Bank Of Baroda Recruitment (LBO) 2026 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ವೃತ್ತಿ ಜೀವನ ರೂಪಿಸಿಕೊಳ್ಳಲು ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಅತ್ಯುತ್ತಮ ಸುದ್ದಿ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ (BOB) ಬೃಹತ್ ಪ್ರಮಾಣದ ನೇಮಕಾತಿ ಅಭಿಯಾನವನ್ನು ಪ್ರಕಟಿಸಿದೆ.
ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ ಈ ಪೈಕಿ ಕರ್ನಾಟಕ ಒಂದರಲ್ಲಿ 418 ಹುದ್ದೆಗಳು ಲಭ್ಯವಿದೆ. 2026ರ ಆಗಸ್ಟ್ 18ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 7 ಕೊನೆಯ ದಿನವಾಗಿದೆ.
ಕರ್ನಾಟಕದ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ಕನ್ನಡ ಜ್ಞಾನ ಕಡ್ಡಾಯವಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವವರಿಗೆ ಇದು ಸೂಕ್ತ ಅವಕಾಶ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ಮೂಲವೇತನ ₹48,480 ರಿಂದ ಆರಂಭವಾಗಿ ₹85,920 ರವರೆಗೆ ಸಿಗಲಿದೆ. ಹುದ್ದೆಯ ಅರ್ಹತೆಗಳು, ವಯೋಮಿತಿ, ಪರೀಕ್ಷಾ ವಿಧಾನ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಇದನ್ನು ಓದಿ
Bank Of Baroda Recruitment (LBO) 2026 : ಬ್ಯಾಂಕ್ ಆಫ್ ಬರೋಡ ನೇಮಕಾತಿಯ ಪ್ರಮುಖ ವಿವರಗಳು
- ಸಂಸ್ಥೆ ಹೆಸರು : ಬ್ಯಾಂಕ್ ಆಫ್ ಬರೋಡ (Bank of Baroda)
- ಹುದ್ದೆಯ ಹೆಸರು : ಲೋಕಲ್ ಬ್ಯಾಂಕ್ ಆಫೀಸರ್ (LBO-jmg/s-1)
- ಒಟ್ಟು ಖಾಲಿ ಇರುವ ಹುದ್ದೆಗಳು : 2,482 ಕರ್ನಾಟಕದಲ್ಲಿರುವ ಹುದ್ದೆಗಳು : 418 (130 ಹೊಸ ಹುದ್ದೆಗಳು+288 ಬ್ಯಾಕ್ ಲಾಗ್ ಅನ್ಫಿಲ್ಡ್ ಹುದ್ದೆಗಳು)
- ಉದ್ಯೋಗ ಸ್ಥಳ : ಭಾರತದ ಅತ್ಯಂತ/ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (online)
Bank Of Baroda Recruitment (LBO) 2026 : ರಾಜ್ಯವಾರು ಖಾಲಿ ಇರುವ ಹುದ್ದೆಗಳ ವಿವರ ಮತ್ತು ಕಡ್ಡಾಯ ಸ್ಥಳಿಯ ಭಾಷೆಗಳು
- ಗುಜರಾತ್: ಗುಜರಾತಿ
- ಕರ್ನಾಟಕ: ಕನ್ನಡ
- ಮಹಾರಾಷ್ಟ್ರ: ಮರಾಠಿ
- ತಮಿಳುನಾಡು: ತಮಿಳು
- ಒಡಿಸ್ಸಾ: ಓಡಿಯ
- ಆಂಧ್ರ ಪ್ರದೇಶ: ತೆಲುಗು
- ತೆಲಂಗಾಣ: ತೆಲುಗು
- ಕೇರಳ: ಮಲಯಾಳಂ
- ಪಶ್ಚಿಮ ಬಂಗಾಳ: ಬೆಂಗಾಲಿ/ನೇಪಾಳಿ
- ಅಸ್ಸಾಂ: ಅಸ್ಸಾಮಿಸ್/ಬೋಡೋ
- ಪಂಜಾಬ್: ಪಂಜಾಬಿ
- ಗೋವಾ: ಕೊಂಕಣಿ
- ಅರುಣಾಚಲ ಪ್ರದೇಶ: ಇಂಗ್ಲಿಷ್
- ಜಮ್ಮು ಮತ್ತು ಕಾಶ್ಮೀರ : ಉರ್ದು/ಕಾಶ್ಮೀರಿ/ಡೋಗ್ರಿ
- ಮಣಿಪುರ : ಮಣಿಪುರಿ/ಮೇತೇಯ್
- ಮೇಘಾಲಯ:ಗಾರೊ/ಖಾಸಿಂ
- ಮಿಜೋರಾಮ್ : ಮಿಜೋ
- ನಾಗಲ್ಯಾಂಡ್ : ಇಂಗ್ಲೀಷ್
- ಸಿಕ್ಕಿಂ : ನೇಪಾಳಿ/ಸಿಕ್ಕಿಮಿಸ್
- ತ್ರಿಪುರ: ಬೆಂಗಾಲಿ
ಕರ್ನಾಟಕದಲ್ಲಿ ಹುದ್ದೆಗಳ ಹಂಚಿಕೆ ಮತ್ತು ಭಾಷಾ ಅರ್ಹತೆ
ಕರ್ನಾಟಕ ರಾಜ್ಯದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಪ್ರಾವೀಣ್ಯತೆ ಕಡ್ಡಾಯವಾಗಿದೆ.
ಇದನ್ನು ಓದಿ
ಕರ್ನಾಟಕದ ವರ್ಗವಾರು ಹುದ್ದೆಗಳ ವಿವರ
- ಸಾಮಾನ್ಯ ವರ್ಗ : 161 (53 ಹೊಸ+108 ಬ್ಯಾಕ್ಲಾಗ್)
- ಓಬಿಸಿ ವರ್ಗ : 109 (36 ಹೊಸ+73 ಬ್ಯಾಕ್ಲಾಗ್ )
- ಎಸ್ ಸಿ ವರ್ಗ : 58 (20 ಹೊಸ+38 ಬ್ಯಾಕ್ ಲಾಗ್)
- EWS ವರ್ಗ : 58 (13 ಹೊಸ+45 ಬ್ಯಾಕ್ ಲಾಗ್)
- St ವರ್ಗ: 32 (8 ಹೊಸ+24 ಬ್ಯಾಕ್ಲಾಗ್ )
- ವಿಕಲಚೇತನ ಅಭ್ಯರ್ಥಿಗಳಿಗೆ: ಸಮ ಸಮಂತರ ಮೀಸಲಾತಿ ಲಭ್ಯವಿದೆ.
Bank Of Baroda Recruitment (LBO) 2026 : ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು .(Graduation in any discipline)
ಆದ್ಯತೆಯ ಪ್ರಮಾಣ ಪತ್ರಗಳು (preferred certifications)
- Insurance institute of India- IC 38 certificate
- NISM Series V A: mutual fund distributor
- NISM Series xx1-A : portfolio management services (PMS)
- NISM Series X111: common derivatives certificate examination.
ಸೇವಾ ಅನುಭವ
- ಆರ್ಬಿಐ ಎರಡನೇ ವೇಳಪಟ್ಟಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಶೆಡ್ಯೂಲ್ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಆಫೀಸರ್ ಆಗಿ ಕನಿಷ್ಠ ಒಂದು ವರ್ಷದ ಸೇವಾ ಅನುಭವ ಹೊಂದಿರಬೇಕು.
- ಸೂಚನೆ ,: ಕ್ಲರ್ಕ್ ಹುದ್ದೆಯ ಅನುಭವವನ್ನು ಪರಿಗಣಿಸಲಾಗುವುದಿಲ್ಲ.
ವಯೋಮಿತಿ :Bank of Baroda Recruitment (LBO) 2026
- ಕನಿಷ್ಠ ವಯಸ್ಸು : 21 ವರ್ಷಗಳು
- ಗರಿಷ್ಠ ವಯಸ್ಸು : 30 ವರ್ಷಗಳು (ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ)
- ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ.
- ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು
- ಓಬಿಸಿ ಅಭ್ಯರ್ಥಿಗಳಿಗೆ :3 ವರ್ಷಗಳು
- ವಿಕಲಚೇತನ ಅಭ್ಯರ್ಥಿಗಳಿಗೆ: ಹತ್ತರಿಂದ ಹದಿನೈದು ವರ್ಷಗಳು
- ಮಾಜಿ ಸೈನಿಕರು : ನಿಯಮಾವಳಿಗಳ ಪ್ರಕಾರ ಸಡಿಲಿಕೆ.
ಇದನ್ನು ಓದಿ
Bank Of Baroda Recruitment (LBO) 2026 : ವೇತನ ಶ್ರೇಣಿ
- ಆಯ್ಕೆಯಾದ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ₹48,480 – ₹85,920 ವೇತನ ಶ್ರೇಣಿ ಇರಲಿದೆ. ಇದರೊಂದಿಗೆ ಬ್ಯಾಂಕಿನ ನಿಯಮಾವಳಿಗಳ ಪ್ರಕಾರ ಇತರ ಭತ್ಯೆ ಮತ್ತು ಸೌಲಭ್ಯಗಳು ಸಿಗಲಿವೆ.
- ಪ್ರೊಬೇಷನ್ ಅವಧಿ : 12 ತಿಂಗಳುಗಳು
ಆಯ್ಕೆ ಪ್ರಕ್ರಿಯೆ (selection process)
ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
- ಆನ್ಲೈನ್ ಪರೀಕ್ಷೆ : (ಸ್ಥಳೀಯ ಭಾಷಾ ಪ್ರಾವಿಣ್ಯತೆ ಪರೀಕ್ಷೆ (local language proficiency test) – 10/12 ನೇ ತರಗತಿಯಲ್ಲಿ ಕನ್ನಡ ವಿಷಯ ಓದದವರಿಗೆ
- ಸಂದರ್ಶನ /ಗುಂಪು ಚರ್ಚೆ : ದಾಖಲೆಗಳ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಸತ್ಯಾ ಸತ್ಯತೆ
Bank Of Baroda Recruitment (LBO) 2026 : ಆನ್ಲೈನ್ ಪರೀಕ್ಷೆಯ ಮಾದರಿ
- ಇಂಗ್ಲಿಷ್ ಭಾಷೆ :30 ಪ್ರಶ್ನೆಗಳು (30 ಅಂಕಗಳು)
- ಬ್ಯಾಂಕಿಂಗ್ ಜ್ಞಾನ : 30 ಪ್ರಶ್ನೆಗಳು (30 ಅಂಕಗಳು)
- ಸಾಮಾನ್ಯ/ಆರ್ಥಿಕ ಅರಿವು : 30 ಪ್ರಶ್ನೆಗಳು (30 ಅಂಕಗಳು)
- ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ : 30 ಪ್ರಶ್ನೆಗಳು (30 ಅಂಕಗಳು)
- ಒಟ್ಟು :120 ಪ್ರಶ್ನೆಗಳು (120 ಅಂಕಗಳು) (ಸಮಯ: 120 ನಿಮಿಷಗಳು)
- ನೆಗೆಟಿವ್ ಮಾರ್ಕಿಂಗ್ : ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ.
ಅರ್ಜಿ ಶುಲ್ಕ (ಅಪ್ಲಿಕೇಶನ್ ಫೀಸ್)
- ಸಾಮಾನ್ಯ/ಓಬಿಸಿ/EWS ಅಭ್ಯರ್ಥಿಗಳಿಗೆ ₹850 +ಜಿ ಎಸ್ ಟಿ/ಪಾವತಿ ಗೇಟ್ವೇ ಶುಲ್ಕ.
- ಎಸ್ ಸಿ ಎಸ್ ಟಿ, ವಿಕಲಚೇತನರು, ಮಹಿಳಾ ಅಭ್ಯರ್ತಿಗಳಿಗೆ : ₹175 +ಜಿ ಎಸ್ ಟಿ/ಪಾವತಿ ಗೇಟ್ವೇ ಶುಲ್ಕ.
- ಪಾವತಿ ವಿಧಾನ: ಆನ್ಲೈನ್ ಮೂಲಕ
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 18/08/2026
- ಆನ್ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07/09/2026
- ಆನ್ಲೈನ್ ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು.
Bank Of Baroda Recruitment (LBO) 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
- ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ : ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ www.bankofbaroda.in ಗೆ ಭೇಟಿ ನೀಡಿ.
- ವೆಬ್ಸೈಟ್ನ ಮುಖ್ಯ ಪುಟದ ಕೆಳಭಾಗದಲ್ಲಿ ಅಥವಾ ಮೆನುವಿನಲ್ಲಿರುವ careers/current opportunities ವಿಭಾಗವನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
- ಪ್ರಸ್ತುತ ಚಾಲ್ತಿಯಲ್ಲಿರುವ ನೇಮಕಾತಿಗಳ ಪಟ್ಟಿಯಲ್ಲಿ recruitment of local bank officers 2026 ಎಂಬ ಅಧಿ ಸೂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸುವ ಮೂಲಕ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಪಡೆದುಕೊಂಡು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಸೇವಾ ಅನುಭವದ ವಿವರಗಳನ್ನು ಭರ್ತಿ ಮಾಡಿದ ನಂತರ ನಿಗದಿತ ಅಳತೆಯಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾದ ನಿಗದಿತ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಸೇರಿದಂತೆ ಆನ್ಲೈನ್ ಪಾವತಿ ಗೇಟ್ ವೇ ಮೂಲಕ ಪಾವತಿಸಿ.
- ನೀವು ನೀಡಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ submit ಬಟನ್ ಕ್ಲಿಕ್ ಮಾಡಿ. ತದನಂತರದ ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಬ್ಯಾಂಕ್ ಆಫ್ ಬರೋಡದ ಅಧಿಕೃತ ವೆಬ್ಸೈಟ್
https://bankofbaroda.bank.in/career/current-opportunities
ಇದನ್ನು ಓದಿ
KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.