Hasu Emme kharidige Subsidy : ಗ್ರಾಮೀಣ ಮಹಿಳೆಯರಿಗೆ ಹಸು ಮತ್ತು ಎಮ್ಮೆ ಖರೀದಿಸಲು ಶೇಕಡ 25ರಷ್ಟು ಸಬ್ಸಿಡಿ ನೀಡುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ರೈತಪಿ ವರ್ಗಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಹೈನುಗಾರಿಕೆ ಕ್ಷೇತ್ರಕ್ಕೆ (Dairy Farming)ಹೆಚ್ಚಿನ ಒತ್ತು ನೀಡುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಹಸು ಹಾಗೂ ಎಮ್ಮೆ ಖರೀದಿಸುವ ಮಹಿಳೆಯರಿಗೆ ಆರ್ಥಿಕ ನೆರವು (Financial Assistance)ನೀಡಲು ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಒದಗಿಸುವ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ.
ಇದನ್ನು ಓದಿ
Hasu Emme kharidige Subsidy : ಏನಿದು ಮಹಿಳೆಯರಿಗಾಗಿರುವ ಸಬ್ಸಿಡಿ ಯೋಜನೆ?
ಇತ್ತೀಚಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಸಬಲೀಕರಣದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ ಆಡಳಿತ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ ಖರ್ಗೆ ಅವರು ಯೋಜನೆಗಳ ರೂಪುರೇಷೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಒಟ್ಟು 9,600 ಅರ್ಹ ಮಹಿಳೆಯರಿಗೆ ನೇರ ಲಾಭ ಸಿಗಲಿದೆ. ಗುಣಮಟ್ಟದ ಮಿಶ್ರ ತಳಿ ಹಸು ಅಥವಾ ಸುಧಾರಿತ ತಳಿಯ ಎಮ್ಮೆಗಳನ್ನು ಖರೀದಿಸಲು ಸರ್ಕಾರದಿಂದ (Government Subsidy)ಶೇಕಡ 25ರಷ್ಟು ಸಬ್ಸಿಡಿ ನೀಡಲಾಗುತ್ತದೆ.
2026 27 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ (Animal Husbandry and Fisheries Department)ಮೂಲಕ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.
ಇದನ್ನು ಓದಿ
Hasu Emme kharidige Subsidy : ಯಾವ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ?
ಈ ಯೋಜನೆಯು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ಸಮಾಜದಲ್ಲಿ ಶೋಷಣೆಗೆ ಒಳಗಾದ ಮಹಿಳೆಯರಿಗೆ ಆಸರೆಯಾಗಲಿದೆ.
- ದೇವದಾಸಿಯರು
- ವಿಧವೆಯರು
- ತೃತೀಯ ಲಿಂಗಿಗಳು
- ಜೀವನಕ್ಕೆ ಯಾವುದೇ ಆಧಾರವಿಲ್ಲದೆ ಪರದಾಡುತ್ತಿರುವ ಮಹಿಳೆಯರು
- ಪತಿಯಿಂದ ತ್ಯಜಿಸಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಇದರ ಜೊತೆಗೆ ಕೇವಲ ದಿನಗೂಲಿ ನಂಬಿ ಬದುಕುತ್ತಿರುವ ಕೂಲಿ ಕಾರ್ಮಿಕರು, ನಿರ್ಗತಿಕ ಮಹಿಳೆಯರು, ಸಣ್ಣ ಹಾಗೂ ಅತಿ ಸಣ್ಣ ರೈತರು ಮತ್ತು ಜಮೀನು ಇಲ್ಲದ ಕೃಷಿ ಕಾರ್ಮಿಕ ಮಹಿಳೆಯರಿಗೂ ಈ ಸೌಲಭ್ಯ ಸುಲಭವಾಗಿ ದೊರೆಯಲಿದೆ. ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ
Dr.B.R Ambedkar Subsidy Scheme: 4 ಲಕ್ಷ ಸಹಾಯಧನ, 6 ಮುಖ್ಯ ಯೋಜನೆಗಳ ಸಾಲ ,ಸಹಾಯಧನ, ಅರ್ಹತೆ Important update.
Hasu Emme kharidige Subsidy : 18 ಕೋಟಿ ರೂಪಾಯಿಗಳ ಬೃಹತ್ ಅನುದಾನ
ಮಹಿಳೆಯರ ಆರ್ಥಿಕ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಈ ವಿಶೇಷ ಯೋಜನೆಗೆ ರಾಜ್ಯ ಸರ್ಕಾರ ಬರೋಬ್ಬರಿ 18 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈ ಅನುದಾನವನ್ನು ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ.
ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ 9 ಕೋಟಿ ರೂಪಾಯಿ ಹಾಗೂ ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ 9 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ.
ಈ ಲೆಕ್ಕಚಾರದ ಪ್ರಕಾರ ಪ್ರತಿಯೊಬ್ಬ ಅರ್ಹ ಮಹಿಳಾ ಫಲಾನುಭವಿಗಳಿಗೆ ತಲ 18,750 ರೂಪಾಯಿಗಳ ಸಬ್ಸಿಡಿ ಹಣ ನೇರವಾಗಿ ಸಿಗಲಿದೆ. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಹಸು ಅಥವಾ ಎಮ್ಮೆ ಖರೀದಿಸಲು ದೊಡ್ಡಮಟ್ಟದ ಆರ್ಥಿಕ ಬೆಂಬಲ ಸಿಕ್ಕಂತಾಗುತ್ತದೆ.
Hasu Emme kharidige Subsidy : ನಿರಂತರ ಆದಾಯ ಮತ್ತು ಪೌಷ್ಟಿಕಾಂಶದ ಭದ್ರತೆ
ಮಹಿಳೆಯರು ಸ್ವಂತವಾಗಿ ಹಸು, ಎಮ್ಮೆ ಹಾಲು ಉತ್ಪಾದನೆ ಮಾಡುವುದರಿಂದ ಅವರ ಕುಟುಂಬಕ್ಕೆ ದಿನನಿತ್ಯದ ನಿರಂತರ ಆದಾಯ ಸಿಗಲಾರಂಬಿಸುತ್ತದೆ.
ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದಲ್ಲದೆ, ಸ್ವಯಂ ಉದ್ಯೋಗ (Self Employment)ಕಂಡುಕೊಳ್ಳಬಹುದು. ಮನೆಯಲ್ಲಿಯೇ ಹಾಲು, ಮೊಸರು ಲಭ್ಯವಾಗುವುದರಿಂದ ಗ್ರಾಮೀಣ ಕುಟುಂಬಗಳ, ವಿಶೇಷವಾಗಿ ಮಕ್ಕಳ ಪೌಷ್ಟಿಕಾಂಶದ ಭದ್ರತೆ ಸುಧಾರಿಸಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ.
Hasu Emme kharidige Subsidy : ಬಡ ಮಹಿಳೆಯರಿಗೆ ಆಗುವ ಪ್ರಯೋಜನಗಳು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೈನುಗಾರಿಕೆ ಉತ್ತಮ ಸ್ವಯಂ ಉದ್ಯೋಗವಾಗಿದೆ. ಮಹಿಳೆಯರನ್ನು ಹೈನುಗಾರಿಕೆಯಲ್ಲಿ ಪ್ರೋತ್ಸಾಹಿಸಲು ಸರ್ಕಾರವು ವಿವಿಧ ಯೋಜನೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದಾಗಿದೆ.
Hasu Emme kharidige Subsidy:
- ಹಾಲು ಉತ್ಪಾದನೆಯ ಮೂಲಕ ಪ್ರತಿದಿನ ಆದಾಯ ಗಳಿಸಲು ಅವಕಾಶ ಸಿಗುತ್ತದೆ.
- ಗ್ರಾಮೀಣ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಬಹುದು
- ಗ್ರಾಮೀಣ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಬಹುದು.
- ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ
- ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಮಾರಾಟ ಮಾಡಿ ಆದಾಯ ಗಳಿಸಬಹುದು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಕೆಲವು ಯೋಜನೆಗಳಲ್ಲಿ ವಿಶೇಷ ಸಹಾಯಧನದ ಅವಕಾಶವಿರಬಹುದು.
- ವಿಧವೆಯರು, ಬಡ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಮೂಲಕ ನೆರವು ದೊರೆಯಬಹುದು.
- ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.
- ಹಸು ಮತ್ತು ಎಮ್ಮೆಗಳ ಸಗಣಿಯನ್ನು ಸಾವಯವ ಗೊಬ್ಬರವಾಗಿ ಬಳಸಿ ಕೃಷಿಗೆ ಅನುಕೂಲ ಮಾಡಿಕೊಳ್ಳಬಹುದು.
- ಪಶುಪಾಲನ ಇಲಾಖೆಯ ಮೂಲಕ ಪಶುಗಳ ಆರೈಕೆ, ಆಹಾರ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶನ ಪಡೆಯಬಹುದು.
- ಮಹಿಳೆಯರು ತಮ್ಮದೇ ಆದ ಹೈನುಗಾರಿಕೆ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
- ಕುಟುಂಬಕ್ಕೆ ಪೌಷ್ಟಿಕ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಮಹಿಳೆಯರು ತಮ್ಮ ಹತ್ತಿರದ ಪಶುಪಾಲನ ಇಲಾಖೆಯ ಕಚೇರಿ, ಪಶು ವೈದ್ಯಕೀಯ ಕೇಂದ್ರ ಅಥವಾ ಸಂಬಂಧಪಟ್ಟ ಗ್ರಾಮೀಣ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳಂತಹ ದಾಖಲೆಗಳನ್ನು ಕೇಳಬಹುದು.
Official website
ಇದನ್ನು ಓದಿ
Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.
