SSC ನೇಮಕಾತಿ 2026 : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC )ವಿವಿಧ ಕೇಂದ್ರ ಸರ್ಕಾರ ಇಲಾಖೆಗಳಲ್ಲಿ ಖಾಲಿ ಇರುವ 1,748 ಜೂನಿಯರ್ ಇಂಜಿನಿಯರ್ (JE )ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. B.E/B.Tec, ಡಿಪ್ಲೋಮಾ ಪಾಸಾದವರು ಸೆಪ್ಟೆಂಬರ್ 22ರೊಳಗೆ ಅರ್ಜಿ ಸಲ್ಲಿಸಿ.
- ಒಟ್ಟು ಹುದ್ದೆಗಳು : 1,748 ಜೂನಿಯರ್ ಇಂಜಿನಿಯರ್ (JE )ಹುದ್ದೆಗಳು.
- ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಇತ್ಯಾದಿ ವಿಭಾಗಗಳಲ್ಲಿ BE/B.Tec , B.SC ಅಥವಾ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
- ವೇತನ ಶ್ರೇಣಿ : level -6 ರ ಅಡಿಯಲ್ಲಿ ಮಾಸಿಕ ₹35,400 ರಿಂದ ₹1,12,400 ರವರೆಗೆ.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 22 ಸೆಪ್ಟೆಂಬರ್ 2026
ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ 1,748 ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು junior engineer examination 2026 ರ ಅಡಿಯಲ್ಲಿ ಅಧಿಕೃತ ಅಧಿಸಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳು ಲೆವೆಲ್ -6 ವೇತನ ಶ್ರೇಣಿಯ ಗ್ರೂಪ್ ‘ಬಿ’ ಹುದ್ದೆಗಳಾಗಿವೆ.
ಈ ನೇಮಕಾತಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್ ಹಾಗೂ ಟೆಲಿಕಾಂ ಸೇರಿದಂತೆ ವಿವಿಧ ವಿಭಾಗಗಳ ಜೂನಿಯರ್ ಇಂಜಿನಿಯರ್ ಹುದ್ದೆಗಳು ಸೇರಿವೆ. BRO,CPWD, Central water commission, ministry of defence ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಹುದ್ದೆಗಳು ಲಭ್ಯವಿವೆ. ಕೆಲವು ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ ಅಥವಾ 3 ವರ್ಷದ ಡಿಪ್ಲೋಮಾ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 2, 2026 ರಿಂದ ಸೆಪ್ಟೆಂಬರ್ 22, 2026 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ
SSC ನೇಮಕಾತಿ 2026 : ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
- ನೇಮಕಾತಿ ಸಂಸ್ಥೆ : ಸ್ಟಾಫ್ ಸೆಲೆಕ್ಷನ್ ಕಮಿಷನ್ (staff Selection commission – SSC)
- ಹುದ್ದೆಯ ಹೆಸರು : ಜೂನಿಯರ್ ಇಂಜಿನಿಯರ್ (JE) ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ (SA)
- ಒಟ್ಟು ಹುದ್ದೆಗಳು : 1,748 (ತಾತ್ಕಾಲಿಕ ಹುದ್ದೆಗಳು)
- ಉದ್ಯೋಗ ಸ್ಥಳ : ಅಖಿಲ ಭಾರತ
- ವೇತನ ಶ್ರೇಣಿ : 7 ನೇ ವೇತನ ಆಯೋಗದ ಲೆವೆಲ್ -6 ರ ಅಡಿಯಲ್ಲಿ ಮಾಸಿಕ ₹35,400 – ₹1,12,400 ರವರೆಗೆ
ನೇಮಕಾತಿ ನಡೆಯಲಿರುವ ಪ್ರಮುಖ ಇಲಾಖೆಗಳು
ಬಾರ್ಡರ್ ರೋಡ್ಸ್ ಆರ್ಗನೈಸೇಷನ್ (BRO) , ಸಿ ಪಿ ಡಬ್ಲ್ಯೂ ಡಿ (CPWD), ಕೇಂದ್ರ ಜಲ ಆಯೋಗ (CWC), ಫರಕ್ಕಾ ಬ್ಯಾರೇಜ್ ಪ್ರಾಜೆಕ್ಟ್, ಮಿಲಿಟರಿ ಇಂಜಿನಿಯರ್ ಸರ್ವಿಸಸ್ (MES), ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (NTRO), ಟೆಲಿ ಕಮ್ಯುನಿಕೇಶನ್ ಇಲಾಖೆ (Dot), ಭಾರತೀಯ ಹವಾಮಾನ ಇಲಾಖೆ (IMD), ಇತ್ಯಾದಿ.
SSC ನೇಮಕಾತಿ 2026 : ಶೈಕ್ಷಣಿಕ ಅರ್ಹತೆ ಮತ್ತು ಅನುಭವ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- ಜೂನಿಯರ್ ಇಂಜಿನಿಯರ್ (civil/ electrical/ mechanical) : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ವಿಭಾಗದಲ್ಲಿ ಡಿಗ್ರಿ ಪೂರ್ಣಗೊಳಿಸಬೇಕು. ಅಥವಾ ಸಂಬಂಧಿತ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಜೊತೆಗೆ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. (ಕೆಲವು ಇಲಾಖೆಗಳಿಗೆ ಮಾತ್ರ ಅನುಭವ ಕಡ್ಡಾಯವಾಗಿರುತ್ತದೆ. CPWD & CWC ನಂತಹ ಇಲಾಖೆಗಳಿಗೆ ಡಿಪ್ಲೋಮಾ ಜೊತೆಗೆ ಅನುಭವದ ಅಗತ್ಯವಿಲ್ಲ.
- ಜೂನಿಯರ್ ಇಂಜಿನಿಯರ್ (Telecom) : ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಟೆಲಿ ಕಮ್ಯುನಿಕೇಶನ್, ಐಟಿ ಅಥವಾ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ B.E B.Tec ಮುಗಿಸಿರಬೇಕು.
- ಸೈಂಟಿಫಿಕ್ ಅಸಿಸ್ಟೆಂಟ್ (scientific assistant – IMD) : ಭೌತಶಾಸ್ತ್ರವನ್ನು(physics) ಒಂದು ವಿಷಯವಾಗಿ ಓದಿ ಬಿ ಎಸ್ ಸಿ (BSC) ಪದವಿ ಪಡೆದಿರಬೇಕು. ಅಥವಾ ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪದವಿ ಹೊಂದಿರಬೇಕು.
(ಸೂಚನೆ : ಓಪನ್/ಡಿಸ್ಟೆನ್ಸ್ (ODL) ಅಥವಾ ಆನ್ಲೈನ್ ಮೋಡ್ ಮೂಲಕ ಪಡೆದ ಪದವಿಗಳನ್ನು, ಯು ಜಿ ಸಿ (UGC )ಮತ್ತು ಎ ಐ ಸಿ ಟಿ ಇ( AICTE) ಇಂದ ಮಾನ್ಯತೆ ಪಡೆಯದಿದ್ದರೆ ಪರಿಗಣಿಸಲಾಗುವುದಿಲ್ಲ.)
ಇದನ್ನು ಓದಿ
SSC ನೇಮಕಾತಿ 2026 : ವಯೋಮಿತಿ ವಿವರ
- ಗರಿಷ್ಠ ವಯೋಮಿತಿ : ಇಲಾಖೆಗಳಿಗೆ ಅನುಗುಣವಾಗಿ ಗರಿಷ್ಠ 30 ವರ್ಷಗಳು ಅಥವಾ 32 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. (ಉದಾಹರಣೆಗೆ CPWD & CWC ಇಲಾಖೆಗಳಿಗೆ ಗರಿಷ್ಠ 32 ವರ್ಷ, ಇತರೆ ಬಹುತೇಕ ಇಲಾಖೆಗಳಿಗೆ 30 ವರ್ಷ)
ವಯೋಮಿತಿ ಸಡಿಲಿಕೆ
- ಓಬಿಸಿ ಅಭ್ಯರ್ಥಿಗಳಿಗೆ : 3 ವರ್ಷಗಳು
- SC, ST ಅಭ್ಯರ್ಥಿಗಳಿಗೆ :5 ವರ್ಷಗಳು
- ವಿಕಲಚೇತನ (pwbd -ಸಾಮಾನ್ಯ/EWS) ಅಭ್ಯರ್ಥಿಗಳಿಗೆ : 10 ವರ್ಷಗಳು
- ವಿಕಲಚೇತನ (PWBD – OBC) ಅಭ್ಯರ್ಥಿಗಳಿಗೆ : 13 ವರ್ಷಗಳು
- ವಿಕಲಚೇತನ (PWBD – SC, ST) ಅಭ್ಯರ್ಥಿಗಳಿಗೆ : 15 ವರ್ಷಗಳು
- ಮಾಜಿ ಸೈನಿಕರಿಗೆ : 3 ವರ್ಷಗಳು
SSC ನೇಮಕಾತಿ 2026 : ಅರ್ಜಿ ಶುಲ್ಕ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಸಾಮಾನ್ಯ (UR), OBC ಹಾಗೂ EWS (ಪುರುಷ) ಅಭ್ಯರ್ಥಿಗಳಿಗೆ : ₹100
- ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ, SC, ST pwbd/ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕವಿಲ್ಲ.
SSC ನೇಮಕಾತಿ 2026: ಅರ್ಜಿ ತಿದ್ದುಪಡಿ ಶುಲ್ಕ
- ಮೊದಲ ಬಾರಿಯ ತಿದ್ದುಪಡಿಗೆ : ₹200
- ಎರಡನೇ ಬಾರಿಯ ತಿದ್ದುಪಡಿಗೆ : ₹500
ಇದನ್ನು ಓದಿ
SSC ನೇಮಕಾತಿ 2026 : ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
- ಪೇಪರ್ – | (ಕಂಪ್ಯೂಟರ್ ಆಧಾರಿತ ಪರೀಕ್ಷೆ) : ಇದು ಅರ್ಹತಾ ಪರೀಕ್ಷೆಯಾಗಿದ್ದು, 200 ಅಂಕಗಳಿಗೆ 2 ಗಂಟೆಗಳ ಕಾಲ ನಡೆಯಲಿದೆ.
- ಪೇಪರ್ – || (ಕಂಪ್ಯೂಟರ್ ಆಧಾರಿತ ಪರೀಕ್ಷೆ): ಪೇಪರ್ – | ರಲ್ಲಿ ಉತ್ತೀರ್ಣರಾದವರಿಗೆ 300 ಅಂಕಗಳ ಮುಖ್ಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. (ಸೂಚನೆ : ಪೇಪರ್ – | ರಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಹಾಗೂ ಪೇಪರ್ – || ರಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಡಿತಗೊಳಿಸಲಾಗುತ್ತದೆ.)
- ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ : ಕೇವಲ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಹುದ್ದೆಗಳಿಗೆ ಆಯ್ಕೆಯಾಗುವ ಪುರುಷ ಅಭ್ಯರ್ಥಿಗಳಿಗೆ ಮಾತ್ರ 1 ಮೈಲ್ ಓಟ ಮತ್ತು ಕಠಿಣ ವೈದ್ಯಕೀಯ ಪರೀಕ್ಷೆ ಇರುತ್ತದೆ.
- ದಾಖಲೆ ಪರಿಶೀಲನೆ : ಅಂತಿಮವಾಗಿ ಇಲಾಖೆಗಳಿಂದ ಮೂಲ ದಾಖಲೆಗಳು ಪರಿಶೀಲನೆ ನಡೆಯಲಿದೆ.
SSC ನೇಮಕಾತಿ 2026 : ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ.
- ಸ್ಟಾಫ್ ಸೆಲೆಕ್ಷನ್ ಕಮಿಷನ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.https://ssc.gov.in/
- ಮುಖಪುಟದಲ್ಲಿ “login or register” ಮೇಲೆ ಕ್ಲಿಕ್ ಮಾಡಿ “register now” ಮೂಲಕ “one time registration” ಪೂರ್ಣಗೊಳಿಸಿ.
- ನಿಮ್ಮ ರಿಜಿಸ್ಟ್ರೇಷನ್ ನಂಬರ್ (registration number) ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- “Live examination” ಟ್ಯಾಬ್ ಅಡಿಯಲ್ಲಿರುವ “junior engineer examination 2026” ವಿಭಾಗದಲ್ಲಿರುವ “apply ” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಶೈಕ್ಷಣಿಕ, ಮೀಸಲಾತಿ ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಭರ್ತಿ ಮಾಡಿ.
- ಲೈವ್ ಫೋಟೋ ಕ್ಯಾಪ್ಚರ್ ಮಾಡಿ ಮತ್ತು ನಿಮ್ಮ ಸಹಿಯನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಿ.
- ಅರ್ಜಿಯನ್ನು ಅಂತಿಮವಾಗಿ submit ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
SSC ನೇಮಕಾತಿ 2026: ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ : 2 ಸೆಪ್ಟೆಂಬರ್ 2026
- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಸೆಪ್ಟೆಂಬರ್ 2026
- ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 23 ಸೆಪ್ಟೆಂಬರ್ 2026
- ಅರ್ಜಿ ತಿದ್ದುಪಡಿ ಮಾಡಲು ಅವಕಾಶ : 28 ಸೆಪ್ಟೆಂಬರ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ
- ಪೇಪರ್ – | ಪರೀಕ್ಷಾ ದಿನಾಂಕ (ತಾತ್ಕಾಲಿಕ) : ಅಕ್ಟೋಬರ್-ನವೆಂಬರ್ 2026
- ಪೇಪರ್ -|| ಪರೀಕ್ಷಾ ದಿನಾಂಕ (ತಾತ್ಕಾಲಿಕ) : ಡಿಸೆಂಬರ್ 2026
ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಖಾಸಗಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ತಕ್ಷಣ ಅಪ್ಡೇಟ್ ಪಡೆದುಕೊಳ್ಳಿ.
ಇದನ್ನು ಓದಿ