CSIR Mysore Recruitment 2026 : 28 ಟೆಕ್ನಿಷಿಯನ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. 10 ನೇ ತರಗತಿ ಮತ್ತು ಐಟಿಐ ಮುಗಿಸಿದವರಿಗೆ ಸುವರ್ಣ ಅವಕಾಶ. ಸಂಬಳ ರೂ ₹19,900 – ₹63,200. ಕೊನೆಯ ದಿನಾಂಕ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶವಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಡಿಯಲ್ಲಿ ಬರುವ ಮೈಸೂರಿನ ಪ್ರಖ್ಯಾತ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (CFTRI) ಖಾಲಿ ಇರುವ ಟೆಕ್ನಿಷಿಯನ್ (Technician) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
ಮೈಸೂರಿನಲ್ಲಿ ಉತ್ತಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಉದ್ಯೋಗ ಪ್ರಕಟಣೆಯ ಸಂಪೂರ್ಣ ವಿವರಗಳಾದ ವಿದ್ಯಾರ್ಹತೆ, ವಯೋಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
CSIR Mysore Recruitment 2026 : ಮುಖ್ಯ ವಿವರಗಳು
- ಸಂಸ್ಥೆಯ ಹೆಸರು : ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR – CFTRI)
- ಹುದ್ದೆಯ ಹೆಸರು : ಟೆಕ್ನಿಷಿಯನ್ (Technician)
- ಒಟ್ಟು ಹುದ್ದೆಗಳು : 28 ಖಾಲಿ ಹುದ್ದೆಗಳು
- ಕೆಲಸದ ಸ್ಥಳ : ಮೈಸೂರು, ಕರ್ನಾಟಕ (ಅಖಿಲ ಭಾರತ ಮಟ್ಟದ ಹುದ್ದೆಗಳು)
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online)
- ಅಧಿಕೃತ ವೆಬ್ಸೈಟ್ : cftri.res.in
ಹುದ್ದೆಯ ವಿವರ ಮತ್ತು ಮಾಸಿಕ ವೇತನ (Salary Details)
CSIR Mysore Recruitment 2026 ಮೈಸೂರು ಸಂಸ್ಥೆಯು ಪ್ರಕಟಿಸಿರುವ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ಸಂಬಳ ದೊರೆಯಲಿದೆ.
- ಹುದ್ದೆಯ ಹೆಸರು : ಟೆಕ್ನಿಷಿಯನ್ (Tecnician)
- ಮಾಸಿಕ ವೇತನ ಶ್ರೇಣಿ : ₹19,900 ರಿಂದ ₹63,200 ಪ್ರತಿ ತಿಂಗಳಿಗೆ.
ಇದನ್ನು ಓದಿ
ಅರ್ಹತಾ ಮಾನದಂಡಗಳು (Eligibility Criteria)
1. ಶೈಕ್ಷಣಿಕ ವಿದ್ಯಾರ್ಹತೆ (Educational Qualification)
ಅಧಿಕೃತ ಅಧಿಸೂಚನೆಯ ಪ್ರಕಾರ, CSIR Mysore Recruitment 2026 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆ ಯನ್ನು ಹೊಂದಿರಬೇಕು.
- ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
- ಇದರೊಂದಿಗೆ ಸಂಬಂಧ ಪಟ್ಟ ಟ್ರೇಡ್ ನಲ್ಲಿ ITI (Industrial Training Institute) ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು. ಅಥವಾ 12 ನೇ ತರಗತಿ (PUC) ವಿದ್ಯಾರ್ಹತೆ ಹೊಂದಿರಬೇಕು.
2. ವಯೋಮಿತಿ ( Age Limit – As on 18/11/2026)
- ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷಗಳು ಆಗಿರಬೇಕು.
ವಯೋಮಿತಿ ಸಡಿಲಿಕೆ ( Age Relaxation) : ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕ್ಕೆ ನೀಡಲಾಗಿದೆ.
- OBC ಅಭ್ಯರ್ಥಿಗಳಿಗೆ : 3 ವರ್ಷಗಳು
- SC, ST ಅಭ್ಯರ್ಥಿಗಳಿಗೆ : 5 ವರ್ಷಗಳು
- PWBD (ವಿಕಲಚೇತನ) ಅಭ್ಯರ್ಥಿಗಳಿಗೆ : 10 ವರ್ಷಗಳು.
CSIR Mysore Recruitment 2026 : ಅರ್ಜಿ ಶುಲ್ಕದ ವಿವರ
CSIR Mysore Recruitment 2026 ಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ.
- SC, ST, PWBD, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಇತರ ಎಲ್ಲಾ ಅಭ್ಯರ್ಥಿಗಳಿಗೆ (General/OBC) : ₹500
- ಪಾವತಿ ವಿಧಾನ : ಆನ್ಲೈನ್ ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಕಾರ್ಡ್ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)
CSIR Mysore Recruitment 2026 ಟೆಕ್ನಿಷಿಯನ್ ಹುದ್ದೆಗಳ ಆಯ್ಕೆಯು ಎರಡು ಪ್ರಮುಖ ಹಂತಗಳಲ್ಲಿ ನಡೆಯುತ್ತದೆ.
- ಲಿಖಿತ ಪರೀಕ್ಷೆ ( OMR ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ – CBT) : ಈ ಪರೀಕ್ಷೆಯು SSLC+ITI ಅಥವಾ 12ನೇ ತರಗತಿ ಮಟ್ಟದ ಪಠ್ಯಕ್ರಮವನ್ನು ಆಧರಿಸಿರುತ್ತದೆ. ಒಟ್ಟು 150 ಪ್ರಶ್ನೆಗಳು ಇರಲಿದ್ದು, ಪರೀಕ್ಷೆ ಬರೆಯಲು 2 ಗಂಟೆ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
- ಸಂದರ್ಶನ (Interview) : ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಇದನ್ನು ಓದಿ
CSIR Mysore Recruitment 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
- ಅಧಿಸೂಚನೆ ಓದಿ : ಮೊದಲು CSIR ಅಧಿಕೃತ ನೇಮಕಾತಿ ಪ್ರಕಟಣೆ 2026 ಅನ್ನು ಸಂಪೂರ್ಣವಾಗಿ ಓದಿ. ನೀವು ಎಲ್ಲಾ ಅರ್ಹತೆಗಳನ್ನು ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ : ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಐಡಿ (email ID) , ಮೊಬೈಲ್ ಸಂಖ್ಯೆ, ಗುರುತಿನ ಚೀಟಿ (ID Proof), ವಯಸ್ಸಿನ ಪುರಾವೆ, ಅಂಕಪಟ್ಟಿಗಳು, Resume, ಮತ್ತು ಅನುಭವದ ಪ್ರಮಾಣ ಪತ್ರಗಳನ್ನು (ಇದ್ದರೆ) ಸ್ಕ್ಯಾನ್ ಮಾಡಿ ಇಟ್ಕೊಳ್ಳಿ.
- ಲಿಂಕ್ ಕ್ಲಿಕ್ ಮಾಡಿ : ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ https://recruitment.cftri.res.in/. ಅಲ್ಲಿರುವ “CSIR Tecnician Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ : ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಿ.
- ದಾಖಲೆಗಳನ್ನು ಅಪ್ಲೋಡ್ ಮಾಡಿ : ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ, ಸಹಿ ಮತ್ತು ಅಗತ್ಯ ಪ್ರಮಾಣ ಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ : ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು (ಅನ್ವಯಿಸಿದರೆ ಮಾತ್ರ) ಆನ್ಲೈನ್ ನಲ್ಲಿ ಪಾವತಿಸಿ.
- ಅರ್ಜಿ ಸಲ್ಲಿಸಿ ( Submit) : ಕೊನೆಯದಾಗಿ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ “submit” ಬಟನ್ ಒತ್ತಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ (Application Number) ಅನ್ನು ಪ್ರಿಂಟ್ ಅಥವಾ ಆನ್ಲೈನ್ ರಸೀದಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ.
ಪ್ರಮುಖ ಸೂಚನೆ : ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ಹಾರ್ಡ್ ಕಾಪಿಯನ್ನು (Hard copy) ರಸೀದಿಯೊಂದಿಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸುವುದು ಕಡ್ಡಾಯವಾಗಿದೆ. ಹಾರ್ಡ್ ಕಾಪಿ ತಲುಪದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಪ್ರಮುಖ ದಿನಾಂಕಗಳು ( Important Dates)
ನಿಮ್ಮ ಅರ್ಜಿಯನ್ನು ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸಲು ಈ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ.
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ : 19 ಅಕ್ಟೋಬರ್ 2026
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ನವಂಬರ್ 2026 (ರಾತ್ರಿ 11:59 ರ ಒಳಗೆ)
- ಅರ್ಜಿಯ ಹಾರ್ಡ್ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 26 ನವಂಬರ್ 2026
CSIR Mysore Recruitment 2026 : FAQs
1. CSIR ಮೈಸೂರು ನೇಮಕಾತಿ 2026ರಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
ಈ ನೇಮಕಾತಿಯಲ್ಲಿ ಒಟ್ಟು 28 ಟೆಕ್ನಿಷಿಯನ್ (Technician) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
2. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನಾಗಿರಬೇಕು?
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ನಿಂದ 10 ನೇ ತರಗತಿ (SSLC) ಉತ್ತೀರ್ಣರಾಗಿರಬೇಕು ಮತ್ತು ಸಂಬಂಧ ಪಟ್ಟ ಟ್ರೇಡ್ ನಲ್ಲಿ ITI ಕೋರ್ಸ್ ಪೂರ್ಣಗೊಳಿಸಿರಬೇಕು ಅಥವಾ 12 ನೇ ತರಗತಿ (PUC) ಮುಗಿಸಿರಬೇಕು.
3. CSIR ಮೈಸೂರು ಟೆಕ್ನಿಷಿಯನ್ ಹುದ್ದೆಗೆ ಇರುವ ವಯೋಮಿತಿ ಎಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷಗಳು. ಆದರೆ ನಿಯಮಗಳ ಪ್ರಕಾರ, OBC ಅಭ್ಯರ್ಥಿಗಳಿಗೆ 3 ವರ್ಷ, SC, ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ (Pwbd) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
4. ಈ ಹುದ್ದೆಗಳಿಗೆ ಆಯ್ಕೆ ಆದರೆ ಮಾಸಿಕ ಸಂಬಳ ಎಷ್ಟು ಸಿಗುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹19,900 ರಿಂದ ₹63,200 ವರೆಗೆ ವೇತನ ಶ್ರೇಣಿ ಇರಲಿದೆ.
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ನವಂಬರ್ 2026. ಇನ್ನು ಭರ್ತಿ ಮಾಡಿದ ಅರ್ಜಿಯ ಹಾರ್ಡ್ ಕಾಪಿಯನ್ನು ಕಳುಹಿಸಲು 26 ನವಂಬರ್ 2026 ಕೊನೆಯ ದಿನಾಂಕವಾಗಿದೆ.
6. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅಭ್ಯರ್ಥಿಗಳನ್ನು 150 ಪ್ರಶ್ನೆಗಳ OMR ಅಥವಾ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಮತ್ತು ನಂತರ ನಡೆಯುವ ಸಂದರ್ಶನ (Interview) ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ.
7. SC, ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟು?
SC, ST, PWBD (ವಿಕಲಚೇತನ) ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಅಭ್ಯರ್ಥಿಗಳಿಗೆ ₹500 ಶುಲ್ಕ ಇರುತ್ತದೆ.
ಕೊನೆಯ ಮಾತು: 10ನೇ ತರಗತಿ ಮತ್ತು ಐಟಿಐ ಮುಗಿಸಿ ಕೇಂದ್ರ ಸರ್ಕಾರಿ ನೌಕರಿ ಬಯಸುವವರಿಗೆ ಇದು ಮೈಸೂರಿನಲ್ಲಿಯೇ ಕೆಲಸ ಮಾಡಲು ಸಿಗುತ್ತಿರುವ ಒಂದು ಅತ್ಯುತ್ತಮ ಅವಕಾಶವಾಗಿದೆ. ತಡ ಮಾಡದೆ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ. ಈ ಉದ್ಯೋಗ ಮಾಹಿತಿ ನಿಮ್ಮ ಸ್ನೇಹಿತರಿಗೂ ಉಪಯೋಗವಾಗಬಹುದು, ಆದ್ದರಿಂದ ಈಗಲೇ ಶೇರ್ ಮಾಡಿ.
ಇದೇ ಪ್ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ಇದನ್ನು ಓದಿ