ಭೂ ಒಡೆತನ ಯೋಜನೆ 2026 : ಉಚಿತ ಜಮೀನು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ, ಅರ್ಹತೆ ಮತ್ತು ಕೊನೆಯ ದಿನಾಂಕದ ಬಗ್ಗೆ Important update.

ಭೂ ಒಡೆತನ ಯೋಜನೆ 2026ಭೂ ಒಡೆತನ ಯೋಜನೆ 2026 : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆ 2026ರ ಸಂಪೂರ್ಣ ವಿವರಗಳು! ಅರ್ಹತೆ, ಅಗತ್ಯ ದಾಖಲೆಗಳು, ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕ ನವೆಂಬರ್ 30, 2026ರ ಸಂಪೂರ್ಣ ಮಾಹಿತಿ ಇಲ್ಲಿದೆ. 

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ (ADCL) ವತಿಯಿಂದ ಪರಿಶಿಷ್ಟ ಜಾತಿಯ (SC) ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಅತ್ಯಂತ ಜನಪ್ರಿಯವಾದ “ಭೂ ಒಡೆತನ ಯೋಜನೆ” (Land Purchase Scheme) ಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳೆಯರನ್ನು ಭೂಮಿಯ ಒಡೆಯರನ್ನಾಗಿ ಮಾಡಿ, ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಉತ್ತಮಪಡಿಸುವುದಾಗಿದೆ. ಈ ಲೇಖನದಲ್ಲಿ ನಾವು ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಉಚಿತ ಜಮೀನು ಪಡೆಯಲು ಇರುವ ನಿಯಮಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಹಾಗೂ ಹಂತ ಹಂತವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ.

ಭೂ ಒಡೆತನ ಯೋಜನೆ ಎಂದರೇನು ? (What is ADCL Land Purchase Scheme)

ಕರ್ನಾಟಕ ರಾಜ್ಯದಲ್ಲಿ ಕೃಷಿ ಭೂಮಿ ಇಲ್ಲದೆ ಕೇವಲ ದಿನಗೂಲಿ ಅಥವಾ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿಯ (SC) ಕುಟುಂಬಗಳಿಗೆ ನಿಗಮದ ವತಿಯಿಂದ ಜಮೀನನ್ನು ಖರೀದಿಸಿ ನೀಡಲಾಗುತ್ತದೆ. ಈ ಯೋಜನೆಯಡಿ ಕಂಡುಕೊಳ್ಳುವ ಜಮೀನನ್ನು ಕಡ್ಡಾಯವಾಗಿ ಆ ಕುಟುಂಬದ ಮಹಿಳೆಯ ಹೆಸರಿನಲ್ಲಿಯೇ ನೋಂದಣಿ (Registration ) ಮಾಡಿಕೊಳ್ಳಲಾಗುತ್ತದೆ.

ಜಮೀನಿನ ಪ್ರಮಾಣ ಎಷ್ಟು ಸಿಗುತ್ತದೆ ?

  • ಖುಷ್ಕಿ ಜಮೀನು (ಒಣ ಭೂಮಿ) : ಗರಿಷ್ಠ 2 ಎಕರೆ ಜಮೀನು ಖರೀದಿಸಿ ನೀಡಲಾಗುತ್ತದೆ.
  • ತರಿ ಜಮೀನು (ನೀರಾವರಿ/ಭಾಗಾಯ್ತು ಭೂಮಿ) : ಗರಿಷ್ಠ 1 ಎಕರೆ ಜಮೀನು ಖರೀದಿಸಿ ನೀಡಲಾಗುತ್ತದೆ.

ಭೂ ಒಡೆತನ ಯೋಜನೆ 2026 : ಆರ್ಥಿಕ ನೆರವು ಮತ್ತು ಘಟಕ ವೆಚ್ಚ 

ಈ ಯೋಜನೆಯ ಒಟ್ಟು ವೆಚ್ಚವನ್ನು ಸರ್ಕಾರವು ಸಬ್ಸಿಡಿ ಮತ್ತು ಸಾಲದ ರೂಪದಲ್ಲಿ ಭರಿಸುತ್ತದೆ .

  1. 50% ಸಬ್ಸಿಡಿ (Subsidy) : ಯೋಜನೆಯ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರದಿಂದ ಉಚಿತ ದೇಣಿಗೆ (ಸಬ್ಸಿಡಿ) ರೂಪದಲ್ಲಿ ನೀಡಲಾಗುತ್ತದೆ.
  2. 50% ಅವಧಿ ಸಾಲ (Loan) : ಉಳಿದ ಅರ್ಧದಷ್ಟು ಹಣವನ್ನು ನಿಗಮದಿಂದ ವಾರ್ಷಿಕ ಕೇವಲ 6% ಬಡ್ಡಿ ದರದಲ್ಲಿ ಸಾಲವಾಗಿ ನೀಡಲಾಗುತ್ತದೆ. ಇದನ್ನು ಫಲಾನುಭವಿಯು 10 ವರ್ಷಗಳ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು.

ಜಿಲ್ಲಾ ವಾರು ಗರಿಷ್ಠ ಘಟಕ ವೆಚ್ಚ (Unit Cost Limits)

  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ: ಗರಿಷ್ಠ ಘಟಕ ವೆಚ್ಚ ರೂ ₹20 ಲಕ್ಷದಿಂದ ₹25 ಲಕ್ಷದವರೆಗೆ.
  • ಉಳಿದ 26 ಜಿಲ್ಲೆಗಳಿಗೆ : ಗರಿಷ್ಠ ಘಟಕ ವೆಚ್ಚ ರೂ ₹15 ಲಕ್ಷದಿಂದ ₹20 ಲಕ್ಷದವರೆಗೆ ನಿಗದಿಯಾಗಿದೆ.

ಅರ್ಹತಾ ಮಾನದಂಡಗಳು (Eligibility Criteria)

ಭೂ ಒಡೆತನ ಯೋಜನೆ 2026 ಈ ಯೋಜನೆ ಅಡಿ ಸೌಲಭ್ಯ ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  • ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದವರಾಗಿರಬೇಕು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.(ಕನಿಷ್ಠ 15 ವರ್ಷಗಳ ವಾಸದ ದಾಖಲೆ ಇರಬೇಕು.)
  • ಅರ್ಜಿದಾರರ ಕುಟುಂಬದ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇರಬಾರದು. ಅವರು ಕೃಷಿ ಕಾರ್ಮಿಕರಾಗಿ ಇರಬೇಕು.
  • ಅರ್ಜಿದಾರರ ಮಹಿಳೆಯ ವಯಸ್ಸು 18 ರಿಂದ 50 ವರ್ಷದ ಒಳಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ₹1,50,000 ಮತ್ತು ನಗರ ಪ್ರದೇಶದ ವರಿಗೆ ₹2,00,000 ಒಳಗಿರಬೇಕು.
  • ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಇರಬಾರದು.
  • ಈ ಹಿಂದೆ ನಿಗಮದಿಂದ ಯಾವುದೇ ಜಮೀನು ಖರೀದಿ ಯೋಜನೆಯ ಸೌಲಭ್ಯ ಪಡೆದಿರಬಾರದು.

ಪ್ರಮುಖ ಶರತ್ತು: ನೀವು ಖರೀದಿಸಲು ಉದ್ದೇಶಿಸಿರುವ ಜಮೀನಿನ ಮಾಲೀಕರು (ಮಾರಾಟಗಾರರು) ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC )ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬಾರದು. ಜಮೀನು ಯಾವುದೇ ಕಾನೂನು ವಿವಾದಗಳಿಂದ ಮುಕ್ತವಾಗಿರಬೇಕು.

ಭೂ ಒಡೆತನ ಯೋಜನೆ 2026 : ಅಗತ್ಯವಿರುವ ದಾಖಲೆಗಳು. 

ಭೂ ಒಡೆತನ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

  1. ಅರ್ಜಿದಾರರ ಇತ್ತೀಚಿನ ಭಾವಚಿತ್ರ (ಫೋಟೋ)
  2. ಆರ್ ಡಿ (Rd) ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ.
  3. ಆರ್ ಡಿ (RD) ಸಂಖ್ಯೆ ಹೊಂದಿರುವ ಆದಾಯ ಪ್ರಮಾಣ ಪತ್ರ.
  4. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ (Ration Card)
  5. ಭೂ ರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ (ತಹಸೀಲ್ದಾರರಿಂದ ಪಡೆದದ್ದು)
  6. ಖರೀದಿಸಬೇಕಾದ ಜಮೀನಿನ ಮೂಲ ದಾಖಲೆಗಳು ( RTC/ಪಹಣಿ, ಖಾತಾ, ಕ್ರಯ ಪತ್ರ)
  7. ಜಮೀನು ಮಾರಾಟಗಾರರ ಒಪ್ಪಿಗೆ ಪತ್ರ (Consent Letter)

ಇದನ್ನು ಓದಿ

Tata Capital Pankh Scholarship 2026 : ವಿದ್ಯಾರ್ಥಿಗಳಿಗೆ ₹18,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ ಮತ್ತು ಅರ್ಜಿ ಸಲ್ಲಿಸುವ Important update.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ (Step By Step Application Process)

ಭೂ ಒಡೆತನ ಯೋಜನೆ 2026 ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತವೆ. ನೀವು ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

  1. ಮೊದಲಿಗೆ ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅಥವಾ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವೆಬ್ಸೈಟ್ಗೆ ಭೇಟಿ ನೀಡಿ.https://sevaone.karnataka.gov.in/departments?q=Land+purchase+scheme
  2. ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಹೊಸದಾಗಿ ನೋಂದಣಿ (New Registration) ಮಾಡಿಕೊಳ್ಳಿ. ಈಗಾಗಲೇ ಖಾತೆ ಇದ್ದರೆ ಲಾಗಿನ್ ಆಗಿ.
  3. ಲಾಗಿನ್ ಆದ ನಂತರ ಡ್ಯಾಶ್ ಬೋರ್ಡ್ ನಲ್ಲಿರುವ “Apply For Service” ಮೇಲೆ ಕ್ಲಿಕ್ ಮಾಡಿ. ಸರ್ಚ್ ಬಾರ್ ನಲ್ಲಿ “Land Purchase Scheme” ಅಥವಾ ಭೂ “ಒಡೆತನ ಯೋಜನೆ 2026” ಎಂದು ಹುಡುಕಿ.
  4. ಅರ್ಜಿ ನಮೂನೆ (Application Form) ತೆರೆದ ನಂತರ ಅರ್ಜಿದಾರರ ವೈಯಕ್ತಿಕ ವಿವರಗಳು, ವಿಳಾಸ ಮತ್ತು ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ RD ಸಂಖ್ಯೆಗಳನ್ನು ನಿಖರವಾಗಿ ಭರ್ತಿ ಮಾಡಿ.
  5. ನೀವು ಖರೀದಿಸಲು ಉದ್ದೇಶಿಸಿರುವ ಜಮೀನಿನ ಸರ್ವೆ ನಂಬರ್, ಗ್ರಾಮ ಮತ್ತು ಮಾರಾಟಗಾರರ ವಿವರಗಳನ್ನು ಭರ್ತಿ ಮಾಡಿ.
  6. ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ( ಆಧಾರ್, ಪಹಣಿ, ಭೂ ರಹಿತ ಪ್ರಮಾಣ ಪತ್ರ ಇತ್ಯಾದಿ) ನಿಗದಿಪಡಿಸಿದ ಫಾರ್ಮೆಟ್ ನಲ್ಲಿ ಅಪ್ಲೋಡ್ ಮಾಡಿ.
  7. ಎಲ್ಲ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ Preview ಮಾಡಿ ಪರಿಶೀಲಿಸಿ. ನಂತರ ಕ್ಯಾಪ್ಚ ಕೋಡ್ ನಮೂದಿಸಿ Submit ಬಟನ್ ಕ್ಲಿಕ್ ಮಾಡಿ.
  8. ಅರ್ಜಿ ಸಲ್ಲಿಕೆಯಾದ ತಕ್ಷಣ ಸಿಗುವ ಸ್ವೀಕೃತಿ ಪತ್ರವನ್ನು (Acknowledgement Receipt) ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ. ಇದರಲ್ಲಿರುವ ಅರ್ಜಿ ಸಂಖ್ಯೆಯ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಅರ್ಜಿ ಸಲ್ಲಿಸಲು ಗೊಂದಲ ವಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಓನ್ ಅಥವಾ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? (ADCL Last Date To Apply)

ಭೂ ಒಡೆತನ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರವು ಪ್ರಸ್ತುತ ವರ್ಷದ ಅರ್ಜಿ ಸಲ್ಲಿಕೆಗೆ ಅವಧಿಯನ್ನು ನಿಗದಿಪಡಿಸಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಗಳಲ್ಲಿ ವೆಬ್ಸೈಟ್ ಸರ್ವರ್ ಬ್ಯುಸಿ ಆಗಿರುವುದರಿಂದ ಅರ್ಹ ಫಲಾನುಭವಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.

ಭೂ ಒಡೆತನ ಯೋಜನೆ 2026 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 

ನಿಮಗೆ ಈ ಯೋಜನೆಯ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಯನ್ನು ಅಥವಾ ನಿಮ್ಮ ಜಿಲ್ಲೆಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ (District Manager) ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ಅಧಿಕೃತ ವೆಬ್ಸೈಟ್ adcl.karnataka.gov.in

ಇದನ್ನು ಓದಿ

Sir C.V. Raman Scholarship 2026-27 : ₹5,000 ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ, ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನದ Important update.

ಭೂ ಒಡೆತನ ಯೋಜನೆ 2026 : FAQs 

1. ಭೂ ಒಡೆತನ ಯೋಜನೆ ಅಡಿ ಖರೀದಿಸುವ ಜಮೀನು ಯಾರ ಹೆಸರಿಗೆ ನೋಂದಣಿಯಾಗುತ್ತದೆ? 

ಈ ಯೋಜನೆಯ ನಿಯಮಾವಳಿಗಳ ಪ್ರಕಾರ ಖರೀದಿಸುವ ಕೃಷಿ ಜಮೀನನ್ನು ಕಡ್ಡಾಯವಾಗಿ ಆಯಾ ಕುಟುಂಬದ ಮಹಿಳೆಯ ಹೆಸರಿನಲ್ಲಿಯೇ ನೋಂದಣಿ (Registration) ಮಾಡಿಕೊಡಲಾಗುತ್ತದೆ.

2. ಈ ಯೋಜನೆ ಅಡಿ ಎಷ್ಟು ಎಕ್ಕರೆ ಜಮೀನು ಸಿಗುತ್ತದೆ? 

ಫಲಾನುಭವಿಗಳಿಗೆ ಗರಿಷ್ಠ ಎರಡು ಎಕರೆ ಖುಷ್ಕಿ ಅಥವಾ ಒಂದು ಎಕರೆ ತರಿ ಜಮೀನನ್ನು ನಿಗಮದ ವತಿಯಿಂದ ಖರೀದಿಸಿ ನೀಡಲಾಗುತ್ತದೆ.

3. ಜಮೀನು ಮಾರಾಟ ಮಾಡುವ ಮಾಲೀಕರಿಗೆ ಇರುವ ಶರತ್ತುಗಳೇನು? 

ನೀವು ಖರೀದಿಸಲು ಉದ್ದೇಶಿಸಿರುವ ಜಮೀನಿನ ಮಾಲೀಕರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST ) ಸೇರಿದವರಾಗಿರಬಾರದು. (ಅಂದರೆ ಅನ್ಯ ಜಾತಿಗೆ ಸೇರಿದವರಿಂದ ಮಾತ್ರ ಜಮೀನು ಕೊಳ್ಳಲು ಅವಕಾಶವಿರುತ್ತದೆ.)

4. ಈ ಯೋಜನೆಯಲ್ಲಿ ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತದೆ? 

ಯೋಜನೆಯ ಒಟ್ಟು ವೆಚ್ಚದಲ್ಲಿ 50% ಹಣವನ್ನು ಸರ್ಕಾರದಿಂದ ಸಬ್ಸಿಡಿ (ದೇಣಿಗೆ) ರೂಪದಲ್ಲಿ ನೀಡಲಾಗುತ್ತದೆ. ಉಳಿದ 50% ಹಣವನ್ನು ನಿಗಮದಿಂದ 6% ಬಡ್ಡಿ ದರದಲ್ಲಿ ಅವಧಿ ಸಾಲವಾಗಿ ನೀಡಲಾಗುತ್ತದೆ.

5. ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು 2026ರ ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30, 2026 ಕೊನೆಯ ದಿನಾಂಕವಾಗಿದೆ.

ಕೊನೆಯ ಮಾತು : ಈ ಲೇಖನವು ನಿಮಗೆ ಉಪಯುಕ್ತವಾಗಿದ್ದರೆ, ನಿಮ್ಮ ಪರಿಚಯದ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಮತ್ತು ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿ. ಅರ್ಹರಿಗೆ ಸರ್ಕಾರದ ಯೋಜನೆಯ ಲಾಭ ಸಿಗುವಂತೆ ಸಹಾಯ ಮಾಡಿ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

ಗಂಗಾ ಕಲ್ಯಾಣ ಯೋಜನೆ 2026 : ಪರಿಶಿಷ್ಟ ಜಾತಿ (SC) ರೈತರಿಗೆ ಉಚಿತ ಬೋರ್ವೆಲ್ ಸೌಲಭ್ಯ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನದ Important update.

Leave a Comment