Sir C.V. Raman Scholarship 2026-27 : ಭೌತಶಾಸ್ತ್ರ, ರಸಾಯನಶಾಸ್ತ್ರ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಸರ್ ಸಿವಿ ರಾಮನ್ ವಿದ್ಯಾರ್ಥಿ ವೇತನ! ವರ್ಷಕ್ಕೆ ₹5,000 ಪ್ರೋತ್ಸಾಹ ಧನ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು SSP ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಕರ್ನಾಟಕದಲ್ಲಿ ಬಿ.ಎಸ್ಸಿ (B.sc) ಓದುತ್ತಿರುವ ವಿದ್ಯಾರ್ಥಿಯಾಗಿದ್ದೀರಾ? ಮೂಲ ವಿಜ್ಞಾನ (Basic Science) ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆಯೇ? ಹಾಗಿದ್ದಲ್ಲಿ, ಕರ್ನಾಟಕ ಸರ್ಕಾರವು ನೀಡುವ ಸರ್ ಸಿವಿ ರಾಮನ್ ವಿದ್ಯಾರ್ಥಿ ವೇತನ (Sir C.V Raman Scholarship) ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.
ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಈ ವಿದ್ಯಾರ್ಥಿ ವೇತನದ ಸಂಪೂರ್ಣ ವಿವರಗಳು, ಅರ್ಹತೆಗಳು, ಬೇಕಾಗುವ ದಾಖಲೆಗಳು ಮತ್ತು ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.
ಸರ್ ಸಿ.ವಿ ರಾಮನ್ ವಿದ್ಯಾರ್ಥಿ ವೇತನ ಎಂದರೇನು? (What is Sir C.V Raman Scholarship?)
ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು (Department Of Collegiate Education) ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಜ್ಞಾನ ಕ್ಷೇತ್ರದತ್ತ ಆಕರ್ಷಿಸಲು ಈ ಯೋಜನೆಯನ್ನು ಆರಂಭಿಸಿದೆ. ಭಾರತ ಹೆಮ್ಮೆಯ ವಿಜ್ಞಾನಿ, ನೋಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ ರಾಮನ್ ಅವರ ಹೆಸರಿನಲ್ಲಿ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಪದವಿ ಹಂತದಲ್ಲಿ ಮೂಲ ವಿಜ್ಞಾನ ವಿಷಯಗಳನ್ನು ಆಯ್ದುಕೊಂಡು ಓದುವ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಆಸರೆಯಾಗಿದೆ.
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?
Sir C.V. Raman Scholarship 2026-27 ಈ ಯೋಜನೆಗೆ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹5,000 ಪ್ರೋತ್ಸಾಹ ಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
Sir C.V. Raman Scholarship 2026-27 : ಅರ್ಹತೆಗಳು
Sir C.V. Raman Scholarship 2026-27 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕಾಗುತ್ತದೆ.
- ಕೋರ್ಸ್ ವಿವರ : ವಿದ್ಯಾರ್ಥಿಯು ಕರ್ನಾಟಕದ ಯಾವುದೇ ಸರ್ಕಾರಿ ಅಥವಾ ಅನುದಾನಿತ (Aided) ಪದವಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ (B.sc 1st year) ಕೋರ್ಸ್ ಗೆ ದಾಖಲಾಗಿರಬೇಕು.
- ವಿಷಯಗಳ ಆಯ್ಕೆ : ಬಿ.ಎಸ್ಸಿ ಪದವಿಯಲ್ಲಿ ಕನಿಷ್ಠ ಎರಡು ಮೂಲ ವಿಜ್ಞಾನ (Basic Science) ವಿಷಯಗಳನ್ನು ಮುಖ್ಯ ವಿಷಯಗಳಾಗಿ ಓದುತ್ತಿರಬೇಕು. (ಉದಾಹರಣೆಗೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಅಥವಾ ಭೂ ವಿಜ್ಞಾನ).
ಅಗತ್ಯವಿರುವ ಅಂಕಗಳು
- ಸಾಮಾನ್ಯ ಮತ್ತು ಇತರೆ ವರ್ಗದ (General/OBC) ವಿದ್ಯಾರ್ಥಿಗಳು ಪಿಯುಸಿ (12th) ಪರೀಕ್ಷೆಯಲ್ಲಿ ಕನಿಷ್ಠ 65% ಅಂಕ ಪಡೆದಿರಬೇಕು.
- SC, ST ವರ್ಗದ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.
ಮೊದಲ ಪ್ರಯತ್ನ : ವಿದ್ಯಾರ್ಥಿಯು ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ (First Attempt)ಪಾಸ್ ಮಾಡಿರಬೇಕು.
ಮುಂದಿನ ವರ್ಷಗಳ ನವೀಕರಣ : ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಎಸ್ಸಿ ಇಲಾಖೆಯಲ್ಲೂ ಈ ಸ್ಕಾಲರ್ಶಿಪ್ ಮುಂದುವರಿಯಬೇಕಾದರೆ, ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಕಾಯ್ದುಕೊಳ್ಳಬೇಕು ಹಾಗೂ ಉತ್ತಮ ಹಾಜರಾತಿ ಹೊಂದಿರಬೇಕು.
ಇದನ್ನು ಓದಿ
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು (Documents Required)
Sir C.V. Raman Scholarship 2026-27 ಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಆಧಾರ್ ಕಾರ್ಡ್ (ವಿದ್ಯಾರ್ಥಿ ಮತ್ತು ಪೋಷಕರದ್ದು)
- ಪಿಯುಸಿ (12th) ಅಂಕಪಟ್ಟಿ (Marksheet)
- ಪ್ರಸ್ತುತ ಸಾಲಿನ ಕಾಲೇಜು ಪ್ರವೇಶ ರಸೀದಿ ಅಥವಾ ಗುರುತಿನ ಚೀಟಿ (Admission Receipt/ID Card)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste Certificate and Income Certificate)
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ (ಆಧಾರ್ ಲಿಂಕ್ ಆಗಿರಬೇಕು)
- ಇ – ಅಟೆಸ್ಟೇಷನ್ ಸಂಖ್ಯೆ (e- Attestation Numbers – ಅಗತ್ಯವಿದ್ದರೆ)
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
ಇದನ್ನು ಓದಿ
Sir C.V. Raman Scholarship 2026-27 : ಅರ್ಜಿ ಸಲ್ಲಿಸುವುದು ಹೇಗೆ ?
Sir C.V. Raman Scholarship 2026-27 ಕ್ಕೆ ಕರ್ನಾಟಕ ಸರ್ಕಾರದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (State Scholarship Portal -SSP) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವ ಹಂತಗಳು ಇಲ್ಲಿದೆ.
1. ಹೊಸ ಖಾತೆ ಸೃಷ್ಟಿಸುವುದು (Registration)
- ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://ssp.postmatric.karnataka.gov.in/post_sa_2627/login
- ಮುಖಪುಟದಲ್ಲಿ “Create an Account”ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ, ಹೆಸರು ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಓ ಟಿ ಪಿ (OTP) ಮೂಲಕ ಪರಿಶೀಲಿಸಿ.
- ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಮೊಬೈಲ್ ಗೆ User ID ಮತ್ತು Password ಬರಲಿದೆ.
2. ಲಾಗಿನ್ ಮತ್ತು ಮಾಹಿತಿ ಭರ್ತಿ (Login & Application fill up)
- ನಿಮಗೆ ದೊರೆತ user ID & password ಬಳಸಿ SSP ಪೋರ್ಟಲ್ ಗೆ ಲಾಗಿನ್ ಆಗಿ.
- ನಿಮ್ಮ ವೈಯಕ್ತಿಕ ವಿವರಗಳು, ತಂದೆ/ತಾಯಿಯ ಆಧಾರ್ ವಿವರಗಳು ಹಾಗೂ ನಿಮ್ಮ ಕಾಲೇಜು ಪ್ರವೇಶದ (Collage Admission/UUCMS) ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
3. ದಾಖಲೆಗಳ ಲಿಂಕಿಂಗ್ (Documents Integration)
- ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿ. ಸಿಸ್ಟಮ್ ತಾನಾಗಿಯೇ ವಿವರಗಳನ್ನು ಪರಿಶೀಲಿಸುತ್ತದೆ.
- ನಿಮ್ಮ ಪಿಯುಸಿ ನೋಂದಣಿ ಸಂಖ್ಯೆಯನ್ನು (Registration Number) ನಮೂದಿಸಿ ಅಂಕಗಳನ್ನು ಲಿಂಕ್ ಮಾಡಿ.
4. ಅರ್ಜಿ ಸಲ್ಲಿಕೆ ಮತ್ತು ಪ್ರಿಂಟ್ (Final Submission)
- ಎಲ್ಲಾ ವಿವರಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ “Submit” ಬಟನ್ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಕೆ ಪೂರ್ಣಗೊಂಡ ಬಳಿಕ ಬರುವ ಅರ್ಜಿ ರಶೀದಿಯನ್ನು (Acknowledgement Receipt) ಪ್ರಿಂಟ್ ತೆಗೆದುಕೊಳ್ಳಿ.
- ಈ ರಸಿದಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಕಾಲೇಜಿನ ಕಚೇರಿಗೆ ತಲುಪಿಸಿ.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆ ಪ್ರಾರಂಭ : ಈಗಾಗಲೇ ಆರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಜನವರಿ 2027
(ಸೂಚನೆ: ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.)
Sir C.V. Raman Scholarship 2026-27 : FAQs
1.Sir C.V. Raman Scholarship 2026-27 ಯಾರಿಗೆ ಸಿಗುತ್ತದೆ?
ಕರ್ನಾಟಕದ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ (B.sc) ಕೋರ್ಸ್ ನಲ್ಲಿ ಕನಿಷ್ಠ ಎರಡು ಮೂಲ ವಿಜ್ಞಾನ ವಿಷಯಗಳನ್ನು ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಸಿಗುತ್ತದೆ.
2. ಈ ಸ್ಕಾಲರ್ಶಿಪ್ ಪಡೆಯಲು ಎಷ್ಟು ಅಂಕಗಳಿರಬೇಕು?
ಪಿಯುಸಿ ಪರೀಕ್ಷೆಯಲ್ಲಿ ಸಾಮಾನ್ಯ ಅಥವಾ ಓಬಿಸಿ ವರ್ಗದ ವಿದ್ಯಾರ್ಥಿಗಳು ಕನಿಷ್ಠ 65% ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಪ್ರಸ್ತುತ ಸಾಲಿನ ಅರ್ಜಿ ಸಲ್ಲಿಕೆಗೆ 31 ಜನವರಿ 2027 ಕೊನೆಯ ದಿನಾಂಕವಾಗಿದೆ.
4. ಬೇರೆ ಸ್ಕಾಲರ್ಶಿಪ್ ಪಡೆಯುವವರು ಇದಕ್ಕೆ ಅರ್ಜಿ ಸಲ್ಲಿಸಬಹುದೇ?
ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಸರ್ಕಾರದ ಯಾವುದಾದರೂ ಒಂದು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನದ ಲಾಭವನ್ನು ಮಾತ್ರ ಪಡೆಯಲು ಅರ್ಹರಿರುತ್ತಾರೆ. ಹೆಚ್ಚಿನ ಸ್ಪಷ್ಟನೆಗಾಗಿ ನಿಮ್ಮ ಕಾಲೇಜು ಕಚೇರಿಯನ್ನು ಸಂಪರ್ಕಿಸಿ.
Conclusion: ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಕೊನೆಯ ದಿನದಲ್ಲಿ ಉಂಟಾಗುವ ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಿ. ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ
ಇದನ್ನು ಓದಿ