BMRCL Recruitment 2026 : ಬೆಂಗಳೂರು ಮೆಟ್ರೋದಲ್ಲಿ 50 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ವಿದ್ಯಾರ್ಥಿಗಳಿಗೆ important update.

BMRCL Recruitment 2026BMRCL Recruitment 2026 : ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ತನ್ನ ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳ ಸುರಕ್ಷತಾ ಮೇಲ್ವಿಚಾರಣೆಗಾಗಿ ಒಟ್ಟು 50 ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ (Assistant Security Officer Grade NE-3) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. 

ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ವಯೋಮಿತಿ, ವಿದ್ಯಾರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ವಿಸ್ತಾರವಾಗಿ ನೀಡಲಾಗಿದೆ.

BMRCL Recruitment 2026 : ಮುಖ್ಯಾಂಶಗಳು 

  • ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)
  • ಅಧಿ ಸೂಚನೆ ಸಂಖ್ಯೆ : BMRCL/HR/0006/O&M/2026
  • ಹುದ್ದೆಯ ಹೆಸರು : ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ (Assistant Security Officer)
  • ಒಟ್ಟು ಹುದ್ದೆಗಳು : 50 ಹುದ್ದೆಗಳು
  • ಉದ್ಯೋಗದ ಪ್ರಕಾರ : ಒಪ್ಪಂದದ ಆಧಾರದ ಮೇಲೆ (Contract Basis)
  • ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ.
  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 9 ಅಕ್ಟೋಬರ್ 2026.
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಅಕ್ಟೋಬರ್ 2026
  • ಹಾರ್ಡ್ ಕಾಪಿ ತಲುಪಿಸಲು ಕೊನೆಯ ದಿನಾಂಕ: 05 ನವಂಬರ್ 2026 .
  • ಅಧಿಕೃತ ವೆಬ್ಸೈಟ್ : https://www.bmrc.co.in/career/

ಹುದ್ದೆಯ ವಿವರಗಳು ಮತ್ತು ಅಗತ್ಯ ಅರ್ಹತೆಗಳು 

BMRCL Recruitment 2026 ನಿಯಮಾವಳಿಗಳ ಪ್ರಕಾರ, ಈ ಹುದ್ದೆಗಳಿಗೆ ಕೇವಲ ಬಾಹ್ಯ (External) ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಸ್ತುತ BMRCL ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಅಥವಾ ಗುತ್ತಿಗೆ ನೌಕರರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

1. ವಿದ್ಯಾರ್ಹತೆ (Educational Qualification)

BMRCL Recruitment 2026  ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು.

2. ಕಡ್ಡಾಯ ಭಾಷಾಜ್ಞಾನ 

ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಕಡ್ಡಾಯವಾಗಿರಬೇಕು. (ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯುವುದು ಅತ್ಯಗತ್ಯ)

3. ಅಗತ್ಯ ಅನುಭವದ ಮಾನದಂಡಗಳು (Experience Criteria)

BMRCL Recruitment 2026 ಹುದ್ದೆಗಳಿಗೆ ಕೇವಲ ಇಲಾಖೆಗಳ ನಿವೃತ್ತ ಅಥವಾ ಪ್ರಸ್ತುತ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿದೆ.

  • ರಕ್ಷಣಾ ಪಡೆಗಳು (Defence Services) : ಭಾರತೀಯ ಭೂಸೇನೆ (Army), ನೌಕಾಸೇನೆ (Navy ) ಅಥವಾ ವಾಯು ಸೇನೆಯಲ್ಲಿ (Airforce )ಜೂನಿಯರ್ ಕಮಿಷನ್ ಆಫೀಸರ್ ಅಥವಾ ಅದಕ್ಕೆ ಸಮಾನವಾದ ಶ್ರೇಣಿಯಲ್ಲಿ ಸೇವೆ ಸಲ್ಲಿಸಿರಬೇಕು.
  • ಪೋಲಿಸ್ ಮತ್ತು ಅರೆಸೇನಾ ಪಡೆಗಳು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಥವಾ ಒಕ್ಕೂಟದ ಅರೆಸೇನಾ ಪಡೆಗಳಲ್ಲಿ (CAPF , CRPF, BSF, CISF)ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅಥವಾ ಅದಕ್ಕೆ ಸಮಾನವಾದ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಬೇಕು.
  • ವಿಶೇಷ ಸೂಚನೆ : ಪ್ರಸ್ತುತ ಮಿಲಿಟರಿಯಲ್ಲಿ ಸೇವೆಯಲ್ಲಿದ್ದು, 31 ಡಿಸೆಂಬರ್ 2026ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ನಿವೃತ್ತ ಆಗಲಿರುವ ಸೈನಿಕರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

BMRCL Recruitment 2026: ವಯೋಮಿತಿ ಮತ್ತು ಗುತ್ತಿಗೆ ಅವಧಿ (Age Limit & Contract Period)

  • BMRCL Recruitment 2026 ಕ್ಕೆ ಗರಿಷ್ಠ ವಯೋಮಿತಿ ಅಧಿ ಸೂಚನೆ ಪ್ರಕಟವಾದ ದಿನಾಂಕಕ್ಕೆ ಅಭ್ಯರ್ಥಿಯ ಗರಿಷ್ಠ ವಯಸ್ಸು 62 ವರ್ಷಗಳು ಮೀರಿರಬಾರದು.

ಒಪ್ಪಂದದ ಅವಧಿ (Period Of Appointment)

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಯಸ್ಸಿನ ಆಧಾರದ ಮೇಲೆ ಆರಂಭಿಕ ಗುತ್ತಿಗೆ ಅವಧಿಯನ್ನು ನಿಗದಿಪಡಿಸಲಾಗುತ್ತದೆ.

1. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗೆ: ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

2. 60 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳಿಗೆ : ಆರಂಭದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

  • ಗಮನಿಸಿ : ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು BMRCL ಸಂಸ್ಥೆಯ ಅಗತ್ಯತೆಗಳನ್ನು ಪರಿಗಣಿಸಿ ಈ ಒಪ್ಪಂದದ ಅವಧಿಯನ್ನು ಮುಂದಕ್ಕೆ ವಿಸ್ತರಿಸಲಾಗುತ್ತದೆ.
  • ಕೆಲಸ ಬಿಡುವ ನಿಯಮ : ಒಪ್ಪಂದದ ಅವಧಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಬೇಕಾದರೆ 6೦ ವರ್ಷದೊಳಗಿನವರು ಮೂರು ತಿಂಗಳ ಮುಂಚಿತವಾಗಿ ಹಾಗೂ 60 ವರ್ಷ ಮೇಲ್ಪಟ್ಟವರು ಒಂದು ತಿಂಗಳ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ.

ಮಾಸಿಕ ವೇತನ ಮತ್ತು ಭತ್ಯೆ ಗಳು (Salary Details)

BMRCL Recruitment 2026 ಈ ಹುದ್ದೆಗಳಿಗೆ ಆಕರ್ಷಕ ಒಟ್ಟು ವೇತನವನ್ನು (Consolidated) ನಿಗದಿಪಡಿಸಿದೆ.

  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ : ತಿಂಗಳಿಗೆ ₹32,950
  • 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ : ತಿಂಗಳಿಗೆ ₹30,000
  • ಹೆಚ್ಚುವರಿ ಭತ್ಯೆ ಗಳು : ಈ ನಿಗದಿತ ವೇತನದ ಜೊತೆಗೆ ಬಿ ಎಂ ಆರ್ ಸಿ ಎಲ್ ಕಂಪನಿಯ ನಿಯಮಾವಳಿಗಳ ಪ್ರಕಾರ ಇತರ ಭತ್ಯೆ ಗಳು ಅನ್ವಯಿಸುತ್ತದೆ.

ಇದನ್ನು ಓದಿ

DRDO GTRE ನೇಮಕಾತಿ 2026 : ಬೆಂಗಳೂರಿನಲ್ಲಿ ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿ-ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳು, important update.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)

BMRCL Recruitment 2026 ಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡಿ, ಶಾರ್ಟ್ ಲಿಸ್ಟ್ ಆದವರನ್ನು ಕೆಳಗಿನ ಮೂರು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹಂತ-1: ದೈಹಿಕ ಸಾಮರ್ಥ್ಯ ಪರೀಕ್ಷೆ (Physical Fitness Test -PFT)

  • ಅಭ್ಯರ್ಥಿಗಳು 1.5 km ಓಟವನ್ನು ಗರಿಷ್ಠ 10 ರಿಂದ ನಿಮಿಷಗಳ ಒಳಗೆ (ವಯಸ್ಸಿನ ಮಾನದಂಡದ ಪ್ರಕಾರ) ಪೂರ್ಣಗೊಳಿಸಬೇಕು. ನಿಗದಿತ ಸಮಯಕ್ಕಿಂತ ಬೇಗ ಓಟ ಮುಗಿಸುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ.
  • ಕಡ್ಡಾಯ ದಾಖಲೆ : ದೈಹಿಕ ಪರೀಕ್ಷೆಗೆ ಹಾಜರಾಗುವ ಸರ್ಕಾರಿ ಆಸ್ಪತ್ರೆಯಿಂದ ಪಡೆದ ಇತ್ತೀಚಿನ ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರವನ್ನು (Medical Fitness Certificate) ಕಡ್ಡಾಯವಾಗಿ ಸಲ್ಲಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಮುಂದಿನ ಹಂತಕ್ಕೆ ಅರ್ಹರಾಗುತ್ತಾರೆ.

ಹಂತ -2: ಲಿಖಿತ ಪರೀಕ್ಷೆ (Written Test)

  • ದೈಹಿಕ ಪರೀಕ್ಷೆಯಲ್ಲಿ ಪಾಸಾದವರಿಗೆ 1 ಗಂಟೆಯ ಅವಧಿಯ ಲಿಖಿತ ಪರೀಕ್ಷೆ ಇರುತ್ತದೆ.
  • ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು.
  • ಪರೀಕ್ಷೆಯು ಪ್ರಬಂಧ ಬರವಣಿಗೆ (essay writing)ಮತ್ತು ಸಾಮಾನ್ಯ ಜ್ಞಾನ (general knowledge)ವಿಷಯಗಳನ್ನು ಒಳಗೊಂಡಿರುತ್ತದೆ.

ಹಂತ -3: ವೈಯಕ್ತಿಕ ಸಂದರ್ಶನ (Interview)

  • ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಅಂತಿಮ ಸುತ್ತಿನ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಅವರ ವೈಯಕ್ತಿಕ ಇಮೇಲ್ ಐಡಿ ಅಥವಾ ಎಸ್ಎಂಎಸ್ ಮೂಲಕ ತಿಳಿಸಲಾಗುವುದು.

BMRCL Recruitment 2026 ಕ್ಕೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ. 

ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಫಾರ್ಮ್ ಭರ್ತಿ ಮಾಡಿ, ನಂತರ ಅದರ ಹಾರ್ಡ್ ಕಾಪಿಯನ್ನು ಆಫ್ಲೈನ್ ಮೂಲಕ ಕಳುಹಿಸಬೇಕಾಗುತ್ತದೆ. ಹಂತ ಹಂತದ ವಿವರ ಇಲ್ಲಿದೆ.

  1. ವೆಬ್ಸೈಟ್ ಗೆ ಭೇಟಿ ನೀಡಿ : ಲೇಖನದ ಮೇಲೆ ನೀಡಿರುವ BMRCL ಅಧಿಕೃತ ವೆಬ್ ಸಟ್ ಗೆ ಭೇಟಿ ನೀಡಿ.
  2. ಆನ್ಲೈನ್ ಅರ್ಜಿ ಭರ್ತಿ ಮಾಡಿ : ಸಂಬಂಧಿತ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಎಲ್ಲಾ ವೈಯಕ್ತಿಕ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.
  3. ಪ್ರಿಂಟ್ ಔಟ್ ತೆಗೆದುಕೊಳ್ಳಿ : ಅರ್ಜಿ ಸಬ್ಮಿಟ್ ಆದ ನಂತರ ಕಂಪ್ಯೂಟರ್ನಿಂದ ಜನರೇಟರ್ ಆದ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  4. ಫೋಟೋ ಮತ್ತು ಸಹಿ : ಪ್ರಿಂಟ್ ಮಾಡಿದ ಅರ್ಜಿಯ ನಿಗದಿತ ಜಾಗದಲ್ಲಿ ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಅಂಟಿಸಿ ಮತ್ತು ಸಹಿ ಮಾಡಿ.
  5. ದಾಖಲೆಗಳನ್ನು ಲಗತ್ತಿಸಿ : ಅರ್ಜಿಯೊಂದಿಗೆ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ. ಅವುಗಳ ಮೇಲೆ ನಿಮ್ಮ ಸ್ವಯಂ ದೃಢೀಕರಣ (Self Attested)ಸಹಿ ಇರಬೇಕು.

ಲಗತ್ತಿಸಬೇಕಾದ ಅಗತ್ಯ ದಾಖಲೆಗಳ ಪಟ್ಟಿ 

  • ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ.
  • ವಯಸ್ಸಿನ ಪುರಾವೆ (10ನೇ ತರಗತಿಯ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ)
  • ಪ್ರಸ್ತುತ ಮತ್ತು ಹಿಂದಿನ ಉದ್ಯೋಗದ ಅನುಭವದ ಪ್ರಮಾಣ ಪತ್ರಗಳು.
  • ನಿವೃತ್ತ ಸೈನಿಕರಿಗೆ ಸಕ್ಷಮ ಪ್ರಾಧಿಕಾರ ನೀಡಿದ PPO (Pension Payment Order) ಮತ್ತು ಡಿಸ್ಚಾರ್ಜ್ ಸರ್ಟಿಫಿಕೇಟ್ (Discharge Certificate)
  • ಪ್ರಸ್ತುತ ಸೇವೆಯಲ್ಲಿರುವ ಸೈನಿಕರಿಗೆ ಇಲಾಖೆಯಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ.
  • ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪತ್ರ.

ಇದನ್ನು ಓದಿ

HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 : ವಿದ್ಯಾರ್ಥಿಗಳಿಗೆ ₹75,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ. ಎಲ್ಲಾ ವಿದ್ಯಾರ್ಥಿಗಳಿಗೂ Important update.

BMRCL Recruitment 2026 ಕ್ಕೆ ಅರ್ಜಿ ಕಳುಹಿಸಬೇಕಾದ ವಿಳಾಸ ಮತ್ತು ಕೊನೆಯ ದಿನಾಂಕ. 

ನಿಮ್ಮ ಸಹಿ ಮಾಡಿದ ಅರ್ಜಿ ಫಾರ್ಮ್ ಮತ್ತು ದಾಖಲೆಗಳನ್ನು ಒಂದು ಲಕೋಟೆಯಲ್ಲಿ (Envelope) ಹಾಕಬೇಕು. ಆ ಕವರಿನ ಮೇಲೆ ಕಡ್ಡಾಯವಾಗಿ ದೊಡ್ಡ ಅಕ್ಷರಗಳಲ್ಲಿ “APPLICATION FOR THE POST OF ASSISTANT SECURITY OFFICER ” ಎಂದು ಬರೆಯಬೇಕು. ಇದನ್ನು ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ (Speed Post)ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು.

  • To, Dy. General Manager (HR) , Banglore Metro Rail Corporation Ltd.||| Floor, BMTC Complex, K.H Road, Shanthinagar, Bengaluru – 560027

ಪ್ರಮುಖ ನೆನಪಿನ ದಿನಾಂಕಗಳು (Important Dates)

BMRCL Recruitment 2026 ಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಅಕ್ಟೋಬರ್ 2026
  • ಅರ್ಜಿ ಯು ಹಾರ್ಡ್ ಕಾಪಿ ತಲುಪಲು ಕೊನೆಯ ಸಮಯ : 5 ನವೆಂಬರ್ 2026.

ತಾಂತ್ರಿಕ ಸಹಾಯಕ್ಕಾಗಿ : ಆನ್ಲೈನ್ ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆ ಎದುರಾದಲ್ಲಿ ಅಭ್ಯರ್ಥಿಗಳು BMRCL ಅಧಿಕೃತ ಸಹಾಯವಾಣಿ  ಇ-ಮೇಲ್ ಆದ helpdesk@bmrc.co.in ಗೆ ಸಂದೇಶ ಕಳುಹಿಸಿ ಪರಿಹಾರ ಪಡೆದುಕೊಳ್ಳಬಹುದು.

BMRCL Recruitment 2026 : FAQs

1. BMRCL ಅಸಿಸ್ಟೆಂಟ್ ಸೆಕ್ಯೂರಿಟಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 31 ಅಕ್ಟೋಬರ್ 2026 ಕೊನೆಯ ದಿನವಾಗಿದೆ. ಹಾಗೂ ಭರ್ತಿ ಮಾಡಿದ ಅರ್ಜಿಯ ಹಾರ್ಡ್ ಕಾಪಿಯನ್ನು ಕಳುಹಿಸಲು 5 ನವೆಂಬರ್ 2026ರ ಸಂಜೆ 4:00 ಗಂಟೆ.

2. ಈ ಹುದ್ದೆಗಳು ಖಾಯಂ ಕೆಲಸವೇ? (Permanent)

ಇಲ್ಲ, ಇವು ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಆರಂಭದಲ್ಲಿ ವಯಸ್ಸಿನ ಆಧಾರದ ಮೇಲೆ 1 ರಿಂದ 3 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಕೆಲಸದ ಆಧಾರದ ಮೇಲೆ ಅವಧಿಯನ್ನು ವಿಸ್ತರಿಸಲಾಗುತ್ತದೆ.

3. ಹೊಸಬರು ಅಥವಾ ಸಾಮಾನ್ಯ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ? 

ಇಲ್ಲ, ಪದವಿ ವಿದ್ಯಾರ್ಹತೆಯ ಜೊತೆಗೆ ಭಾರತೀಯ ರಕ್ಷಣಾ ಪಡೆಗಳು, ಕರ್ನಾಟಕ ರಾಜ್ಯ ಪೊಲೀಸ್ ಅಥವಾ ಅರೆಸೇನಾ ಪಡೆಗಳಲ್ಲಿ ಕನಿಷ್ಠ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಅಥವಾ ನಿವೃತ್ತಿ ಹೊಂದಿದವರಿಗೆ ಮಾತ್ರ ಈ ಹುದ್ದೆಗಳು ಮೀಸಲಾಗಿವೆ.

4. ಈ ಹುದ್ದೆಗೆ ಕನಿಷ್ಠ ವಯೋಮಿತಿ ಎಷ್ಟು? 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 62 ವರ್ಷಗಳು ಮೀರಿರಬಾರದು.

5. ಮಾಸಿಕ ವೇತನ ಎಷ್ಟು ಇರಲಿದೆ?

60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಿಂಗಳಿಗೆ ₹32,950 ಮತ್ತು 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ₹30,000 ನಿಗದಿತ ವೇತನ ಇರಲಿದೆ. ಇದರೊಂದಿಗೆ ಕಂಪನಿ ನಿಯಮಾವಳಿಗಳ ಪ್ರಕಾರ ಇತರೆ ಭತ್ಯೆ ಗಳು ಲಭ್ಯವಿರುತ್ತವೆ.

6. ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಇದೆಯೇ ? (Application fees)

ಅಧಿಕೃತ ಪ್ರಕಟಣೆಯ ಪ್ರಕಾರ ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಹ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

7. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? 

ಆಯ್ಕೆಯನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತದೆ. 1. ದೈಹಿಕ ಸಾಮರ್ಥ್ಯ ಪರೀಕ್ಷೆ 2. ಲಿಖಿತ ಪರೀಕ್ಷೆ 3. ವೈಯಕ್ತಿಕ ಸಂದರ್ಶನ.

8. ಲಿಖಿತ ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ಬರೆಯಬಹುದು?

ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ಕನ್ನಡ ಅಥವಾ ಇಂಗ್ಲಿಷ್ ಎರಡರಲ್ಲೂ ತಮಗೆ ಅನುಕೂಲಕರವಾದ ಯಾವುದೇ ಒಂದು ಭಾಷೆಯಲ್ಲಿ ಬರೆಯಬಹುದು. ಆದರೆ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಕಡ್ಡಾಯವಾಗಿರಬೇಕು.

9. ತಾಂತ್ರಿಕ ತೊಂದರೆಗಳಿದ್ದರೆ ಯಾರನ್ನು ಸಂಪರ್ಕಿಸಬೇಕು? 

ಆನ್ಲೈನ್ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ BMRCL ಅಧಿಕೃತ ಇ-ಮೇಲ್ ವಿಳಾಸ helpdesk@bmrc.co.in‌ ಗೆ ಮೇಲ್ ಮಾಡಿ ಸಹಾಯ ಪಡೆಯಬಹುದು.

ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಇದನ್ನು ಓದಿ

Sangolli Rayanna Sainik School Recruitment: ಸಂಗೊಳ್ಳಿ ಸೈನಿಕ ಶಾಲೆಯಲ್ಲಿ ನೇಮಕಾತಿ, ₹1.5 ಲಕ್ಷ ವೇತನ, Important update.

Leave a Comment