SSB constable recruitment 2026 : ಹತ್ತನೇ ತರಗತಿ ಪಾಸ್ ಮಾಡಿದವರಿಗೆ ಸರ್ಕಾರಿ ಉದ್ಯೋಗ ಎಸ್ ಎಸ್ ಬಿ ನಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ, important update.

WhatsAppಫಾಲೋ ಮಾಡಿ

SSB constable recruitment 2026  SSB constable recruitment 2026-ಹತ್ತನೇ ತರಗತಿ ಪಾಸಾದವರಿಗೆ 827 ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ ಆರಂಭವಾಗಿದೆ .₹69,100 ವರೆಗೆ ವೇತನ ಬಿದ್ದು ಅರ್ಹತೆ ವಯೋಮಿತಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹತ್ತನೇ ತರಗತಿ ಪಾಸಾದ ಯುವಕರು ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ ಪಡೆಯಲ್ಲಿ 827 ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ ಆರಂಭವಾಗಿರುವುದು ದೊಡ್ಡ ಅವಕಾಶವೆಂದು ಹೇಳಬಹುದು.

ಇದು ಕೇವಲ ಉದ್ಯೋಗವಷ್ಟೇ ಅಲ್ಲ ದೇಶ ಸೇವೆ ಮಾಡುವ ಅಪರೂಪದ ಅವಕಾಶವೂ ಆಗಿದೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವಕರಿಗೆ ಇದು ಒಂದು ಉತ್ತಮ ಗುರಿ ಸಾಧನೆಯ ಮಾರ್ಗವಾಗಿದೆ.

SSB constable recruitment 2026:  ನೇಮಕಾತಿಯ ಮಹತ್ವ. (Importance of recruitment) 

ಇಂದಿನ ಕಾಲದಲ್ಲಿ ಪದವಿ ಇಲ್ಲದೆ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ ಎನ್ನುವ ಭಾವನೆ ಹಲವರಲ್ಲಿದೆ ಆದರೆ ಈ ನೇಮಕಾತಿ ಆ ಭಾವನೆಯನ್ನು ಸಂಪೂರ್ಣವಾಗಿ ತಪ್ಪು ಎಂದು ತೋರಿಸುತ್ತದೆ .ಹತ್ತನೇ ತರಗತಿ ಪಾಸಾದವರು ಕೂಡ ತಮ್ಮ ಕೌಶಲ್ಯ ಆಧಾರದಲ್ಲಿ ಉತ್ತಮ ಉದ್ಯೋಗ ಪಡೆಯಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳು ವಿಶೇಷವಾಗಿ ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದ ಕೌಶಲ್ಯ ಹೊಂದಿರುವವರಿಗೆ ವಿನ್ಯಾಸಗೊಳಿಸಲಾಗಿದೆ ಆದ್ದರಿಂದ ಇದು skill based employment ಅನ್ನು ಉತ್ತೇಜಿಸುವ ಪ್ರಮುಖ ನೇಮಕಾತಿ ಯಾಗಿದೆ.

ಹುದ್ದೆಗಳ ವಿವರ (nature of posts)

ಈ ನೇಮಕಾತಿಯಲ್ಲಿ ಒಟ್ಟು 827 ಹುದ್ದೆಗಳು ಲಭ್ಯವಿದೆ. ವಿವಿಧ ಟ್ರೇಡ್ ಗಳಲ್ಲಿ ಹಂಚಿಕೆ ಮಾಡಲಾಗಿದೆ ಇಲ್ಲಿ ಕೆಲಸ ಮಾಡುವವರು ಕೇವಲ ಗನ್ ಹಿಡಿದು ಗಡಿಯನ್ನು ಕಾಯುವವರಷ್ಟೇ ಅಲ್ಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೇವೆ ನೀಡುವ ತಜ್ಞರು ಆಗಿರುತ್ತಾರೆ.

ಡ್ರೈವರ್ ,ಕಾರ್ಪೆಂಟರ್ ಟೈಲರ್ , ವಾಷರ್ ಮ್ಯಾನ್, ಬಾರ್ಬರ್ ,ನರ್ಸಿಂಗ್ , ಗಾರ್ಡನರ್, ವೇಟರ್ ಮುಂತಾದ ಹುದ್ದೆಗಳು ಇವೆ ಪ್ರತಿಯೊಂದು ಹುದ್ದೆಯೂ ದೈನಂದಿನ ಶಿಬಿರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

SSB constable recruitment 2026:  ಅರ್ಜಿ ಪ್ರಕ್ರಿಯೆ ಮತ್ತು ದಿನಾಂಕಗಳು (application process and dates) 

ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ, ಮಾರ್ಚ್ 21ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಏಪ್ರಿಲ್ 20 ಕೊನೆಯ ದಿನಾಂಕ ಆಗಿದೆ ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ.

ಇದನ್ನು ಓದಿ

JK Tyre Scholarship 2026 : ಜೆ ಕೆ ಟೈರ್ ಶಿಕ್ಷಾ ಸಾರಥಿ ಯೋಜನೆ ಅಡಿ 25,000 ವಿದ್ಯಾರ್ಥಿ ವೇತನ, Important update.

SSB constable recruitment 2026: ಅರ್ಹತೆ ಮತ್ತು ವಯೋಮಿತಿ(eligibility and age limit) 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಜೊತೆಗೆ ಕೆಲವು ಹುದ್ದೆಗಳಿಗೆ (ITI certificate)ಅಥವಾ ಅನುಭವ ಅಗತ್ಯವಿರುತ್ತದೆ.

ವಯೋಮಿತಿ ವಿಚಾರದಲ್ಲಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ನಿಗದಿಯಾಗಿದೆ. ಕೆಲ ಹುದ್ದೆಗಳಿಗೆ 23 ವರ್ಷ ಗರಿಷ್ಠ ಮಿತಿ ಇರಬಹುದು. ಮೀಸಲು ವರ್ಗದವರಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

SSB constable recruitment 2026:  ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection process explained).

ಈ ನೇಮಕಾತಿ ಸರಳವಾಗಿಲ್ಲ ಆದರೆ ಪಾರದರ್ಶಕವಾಗಿದೆ ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ.

ಮೊದಲ ಹಂತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ (physical efficiency test)

ದೈಹಿಕ ಮಾನದಂಡ ಪರೀಕ್ಷೆ(physical standard test).

ಇಲ್ಲಿ ಅಭ್ಯರ್ಥಿಯ ಶಾರೀರಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಯುತ್ತದೆ ಇದು ಸಾಮಾನ್ಯ ಜ್ಞಾನ ಗಣಿತ ತಾರ್ಕಿಕ ಚಿಂತನೆ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ.

ಮೂರನೇ ಹಂತದಲ್ಲಿ ಟ್ರೇಡ್ ಟೆಸ್ಟ್ ಇರುತ್ತದೆ ಇಲ್ಲಿ ಅಭ್ಯರ್ಥಿಯ ನಹಿತ ಕೌಶಲ್ಯ ಪರಿಶೀಲಿಸಲಾಗುತ್ತದೆ.

ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ನಡೆಯುತ್ತದೆ.

ಇದನ್ನು ಓದಿ

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ

SSB constable recruitment 2026: ವೇತನ ಮತ್ತು ಭದ್ರತೆ (salary and job security)

ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ₹69,100 ವರೆಗೆ ವೇತನ ದೊರೆಯುತ್ತದೆ ಜೊತೆಗೆ ಡಿಎ ಎಚ್ ಆರ್ ಏ ಪೆನ್ಷನ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿರುತ್ತವೆ

ಸರ್ಕಾರಿ ಉದ್ಯೋಗ ವಾಗಿರುವುದರಿಂದ ಉದ್ಯೋಗ  ಭದ್ರತೆ ಅತ್ಯಂತ ಉತ್ತಮವಾಗಿರುತ್ತದೆ ನಿವೃತ್ತಿ ನಂತರ ಸೌಲಭ್ಯಗಳು ಮುಂದುವರಿಯುತ್ತವೆ.

SSB constable recruitment 2026:  ಸಶಸ್ತ್ರ ಸೀಮಾ ಬಲದ ಪಾತ್ರ(role of SSB)

ಸಶಸ್ತ್ರ ಸೀಮಾ ಬಲ 1963 ರಲ್ಲಿ ಸ್ಥಾಪನೆಯಾದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾಗಿದೆ ಇದು ಭಾರತ ನೇಪಾಳ ಮತ್ತು ಭಾರತ ಭೂತಾನ್ ಗಡಿಗಳನ್ನು ಕಾಯುವ ಜವಾಬ್ದಾರಿಯನ್ನು ಹೊಂದಿದೆ ಸುಮಾರು 1751 ಕಿಲೋಮೀಟರ್ ಗಡಿಯಲ್ಲಿ ಈ ಪಡೆ ಕಾರ್ಯನಿರ್ವಹಿಸುತ್ತದೆ.

ಗಡಿಭಾಗದಲ್ಲಿ ಕಳ್ಳ ಸಾಗಣೆ ಅಕ್ರ niಮ ಪ್ರವೇಶ ಮತ್ತು ಇತರ ಅಪರಾಧಗಳನ್ನು ತಡೆಯುವಲ್ಲಿ ಈ ಪಡೆ ಮಹತ್ವದ ಪಾತ್ರ ವಹಿಸುತ್ತದೆ ಆದ್ದರಿಂದ ಈ ಪಡೆಯಲಿ ಕೆಲಸ ಮಾಡುವುದು ಹೆಮ್ಮೆಯ ವಿಷಯವಾಗಿದೆ.

ಒಟ್ಟಾರೆ ಹತ್ತನೇ ತರಗತಿ ಪಾಸಾದ ಯುವಕರಿಗೆ ಇದು ಒಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಕೌಶಲ್ಯ ಇದ್ದರೆ ಸಾಕು. ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ಆಸಕ್ತರು ಸಮಯ ಕಳೆಯದೆ ಅರ್ಜಿ ಸಲ್ಲಿಸಿ ತಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಸಾಧಿಸಬಹುದು.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

 

Leave a Comment