Uchitha Holige Yanthra: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹುಲಿಗೆ ಯಂತ್ರಗಳನ್ನು ವಿತರಿಸುತ್ತದೆ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ವಿವರ ಇಲ್ಲಿದೆ.
ಮಹಿಳೆಯರು ಮನೆಯಲ್ಲಿಯೇ ಕುಳಿತು ಸ್ವಂತ ಆದಾಯ ಗಳಿಸಬೇಕು ಮತ್ತು ಆರ್ಥಿಕವಾಗಿ ಬಲವಾಗಬೇಕು ಎಂಬುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರಮುಖ ಗುರಿಯಾಗಿದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗಾಗಿ ಸರ್ಕಾರವು ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆಯನ್ನು( Free sewing machine scheme) ಜಾರಿಗೊಳಿಸಿದೆ. ಇದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ (women Empowerment) ಭದ್ರ ಬುನಾದಿ ಹಾಕಿ ಕೊಡುತ್ತದೆ.
ಸರ್ಕಾರವು ಯಾವೆಲ್ಲ ಯೋಜನೆಗಳ ಅಡಿಯಲ್ಲಿ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿದೆ, ಇದಕ್ಕೆ ಬೇಕಾಗುವ ಅರ್ಹತೆಗಳೇನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
Uchitha Holige Yanthra:ಉಚಿತ ಹೊಲಿಗೆ ಯಂತ್ರ ಒದಗಿಸುವ ಪ್ರಮುಖ ಯೋಜನೆಗಳು (Major Schemes)
ಮಹಿಳೆಯರು ಕೇವಲ ಒಂದು ಹೊಲಿಗೆ ಯಂತ್ರದ ಮೂಲಕ ತಮ್ಮದೇ ಆದ ಸಣ್ಣ ಉದ್ಯಮವನ್ನು (Small Business) ಆರಂಭಿಸಬಹುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಲಭ್ಯವಿರುವ ಪ್ರಮುಖ ಯೋಜನೆಗಳ ವಿವರ ಹೀಗಿದೆ.
1.Uchitha Holige Yanthra: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana)
ಈ ಯೋಜನೆಯ ಕರಕುಶಲಕರ್ಮಿಗಳಿಗೆ ಒಂದು ವರದಾನವಾಗಿದೆ. ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ( Skill Development Training) ನೀಡಿ ಅದರ ಜೊತೆಗೆ ಉಚಿತವರಿಗೆ ಯಂತ್ರವನ್ನು ನೀಡಲಾಗುತ್ತದೆ.
ವಿಶೇಷತೆ: ಆಯ್ಕೆಯಾದ ಮಹಿಳೆಯರಿಗೆ ಉಚಿತ ತರಬೇತಿ, ತರಬೇತಿ ಅವಧಿಯಲ್ಲಿ ಸ್ಟೈಫಂಡ್ (Stipend )ಸೌಲಭ್ಯ ಮತ್ತು ಕೌಶಲ್ಯ ಪ್ರಮಾಣ ಪತ್ರ (Skill Certificate) ನೀಡಲಾಗುತ್ತದೆ. ತರಬೇತಿಯ ನಂತರ ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನದೊಂದಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ.
2. Uchitha Holige Yanthra: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP Scheme)
ಸ್ವಂತ ಟೈಲರಿಂಗ್ ಶಾಪ್ ಅಥವಾ ಸಣ್ಣ ಗಾರ್ಮೆಂಟ್ಸ್ ಉದ್ದಿಮೆ ಆರಂಭಿಸಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಯೋಜನೆ.
ವಿಶೇಷತೆ: ಈ ಯೋಜನೆಯಡಿ ಹೊಲಿಗೆ ಯಂತ್ರ ಖರೀದಿ ಹಾಗೂ ಉದ್ದಿಮೆ ಸ್ಥಾಪನೆಗೆ ಗರಿಷ್ಟ ಶೇಕಡ 35 ರಷ್ಟು ಸಬ್ಸಿಡಿ ( Subsidy )ದೊರೆಯುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುಗುಣವಾಗಿ ಸಬ್ಸಿಡಿ ಪ್ರಮಾಣ ಬದಲಾಗುತ್ತದೆ. ಬ್ಯಾಂಕ್ ಸಾಲದ (Bank Loan) ನೆರವಿನೊಂದಿಗೆ ಮಹಿಳೆಯರು ತಮ್ಮ ಕನಸಿನ ಉದ್ಯಮ ಕಟ್ಟಬಹುದು.
PMEGP Official website
https://www.kviconline.gov.in/pmegpeportal/pmegphome/index.jsp
ಇದನ್ನು ಓದಿ
3.Uchitha Holige Yanthra: ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳು (State Government corporation s)
ಕರ್ನಾಟಕ ಸರ್ಕಾರವು ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಗಳ ಮೂಲಕವೂ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುತ್ತದೆ.
ಯಾವೆಲ್ಲ ನಿಗಮಗಳು?. ಒಕ್ಕಲಿಗ, ಲಿಂಗಾಯುತ, ದೇವರಾಜ ಅರಸು ,ಎಸ್ ಸಿ, ಎಸ್ ಟಿ, (SC/ST) ಅಲ್ಪಸಂಖ್ಯಾತ (Minorities) , ಮರಾಠ ,ವಿಶ್ವಕರ್ಮ ಸೇರಿದಂತೆ ಹಲವು ನಿಗಮಗಳು ಸಮಯಾ ಅನುಸಾರ ಅರ್ಜಿ ಆಹ್ವಾನಿಸುತ್ತವೆ.
4. Uchitha Holige Yanthra: ಜಿಲ್ಲಾ ಕೈಗಾರಿಕಾ ಕೇಂದ್ರ (District Individual Centre – DIC)
ಗ್ರಾಮೀಣ ಮಹಿಳಾ ಕುಶಲಕರ್ಮಿಗಳಿಗಾಗಿ 2025 26ನೇ ಸಾಲಿನಲ್ಲಿ ಜಿಲ್ಲಾ ವಲಯ ಯೋಜನೆ ಅಡಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ.
ಸದ್ಯಕ್ಕಿರುವ ಮಾಹಿತಿ: ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆ ಮುಕ್ತಾಯವಾಗಿದ್ದರು, ಪ್ರಸ್ತುತ ಕೆಲವು ಜಿಲ್ಲೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಮಹಿಳೆಯರು ತಮ್ಮ ತಮ್ಮ ಜಿಲ್ಲೆಯ ಪ್ರಕಟಣೆಗಳನ್ನು ಗಮನಿಸುತ್ತಿರಬೇಕು.
Uchitha Holige Yanthra: ಯಾರು ಅರ್ಜಿ ಸಲ್ಲಿಸಬಹುದು? (Eligibility criteria)
ಸರ್ಕಾರದ ಈ ಸೌಲಭ್ಯಗಳನ್ನು ಪಡೆಯಲು ಮಹಿಳೆಯರು ಕೆಳಕಂಡ ಅರ್ಹತೆಗಳನ್ನು (Eligibility ) ಹೊಂದಿರಬೇಕಾಗುತ್ತದೆ.
- ಅರ್ಜಿದಾರ ಮಹಿಳೆಯ ವಯಸ್ಸು 18 ರಿಂದ 45 ವರ್ಷದ ಒಳಗೆ ಇರಬೇಕು.
- ಸರ್ಕಾರಿ ನೌಕರರ ( Government Employees) ಕುಟುಂಬದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
- ಈಗಾಗಲೇ ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (Tailoring Certificate)ಹೊಂದಿರುವ ಮಹಿಳೆಯರಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?
Uchitha Holige Yanthra: ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ( Required documents)
ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಆಧಾರ್ ಕಾರ್ಡ್ (Adhar card)
- ಬ್ಯಾಂಕ್ ಪಾಸ್ ಬುಕ್ ಪ್ರತಿ (Bank Passbook Copy)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( Caste and income Certificate)
- ಪಾಸ್ ಪೋರ್ಟ್ ಅಳತೆಯ ಫೋಟೋ (Passport Size Photo).
- ಪಡಿತರ ಚೀಟಿ ( Ration card) ಅಥವಾ ಮತದಾರರ ಚೀಟಿ (Voter ID)
- ಹೊಲಿಗೆ ತರಬೇತಿ ಪ್ರಮಾಣ ಪತ್ರ ( Tailoring Certificate ಇದ್ದರೆ ಆಯ್ಕೆಗೆ ಅನುಕೂಲ.)
Uchitha Holige Yanthra: ಅರ್ಜಿ ಸಲ್ಲಿಸುವ ವಿಧಾನ (How to Apply)
ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ (Application Process) ಭಿನ್ನವಾಗಿರುತ್ತದೆ.
ಆನ್ಲೈನ್ ಮೂಲಕ (Online application): ಪಿಎಂ ವಿಶ್ವಕರ್ಮ, ಪಿ ಎಂ ಇ ಜಿ ಪಿ ಹಾಗೂ ವಿವಿಧ ನಿಗಮಗಳ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಓನ್ , ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬಹುದು.
ಆಫ್ ಲೈನ್ ಮೂಲಕ (Offline Application)’:
ಜಿಲ್ಲಾ ಕೈಗಾರಿಕಾ ಕೇಂದ್ರದ ಯೋಜನೆಗಳಿಗಾಗಿ ಮಹಿಳೆಯರು ತಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆ ವಿಭಾಗದ ಉಪನಿರ್ದೇಶಕರ ಕಚೇರಿಗೆ ನೇರವಾಗಿ ಭೇಟಿ ನೀಡಿ, ಭರ್ತಿ ಮಾಡಿದ ಅರ್ಜಿ ನಮೂನೆ ಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗುತ್ತದೆ.
ಮಧ್ಯಮ ವರ್ಗದ ಜನರಿಗೆ ಟೈಲರಿಂಗ್ ಯಂತ್ರದ ಪ್ರಯೋಜನಗಳು:
- ಮನೆಯಿಂದಲೇ ಹೊಲಿಗೆ ಕೆಲಸ ಮಾಡಿ ಹೆಚ್ಚುವರಿ ಹಣ ಸಂಪಾದಿಸಬಹುದು.
- ಬಟ್ಟೆಗಳನ್ನು ಸ್ವತಃ ಒಲಿದು ಅಥವಾ ತಿದ್ದುಪಡಿ ಮಾಡಿ ವೆಚ್ಚವನ್ನು ಉಳಿಸಬಹುದು.
- ಮಹಿಳೆಯರು ಹಿರಿಯರು ಅಥವಾ ವಿದ್ಯಾರ್ಥಿಗಳು ಮನೆಯಲ್ಲಿ ಕೆಲಸ ಮಾಡಬಹುದು.
- ಸಣ್ಣ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವತಂತ್ರವಾಗಬಹುದು.
- ಸಣ್ಣ ತಿದ್ದುಪಡಿಗಳಿಗೆ ಟೈಲರ್ ಅಂಗಡಿಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ.
- ಹುಲಿಗೆ ಕೌಶಲ್ಯ ಕಲಿತು ಭವಿಷ್ಯದಲ್ಲಿ ಉತ್ತಮ ಉದ್ಯೋಗ ಅಥವಾ ವ್ಯವಹಾರ ಅವಕಾಶಗಳನ್ನು ಪಡೆಯಬಹುದು.
- ಮಕ್ಕಳ ಯೂನಿಫಾರ್ಮ್ ಮನೆ ಬಳಕೆಯ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ತಯಾರಿಸಬಹುದು.
ಟೈಲರಿಂಗ್ ಯಂತ್ರವು ಮಧ್ಯಮ ವರ್ಗದ ಕುಟುಂಬಗಳಿಗೆ ಆದಾಗ ಹೆಚ್ಚಿಸಲು, ವೆಚ್ಚ ಕಡಿಮೆ ಮಾಡಲು ಮತ್ತು ಸ್ವ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಬಹಳ ಉಪಯುಕ್ತವಾಗಿದೆ.
ಇದನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಿಕೊಂಡು ಟೈಲರಿಂಗ್ ಮಷೀನ್ ಗಳಿಂದ ತಮ್ಮ ಸ್ವಂತ ಜೀವನವನ್ನು ನಡೆಸುವಂತಹ ಮಹಿಳೆಯರಿಗೆ ಈ ಲೇಖನವನ್ನು ಆದಷ್ಟು ಶೇರ್ ಮಾಡಿ ಅವರಿಗೆ ತಮ್ಮ ಸ್ವಂತ ಉದ್ಯಮವನ್ನು ಕಟ್ಟಿಕೊಳ್ಳುವಂತಹ ಅವಕಾಶವನ್ನು ಕಲ್ಪಿಸಿಕೊಡಿ.