ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಉದ್ಯಮ ಆರಂಭಿಸಲು 10 ರಿಂದ 25 ಲಕ್ಷ ಸಾಲ, ಶೇಕಡ 35% ಸಬ್ಸಿಡಿ, Important Loan.

ಸ್ವಯಂ ಉದ್ಯೋಗ ಸಾಲ ಯೋಜನೆ 2026ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಸ್ವಂತ ವ್ಯಾಪಾರ, ಹೊಸ ಉತ್ಪಾದನಾ ಘಟಕ ಅಥವಾ ಸೇವಾ ಉದ್ದಿಮೆ ಆರಂಭಿಸಲು ಬಯಸುವ ಕರ್ನಾಟಕದ ನಿರುದ್ಯೋಗಿ ಯುವಕ ಯುವತಿಯರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳಿಗೆ ಸರ್ಕಾರದಿಂದ ಭರ್ಜರಿ ಆರ್ಥಿಕ ನೆರವಿನ ಸುವರ್ಣ ಅವಕಾಶ ಕಲ್ಪಿಸಲಾಗಿದೆ. 

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ (DIC) ಸಹಯೋಗದೊಂದಿಗೆ ಹೊಸ ಉದ್ಯಮ ಸ್ಥಾಪಿಸಲು 10 ರಿಂದ 25 ಲಕ್ಷದವರೆಗೆ ಸಾಲ ಹಾಗೂ 35% ಸಬ್ಸಿಡಿ ನೀಡಲಾಗುತ್ತಿದೆ. ಅನೇಕ ಜನರು ಕರ್ನಾಟಕದ ಹಳೆಯ ಮುಖ್ಯಮಂತ್ರಿ ಸ್ವಯಂ ಉದ್ಯೋಗ ಯೋಜನೆ ವೆಬ್ಸೈಟ್ ತೆರೆಯದೆ ಗೊಂದಲಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೈಗಾರಿಕೆ ಇಲಾಖೆಯ ಮೂಲಕ ಈ ಯೋಜನೆಯನ್ನು ರಾಷ್ಟ್ರೀಯ ಜನ ಸಮರ್ಥ ಮತ್ತು PMEGP ಪೋರ್ಟಲ್ ಗೆ ವಿಲೀನಗೊಳಿಸಿದ್ದು, ಕರ್ನಾಟಕದ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ 35 ಪರ್ಸೆಂಟ್ ಸಬ್ಸಿಡಿ ಸಾಲವನ್ನು ಮಂಜೂರು ಮಾಡಲಾಗುತ್ತಿದೆ.

ಇದನ್ನು ಓದಿ

Kayaka Kiran Yojana: ₹2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಅರ್ಹತೆ ದಾಖಲೆಗಳ important Notice.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಸಾಲದ ವಿವರ. 

1. ವಿಶೇಷ ವರ್ಗದವರು (ಮಹಿಳೆಯರು SC, ST, OBC ಅಲ್ಪಸಂಖ್ಯಾತರು, ಮಾಜಿ ಸೈನಿಕರು. )

  • ಗ್ರಾಮೀಣ ಪ್ರದೇಶದಲ್ಲಿ : ಯೋಜನಾ ವೆಚ್ಚದ ಬರೋಬ್ಬರಿ 35% ಸರ್ಕಾರಿ ಸಬ್ಸಿಡಿ ಸಿಗುತ್ತದೆ. ಅರ್ಜಿದಾರರು ಕೇವಲ 5% ಸ್ವಂತ ಬಂಡವಾಳ ಹೂಡಿದರೆ ಉಳಿದ 60% ಹಣವನ್ನು ಬ್ಯಾಂಕ್ ಸಾಲವಾಗಿ ನೀಡುತ್ತದೆ.
  • ನಗರ ಪ್ರದೇಶಗಳಲ್ಲಿ : ಯೋಜನಾ ವೆಚ್ಚದ 25% ಸಬ್ಸಿಡಿ ಸಿಗುತ್ತದೆ. ಅರ್ಜಿದಾರರು 5% ಹಣ ಹಾಕಬೇಕು. ಉಳಿದ 70% ಬ್ಯಾಂಕ್ ಸಾಲ ದೊರೆಯುತ್ತದೆ.

2. ಸಾಮಾನ್ಯ ವರ್ಗದ ಪುರುಷರು (General)

  • ಗ್ರಾಮೀಣ ಪ್ರದೇಶದಲ್ಲಿ : ಯೋಜನಾ ವೆಚ್ಚದ 25% ಸಬ್ಸಿಡಿ ಲಭ್ಯ. ಸ್ವಂತ ಬಂಡವಾಳ 10% ಉಳಿದ ಶೇಕಡ 65% ಬ್ಯಾಂಕ್ ಸಾಲ.
  • ನಗರ ಪ್ರದೇಶದಲ್ಲಿ : ಯೋಜನಾ ವೆಚ್ಚದ 15% ಸಬ್ಸಿಡಿ. ಸ್ವಂತ ಬಂಡವಾಳ 10% ಉಳಿದ ಶೇಕಡ 75% ಬ್ಯಾಂಕ್ ಸಾಲ.

ಗ್ರಾಮೀಣ ಮಹಿಳೆಯರ ಹೆಸರಿನಲ್ಲಿ 10 ಲಕ್ಷ ವೆಚ್ಚದ ಉದ್ಯಮ ಆರಂಭಿಸಿದರೆ, ನೀವು 50,000 ಸ್ವಂತ ಹೂಡಿಕೆ ಮಾಡಬೇಕು. ಸರ್ಕಾರದಿಂದ 3,50,000 ಸಬ್ಸಿಡಿ ಮತ್ತು ಉಳಿದ ಹಣ ಬ್ಯಾಂಕ್ ಸಾಲವಾಗಿ ಸಿಗುತ್ತದೆ.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಯಾವ ಉದ್ಯಮಗಳಿಗೆ ಸಾಲ 

1. ಉತ್ಪಾದನಾ ವಲಯ

  • ಬೇಕರಿ
  • ಗಣದ ಎಣ್ಣೆ ಅಥವಾ ಹಿಟ್ಟಿನ ಗಿರಣಿ
  • ರೆಡಿಮೇಡ್ ಬಟ್ಟೆ ಹೊಲಿಗೆ ಯೂನಿಟ್ ಅಥವಾ ಗಾರ್ಮೆಂಟ್ಸ್.
  • ಪೇಪರ್ ಕಪ್
  • ಪೇಪರ್ ಪ್ಲೇಟ್ ಮತ್ತು ಬ್ಯಾಗ್
  • ಸಿಮೆಂಟ್ ಇಟ್ಟಿಗೆ ತಯಾರಿಕೆ
  • ವೆಲ್ಡಿಂಗ್ ಶಾಪ್
  • ಕರಕುಶಲ ವಸ್ತುಗಳ ತಯಾರಿಕೆ

2. ಸೇವಾ ವಲಯ

  • ಆಟೋಮೊಬೈಲ್ ವಾಟರ್ ವಾಚ್ ಸೆಂಟರ್
  • ಟು ವೀಲರ್ ಫೋರ್ ವೀಲರ್ ಗ್ಯಾರೇಜ್
  • ಬ್ಯೂಟಿ ಪಾರ್ಲರ್
  • ಪ್ರೊಫೆಷನಲ್ ಕಟಿಂಗ್ ಸಲೂನ್
  • ಸೈಬರ್ ಕೇಂದ್ರ
  • ಲಾಂಡ್ರಿ ಸರ್ವಿಸ್
  • ಸೌಂಡ್ಸ್ ಅಂಡ್ ಲೈಟಿಂಗ್ಸ್ ಮತ್ತು ಶಾಮಿಯಾನ
  • ಮೊಬೈಲ್ ಶಾಪ್

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಅರ್ಹತೆಗಳು 

  1. ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
  2. ಕನಿಷ್ಠ 18 ವಯಸು ಇರಬೇಕು.
  3. ಉತ್ಪಾದನಾ ಘಟಕ 10 ಲಕ್ಷ ಮತ್ತು ಸೇವಾ ಘಟಕ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ವಿದ್ಯಾರ್ಹತೆ ಕಡ್ಡಾಯವಿಲ್ಲ.
  4. 10 ಲಕ್ಷಕ್ಕಿಂತ ಹೆಚ್ಚು ಉತ್ಪಾದನೆ ಘಟಕ ಹಾಗೂ 5 ಲಕ್ಷಕ್ಕಿಂತ ಹೆಚ್ಚು ಸೇವಾ ಘಟಕ ಆಗಿದ್ದರೆ ಎಂಟನೇ ತರಗತಿ ಪಾಸ್ ಆಗಿರಬೇಕು.
  5. ಇದು ಹೊಸ ಉದ್ಯಮ ಆರಂಭಿಸುವವರಿಗೆ ಮಾತ್ರ ಅನ್ವಯ, ಹಳೆ ವ್ಯಾಪಾರ ವಿಸ್ತರಣೆಗೆ ಅವಕಾಶವಿಲ್ಲ.
  6. ಈ ಹಿಂದೆ ಈ ಯೋಜನೆಯಲ್ಲಿ ಯಾವುದೇ ರೀತಿಯ ಸಬ್ಸಿಡಿ ಸಾಲ ಪಡೆದಿರಬಾರದು. ಮತ್ತು ಕುಟುಂಬದ ಒಬ್ಬರಿಗೆ ಮಾತ್ರ ಈ ಸಾಲ ಸೌಲಭ್ಯ ದೊರೆಯುತ್ತದೆ.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ದಾಖಲೆಗಳು 

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಗ್ರಾಮೀಣ ಪ್ರದೇಶದ ಪ್ರಮಾಣ ಪತ್ರ
  • ಯೋಜನೆ ವರದಿ
  • ಫೋಟೋ
  • ಪಾಸ್ ಬುಕ್ ಜೆರಾಕ್ಸ್
  • ಎಂಟನೇ ತರಗತಿ ಅಥವಾ 10ನೇ ತರಗತಿ ಅಂಕಪಟ್ಟಿ.

ಇದನ್ನು ಓದಿ

ಮಹಿಳಾ ಸ್ವಸಹಾಯ ಸಂಘ Subsidy : SHG Subsidy Scheme -ಮಹಿಳಾ ಸ್ವಸಹಾಯ ಗುಂಪುಗಳಿಗೆ 2 ಲಕ್ಷ ಸಹಾಯಧನ, important update.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಅರ್ಜಿ ಸಲ್ಲಿಸುವ ವಿಧಾನ 

  1. ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. https://www.jansamarth.in/home
  2. Business Activity Loan – Check Eligibility ಬಟನ್ ಕ್ಲಿಕ್ ಮಾಡಿ.
  3. ಉತ್ಪಾದನೆ ಘಟಕವೇ ಅಥವಾ ಸೇವಾ ಘಟಕವೇ ಎಂದು ನಮೂದಿಸಿ ಮತ್ತು ಅಗತ್ಯವಿರುವ ಸಾಲದ ಮೊತ್ತವನ್ನು ನಮೂದಿಸಿ.
  4. ಅರ್ಹತೆಯನ್ನು ಪರಿಶೀಲಿಸಿದ ನಂತರ ಅಲ್ಲಿ Apply Now ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಿ.
  5. ಏಜೆನ್ಸಿ ಆಯ್ಕೆ- DIC ಆಯ್ಕೆ ಮಾಡಿ.
  6. ನಿಮ್ಮ ವೈಯಕ್ತಿಕ ವಿವರ, ವಿಳಾಸ ಬ್ಯಾಂಕ್ ಖಾತೆ ವಿವರ ಯೋಜನೆ ವರದಿ ಅಪ್ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.
  7. ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ ಔಟ್ ಅನ್ನು ತೆಗೆದುಕೊಂಡು ನಿಮ್ಮ ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಯೋಜನೆಯ ಸಲಹೆ 

Jansamarth ಪೋರ್ಟಲ್ ಭಾರತ ಸರ್ಕಾರದ ಒಂದು ವಿಶಿಷ್ಟ ಆನ್ಲೈನ್ ವೇದಿಕೆಯಾಗಿದ್ದು, ಇದು ದೇಶದ ವಿವಿಧ ಕ್ರೆಡಿಟ್ ಲಿಂಕ್ ಸರ್ಕಾರಿ ಸಾಲ ಯೋಜನೆಗಳನ್ನು ಮತ್ತು ಸಬ್ಸಿಡಿಗಳನ್ನು ಒಂದೇ ಸೂರಿನಲ್ಲಿ ಒದಗಿಸುತ್ತದೆ.

ಈ ವ್ಯವಸ್ಥೆಯ ಸಾಲ ಪಡೆಯಲು ಬಯಸುವ ನಾಗರಿಕರನ್ನು ನೇರವಾಗಿ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಡಿಜಿಟಲ್ ಆಗಿ ಸಂಪರ್ಕಿಸುತ್ತದೆ. ಪ್ರಸ್ತುತ ಈ ಪೋರ್ಟಲ್ ನಲ್ಲಿ ಎಂಟಕ್ಕೂ ಹೆಚ್ಚು ಸಾಲದ ವಿಭಾಗಗಳಿದ್ದು 16ಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಯೋಜನೆಗಳು ಅಧ್ಯವಿದೆ.

ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಪ್ರಮುಖ ಸಾಲದ ವಿಭಾಗಗಳು

  • ವ್ಯಾಪಾರ ಮತ್ತು ಉದ್ಯಮ ಸಾಲ
  • ಶಿಕ್ಷಣ ಸಾಲ
  • ಮನೆ ಸಾಲ
  • ಕೃಷಿ ಮೂಲ ಸೌಕರ್ಯ ಸಾಲ
  • ನವೀಕರಿಸಬಹುದಾದ ಇಂಧನ ಸಾಲ
  • ಜೀವನೋಪಾಯ ಸಾಲ

ಜನ್ ಸಮರ್ಥ್ ಪೋರ್ಟಲ್ ನ ಪ್ರಯೋಜನಗಳು

  • ಸರಳ ಅರ್ಹತ ಪರಿಶೀಲನೆ : ನೀವು ನೋಂದಾಯಿಸಿಕೊಳ್ಳುವ ಮುನ್ನವೇ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಿಮಗೆ ಯಾವ ಯೋಜನೆಗಳು ಸೂಕ್ತವಾಗಿವೆ ಎಂಬುದನ್ನು ಡಿಜಿಟಲ್ ಆಗಿ ತಿಳಿದುಕೊಳ್ಳಬಹುದು.
  • ಡಿಜಿಟಲ್ ಅನುಮೋದನೆ ,: ಈ ಪೋರ್ಟಲ್ ಮೂಲಕವೇ ಆನ್ಲೈನ್ ಅರ್ಜಿ ಸಲ್ಲಿಸಿ ಬ್ಯಾಂಕುಗಳಿಂದ ಇನ್ ಪ್ರಿನ್ಸಿಪಲ್ ತತ್ವ ಆಧಾರಿತ ಡಿಜಿಟಲ್ ಅನುಮೋದನೆಯನ್ನು ಪಡೆದುಕೊಳ್ಳಬಹುದು.
  • 250 + ಬ್ಯಾಂಕುಗಳ ಆಯ್ಕೆ : ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈ ಪೋರ್ಟಲ್ ಗೆ ಜೋಡಿಸಲ್ಪಟ್ಟಿದೆ.
  • ಅರ್ಜಿ ಟ್ರ್ಯಾಕಿಂಗ್ : ನಿಮ್ಮ ಸಾಲದ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಆನ್ಲೈನ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು.

ಇದನ್ನು ಓದಿ

Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.

Leave a Comment