಿ ವೇತನ, ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಆನ್ ಲೈನ್ ಅರ್ಜಿಯ important update.

SDEF Scholarship 2026-27 SDEF Scholarship 2026-27: ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಮತ್ತು ವರ್ಷಕ್ಕೆ ₹50,000 ವರೆಗೆ ವಿದ್ಯಾರ್ಥಿ ವೇತನ ಪಡೆಯಿರಿ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಆನ್ ಲೈನ್ ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಇಲ್ಲಿವೆ. 

ನೀವು 12ನೇ ತರಗತಿ ಮುಗಿಸಿ ಮುಂದೆ ಇಂಜಿನಿಯರಿಂಗ್, ವೈದ್ಯಕೀಯ (Medical) ಅಥವಾ ಇನ್ಯಾವುದೇ ವೃತ್ತಿಪರ ಕೋರ್ಸ್ ಸೇರಲು ಯೋಚಿಸುತಿದ್ದೀರಾ? ಆದರೆ ಕಾಲೇಜು ಫೀಸ್ ಕಟ್ಟಲು ಆರ್ಥಿಕ ಸಂಕಷ್ಟ ಎದುರಾಗಿದೆಯೇ? ಹಾಗಿದ್ದರೆ ನಿಮಗಾಗಿ ಒಂದು ಸುವರ್ಣ ಅವಕಾಶ ಲಭ್ಯವಿದೆ. ದೇಶದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ (SDEF) ವತಿಯಿಂದ SDEF Scholarship 2026-27 ಅನ್ನು ಘೋಷಿಸಲಾಗಿದೆ.

ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹50,000 ವರೆಗೆ ಉಚಿತ ಆರ್ಥಿಕ ನೆರವು ಸಿಗಲಿದೆ. ಹಾಗಾದರೆ  ಸ್ಕಾಲರ್ಶಿಪ್‌ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಕೊನೆಯ ದಿನಾಂಕ ಯಾವಾಗ? ಏನೆಲ್ಲ ದಾಖಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

SDEF Scholarship 2026-27 : SDEF ಸ್ಕಾಲರ್ಶಿಪ್ ಎಂದರೇನು? 

ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ (SDEF) ಎನ್ನುವುದು ಒಂದು ಪ್ರಮುಖ ಚಾರಿಟಬಲ್ ಸಂಸ್ಥೆಯಾಗಿದ್ದು, ಆರ್ಥಿಕ ತೊಂದರೆಯಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗಳನ್ನು ನೀಡುತ್ತದೆ. ದೇಶದ ಪ್ರಮುಖ ಐಐಟಿ (IITs), ಎನ್ ಐ ಟಿ (NITs) , ಸರ್ಕಾರಿ ಮತ್ತು ಪ್ರಮುಖ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಓದುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ.

SDEF Scholarship 2026-27 : ಮುಖ್ಯಾಂಶಗಳು 

  • ಸ್ಕಾಲರ್ಶಿಪ್ ಹೆಸರು : ಸ್ವಾಮಿ ದಯಾನಂದ ಇಂಡಿಯಾ ಸ್ಕಾಲರ್ಶಿಪ್ ಪ್ರೋಗ್ರಾಮ್ (SDEF)
  • ಯಾರು ನೀಡುತ್ತಾರೆ ? : ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್
  • ಲಾಭಗಳು (Amount) : ವರ್ಷಕ್ಕೆ ₹50,000 ವರೆಗೆ ( ಕೋರ್ಸ್ ಮುಗಿಯುವವರೆಗೆ ಒಟ್ಟು ₹2 ಲಕ್ಷದವರೆಗೆ)
  • ಅರ್ಹ ಕೋರ್ಸ್ ಗಳು: B.Tech, BE, MBBS, BDS,B.Pharm, B.sc Nursing, B.Arch, BVSC
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online) ಮೂಲಕ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಅಕ್ಟೋಬರ್ 2026 (ವಿಸ್ತರಿಸುವ ಸಾಧ್ಯತೆ ಇರುತ್ತದೆ)
  • ಅಧಿಕೃತ ವೆಬ್ಸೈಟ್ : https://www.swamidayanand.org/india-scholarships-2026-27

ಸಿಗುವ ಆರ್ಥಿಕ ಸಹಾಯ ಎಷ್ಟು ? (SCHOLARSHIP Benefits)

SDEF Scholarship 2026-27 ಈ ಸ್ಕಾಲರ್ ಶಿಪ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಮತ್ತು ಮೆರಿಟ್ ಆಧಾರದ ಮೇಲೆ ವರ್ಷಕ್ಕೆ ₹50,000 ವರೆಗೆ ಧನ ಸಹಾಯ ಸಿಗುತ್ತದೆ.

  • 4 ವರ್ಷಗಳ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್ ಆಗಿದ್ದರೆ, ಒಟ್ಟು ₹2,00,000 ವರೆಗೆ ಸಹಾಯಧನ ಸಿಗಲಿದೆ.
  • ಗಮನಿಸಿ : ಸ್ಕಾಲರ್ಶಿಪ್ ಮೊತ್ತವನ್ನು ನೇರವಾಗಿ ನಿಮ್ಮ ಕಾಲೇಜಿನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ವಿದ್ಯಾರ್ಥಿಯ ವಯಕ್ತಿಕ ಖಾತೆಗೆ ಹಣವನ್ನು ಕಳುಹಿಸಲಾಗುವುದಿಲ್ಲ.

ಇದನ್ನು ಓದಿ

Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು (Eligibility Criteria) 

SDEF Scholarship 2026-27 ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕಾಗುತ್ತದೆ.

1. ಶೈಕ್ಷಣಿಕ ಅರ್ಹತೆ (Educational Qualification)

  • ವಿದ್ಯಾರ್ಥಿಯ 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಮಾನ್ಯತೆ ಪಡೆದ ಕಾಲೇಜಿನಲ್ಲಿ ಮೊದಲ ವರ್ಷದ ವೃತ್ತಿಪರ ಪದವಿ  (Professional Degree) ಕೋರ್ಸ್ಗೆ ಪ್ರವೇಶ ಪಡೆದಿರಬೇಕು.
  • ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 80% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

2. ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ರ್ಯಾಂಕ್ (All Indian Rank) 

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಿನ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಪಡೆದಿರಬೇಕು.

  • JEE main : AIR 50,000 ಒಳಗೆ ಇರಬೇಕು.
  • JEE Advanced : AIR 40,000 ಒಳಗಿರಬೇಕು.
  • NEET UG: AIR 50,000 ಒಳಗಿರಬೇಕು.
  • NATA: ಕನಿಷ್ಠ 100 ಅಂಕಗಳನ್ನು ಪಡೆದಿರಬೇಕು.

3. ಆದಾಯದ ಮಿತಿ .

  • ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ (Annual Income) ಎಲ್ಲಾ ಮೂಲಗಳಿಂದ ₹12,00,000 ಕಿಂತ ಕಡಿಮೆ ಇರಬೇಕು.

4. ಪ್ರಮುಖ ವಿನಾಯಿತಿಗಳು (Who Cannot Apply)

  • 12ನೇ ತರಗತಿ ಮುಗಿದ ನಂತರ ಗ್ಯಾಪ್ (Gap Year) ತಗೊಂಡಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುವುದಿಲ್ಲ.
  • ದ್ವಿತೀಯ ಅಥವಾ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. (ಗಮನಿಸಿ : ಮಹಿಳಾ ವಿದ್ಯಾರ್ಥಿನಿಯರಿಗಾಗಿ Shiksha Shakti Scholarship ಎಂಬ ಪ್ರತ್ಯೇಕ ಕೋಟ ಇರುತ್ತದೆ.)

ಅಗತ್ಯವಿರುವ ಪ್ರಮುಖ ದಾಖಲೆಗಳು (Documents Required)

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
  • ಆಧಾರ್ ಕಾರ್ಡ್ (Aadhar card)
  • 10ನೇ ತರಗತಿ ಮತ್ತು 12ನೇ ತರಗತಿ/ಪಿಯುಸಿ ಅಂಕಪಟ್ಟಿಗಳು (Marks Card)
  • ಪ್ರವೇಶ ಪರೀಕ್ಷೆಯ (JEE /NEET /NATA) ರ್ಯಾಂಕ್ ಕಾರ್ಡ್.
  • ಕಾಲೇಜು ಪ್ರವೇಶ ಪತ್ರ (Admission Letter) ಮತ್ತು ಕಾಲೇಜು ಐಡಿ ಕಾರ್ಡ್.
  • ಪ್ರಸ್ತುತ ವರ್ಷದ ಕಾಲೇಜು ಫೀಸ್ ರಶೀದಿ (Fees Receipt).
  • ತಹಶೀಲ್ದಾರರಿಂದ ಪಡೆದ ಅಧಿಕೃತ ಕುಟುಂಬದ ಆದಾಯ ಪ್ರಮಾಣ ಪತ್ರ (Income Certificate)
  • ಇತ್ತೀಚಿನ ಮನೆಯ ವಿದ್ಯುತ್ ಬಿಲ್ಲು ಅಥವಾ ಗ್ಯಾಸ್ ಬಿಲ್
  • ಮನೆಯ 3 ಫೋಟೋಗಳು : ನಿಮ್ಮ ಮನೆಯ ಒಳಗಿನ ಮತ್ತು ಹೊರಗಿನ ನೋಟ ಕಾಣಿಸುವ ಫೋಟೋಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
  • SDEF Scholar Pledge Form: ಇದನ್ನು ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿ. ಪ್ರಿಂಟ್ ತೆಗೆದು, ಸಹಿ ಮಾಡಿ ಅಪ್ಲೋಡ್ ಮಾಡಬೇಕು.

SDEF Scholarship 2026-27 ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್ ಲೈನ್ ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

  1. ಮೊದಲು ಸ್ವಾಮಿ ದಯಾನಂದ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಥವಾ Buddy4study ಪೋರ್ಟಲ್ ಓಪನ್ ಮಾಡಿ. https://www.buddy4study.com/page/sdef-india-scholarship-program-2026-27
  2. ಹೋಂ ಪೇಜ್ ನಲ್ಲಿ ಕಾಣಿಸುವ “SDEF India Scholarship 2026-27 ” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ (Registration )ಮಾಡಿಕೊಳ್ಳಿ .
  4. ಲಾಗಿನ್ ಆದ ನಂತರ, ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  5. ಕೇಳಲಾದ ಎಲ್ಲಾ ದಾಖಲೆಗಳನ್ನು (Documents )ನಿಗದಿತ ಸೈಜ್ ನಲ್ಲಿ ಅಪ್ಲೋಡ್ ಮಾಡಿ.
  6. ಎಲ್ಲ ಮಾಹಿತಿಯನ್ನು ಮರು ಪರಿಶೀಲಿಸಿ ಕೊನೆಯದಾಗಿ “submit ” ಬಟನ್ ಕ್ಲಿಕ್ ಮಾಡಿ.
  7. ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? (Selection Process)

ಅರ್ಜಿ ಸಲ್ಲಿಸಿದ ತಕ್ಷಣ ಸ್ಕಾಲರ್ಶಿಪ್ ಸಿಗುವುದಿಲ್ಲ. ಇದರ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ.

  • ಮೊದಲು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • ಶಾರ್ಟ್ ಲಿಸ್ಟ್ ಆದ ವಿದ್ಯಾರ್ಥಿಗಳಿಗೆ ಆನ್ ಲೈನ್ ಇಂಟರ್ವ್ಯೂ (Interview )ಅಥವಾ ಟೆಸ್ಟ್ ಇರಬಹುದು.
  • ವಿದ್ಯಾರ್ಥಿಯ ಮೆರಿಟ್ (Merit) ಮತ್ತು ಅವರ ಕುಟುಂಬದ  ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಅಂತಿಮವಾಗಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಇದನ್ನು ಓದಿ

Aditya Birla Scholarship 2026-27 : ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್, ಅರ್ಜಿ ಲಿಂಕ್ Important update.

SDEF Scholarship 2026-27 : FAQs

1.SDEF Scholarship 2026-27 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಸ್ವಾಮಿ ದಯಾನಂದ (SDEF) ಸ್ಕಾಲರ್ಶಿಪ್ 2026 ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 31 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿದೆ.

2. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ (Application Fee) ಇದೆಯೇ?

ಇಲ್ಲ. SDEF ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಧಿಕೃತ ವೆಬ್ಸೈಟ್ ಅಥವಾ Buddy4study ಪೋರ್ಟಲ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

3. ದ್ವಿತೀಯ ಅಥವಾ ತೃತೀಯ ವರ್ಷದ (2nd or 3rd year)ಪದವಿ ವಿದ್ಯಾರ್ಥಿಗಳು ಇದಕ್ಕೆ ಅರ್ಹರೇ?

ಇಲ್ಲ. ಈ ಸ್ಕಾಲರ್ ಶಿಪ್ ಕೇವಲ ವೃತ್ತಿಪರ ಕೋರ್ಸ್ ಗಳ (Professional Courses)ಮೊದಲ ವರ್ಷಕ್ಕೆ (1st year)ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ.

4. 12ನೇ ತರಗತಿಯ ನಂತರ ಗ್ಯಾಪ್ (Gap Year) ತಗೊಂಡವರು ಅರ್ಜಿ ಸಲ್ಲಿಸಬಹುದೇ ?

ಇಲ್ಲ. 12ನೇ ತರಗತಿ ಮುಗಿದ ತಕ್ಷಣವೇ (ಅದೇ ವರ್ಷದಲ್ಲಿ) ಉನ್ನತ ಶಿಕ್ಷಣಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿರುತ್ತದೆ. ಡ್ರಾಪ್ ಔಟ್ ಅಥವಾ ಗ್ಯಾಪ್ ತಗೊಂಡವರಿಗೆ ಇದು ಅನ್ವಯಿಸುವುದಿಲ್ಲ.

5. ಸ್ಕಾಲರ್ಶಿಪ್ ಹಣವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆಯೇ? 

ಇಲ್ಲ. ಆಯ್ಕೆಯಾದ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮೊತ್ತವನ್ನು ನೇರವಾಗಿ ಅವರ ಕಾಲೇಜಿನ ಅಧಿಕೃತ ಬ್ಯಾಂಕ್ ಖಾತೆಗೆ (Cheque/ DD/NEFT ಮೂಲಕ) ಜಮೆ ಮಾಡಲಾಗುತ್ತದೆ.

6. ಈ ಸ್ಕಾಲರ್ಶಿಪ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಎಷ್ಟಿರಬೇಕು? 

ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹12 ಲಕ್ಷಕ್ಕಿಂತ ಕಡಿಮೆ ಇರಬೇಕು.

Conclusion : ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು SDEF Scholarship 2026-27 ಸ್ಕಾಲರ್ಶಿಪ್ ಒಂದು ವರದಾನವಾಗಿದೆ. ನೀವು ಅರ್ಹರಾಗಿದ್ದರೆ ತಡ ಮಾಡದೆ 31 ಅಕ್ಟೋಬರ್ 2026ರ ಒಳಗಾಗಿ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ .

ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 : ವಿದ್ಯಾರ್ಥಿಗಳಿಗೆ ₹75,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ. ಎಲ್ಲಾ ವಿದ್ಯಾರ್ಥಿಗಳಿಗೂ Important update.

Leave a Comment