KAS ನೇಮಕಾತಿ 2026 : ಕರ್ನಾಟಕ ಲೋಕಸೇವಾ ಆಯೋಗ (KPSC )2026 27ನೇ ಸಾಲಿನ 319 KAS (ಗೆಜೆಟೆಡ್ ಪ್ರೊಬೇಷನರ್ಸ್) ಗ್ರೂಪ್ A ಮತ್ತು B ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
- ಕರ್ನಾಟಕ ಲೋಕ ಸೇವಾ ಆಯೋಗದಿಂದ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ.
- ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಆಗಸ್ಟ್ 2026.
ಕರ್ನಾಟಕ ಲೋಕಸೇವಾ ಆಯೋಗ 2026 27 ನೇ ಸಾಲಿನ ಕರ್ನಾಟಕ ಆಡಳಿತ ಸೇವೆ ಗೆಜೆಟೆಡ್ ಪ್ರೊಬೇಶನರ್ಸ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 319 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು 2026ರ ಆಗಸ್ಟ್ 1ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಇದನ್ನು ಓದಿ
ISRO Recruitment 2026 : 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.
KAS ನೇಮಕಾತಿ 2026 : ಹುದ್ದೆಯ ಸಂಕ್ಷಿಪ್ತ ವಿವರಣೆ
- ಸಂಸ್ಥೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
- ಹುದ್ದೆಯ ಹೆಸರು : ಗೆಜೆಟೆಡ್ ಪ್ರೊಬೇಷನರ್ಸ್ 2026-27 (ಗ್ರೂಪ್ ಎ ಮತ್ತು ಗ್ರೂಪ್ ಬಿ)
- ಓಟ್ಟು ಹುದ್ದೆಗಳು : 319
- ಉದ್ಯೋಗ ಸ್ಥಳ : ಕರ್ನಾಟಕ
- ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕ : 1/8/2026 ರಿಂದ 31/8/2026 ರ ವರೆಗೆ
- ಪೂರ್ವಭಾವಿ ಪರೀಕ್ಷೆ (ತಾತ್ಕಾಲಿಕ) : 15/11/2026
- ಅಧಿಕೃತ ವೆಬ್ಸೈಟ್ : https://kpsc.kar.nic.in/
KAS ನೇಮಕಾತಿ 2026 : ಹುದ್ದೆಗಳ ವಿವರ
ಒಟ್ಟು 319 ಹುದ್ದೆಗಳಲ್ಲಿ 117 ಗ್ರೂಪ್ ‘ಎ’ ಮತ್ತು 202 ಗ್ರೂಪ್ ‘ಬಿ’ ಹುದ್ದೆಗಳಿವೆ.
ಗ್ರೂಪ್ ‘ಎ’ ಹುದ್ದೆಗಳು (ಒಟ್ಟು: 117)
- ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ) : 39 ಹುದ್ದೆಗಳು.
- ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು : 50 ಹುದ್ದೆಗಳು.
- ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ : 15 ಹುದ್ದೆಗಳು.
- ಸಹಾಯಕ ನಿರ್ದೇಶಕರು (ಸಮಾಜ ಕಲ್ಯಾಣ ಇಲಾಖೆ) : 11 ಹುದ್ದೆಗಳು
- ಸಹಾಯಕ ನಿರ್ದೇಶಕರು (ಖಜಾನೆ ಇಲಾಖೆ) : 2 ಹುದ್ದೆಗಳು.
ಗ್ರೂಪ್ ‘ಬಿ’ ಹುದ್ದೆಗಳು (ಒಟ್ಟು 202)
- ತಹಶೀಲ್ದಾರ್ ಗ್ರೇಡ್ -2 : 25 ಹುದ್ದೆಗಳು
- ವಾಣಿಜ್ಯ ತೆರಿಗೆ ಅಧಿಕಾರಿ : 74 ಹುದ್ದೆಗಳು
- ಸಹಕಾರ ಸಂಘಗಳ ಸಹಾಯಕ ನಿಬಂಧಕರು : 21 ಹುದ್ದೆಗಳು
- ಮುಖ್ಯ ಅಧಿಕಾರಿ (ಗ್ರೇಡ್ -1) : 20 ಹುದ್ದೆಗಳು
- ಸಹಾಯಕ ಖಜಾನಾಧಿಕಾರಿ : 12 ಹುದ್ದೆಗಳು
- ಇತರೆ ವಿವಿಧ ಇಲಾಖೆಗಳ ಹುದ್ದೆಗಳು ಸೇರಿ ಒಟ್ಟು ರೂ.22 ಹುದ್ದೆಗಳಿವೆ.
ಇದನ್ನು ಓದಿ
KAS ನೇಮಕಾತಿ 2026 : ಅರ್ಹತಾ ಮಾನದಂಡಗಳು
1. ಶೈಕ್ಷಣಿಕ ವಿದ್ಯಾರ್ಹತೆ (Educational Qualification)
- ಭಾರತದಲ್ಲಿ ಕಾನೂನು ರೀತಿಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಸ್ನಾತಕ (degree) ಅಥವಾ ಸ್ನಾತಕೋತ್ತರ (post graduation) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಬಹುದು. ಆದರೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವೇಳೆಗೆ ಉತ್ತೀರ್ಣರಾಗಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು.
2. ವಯೋಮಿತಿ (Age Limit)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿ ಹೊಂದಿರಬೇಕು.
- ಕನಿಷ್ಠ ವಯಸ್ಸು : 21 ವರ್ಷ
- ಗರಿಷ್ಠ ವಯಸ್ಸು : (ಸರ್ಕಾರದ ಆದೇಶದನ್ವಯ ಎಲ್ಲಾ ಪ್ರವರ್ಗಗಳಿಗೂ ಐದು ವರ್ಷಗಳ ಒಂದು ಬಾರಿಯ ಸಡಿಲಿಕೆ ನೀಡಲಾಗಿದೆ.)
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ (GM) : 40 ವರ್ಷಗಳು
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : 43 ವರ್ಷಗಳು.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ : 45 ವರ್ಷಗಳು
ಪರೀಕ್ಷೆಯ ಪ್ರಯತ್ನಗಳು (Number OF Attempts)
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : 5 ಪ್ರಯತ್ನಗಳು .
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : 7 ಪ್ರಯತ್ನಗಳು.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ : ಪ್ರಯತ್ನಗಳ ಮಿತಿ ಇರುವುದಿಲ್ಲ. (ಸೂಚನೆ: ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ಪ್ರಯತ್ನವನ್ನು ಒಂದು ಅವಕಾಶವೆಂದು ಪರಿಗಣಿಸಲಾಗುವುದು.)
KAS ನೇಮಕಾತಿ 2026 :ಅರ್ಜಿ ಶುಲ್ಕ (Application Fee)
ಅರ್ಜಿದಾರರು ಶುಲ್ಕವನ್ನು ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಯುಪಿಐ ಮೂಲಕ ಆನ್ಲೈನ್ ನಲ್ಲಿ ಪಾವತಿಸತಕ್ಕದ್ದು.
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ₹600
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ₹300
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ₹50
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ಇದೆ.
KAS ನೇಮಕಾತಿ 2026 : ಆಯ್ಕೆ ವಿಧಾನ
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ.
- ಪೂರ್ವಭಾವಿ ಪರೀಕ್ಷೆ (Preliminary Exam) : ವಸ್ತುನಿಷ್ಠ ಮಾದರಿಯ (ಬಹು ಆಯ್ಕೆ) ಎರಡು ಪತ್ರಿಕೆಗಳಿರುತ್ತವೆ. ಪತ್ರಿಕೆ-1(200 ಅಂಕ, 2 ಗಂಟೆ) ಮತ್ತು ಪತ್ರಿಕೆ-2 (200 ಅಂಕ, 2 ಗಂಟೆ). ತಪ್ಪು ಉತ್ತರಗಳಿಗೆ 0.25(1/4) (negative) ಋಣಾತ್ಮಕ ಅಂಕಗಳ ಕಡಿತ ಇರುತ್ತದೆ.
- ಮುಖ್ಯ ಪರೀಕ್ಷೆ (Mains Exam) : ವಿವರಣಾತ್ಮಕ ಮಾದರಿಯ ಲಿಖಿತ ಪರೀಕ್ಷೆ. ಕಡ್ಡಾಯ ಕನ್ನಡ ಮತ್ತು ಆಂಗ್ಲ ಭಾಷೆ ಪತ್ರಿಕೆಗಳು (ಅರ್ಹತಾದಾಯಕ-150 ಅಂಕಗಳು) ಮತ್ತು 5 ಕಡ್ಡಾಯ ಪತ್ರಿಕೆಗಳು (ತಲಾ 250 ಅಂಕಗಳು) ಇರುತ್ತವೆ.
- ವ್ಯಕ್ತಿತ್ವ ಪರೀಕ್ಷೆ (Interview) : ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು 1: 3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯು ಗರಿಷ್ಠ 25 ಅಂಕಗಳನ್ನು ಒಳಗೊಂಡಿರುತ್ತದೆ.
ಇದನ್ನು ಓದಿ
KAS ನೇಮಕಾತಿ 2026 : ಅರ್ಜಿ ಸಲ್ಲಿಸುವ ವಿಧಾನ
Step 1. ಅಭ್ಯರ್ಥಿಗಳು KPSC ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Step 2. ಹೊಸ ಅಭ್ಯರ್ಥಿಗಳು , New Registration (OTR) ಮೂಲಕ ನೊಂದಾಯಿಸಿಕೊಳ್ಳಿ.
Step 3. ಲಾಗಿನ್ ಆದ ನಂತರ ಅಧಿ ಸೂಚನೆಗೆ ಅನುಗುಣವಾಗಿ Apply To Post ಆಯ್ಕೆಯನ್ನು ಕ್ಲಿಕ್ ಮಾಡಿ.
Step 4. ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ ಮತ್ತು ಅಗತ್ಯ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
Step 5. ನಿಗದಿತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
Step 6. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ವೀಕೃತಿಯನ್ನು (Application printout)ಭವಿಷ್ಯದ ಉಲ್ಲೇಖಕ್ಕಾಗಿ ಕಾಯ್ದಿಟ್ಟುಕೊಳ್ಳಿ.
KAS ನೇಮಕಾತಿ 2026 : ಅಭ್ಯರ್ಥಿಗಳು ಅಧ್ಯಯನ ಮಾಡಬೇಕಾದ ವಿಷಯಗಳು
1. ಪ್ರಾಥಮಿಕ ಪರೀಕ್ಷೆ (Preliminary)
ಪತ್ರಿಕೆ-1 : ಸಾಮಾನ್ಯ ಅಧ್ಯಯನ (general studies)
ಅಧ್ಯಯನ ಮಾಡಬೇಕಾದ ವಿಷಯಗಳು:
- ಭಾರತದ ಇತಿಹಾಸ : ಪ್ರಾಚೀನ ಭಾರತ, ಮಧ್ಯಕಾಲಿನ ಭಾರತ, ಆಧುನಿಕ ಭಾರತ, ಸ್ವಾತಂತ್ರ್ಯ ಹೋರಾಟ.
- ಕರ್ನಾಟಕದ ಇತಿಹಾಸ
- ಭಾರತೀಯ ರಾಷ್ಟ್ರೀಯ ಚಳುವಳಿ
- ಭಾರತದ ಹಾಗೂ ಕರ್ನಾಟಕದ ಭೂಗೋಳ : ನದಿಗಳು, ಪರ್ವತಗಳು, ಹವಾಮಾನ, ಕೃಷಿ, ಖನಿಜ ಸಂಪತ್ತು.
- ಭಾರತೀಯ ಸಂವಿಧಾನ : ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ರಾಷ್ಟ್ರಪತಿ, ಪ್ರಧಾನಮಂತ್ರಿ, ಸಂಸತ್ತು, ನ್ಯಾಯಾಂಗ, ಚುನಾವಣಾ ಆಯೋಗ.
- ಭಾರತೀಯ ಆಡಳಿತ ವ್ಯವಸ್ಥೆ
- ಪಂಚಾಯತ್ ರಾಜ್
- ಆರ್ಥಿಕತೆ : ಬಜೆಟ್, ಬ್ಯಾಂಕಿಂಗ್, ಹಣ ದುಬ್ಬರ, ಜಿ ಡಿ ಪಿ, ತೆರಿಗೆ.
- ವಿಜ್ಞಾನ ಮತ್ತು ತಂತ್ರಜ್ಞಾನ
- ಪರಿಸರ ಮತ್ತು ಜೀವ ವೈವಿಧ್ಯ
- ಪ್ರಚಲಿತ ವಿದ್ಯಮಾನಗಳು : ಕರ್ನಾಟಕ, ಭಾರತ, ವಿಶ್ವ.
2. ಮುಖ್ಯ ಪರೀಕ್ಷೆ (Mains)
ಪ್ರಬಂಧ (essay)
KAS ನೇಮಕಾತಿ 2026 :ಈ ವಿಷಯಗಳಲ್ಲಿ ಅಭ್ಯಾಸ ಮಾಡಿ:
- ಸಾಮಾಜಿಕ ಸಮಸ್ಯೆಗಳು
- ಆರ್ಥಿಕ ಅಭಿವೃದ್ಧಿ
- ಪರಿಸರ
- ಮಹಿಳಾ ಸಬಲೀಕರಣ
- ಶಿಕ್ಷಣ
- ತಂತ್ರಜ್ಞಾನ
- ಪ್ರಜಾಪ್ರಭುತ್ವ
- ಉತ್ತಮ ಆಡಳಿತ
General Studies paper -|
- ಭಾರತೀಯ ಸಂಸ್ಕೃತಿ
- ಕರ್ನಾಟಕದ ಸಂಸ್ಕೃತಿ
- ಇತಿಹಾಸ
- ಸಮಾಜಶಾಸ್ತ್ರ
- ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳು
- ಸಾಮಾಜಿಕ ನ್ಯಾಯ
General Studies paper -||
- ಸಂವಿಧಾನ
- ಆಡಳಿತ
- ಸಾರ್ವಜನಿಕ ನೀತಿಗಳು
- ಕೇಂದ್ರ ರಾಜ್ಯ ಸಂಬಂಧಗಳು
- ಸ್ಥಳೀಯ ಆಡಳಿತ
- ಮಾನವ ಹಕ್ಕುಗಳು
- ಮಾಹಿತಿ ಹಕ್ಕುಗಳು
- ಇ ಆಡಳಿತ
General Studies paper -|||
- ಭಾರತೀಯ ಆರ್ಥಿಕತೆ
- ಕರ್ನಾಟಕದ ಆರ್ಥಿಕತೆ
- ಕೃಷಿ
- ಕೈಗಾರಿಕೆ
- ವಿಜ್ಞಾನ ಮತ್ತು ತಂತ್ರಜ್ಞಾನ
- ಪರಿಸರ
- ವಿಪತ್ತು ನಿರ್ವಹಣೆ
General Studies paper -4
- ನೈತಿಕತೆ
- ಪ್ರಾಮಾಣಿಕತೆ
- ಸಾರ್ವಜನಿಕ ಸೇವೆಯ ಮೌಲ್ಯಗಳು
- ಆಡಳಿತದಲ್ಲಿ ನೈತಿಕತೆ
- ಪ್ರಕರಣ ಅಧ್ಯಯನಗಳು
3. ಸಂದರ್ಶನ (Interview)
ಈ ವಿಷಯಗಳಲ್ಲಿ ಉತ್ತಮ ಅರಿವು ಇರಬೇಕು:
- ಪ್ರಸ್ತುತ ಘಟನೆಗಳು
- ಕರ್ನಾಟಕದ ಸಮಸ್ಯೆಗಳು
- ಭಾರತದ ಪ್ರಮುಖ ಸಮಸ್ಯೆಗಳು
- ಆಡಳಿತ
- ವ್ಯಕ್ತಿತ್ವ
- ಸಂವಹನ ಕೌಶಲ್ಯ
- ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ.
ಮೇಲೆ ನೀಡಿರುವ ವಿಷಯಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡಿದರೆ ಈ ಪರೀಕ್ಷೆಯನ್ನು ನಿಖರವಾಗಿ ಪಾಸ್ ಮಾಡಬಹುದು. ಎಲ್ಲಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ.
ಇದನ್ನು ಓದಿ