SBI ಕ್ಲರ್ಕ್ ನೇಮಕಾತಿ 2026 : SBI Important update, ಯಾವುದೇ ಡಿಗ್ರಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್ ನಲ್ಲಿ 9,100 + ಹುದ್ದೆ ,46,000 ವೇತನ. ಇಂದೇ ಅರ್ಜಿ ಸಲ್ಲಿಸಿ.

WhatsAppಫಾಲೋ ಮಾಡಿ

SBI ಕ್ಲರ್ಕ್ ನೇಮಕಾತಿ 2026 : SBI ಕ್ಲರ್ಕ್ ನೇಮಕಾತಿ 2026 : SBI ಕ್ಲರ್ಕ್ ನೇಮಕಾತಿ 2026 ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕದಲ್ಲಿ 799 ಸೇರಿದಂತೆ ಒಟ್ಟು 9,100+ಹುದ್ದೆಗಳಿವೆ.46,000 ರೂಪಾಯಿ ವೇತನ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ. 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕನಸು ಕಾಣುತ್ತಿರುವ ಯುವ ಜನತೆಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ. ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2026 ನೇ ಸಾಲಿನ ಬೃಹತ್ ನೇಮಕಾತಿಗೆ ಚಾಲನೆ ನೀಡಿದೆ. ದೇಶದಾದ್ಯಂತ ಒಟ್ಟು 9,124 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಆಗಸ್ಟ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಕನ್ನಡಿಗರಿಗೆ ವಿಶೇಷ ಖುಷಿಯ ವಿಚಾರವೆಂದರೆ ಕರ್ನಾಟಕದಲ್ಲಿ ಬರೋಬ್ಬರಿ 799 ಹುದ್ದೆಗಳು ಲಭ್ಯವಿವೆ. ಯಾವುದೇ ಪದವಿ ಮುಗಿಸಿದವರು ಆಗಸ್ಟ್ 31ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲೇ ತಿಂಗಳಿಗೆ ಅಂದಾಜು 46,000 ರೂಪಾಯಿಗಳವರೆಗೆ ವೇತನ ಸಿಗಲಿದೆ.

ಬ್ಯಾಂಕ್ ಉದ್ಯೋಗ ಪಡೆಯಬೇಕು ಎಂಬುದು ಲಕ್ಷಾಂತರ ಯುವಕರ ಗುರಿ. ಈ ಬಾರಿಯ SBI ಕ್ಲರ್ಕ್ ನೇಮಕಾತಿ 2026 ಆ ನಿಟ್ಟಿನಲ್ಲಿ ಒಂದು ಸುವರ್ಣ ಅವಕಾಶ. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಿದ್ದೇವೆ.

ಇದನ್ನು ಓದಿ

Bangalore Court Recruitment 2026 : ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್,₹83,700 ವರೆಗೆ ವೇತನ ! Important update.

SBI ಕ್ಲರ್ಕ್ ನೇಮಕಾತಿ 2026 : ಪ್ರಮುಖ ವಿವರಗಳು 

  • ನೇಮಕಾತಿ ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹುದ್ದೆಯ ಹೆಸರು : ಜೂನಿಯರ್ ಅಸೋಸಿಯೇಟ್ (clerk)
  • ಓಟ್ಟು ಹುದ್ದೆಗಳು : 9,124 (ಭಾರತದಾದ್ಯಂತ)
  • ಕರ್ನಾಟಕದಲ್ಲಿರುವ ಹುದ್ದೆಗಳು : 799 (ಬೆಂಗಳೂರು ಸರ್ಕಲ್)
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 11 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 31 ಆಗಸ್ಟ್ 2026
  • ಅಧಿಕೃತ ವೆಬ್ಸೈಟ್  : https://sbi.bank.in/web/careers

SBI ಕ್ಲರ್ಕ್ ನೇಮಕಾತಿ 2026 : ಕರ್ನಾಟಕದಲ್ಲಿ ಲಭ್ಯವಿರುವ ಹುದ್ದೆಗಳ ವರ್ಗೀಕರಣ 

ಬೆಂಗಳೂರು ವೃಂದಕ್ಕೆ ಒಟ್ಟು 799 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ 760 ನಿಯಮಿತ ಹಾಗೂ 39 ಬ್ಯಾಕ್ ಲಾಗ್ ಹುದ್ದೆಗಳಿವೆ. ವರ್ಗವಾರು ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ.

  • ಸಾಮಾನ್ಯ ವರ್ಗ (General ): 305
  • ಓಬಿಸಿ (OBC) : 205
  • ಪರಿಶಿಷ್ಟ ಜಾತಿ (SC) : 121
  • ಆರ್ಥಿಕವಾಗಿ ಹಿಂದುಳಿದ ವರ್ಗ (EWS) : 76
  • ಪರಿಶಿಷ್ಟ ಪಂಗಡ (ST ): 53

ಭಾಷಾ ಪ್ರಾವೀಣ್ಯತೆ ಕಡ್ಡಾಯ : ಕರ್ನಾಟಕದಿಂದ ಅರ್ಜಿ ಸಲ್ಲಿಸುವವರು ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಹತ್ತನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದಿದ್ದರೆ, ಸ್ಥಳೀಯ ಭಾಷಾ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ.

SBI ಕ್ಲರ್ಕ್ ನೇಮಕಾತಿ 2026 : ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ 

ಶೈಕ್ಷಣಿಕ ಅರ್ಹತೆ 

  1. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಬಿ ಎ, ಬಿಕಾಂ, ಬಿಎಸ್ಸಿ, ಅಥವಾ ಇಂಜಿನಿಯರಿಂಗ್ ಸೇರಿ ಯಾವುದೇ ಕೋರ್ಸ್ ಓದಿದ್ದರು ಅವಕಾಶವಿದೆ.
  2. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ : ಪ್ರಸ್ತುತ ಅಂತಿಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಬಹುದು. ಆದರೆ ಬ್ಯಾಂಕಿಗೆ ಆಯ್ಕೆಯಾದರೆ 31 ಡಿಸೆಂಬರ್ 2026 ರ ಒಳಗೆ ಪಾಸ್ ಆಗಿರುವ ಪ್ರಮಾಣ ಪತ್ರ ನೀಡುವುದು ಕಡ್ಡಾಯ.

ವಯೋಮಿತಿ 

  1. ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.
  2. ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಕಲಚೇತನರಿಗೆ ಹತ್ತರಿಂದ ಹದಿನೈದು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನು ಓದಿ

Bank Of Baroda Recruitment 2026 : ಬ್ಯಾಂಕ್ ಆಫ್ ಬರೋಡದಲ್ಲಿ ಭರ್ಜರಿ ನೇಮಕಾತಿ , 206 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 1.20 ಲಕ್ಷದವರೆಗೆ ವೇತನ. Important update.

ಆಕರ್ಷಕ ವೇತನ ಶ್ರೇಣಿ 

ಕ್ಲರ್ಕ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ 26,730 ರೂ ಮೂಲವೇತನೆ ಸಿಗಲಿದೆ. ಇದರ ಜೊತೆಗೆ ತುಟ್ಟಿ ಭತ್ಯೆ,ಮನೆ ಬಾಡಿಗೆ ಭತ್ಯೆ, ಸೇರಿದಂತೆ ಎಲ್ಲಾ ಸೇರಿಸಿ ತಿಂಗಳಿಗೆ ಸುಮಾರು 46,000 ರೂಪಾಯಿ ಕೈಗೆ ಸಿಗಲಿದೆ.

SBI ಕ್ಲರ್ಕ್ ನೇಮಕಾತಿ 2026 : ಆಯ್ಕೆ ವಿಧಾನ ಹೇಗಿರುತ್ತದೆ? 

  1. ನೇಮಕಾತಿ ಪ್ರಕ್ರಿಯೆಯು ಆನ್ಲೈನ್ ಲಿಖಿತ ಪರೀಕ್ಷೆಗಳನ್ನು ಆಧರಿಸುತ್ತದೆ. ಇದರಲ್ಲಿ ಎರಡು ಹಂತಗಳಿರುತ್ತವೆ.
  2. ಪ್ರಿಲಿಮಿನರಿ ಪರೀಕ್ಷೆ (ಸೆಪ್ಟೆಂಬರ್ 2026) : 100 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ ಹಾಗೂ ರೀಸನಿಂಗ್ ವಿಷಯಗಳು ಇರುತ್ತವೆ. ವಿಶೇಷವೇನೆಂದರೆ ಅಭ್ಯರ್ಥಿಗಳು ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.
  3. ಮುಖ್ಯ ಪರೀಕ್ಷೆ (ನವೆಂಬರ್ 2026) : ಪ್ರಿಲಿಮ್ಸ್ ಪಾಸ್ ಆದವರು 200 ಅಂಕಗಳ ಮೈನ್ಸ್ ಪರೀಕ್ಷೆ ಬರೆಯಬೇಕು. ಇದರಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆಯೇ ಅಂತಿಮ ಮೆರಿಟ್ ಪಟ್ಟಿ ತಯಾರಾಗುತ್ತದೆ.

ಶುಲ್ಕದ ವಿವರ 

  • ಸಾಮಾನ್ಯ, ಒಬಿಸಿ, ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 750 ರೂ
  • ಎಸ್ ಸಿ, ಎಸ್ ಟಿ, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ ಯಾವುದೇ ರೀತಿಯ ಶುಲ್ಕವಿಲ್ಲ (ಉಚಿತ)
SBI ಕ್ಲರ್ಕ್ ನೇಮಕಾತಿ 2026 : ಅರ್ಜಿ ಸಲ್ಲಿಸುವ ವಿಧಾನ 
  1. ಮೊದಲಿಗೆ ಮೇಲೆ ನೀಡಿರುವ SBI ಅಧಿಕೃತ ಕೆರಿಯರ್ ಪೋರ್ಟಲ್ ಲಿಂಕ್ ಗೆ ಭೇಟಿ ನೀಡಿ
  2. ಅಲ್ಲಿ Recruitment OF Junior Associates 2026 ವಿಭಾಗದಲ್ಲಿ Apply Online ಕ್ಲಿಕ್ ಮಾಡಿ
  3. ಹೊಸದಾಗಿ ರಿಜಿಸ್ಟರ್ ಮಾಡಿಕೊಂಡು, ನಿಮ್ಮ ವೈಯಕ್ತಿಕ ವಿವರ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
  4. ಫೋಟೋ, ಸಹಿ ಹಾಗೂ ಎಡಗೈ ಹೆಬ್ಬೆರಳು ಗುರುತನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  5. ಕೊನೆಯದಾಗಿ ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಸರ್ಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮ ಆವಕಾಶ. ಖಾಸಗಿ ವಲಯದ ಉದ್ಯೋಗದ ಅನಿಶ್ಚಿತತೆಯ ನಡುವೆ ಎಸ್ ಬಿ ಐ ನಂತಹ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ವೃತ್ತಿ ಆರಂಭಿಸುವುದು, ಭವಿಷ್ಯದ ದೃಷ್ಟಿಯಿಂದ ಬಹಳ ಸುರಕ್ಷಿತ.

ಅರ್ಜಿ ಸಲ್ಲಿಸಲು ಕೊನೆಯ ಗಳಿಗೆಯವರೆಗೆ ಕಾಯಬೇಡಿ. ಸರ್ವರ್ ಸಮಸ್ಯೆಗಳು ಎದುರು ಆಗುವ ಮುನ್ನವೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ನಿರಂತರ ಅಭ್ಯಾಸ ಹಾಗೂ ಸರಿಯಾದ ಮಾರ್ಗದರ್ಶನವಿದ್ದರೆ ಬ್ಯಾಂಕ್ ಪರೀಕ್ಷೆ ಪಾಸ್ ಮಾಡುವುದು ಕಷ್ಟವೇ ನಲ್ಲ.

ಇದನ್ನು ಓದಿ

KSRLPS Recruitment 2026 : ಯಾವುದೇ ಪರೀಕ್ಷೆ ಶುಲ್ಕವಿಲ್ಲ, 28,000 ವೇತನದ ಹುದ್ದೆಗಳಿಗೆ ಹಿಂದೆ ಅರ್ಜಿ ಸಲ್ಲಿಸಿ. KSRLPS Important update..

SBI ಕ್ಲರ್ಕ್ ನೇಮಕಾತಿ 2026 : ಕ್ಲರ್ಕ್ ಹುದ್ದೆಗೆ ಸೇರುವಂತಹ ಅಭ್ಯರ್ಥಿಗಳಿಗೆ  ಸಲಹೆ 
  1. ಮೊದಲ ಆರು ತಿಂಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಿ. ಎಸ್ ಬಿ ಐ ನಿಯಮಗಳ ಪ್ರಕಾರ ಹೊಸ junior associates ಕನಿಷ್ಠ ಆರು ತಿಂಗಳು probation ನಲ್ಲಿ ಇರುತ್ತಾರೆ ಮತ್ತು ಬ್ಯಾಂಕ್ ನಿಗದಿಪಡಿಸುವ e lessons ಪೂರ್ಣಗೊಳಿಸಬೇಕು.
  2. ಮೊದಲಿನಿಂದಲೇ ಕೆಲಸ ಕಲಿಯುವ ಮನೋಭಾವ ಇರಲಿ : cash handling, account opening, KYC, NEFT, RTGS, IMPS, cheque, passbook, ATM, internet banking ಮುಂತಾದವುಗಳನ್ನು ಸರಿಯಾಗಿ ಕಲಿಯಿರಿ.
  3. Customer dealing : ಇದು ಅತ್ಯಂತ ಮುಖ್ಯ. ಗ್ರಾಹಕರು ಕೋಪದಲ್ಲಿದ್ದರೂ ಶಾಂತವಾಗಿ ಮಾತನಾಡಿ. ಬ್ಯಾಂಕ್ ನಲ್ಲಿ technical knowledge ಜೊತೆಗೆ communication skill ಕೂಡ ಬಹಳ ಮುಖ್ಯ.
  4. ತಪ್ಪು ಮಾಡುವುದಕ್ಕಿಂತ ಕೇಳುವುದು ಉತ್ತಮ: ಆರಂಭದ ದಿನಗಳಲ್ಲಿ transaction ಅಥವಾ documentation ಬಗ್ಗೆ ಅನುಮಾನ ಬಂದರೆ senior staff ಗಳನ್ನು ಕೇಳಿ. ಊಹೆಯಿಂದ ಕೆಲಸ ಮಾಡಬೇಡಿ.
  5. ಕ್ಯಾಶ್ ಮತ್ತು ಡಾಕ್ಯುಮೆಂಟ್ಸ್ ನಲ್ಲಿ ಡಬಲ್ ಚೆಕ್ ಅಭ್ಯಾಸ ಬೆಳೆಸಿಕೊಳ್ಳಿ. ಒಂದು ಸಣ್ಣ ತಪ್ಪು financial issue ಆಗಬಹುದು.
  6. Banking rules and circulars ಓದುವ ಅಭ್ಯಾಸ ಮಾಡಿ. ಆರ್ ಬಿ ಐ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತವೆ. ಹಿರಿಯರು ಹೀಗೆ ಮಾಡುತ್ತಾರೆ ಎನ್ನುವುದಕ್ಕಿಂತ ಪ್ರಸ್ತುತ ನಿಯಮವೇ ಮುಖ್ಯ.
  7. ಸ್ಯಾಲರಿಗಿಂತ ರೆಪ್ಯೂಟೇಶನ್ ಮುಖ್ಯ ಎಂದು ನೆನಪಿಡಿ. ಸಮಯ ಪಾಲನೆ, ಪ್ರಾಮಾಣಿಕತೆ ಮತ್ತು ಉತ್ತಮ ವರ್ತನೆ ಇವು ನಿಮ್ಮ ಬ್ಯಾಂಕಿಂಗ್ ಕೆರಿಯರ್ಸ್ಗೆ ಬಹಳ ದೊಡ್ಡ ಅಸೆಟ್ ಆಗಬಹುದು.

ನಿಮ್ಮ ಎಸ್ ಬಿ ಐ ವೃತ್ತಿಜೀವನ ತುಂಬಾ ದೊಡ್ಡ ಮಟ್ಟದಲ್ಲಿ ಬೆಳೆಯಲಿ.

ಇದನ್ನು ಓದಿ

KRCL Recruitment 2026 : 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Leave a Comment