BHEL ನೇಮಕಾತಿ 2027 : BHEL ನಲ್ಲಿ 660 ಆರ್ಟಿಸನ್ ಹುದ್ದೆಗಳ ನೇಮಕಾತಿ, 10th, ITI ವಿದ್ಯಾರ್ಥಿಗಳಿಗೆ important update.

BHEL ನೇಮಕಾತಿ 2027BHEL ನೇಮಕಾತಿ 2027 : ಒಟ್ಟು 660 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ, ಮಾಸಿಕ ₹29,500 – ₹65,000 ವರೆಗೆ ವೇತನ, ಬೆಂಗಳೂರು ಘಟಕದ ಹುದ್ದೆಗಳು, ಐಟಿಐ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ನೀವು ಐಟಿಐ (ITI) ಮುಗಿಸಿ ಕೇಂದ್ರ ಸರ್ಕಾರ ಕೆಲಸದ ಹುಡುಕಾಟದಲ್ಲಿ ಇದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ. ಭಾರತ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 2027 ನೇ ಸಾಲಿನ ಆರ್ಟಿಸನ್ (Artisan Grade -1V) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 660 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ವಯೋಮಿತಿ, ಶೈಕ್ಷಣಿಕ ಅರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕದ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

BHEL ನೇಮಕಾತಿ 2027 : ಪ್ರಮುಖ ವಿವರಗಳು 

  • ಸಂಸ್ಥೆಯ ಹೆಸರು : ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
  • ಹುದ್ದೆಯ ಹೆಸರು : ಅರ್ಟಿಸನ್ ಗ್ರೇಡ್ -1V (Artisan Grade -1V)
  • ಒಟ್ಟು ಹುದ್ದೆಗಳು : 660
  • ಕೆಲಸದ ಸ್ಥಳ : ಬೆಂಗಳೂರು (ಕರ್ನಾಟಕ) ಸೇರಿದಂತೆ ಭಾರತದಾದ್ಯಂತ.
  • ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ (Online)
  • ಅಧಿಕೃತ ವೆಬ್ಸೈಟ್ :https://www.bhel.com/

ಟ್ರೇಡ್ ವಾರು ಹುದ್ದೆಗಳ ವಿವರ (Vacancy Details)

BHEL ನೇಮಕಾತಿ 2027 ಈ ನೇಮಕಾತಿಯಲ್ಲಿ ವಿವಿಧ ತಾಂತ್ರಿಕ ವಿಭಾಗಗಳಿಗೆ (Trades) ಒಟ್ಟು 660 ಹುದ್ದೆಗಳನ್ನು ಮೀಸಲಿಡಲಾಗಿದೆ.

  • ಫಿಟ್ಟರ್ (Fitter) : 278 ಹುದ್ದೆಗಳು
  • ವೆಲ್ಡರ್ (Welder) : 104 ಹುದ್ದೆಗಳು
  • ಟರ್ನರ್ (Turner) : 52 ಹುದ್ದೆಗಳು
  • ಮಷಿನಿಸ್ಟ್ (Machinist) : 101 ಹುದ್ದೆಗಳು
  • ಎಲೆಕ್ಟ್ರಿಷಿಯನ್ (Electrician) : 90 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic) :23 ಹುದ್ದೆಗಳು
  • ಫೌಂಡ್ರಿ ಮ್ಯಾನ್ (Foundryman) :12 ಹುದ್ದೆಗಳು.

ಬೆಂಗಳೂರು ಘಟಕದಲ್ಲಿರುವ ಹುದ್ದೆಗಳು :

ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವಿದ್ದು, ಬೆಂಗಳೂರಿನ ಎರಡು ಘಟಕಗಳಲ್ಲಿ ಹುದ್ದೆಗಳು ಲಭ್ಯವಿವೆ.

  • EDN ಘಟಕ (ಬೆಂಗಳೂರು) : 45 ಹುದ್ದೆಗಳು
  • SBD ಘಟಕ (ಬೆಂಗಳೂರು) : 30 ಹುದ್ದೆಗಳು

BHEL ನೇಮಕಾತಿ 2027 : ಶೈಕ್ಷಣಿಕ ಅರ್ಹತೆ 

ಅಭ್ಯರ್ಥಿಗಳು 01 ಅಕ್ಟೋಬರ್ 2026ರ ವೇಳೆಗೆ ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

  1. 10 ನೇ ತರಗತಿ ತೇರ್ಗಡೆಯಾಗಿರಬೇಕು.
  2. ಸಂಬಂಧಪಟ್ಟ ಟ್ರೇಡ್ ನಲ್ಲಿ NTC/ITI (National Trade Certificate) ಹೊಂದಿರಬೇಕು (ಕಡ್ಡಾಯವಾಗಿ ಪೂರ್ಣಾವಧಿ /Regular ಕೋರ್ಸ್ ಆಗಿರಬೇಕು.)
  3. ಸಕ್ಷಮ ಪ್ರಾಧಿಕಾರದಿಂದ ನೀಡಲಾದ NAC (National Apprenticeship Certificate) ಅಪ್ರೆಂಟಿಸ್ಶಿಪ್ ಪ್ರಮಾಣ ಪತ್ರ ಹೊಂದಿರಬೇಕು.

ಕನಿಷ್ಠ ಅಂಕಗಳ ಅರ್ಹತೆ : 

  • General & OBC ಅಭ್ಯರ್ಥಿಗಳಿಗೆ : ITI ಮತ್ತು NAC ಎರಡರಲ್ಲೂ ಕನಿಷ್ಠ 60% ಅಂಕಗಳು ಕಡ್ಡಾಯ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ : ಕನಿಷ್ಠ 55% ಅಂಕಗಳು ಇರಬೇಕು.

(ವಿಶೇಷ ಸೂಚನೆ : ಬೆಂಗಳೂರು ಘಟಕಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಇರುವುದು ಅಪೇಕ್ಷಣೀಯವಾಗಿದೆ.)

ವಯೋಮಿತಿ ಮತ್ತು ಸಡಿಲಿಕೆ (Age Limit & Relaxation) 

01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ.

  • ಸಾಮಾನ್ಯ (General) & EWS ಅಭ್ಯರ್ಥಿಗಳಿಗೆ : ಗರಿಷ್ಠ 27 ವರ್ಷಗಳು.

ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ : 

  • SC, ST ಅಭ್ಯರ್ಥಿಗಳಿಗೆ : 5 ವರ್ಷಗಳು (ಗರಿಷ್ಠ 32 ವರ್ಷ)
  • OBC (NCL) ಅಭ್ಯರ್ಥಿಗಳಿಗೆ : 3 ವರ್ಷಗಳು (ಗರಿಷ್ಠ 30 ವರ್ಷ)
  • ಅಂಗವಿಕಲರು (PWBD) : General ಗೆ 10 ವರ್ಷ, OBC ಗೆ 13 ವರ್ಷ ಹಾಗೂ SC, ST ಅಭ್ಯರ್ಥಿಗಳಿಗೆ 15 ವರ್ಷಗಳ ಸಡಿಲಿಕೆ ಇರುತ್ತದೆ.
  • ಕಾರ್ಯಾನುಭವ ಇರುವವರಿಗೆ: ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 6 ತಿಂಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವರ ಅನುಭವದ ಆಧಾರದ ಮೇಲೆ ಗರಿಷ್ಠ 7 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಸಿಗಲಿದೆ.

ಸಂಬಳ ಮತ್ತು ಇತರೆ ಸೌಲಭ್ಯಗಳು (Salary & Benefits)

  • ಮೊದಲ 1 ವರ್ಷ (ತರಬೇತಿ ಅವಧಿ): ಆಯ್ಕೆಯಾದ ಅಭ್ಯರ್ಥಿಗಳನ್ನು ‘ತಾತ್ಕಾಲಿಕ ಆರ್ಟಿಸನ್’ಎಂದು ಪರಿಗಣಿಸಲಾಗುತ್ತಿದ್ದು, ಪ್ರತಿ ತಿಂಗಳು ₹24,000 ನಿಶ್ಚಿತ ವೇತನ (Consolidated Wages) ನೀಡಲಾಗುತ್ತದೆ.
  • ಖಾಯಂ ಆದ ನಂತರ :  1 ವರ್ಷದ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ Artisan Grade -1V ಹುದ್ದೆಗೆ ಖಾಯಂ ಮಾಡಲಾಗುತ್ತದೆ. ಆಗ ವೇತನ ಶ್ರೇಣಿ ₹29,500 ರಿಂದ ₹65,000 ಇರಲಿದ್ದು, ಕಂಪನಿಯ ನಿಯಮಗಳ ಪ್ರಕಾರ ಇತರೆ ಭತ್ಯೆ ಗಳು (Allowance )ಸಿಗಲಿವೆ.

ಪ್ರಮುಖ ಷರತ್ತು : ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ತಾವು ಸೇರಿದ ಘಟಕದಲ್ಲಿ ಕನಿಷ್ಠ 20 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಮೊದಲ 20 ವರ್ಷಗಳವರೆಗೆ ಯಾವುದೇ ವರ್ಗಾವಣೆಗೆ (Transfer )ಅವಕಾಶವಿರುವುದಿಲ್ಲ.

ಇದನ್ನು ಓದಿ

ISRO URSC Recruitment 2026 : 10ನೇ ತರಗತಿ, ಐಟಿಐ ಮುಗಿಸಿದವರಿಗೆ ಸುವರ್ಣ ಅವಕಾಶ, 61 ಟೆಕ್ನಿಷಿಯನ್ ಹಾಗೂ ಡ್ರೈವರ್ ಹುದ್ದೆಗಳ important update.

ಆಯ್ಕೆ ಪ್ರಕ್ರಿಯೆ (Selection Process)

BHEL ನೇಮಕಾತಿ 2027 ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಪ್ರಮುಖ ಹಂತಗಳಲ್ಲಿ ಮಾಡಲಾಗುತ್ತದೆ.

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE) : ಇದು ಆನ್ಲೈನ್ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ತಮ್ಮ ಟ್ರೇಡ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪರೀಕ್ಷೆಯು ಇಂಗ್ಲೀಷ್/ಹಿಂದಿ ಜೊತೆಗೆ ಪ್ರಾದೇಶಿಕ ಭಾಷೆಗಳ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಇರಲಿದೆ. (ಪಾಸ್ ಆಗಲು general/EWS ಗೆ ಕನಿಷ್ಠ 40% ಮತ್ತು OBC/SC, ST ಗೆ ಕನಿಷ್ಠ 30% ಅಂಕಗಳು ಬೇಕು)
  2. ಕೌಶಲ್ಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ (Skill Test &DV) : ಪರೀಕ್ಷೆಯ ಮೆರಿಟ್ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಕೌಶಲ್ಯ ಪರೀಕ್ಷೆಯು ಕೇವಲ ಅರ್ಹತಾ ಸ್ವರೂಪವಾಗಿದ್ದು (Qualifying) , ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಪರೀಕ್ಷೆಯ (CBE) ಅಂಕಗಳ ಆಧಾರದ ಮೇಲೆ ಮಾತ್ರ ಮಾಡಲಾಗುತ್ತದೆ.

BHEL ನೇಮಕಾತಿ 2027 : ಅರ್ಜಿ ಶುಲ್ಕದ ವಿವರ 

ಅರ್ಜಿಯನ್ನು ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಿ ಸಲ್ಲಿಸಬೇಕು.

  • UR/EWS/OBC ಅಭ್ಯರ್ಥಿಗಳಿಗೆ : ₹600 (ಪರೀಕ್ಷಾ ಶುಲ್ಕ) + ₹400 (ಪ್ರೊಸೆಸಿಂಗ್ ಶುಲ್ಕ) + GST = ಒಟ್ಟು ₹1072
  • SC, ST, pwbd, ಮಾಜಿ ಸೈನಿಕರಿಗೆ : ಪರೀಕ್ಷಾ ಶುಲ್ಕ ಇರುವುದಿಲ್ಲ, ಕೇವಲ ಪ್ರೋಸೆಸಿಂಗ್ ಶುಲ್ಕ + GST = ಒಟ್ಟು ₹472

ಪ್ರಮುಖ ದಿನಾಂಕಗಳು (Important Dates)

BHEL ನೇಮಕಾತಿ 2027 ಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 21 ಅಕ್ಟೋಬರ್ 2026 (ಬೆಳಗ್ಗೆ 10 ಗಂಟೆಯಿಂದ)
  • ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ನವೆಂಬರ್ 2026 ( ರಾತ್ರಿ 11:45 ಗಂಟೆಯವರೆಗೆ)
  • ತಾತ್ಕಾಲಿಕ ಪರೀಕ್ಷಾ ದಿನಾಂಕ : 11 ಡಿಸೆಂಬರ್ 2026

BHEL ನೇಮಕಾತಿ 2027 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BHEL ನ ಅಧಿಕೃತ ಕೆರಿಯರ್ ವೆಬ್ಸೈಟ್ https://careers.bhel.in/index.jsp ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ನಿಮ್ಮ ಹೆಸರು, ಈ ಮೇಲ್ ಐಡಿ ಹಾಗೂ ಜಾತಿ ಪ್ರಮಾಣ ಪತ್ರಗಳ ವಿವರಗಳನ್ನು ಸರಿಯಾಗಿ ನಮೂದಿಸಿ (ಒಮ್ಮೆ ನಮೂದಿಸಿದ ವಿವರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ)

ಆನ್ಲೈನ್ ಮೂಲಕ ನಿಮಗೆ ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ

7925 ಪೊಲೀಸ್ ಹುದ್ದೆಗಳು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ಬೃಹತ್ ನೇಮಕಾತಿ, PUC, Degree ಅಭ್ಯರ್ಥಿಗಳಿಗೆ important update.

BHEL ನೇಮಕಾತಿ 2027 : FAQs 

1.BHEL ನೇಮಕಾತಿ 2027 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 18 ನವೆಂಬರ್ 2026 (ರಾತ್ರಿ 11:45 ರವರೆಗೆ) ಕೊನೆಯ ದಿನಾಂಕವಾಗಿದೆ.

2. ಈ ನೇಮಕಾತಿಯನ್ನು “Artisan Recruitment 2027” ಎಂದು ಏಕೆ ಕರೆಯಲಾಗಿದೆ? 

ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಗಳು 2026ರ ಕೊನೆಯಲ್ಲಿ ನಡೆದರು, ಅಭ್ಯರ್ಥಿಗಳ ಅಂತಿಮ ಆಯ್ಕೆ ಮತ್ತು ಹುದ್ದೆಗೆ ಸೇರಿಕೊಳ್ಳುವ (Joining) ಪ್ರಕ್ರಿಯೆಯು 2027 ರ ಆರಂಭದಲ್ಲಿ ಪೂರ್ಣಗೊಳ್ಳುವುದರಿಂದ ಇದನ್ನು 2027ರ ಸಾಲಿನ ನೇಮಕಾತಿ ಎನ್ನಲಾಗಿದೆ.

3. ಐಟಿಐ (ITI) ಮುಗಿದ ತಕ್ಷಣ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ ?

ಇಲ್ಲ, ಕೇವಲ ITI ಪ್ರಮಾಣ ಪತ್ರವಿದ್ದರೆ ಸಾಲದು, ಐಟಿಐ ಜೊತೆಗೆ ಸಕ್ಶಮ ಪ್ರಾಧಿಕಾರದಿಂದ ನೀಡಲಾದ NAC (National Apprenticeship Certificate) ಅಪ್ರೆಂಟಿಸ್ ಶಿಪ್ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

4. ಒಬ್ಬ ಅಭ್ಯರ್ಥಿ ಎಷ್ಟು ಹುದ್ದೆಗಳಿಗೆ ಅಥವಾ ಘಟಕಗಳಿಗೆ ಅರ್ಜಿ ಸಲ್ಲಿಸಬಹುದು? 

ಅಭ್ಯರ್ಥಿಗಳು ಕೇವಲ ಒಂದು ಘಟಕ (Unit ) ಮತ್ತು ಒಂದು ಟ್ರೇಡ್ (Trade ) ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಕೊನೆಯದನ್ನು ಮಾತ್ರ ಪರಿಗಣಿಸಲಾಗುತ್ತದೆ.

5. ಬೆಂಗಳೂರು ಘಟಕಗಳಿಗೆ ಅರ್ಜಿ ಸಲ್ಲಿಸಲು ಕನ್ನಡ ಭಾಷೆ ಬರುವುದು ಕಡ್ಡಾಯವೇ? 

ಕಡ್ಡಾಯವಲ್ಲ (Mandatory) , ಆದರೆ ಕರ್ನಾಟಕದ ಘಟಕಗಳಿಗೆ (EDN and SBD ಬೆಂಗಳೂರು) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಜ್ಞಾನ ಇರುವುದು ಅಪೇಕ್ಷಣೀಯ (Desirable).

6. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ಕನ್ನಡದಲ್ಲಿ ಬರೆಯಬಹುದೇ?

ಹೌದು, ಪರೀಕ್ಷೆಯು ತ್ರೀ ಭಾಷಾ ರೂಪದಲ್ಲಿದ್ದು, ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಕನ್ನಡ ಭಾಷೆಯಲ್ಲು ಪರೀಕ್ಷೆ ಬರೆಯುವ ಆಯ್ಕೆಯನ್ನು ನೀಡಲಾಗಿದೆ.

7. ಈ ಹುದ್ದೆಗೆ ಆಯ್ಕೆಯಾದ ನಂತರ ತರಬೇತಿ ಅವಧಿಯಲ್ಲಿ ಸಂಬಳ ಎಷ್ಟು ಇರುತ್ತದೆ? 

ಮೊದಲ ಒಂದು ವರ್ಷದ ತರಬೇತಿಯಲ್ಲಿ ಪ್ರತಿ ತಿಂಗಳು ₹24,000 ನಿಶ್ಚಿತ ಸಂಬಳ ಇರುತ್ತದೆ. ತರಬೇತಿ ಮುಗಿದು ಖಾಯಂ ಆದ ನಂತರ ₹29,500 ರಿಂದ ₹65,000 ವೇತನ ಶ್ರೇಣಿ ಸಿಗುತ್ತದೆ.

8. ಕೆಲಸಕ್ಕೆ ಸೇರಿದ ನಂತರ ಬೇರೆ ರಾಜ್ಯಕ್ಕೆ ವರ್ಗಾವಣೆ ಸಿಗುತ್ತದೆಯೇ? 

ಇಲ್ಲ, ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳು ತಾವು ಸೇರಿದ ಘಟಕದಲ್ಲಿ ಕನಿಷ್ಠ 20 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಮೊದಲ 20 ವರ್ಷಗಳವರೆಗೆ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ.

ಕೊನೆಯ ಮಾತು : ಉದ್ಯೋಗದ ಹುಡುಕಾಟದಲ್ಲಿರುವ ನಿಮ್ಮ ಐಟಿಐ ಸ್ನೇಹಿತರೊಂದಿಗೆ ಈ ಲೇಖನವನ್ನು ಈಗಲೇ ಶೇರ್ ಮಾಡಿ ಮತ್ತು ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

Karnataka Teacher Recruitment 2026 : 15,000 ಶಿಕ್ಷಕರ ಹುದ್ದೆಗಳ ಭರ್ತಿ, ಸಂಪೂರ್ಣ ಹಾಗೂ Important ಮಾಹಿತಿ ಇಲ್ಲಿದೆ.

Leave a Comment