Gruha Lakshmi 31st Installment: ಗೃಹಲಕ್ಷ್ಮಿ 31ನೇ ಕಂತಿನ ಹಣ ಬಿಡುಗಡೆ ಮಹಿಳೆಯರ ಖಾತೆಗೆ ಹಣ ಜಮಾ ಆರಂಭ, Important Update.

WhatsAppಫಾಲೋ ಮಾಡಿ

Gruha Lakshmi 31st Installment  Gruha Lakshmi 31st Installment: ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 2,400 ಕೋಟಿ ರೂ ಬಿಡುಗಡೆ. ಫಲಾನುಭವಿಗಳ ಖಾತೆಗೆ ಡಿ ಬಿ ಟಿ ಮೂಲಕ ಹಣ ಜಮೆ ಪ್ರಕ್ರಿಯೆ ಆರಂಭವಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ. 

31ನೇ ಕಂತಿಗೆ 2,400 ಕೋಟಿ ರೂ ಬಿಡುಗಡೆ. 

Gruha Lakshmi 31st Installment: ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ 2,000 ನೇರವಾಗಿ ಜಮೆ ಮಾಡಲಾಗುತ್ತಿದೆ. ಈಗ 31ನೇ ಕಂತಿನ ಹಣ ಬಿಡುಗಡೆಗೊಂಡಿರುವುದರಿಂದ, ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ.

ಸರ್ಕಾರದ ಮಾಹಿತಿ ಪ್ರಕಾರ, ಈ ಯೋಜನೆಯ ಮೂಲಕ ಮಹಿಳೆಯರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಹಣ ತಲುಪಿಸಲಾಗುತ್ತಿದೆ.

ರಾಜ್ಯದ ಮಹಿಳೆಯರ ಬಹು ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಾರಿ 2,400 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿ ಬಿ ಟಿ ಮೂಲಕ ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಈ ಕುರಿತು ಮಾಹಿತಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಸರ್ಕಾರ ಒಟ್ಟು 74,650 ಕೋಟಿ ರೂ ವೆಚ್ಚ ಮಾಡಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ

Crop Insurance Release 2026: Important,ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು ಮೊಬೈಲ್ನಲ್ಲಿ ಸ್ಟೇಟಸ್ ಪರಿಶೀಲಿಸುವುದು ಹೇಗೆ?

Gruha Lakshmi 31st Installment: ಇದುವರೆಗೆ ಎಷ್ಟು ಹಣ ವೆಚ್ಚವಾಗಿದೆ? 

ಗೃಹಲಕ್ಷ್ಮಿ ಯೋಜನೆ ಆರಂಭವಾದ ಬಳಿಕ ಸರ್ಕಾರ ಇದುವರೆಗೆ ಒಟ್ಟು 74,650 ಕೋಟಿ ರು ವೆಚ್ಚ ಮಾಡಿದೆ. ಇದು ರಾಜ್ಯದ ಅತಿ ದೊಡ್ಡ ಮಹಿಳಾ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ.

ಸರ್ಕಾರದ ಪ್ರಕಾರ, ಈ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳ ಆರ್ಥಿಕ ಸ್ಥಿತಿಗೆ ನೆರವಾಗಿದ್ದು, ಮಹಿಳೆಯರಿಗೆ ಸ್ವಾವಲಂಬನೆ ಯತ್ತ ಹೆಜ್ಜೆ ಇಡುವ ಅವಕಾಶ ದೊರೆತಿದೆ.

Gruha Lakshmi 31st Installment: ಒಬ್ಬ ಫಲಾನುಭವಿಗೆ ಈಗಾಗಲೇ ₹62,000 ಪಾವತಿ 

ದಿನೇಶ್ ಗೂಳಿಗೌಡ ಅವರ ಹೇಳಿಕೆಯ ಪ್ರಕಾರ, ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿ ಒಬ್ಬ ಮನೆ ಯಜಮಾನ ಖಾತೆಗೆ ಇದುವರೆಗೆ ಸುಮಾರು 62,000 ಪಾವತಿಸುವ ಕೆಲಸ ಮಾಡಿದೆ.

ಪ್ರತಿ ತಿಂಗಳು ₹2,000 ಗಳಂತೆ ನೀಡಲಾಗುತ್ತಿರುವ ಈ ಸಹಾಯಧನವು ಮಹಿಳೆಯರ ಕುಟುಂಬ ನಿರ್ವಹಣೆಗೆ ಪ್ರಮುಖ ಆರ್ಥಿಕ ಬೆಂಬಲವಾಗಿದೆ.

Gruha Lakshmi 31st Installment: ರಾಜ್ಯದಲ್ಲಿ 1.24 ಕೋಟಿ ಮಹಿಳೆಯರಿಗೆ ಲಾಭ 

ಗೃಹಲಕ್ಷ್ಮಿ 31ನೇ ಕಂತಿನ ಹಣ:   ಪ್ರಸ್ತುತ ರಾಜ್ಯದ ಸುಮಾರು 1.24 ಕೋಟಿ ಕುಟುಂಬಗಳ ಮನೆ ಯಜಮಾನರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ₹2,000 ರೂ  ಅನ್ನು ಡಿ ಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಈ ಯೋಜನೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳೆಯರು ಸಮಾನವಾಗಿ ಪ್ರಯೋಜನ ಪಡೆಯುತ್ತಿದ್ದಾರೆ.

ಇದನ್ನು ಓದಿ

KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ

Gruha Lakshmi 31st Installment: ಹಣವನ್ನು ಯಾವ ಉದ್ದೇಶಕ್ಕೆ ಬಳಸಬಹುದು? 

ಸರ್ಕಾರದ ಉದ್ದೇಶದಂತೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕುಟುಂಬದ ಅಗತ್ಯಗಳಿಗೆ ಬಳಸಿಕೊಳ್ಳಬಹುದು .ಮುಖ್ಯವಾಗಿ,

  • ಕುಟುಂಬದ ದೈನಂದಿನ ಖರ್ಚುಗಳಿಗೆ
  • ಮಕ್ಕಳ ಶಿಕ್ಷಣಕ್ಕೆ
  • ಆಹಾರ ಮತ್ತು ಪೌಷ್ಟಿಕತೆಗೆ
  • ಆರೋಗ್ಯ ಸಂಬಂಧಿತ ವೆಚ್ಚಗಳಿಗೆ
  • ಇತರೆ ಅಗತ್ಯ ಕುಟುಂಬ ಖರ್ಚುಗಳಿಗೆ
  • ಇದರಿಂದ ಕುಟುಂಬದ ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
  • ಮಹಿಳೆಯರ ಆರ್ಥಿಕ ಸ್ವಾವಲಂಬನೆ: ಮಹಿಳೆಯರು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ಹಾಗೂ ಹಣಕಾಸಿನ ವಿಷಯದಲ್ಲಿ ಆತ್ಮವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
  • ಕುಟುಂಬದ ಆರ್ಥಿಕ ಸ್ಥಿರತೆ:  ಆಹಾರ, ಶಿಕ್ಷಣ, ಆರೋಗ್ಯ, ವಿದ್ಯುತ್ ಬಿಲ್ ಹಾಗೂ ಇತರ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಈ ನೆರವು ಉಪಯುಕ್ತವಾಗುತ್ತದೆ.
  • ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವು: ಸೀಮಿತ ಆದಾಯ ಹೊಂದಿರುವ ಕುಟುಂಬಗಳಿಗೆ ಈ ಯೋಜನೆ ಹೆಚ್ಚುವರಿ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.
  • ಮಹಿಳೆಯರ ಗೌರವ ಮತ್ತು ಸಬಲೀಕರಣ: ಕುಟುಂಬದಲ್ಲಿ ಮಹಿಳೆಯರ ಪಾತ್ರಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ ಹಾಗೂ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
  • ಮಕ್ಕಳ ಶಿಕ್ಷಣಕ್ಕೆ ಸಹಾಯ: ಮಕ್ಕಳ ಶಾಲಾ ಶುಲ್ಕ ಪುಸ್ತಕ, ಸಮವಸ್ತ್ರ ಮತ್ತು ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಈ ಹಣವನ್ನು ಬಳಸಬಹುದು.
  • ಆರೋಗ್ಯ ವೆಚ್ಚಗಳಿಗೆ ನೆರವು: ಔಷಧಿ, ಚಿಕಿತ್ಸಾ ವೆಚ್ಚ ಹಾಗೂ ಆರೋಗ್ಯ ತಪಾಸಣೆಗಾಗಿ ಈ ಹಣ ನೆರವಾಗುತ್ತದೆ.
  • ಸಣ್ಣ ಉಳಿತಾಯ ಮತ್ತು ಹೂಡಿಕೆಗೆ ಅವಕಾಶ: ಪ್ರತಿ ತಿಂಗಳು ದೊರೆಯುವ ಹಣದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿ ಭವಿಷ್ಯದ ಅಗತ್ಯಗಳಿಗೆ ಬಳಸಬಹುದು.
  • ಸಾಲದ ಅವಲಂಬನೆ ಕಡಿಮೆ: ತುತ್ತು ಸಂದರ್ಭಗಳಲ್ಲಿ ಸಣ್ಣಪುಟ್ಟ ಖರ್ಚುಗಳಿಗೆ ಸಾಲ ಮಾಡುವ ಅಗತ್ಯ ಕಡಿಮೆಯಾಗಬಹುದು.
  • ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಸಮಾನ ಲಾಭ: ಅರ್ಹ ಮಹಿಳೆಯರು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿಯೂ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆಯ ಕೇವಲ 2,000 ಆರ್ಥಿಕ ನೆರವು ನೀಡುವ ಯೋಜನೆ ಅಲ್ಲ, ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಕುಟುಂಬದ ಆರ್ಥಿಕ ಭದ್ರತೆ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಹಾಗೂ ಉತ್ತಮ ಜೀವನಮಟ್ಟವನ್ನು ಉತ್ತೇಜಿಸುವ ಮಹತ್ವದ ಕಲ್ಯಾಣ ಯೋಜನೆಯಾಗಿದೆ. ಇದರಿಂದ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನವೂ ಬಲವಾಗುತ್ತದೆ.

ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಾಗಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಇದನ್ನು ಓದಿ

Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

Gruha Lakshmi 31st Installment: ಫಲಾನುಭವಿಗಳು ಏನು ಮಾಡಬೇಕು? 

31ನೇ ಕಂತಿನ ಹಣ ಬಿಡುಗಡೆಯಾದ ಹಿನ್ನೆಲೆಯಲ್ಲಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬಹುದು. ಹಣ ಎಲ್ಲರ ಖಾತೆಗೆ ಒಂದೇ ದಿನ ಜಮೆಯಾಗದೆ, ಬ್ಯಾಂಕ್ ಮತ್ತು ತಾಂತ್ರಿಕ ಪ್ರಕ್ರಿಯೆಯ ಆಧಾರದ ಮೇಲೆ ಹಂತ ಹಂತವಾಗಿ ಜನ ಆಗುವ ಸಾಧ್ಯತೆ ಇದೆ.

ಆದ್ದರಿಂದ ಹಣ ಜಮೆಯಾಗುವವರೆಗೆ ಸ್ವಲ್ಪ ಸಮಯ ಕಾಯುವುದು ಒಳಿತು. ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಬಿಡುಗಡೆಯೊಂದಿಗೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಮತ್ತೊಮ್ಮೆ ಆರ್ಥಿಕ ನೆರವು ದೊರೆಯಲಿದ್ದು ಕುಟುಂಬದ ಅಗತ್ಯ ವೆಚ್ಚಗಳನ್ನು ನಿಭಾಯಿಸಲು ಈ ಹಣ ಸಹಕಾರಿಯಾಗಿದೆ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

ಗೃಹಲಕ್ಷ್ಮಿ Official website

https://wcd.karnataka.gov.in/26/gruhalakshmi-scheme/en

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

Leave a Comment