Karnataka B.Ed Admission 2026 : ಕರ್ನಾಟಕ ಬಿ.ಎಡ್ ಪ್ರವೇಶಾತಿ ಆರಂಭ- ಕೊನೆಯ ದಿನಾಂಕ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ Important ಮಾಹಿತಿ.

Karnataka B.Ed Admission 2026Karnataka B.Ed Admission 2026 : ಕರ್ನಾಟಕ ಬಿ.ಎಡ್ (B.Ed) 2026-27 ಪ್ರವೇಶಾತಿಗೆ KEA ಅರ್ಜಿ ಆಹ್ವಾನಿಸಿದೆ. ಕೊನೆಯ ದಿನಾಂಕ, ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಶಿಕ್ಷಕರಾಗುವ ಕನಸು ಕಾಣುತ್ತಿರುವ ಕರ್ನಾಟಕದ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. 2026 27ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿ.ಎಡ್ (Bachelor of Education – B.Ed) ಕೋರ್ಸ್ ನ ಸರ್ಕಾರಿ ಕೋಟ ಸೀಟುಗಳ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯ ಬದಲಾಗಿ ಕೆಇಎ (KEA) ಮೂಲಕ ಕೇಂದ್ರೀಕೃತ ಆನ್ಲೈನ್ ಕೌನ್ಸಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನ ರಹಿತ ಬಿ.ಎಡ್ ಕಾಲೇಜುಗಳಲ್ಲಿ ಸರ್ಕಾರಿ ಕೋಟ ಸೀಟು ಪಡೆಯಲು ಬಯಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು (Important Dates)

Karnataka B.Ed Admission 2026 ಕ್ಕೆ ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಅಧಿಸೂಚನೆ ಮತ್ತು ಆನ್ಲೈನ್ ಅರ್ಜಿ ಆರಂಭ : ನವೆಂಬರ್ 20, 2026.
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 30, 2026 (ರಾತ್ರಿ 11:59ರವರೆಗೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್ 2, 2026 (ಸಂಜೆ 6:00 ವರೆಗೆ)
  • ದಾಖಲೆ ಪರಿಶೀಲನೆ (Documents Verification) : ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ.
  • ಮೆರಿಟ್ ಪಟ್ಟಿ ಮತ್ತು ಸೀಟು ಹಂಚಿಕೆ : ಡಿಸೆಂಬರ್ 2026.

Karnataka B.Ed Admission 2026 : ಯಾರು ಅರ್ಜಿ ಸಲ್ಲಿಸಬಹುದು?

  • ಕರ್ನಾಟಕದ ಶಾಶ್ವತ ನಿವಾಸಿಗಳಾಗಿರುವ (Domicile/Study Criteria ಪೂರೈಸುವ) ಪದವೀಧರರು ಸರ್ಕಾರಿ ಕೋಟ ಸೀಟುಗಳಿಗೆ ಅರ್ಜಿ ಸಲ್ಲಿಸಬಹುದು.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ (Art’s/Humanities) , ವಿಜ್ಞಾನ (Science) , ವಾಣಿಜ್ಯ (Commerce) , ಅಥವಾ ಇಂಜಿನಿಯರಿಂಗ್ (B.E/B.Tec) ಪದವಿ ಪಡೆದವರು ಅರ್ಹರಾಗಿರುತ್ತಾರೆ.
  • ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ : ಅಭ್ಯರ್ಥಿಗಳು ತಮ್ಮ ಪದವಿಯಲ್ಲಿ ಪಡೆದ ಅಂಕಗಳು (Merit) ಮೀಸಲಾತಿ ಮತ್ತು ಕಾಲೇಜು ಆದ್ಯತೆಯ (Option Entry) ಆಧಾರದ ಮೇಲೆ ನೇರವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅಂಕಗಳ ಮಾನದಂಡ (Qualifications And Eligibility Criteria)

Karnataka B.Ed Admission 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10+2+3 ಅಥವಾ 10+2+4 ಮಾದರಿಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು ಮತ್ತು ಈ ಕೆಳಗಿನ ಕನಿಷ್ಠ ಅಂಕಗಳನ್ನು ಪಡೆದಿರಬೇಕು.

  1. ಸಾಮಾನ್ಯ ವರ್ಗ (General Merit/OBC) : ಪದವಿ (BA, BSC, Bcom, BBA, BCA ಇತ್ಯಾದಿ) ಅಥವಾ ಸ್ನಾತಕೋತ್ತರ ಪದವಿಯಲ್ಲಿ (Master’s degree) ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
  2. ಇಂಜಿನಿಯರಿಂಗ್ ಪದವೀಧರರು (B.E/ B.Tec) : ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪರಿಣತಿ ಹೊಂದಿರುವ B.E ಅಥವಾ B.Tec ಪದವೀಧರರು ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
  3. ಅಂಕಗಳಲ್ಲಿ ವಿನಾಯಿತಿ (Relaxation) : ಪರಿಶಿಷ್ಟ ಜಾತಿ (SC) , ಪರಿಶಿಷ್ಟ ಪಂಗಡ (ST) , ಪ್ರವರ್ಗ-1 (Category -1) ಮತ್ತು ವಿಕಲಚೇತನ (PWD) ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳಲ್ಲಿ 5% ವಿನಾಯಿತಿ ನೀಡಲಾಗಿದೆ. ಅಂದರೆ ಇವರು ಪದವಿಯಲ್ಲಿ ಕನಿಷ್ಠ 45% ಅಂಕಗಳನ್ನು (B.E/ B.Tec ಆಗಿದ್ದಲ್ಲಿ 50%) ಪಡೆದಿದ್ದರೆ ಅರ್ಜಿ ಸಲ್ಲಿಸಬಹುದು.

Karnataka B.Ed Admission 2026 : ಮೀಸಲಾತಿ ಮತ್ತು ಆದಾಯ ಮಿತಿ ನಿಯಮಗಳು 

  • ಪ್ರವರ್ಗ 2A,2B,3A,3B : ಈ ವರ್ಗದ ಅಡಿಯಲ್ಲಿ ಮೀಸಲಾತಿ ಪಡೆಯಲು ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • SC ಒಳ ಮೀಸಲಾತಿ : ಪರಿಶಿಷ್ಟ ಜಾತಿಯ ಒಳ ಮೀಸಲಾತಿ (SCA,SCB,SCC) ಪಡೆಯಲು ಬಯಸುವ ಅಭ್ಯರ್ಥಿಗಳು ಇತ್ತೀಚಿನ ಜಾತಿ ಪ್ರಮಾಣ ಪತ್ರದ ಮಾನ್ಯವಾದ RD ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಅರ್ಜಿ ಶುಲ್ಕದ ವಿವರ (Application Fee) 

Karnataka B.Ed Admission 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು : ₹300
  • SC/ST/ಪ್ರವರ್ಗ -1 ಅಭ್ಯರ್ಥಿಗಳು : ₹100
  • ವಿಕಲಚೇತನ (PWD) ಅಭ್ಯರ್ಥಿಗಳು : ಶುಲ್ಕ ವಿನಾಯಿತಿ ಇರುತ್ತದೆ. (ಅಧಿಕೃತ ವೆಬ್ಸೈಟ್ ಮಾಹಿತಿಯನ್ನು ಪರಿಶೀಲಿಸಿ).

ಬೇಕಾಗುವ ಪ್ರಮುಖ ದಾಖಲೆಗಳು (Required Documents)

Karnataka B.Ed Admission 2026 ಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಲು ಮತ್ತು ದಾಖಲೆ ಪರಿಶೀಲನೆಗೆ ಈ ಕೆಳಗಿನ ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

  1. ಎಸ್ ಎಸ್ ಎಲ್ ಸಿ (SSLC/ 10 ನೇ ತರಗತಿ) ಅಂಕಪಟ್ಟಿ (ಜನ್ಮ ದಿನಾಂಕ ದೃಡೀಕರಣಕ್ಕಾಗಿ)
  2. ಪಿಯುಸಿ (PUC/ 12 ನೇ ತರಗತಿ) ಅಂಕಪಟ್ಟಿ.
  3. ಪದವಿಯ (Degree) ಎಲ್ಲಾ ವರ್ಷಗಳ/ಸೆಮಿಸ್ಟರ್ಗಳ ಅಂಕ ಪಟ್ಟಿಗಳು ಮತ್ತು ಪದವಿ ಪ್ರಮಾಣ ಪತ್ರ (PDC/Convocation).
  4. ಸ್ನಾತಕೋತ್ತರ ಪದವಿ (PG) ಅಂಕಪಟ್ಟಿ (ಅನ್ವಯಿಸಿದರೆ).
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Income & Caste Certificate – Rd ಸಂಖ್ಯೆ ಇರುವುದು) .
  6. ವ್ಯಾಸಂಗ ಪ್ರಮಾಣ ಪತ್ರ (Study Certificate 1ನೇ ತರಗತಿಯಿಂದ ಪದವಿಯವರೆಗೆ ಕನಿಷ್ಠ 7 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ BEO/DDPI ಅವರಿಂದ ದೃಢೀಕರಿಸಬೇಕು. )
  7. ಕನ್ನಡ ಮಾಧ್ಯಮ ಪ್ರಮಾಣ ಪತ್ರ ( 1 ರಿಂದ 10 ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಓದಿದ್ದರೆ)
  8. ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ (Rural Study Certificate –  ಅನ್ವಯಿಸಿದರೆ)
  9. ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ-371J) ಮೀಸಲಾತಿ ಪ್ರಮಾಣ ಪತ್ರ (ಅನ್ವಯಿಸಿದರೆ).
  10. ಆಧಾರ್ ಕಾರ್ಡ್ (Adhar Card)
  11. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿ (Scanned Photo & Signature)

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (Step By step How To Apply)

Karnataka B.Ed Admission 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

  1. ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ : ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ಮಾಹಿತಿ ಪುಸ್ತಕ ಓದಿ : ಮುಖಪುಟದಲ್ಲಿರುವ “B.Ed Admission 2026-27” ಲಿಂಕ್ ಮೇಲೆ ಕ್ಲಿಕ್ ಮಾಡಿ, ಮಾಹಿತಿ ಪುಸ್ತಕವನ್ನು (Information Bulletin) ಡೌನ್ಲೋಡ್ ಮಾಡಿ ನಿಯಮಗಳನ್ನು ಓದಿಕೊಳ್ಳಿ.
  3. ಹೊಸ ನೋಂದಣಿ (Registration) : “B.Ed 2026 Online Application” ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಆಧಾರ್ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ.
  4. ವಿವರಗಳನ್ನು ಭರ್ತಿ ಮಾಡಿ : ಲಾಗಿನ್ ಆದ ನಂತರ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅಂಕಗಳು (Degree Marks) ಮತ್ತು ಮೀಸಲಾತಿ (RD Number) ವಿವರಗಳನ್ನು ನಿಖರವಾಗಿ ನಮೂದಿಸಿ.
  5. ದಾಖಲೆಗಳನ್ನು ಅಪ್ಲೋಡ್ ಮಾಡಿ : ನಿಗದಿತ ಅಳತೆಯಲ್ಲಿ ನಿಮ್ಮ ಭಾವಚಿತ್ರ, ಸಹಿ ಮತ್ತು ಅಗತ್ಯ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
  6. ಅಂತಿಮ ಸಲ್ಲಿಕೆ (Final Submit) : ಎಲ್ಲ ವಿವರಗಳು ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ ಸಬ್ಮಿಟ್ ಮಾಡಿ. (ಗಮನಿಸಿ: ಒಮ್ಮೆ ಫೈನಲ್ ಸಬ್ಮಿಟ್ ಮಾಡಿದ ನಂತರ ಅರ್ಜಿಯಲ್ಲಿ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.)
  7. ಶುಲ್ಕ ಪಾವತಿ ಮತ್ತು ಪ್ರಿಂಟ್ : ಡಿಸೆಂಬರ್ 2.2026ರ ಒಳಗೆ ಆನ್ಲೈನ್ (UPI, net banking, credit card, debit card) ಮೂಲಕ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಓನ್, ಕರ್ನಾಟಕ ಓನ್ ಅಥವಾ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ

KSRTC Recruitment 2026 : ಹೊರಗುತ್ತಿಗೆ ಚಾಲಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿಯ ಬಗ್ಗೆ Important update.

Karnataka B.Ed Admission 2026 : FAQs 

1. Karnataka B.Ed Admission 2026 ಪ್ರವೇಶಕ್ಕೆ ಯಾವುದೇ ಪ್ರವೇಶ ಪರೀಕ್ಷೆ (Entrance Exam) ಇದೆಯೇ? 

ಇಲ್ಲ, ಬಿ ಎಡ್ ಪ್ರವೇಶಕ್ಕೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಪದವಿಯ ಅಂಕಗಳ ಮೆರಿಟ್ ಆಧಾರದ ಮೇಲೆ KEA ಸೀಟು ಹಂಚಿಕೆ ಮಾಡುತ್ತದೆ.

2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 30, 2026 ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಸಲು ಡಿಸೆಂಬರ್ 2, 2026 ಕೊನೆಯ ದಿನವಾಗಿದೆ.

3. ಅಂತಿಮ ವರ್ಷದ ಪದವಿ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಬಹುದೇ? 

ಇಲ್ಲ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಪದವಿಯ ಎಲ್ಲಾ ಸೆಮಿಸ್ಟರ್ ಗಳಲ್ಲಿ ಉತ್ತೀರ್ಣರಾಗಿ ಅಂಕಪಟ್ಟಿ ಹೊಂದಿರಬೇಕು.

4. Karnataka B.Ed Admission 2026 ಕ್ಕೆ ಅರ್ಜಿ ಶುಲ್ಕ ಇದೆಯೇ? 

ಹೌದು, ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹300 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ₹100 ಮತ್ತು ಅಧಿಕೃತ ಮಾಹಿತಿಯ ಪ್ರಕಾರ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

5. ಮೆರಿಟ್ ಪಟ್ಟಿ ಮತ್ತು ಸೀಟು ಹಂಚಿಕೆ ಯಾವ ತಿಂಗಳಿನಲ್ಲಿ ನಡೆಯಬಹುದು? 

ಮೆರಿಟ್ ಪಟ್ಟಿ ಮತ್ತು ಸೀಟು ಹಂಚಿಕೆ ಡಿಸೆಂಬರ್ 2026 ರಲ್ಲಿ ನಡೆಯಬಹುದು.

ಕೊನೆಯ ಮಾತು : ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಿ. ಹಾಗೂ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದ ಪದವೀಧರರಿಗೂ ಆದಷ್ಟು ಶೇರ್ ಮಾಡುವ ಮೂಲಕ ಇದನ್ನು ಹಂಚಿಕೊಳ್ಳಿ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

Bank Of Baroda Jobs 2026 : ಒಟ್ಟು 837 ವೆಲ್ತ್ ಮ್ಯಾನೇಜ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವಿ ವಿದ್ಯಾರ್ಥಿಗಳಿಗೆ Important update.

Leave a Comment