HMT Limited ನೇಮಕಾತಿ 2026 : ಕೇಂದ್ರ ಸರ್ಕಾರದ ಪ್ರಸಿದ್ಧ ಸಾರ್ವಜನಿಕ ವಲಯದ ಉದ್ಯಮವಾಗಿರುವ ಎಚ್ ಎಂ ಟಿ ಲಿಮಿಟೆಡ್ (HMT Limited) ತನ್ನ ಬೆಂಗಳೂರು ಕಚೇರಿಗೆ ಅಗತ್ಯವಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಒಟ್ಟು 7 ಖಾಲಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಹಾಗೂ ಅನುಭವಿ ಅಭ್ಯರ್ಥಿಗಳಿಗೆ ಇದು ನಿಜಕ್ಕೂ ಅತ್ಯುತ್ತಮ ಅವಕಾಶ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ತಿಂಗಳಿಗೆ ₹45,000 ರಿಂದ ₹80,000 ವರೆಗೆ ಗೌರವ ಧನ ಸಿಗಲಿದೆ.
ಈ ಸುವರ್ಣ ಅವಕಾಶವನ್ನು ಪಡೆದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಆಫ್ಲೈನ್ ಅಂದರೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಲು ಅಕ್ಟೋಬರ್ 9, 2026 ಕೊನೆಯ ದಿನಾಂಕವಾಗಿದೆ. ಹುದ್ದೆಗಳ ಸಂಪೂರ್ಣ ವಿವರ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರವಾಗಿ ನೀಡಲಾಗಿದೆ.
HMT Limited ನೇಮಕಾತಿ 2026 : ಹುದ್ದೆಗಳ ಸಂಕ್ಷಿಪ್ತ ಮಾಹಿತಿ.
- ಸಂಸ್ಥೆಯ ಹೆಸರು : HMT Limited (ಹೆಚ್ ಎಂ ಟಿ ಲಿಮಿಟೆಡ್)
- ಹುದ್ದೆಯ ಹೆಸರು : ಕನ್ಸಲ್ಟೆಂಟ್ ಹಾಗೂ ಯಂಗ್ ಪ್ರೊಫೆಷನಲ್
- ಒಟ್ಟು ಹುದ್ದೆಗಳು : 07
- ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
- ಅರ್ಜಿ ಸಲ್ಲಿಕೆ ವಿಧಾನ : ಆಫ್ಲೈನ್ (ಅಂಚೆ ಮೂಲಕ)
ಬೆಂಗಳೂರು ಎಚ್ ಎಂ ಟಿ ನೇಮಕಾತಿ ವಿವರಗಳು
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಸಂಸ್ಥೆಯು ಕಾನೂನು, ಹಣಕಾಸು, ಕಂಪನಿ ಸೆಕ್ರೆಟರಿ ಹಾಗೂ ಅಧಿಕೃತ ಭಾಷಾ (ಹಿಂದಿ) ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.
ಇದನ್ನು ಓದಿ
SSC CHSL 2026 : 2,536 ಹುದ್ದೆಗಳಿಗೆ ಅರ್ಜಿ ಆರಂಭ, 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ. Important update.
HMT Limited ನೇಮಕಾತಿ 2026 : ಹುದ್ದೆಗಳು, ಶೈಕ್ಷಣಿಕ ಅರ್ಹತೆ ಮತ್ತು ವೇತನ ಶ್ರೇಣಿ.
1. ಕನ್ಸಲ್ಟೆಂಟ್ – ಲೀಗಲ್ (consultant – legal)
- ಖಾಲಿ ಇರುವ ಹುದ್ದೆ :01
- ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ (LLB) ಪದವಿ ಪೂರ್ಣಗೊಳಿಸಿರಬೇಕು. ಎಲ್ಎಲ್ಎಂ (LLM) ಓದಿದವರಿಗೆ ಹೆಚ್ಚಿನ ಆದ್ಯತೆ.
- ಅನುಭವ : ಸಂಬಂಧಿತ ಕ್ಷೇತ್ರದಲ್ಲಿ 9 ರಿಂದ 15 ವರ್ಷಗಳ ಕಾರ್ಯಾನುಭವ ಇರಬೇಕು.
- ವಯೋಮಿತಿ : 1 ಸೆಪ್ಟೆಂಬರ್ 2026ಕ್ಕೆ ಅನ್ವಯಿಸುವಂತೆ ಗರಿಷ್ಠ 45 ವರ್ಷ.
- ಮಾಸಿಕ ಗೌರವದನ : 80,000
2. ಕನ್ಸಲ್ಟೆಂಟ್ – ಫೈನಾನ್ಸ್ (consultant – finance)
- ಖಾಲಿ ಹುದ್ದೆ : 01
- ವಿದ್ಯಾರ್ಹತೆ : ಸಿ ಎ, ಸಿಎಂಎ ಅಥವಾ ಐ ಸಿ ಡಬ್ಲ್ಯೂ ಎ (CA, /CMA, /ICWA) ಉತ್ತೀರಣರಾಗಿರಬೇಕು.
- ಅನುಭವ : ಫೈನಾನ್ಸ್ ಕ್ಷೇತ್ರದಲ್ಲಿ 09 ರಿಂದ 15 ವರ್ಷಗಳ ಅನುಭವ ಕಡ್ಡಾಯ.
- ವಯೋಮಿತಿ : ಗರಿಷ್ಠ 45 ವರ್ಷಗಳು
- ಮಾಸಿಕ ಗೌರವಧನ : 80,000
3. ಯಂಗ್ ಪ್ರೊಫೆಷನಲ್-| -ಫೈನಾನ್ಸ್
- ಖಾಲಿ ಹುದ್ದೆ : 01
- ವಿದ್ಯಾರ್ಹತೆ : CA, /CMA, /ICWA ಅರ್ಹತೆ ಹೊಂದಿರಬೇಕು.
- ಅನುಭವ : 1 ರಿಂದ 3 ವರ್ಷಗಳ ಅನುಭವ ಸಾಕು.
- ವಯೋಮಿತಿ : ಗರಿಷ್ಟ 30 ವರ್ಷಗಳು
- ಮಾಸಿಕ ಗೌರವಧನ : ₹45,000
4. ಯಂಗ್ ಪ್ರೊಫೆಷನಲ್-| – ಅಫಿಶಿಯಲ್ ಲಾಂಗ್ವೇಜ್
- ಖಾಲಿ ಹುದ್ದೆ: 01
- ವಿದ್ಯಾರ್ಹತೆ : ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ (MA Hindi) ಜೊತೆಗೆ ಪದವಿಯಲ್ಲಿ ಇಂಗ್ಲೀಷ್ ಓದಿರಬೇಕು. ಅಥವಾ ಇಂಗ್ಲಿಷ್ ಸ್ನಾತಕೋತ್ತರ ಪದವಿಯೊಂದಿಗೆ ಪದವಿ ಹಂತದಲ್ಲಿ ಹಿಂದಿ ಅಭ್ಯಾಸ ಮಾಡಿರಬೇಕು.
- ಅನುಭವ : 1 ರಿಂದ 3 ವರ್ಷಗಳ ಅನುಭವ.
- ವಯೋಮಿತಿ : ಗರಿಷ್ಠ 30 ವರ್ಷಗಳು
- ಮಾಸಿಕ ಗೌರವಧನ: ₹45,000
ಇದನ್ನು ಓದಿ
Udyogini 3 ಲಕ್ಷ ಸಾಲ ಯೋಜನೆ : ಮಹಿಳೆಯರಿಗೆ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ| 2 ಲಕ್ಷ ಸಾಲ ಮನ್ನಾ, important update.
6. ಯಂಗ್ ಪ್ರೊಫೆಷನಲ್ -| -ಕಂಪನಿ ಸೆಕ್ರೆಟರಿ
- ಖಾಲಿ ಹುದ್ದೆ : 01
- ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಎಸಿಎಸ್ (ACS) ಅರ್ಹತೆ ಪಡೆದಿರಬೇಕು. ಅಥವಾ ಐ ಸಿ ಎಸ್ ಐ (ICSI) ನಿಂದ ಸದಸ್ಯತ್ವ ಹೊಂದಿರಬೇಕು.
- ಅನುಭವ : 01 ರಿಂದ 3 ವರ್ಷಗಳ ಅನುಭವ.
- ವಯೋಮಿತಿ : ಗರಿಷ್ಠ 30 ವರ್ಷಗಳು
- ಮಾಸಿಕ ಗೌರವಧನ: ₹45,000
HMT Limited ನೇಮಕಾತಿ 2026 : ಪ್ರಮುಖ ದಿನಾಂಕಗಳು
- ಅಧಿಸೂಚನೆ ಹೊರ ಬಿದ್ದ ದಿನಾಂಕ : ಸೆಪ್ಟೆಂಬರ್ 19, 2026
- ಅರ್ಜಿ ತಲುಪಲು ಕೊನೆಯ ದಿನಾಂಕ : ಅಕ್ಟೋಬರ್ 9, 2026
HMT Limited ನೇಮಕಾತಿ 2026 : ಆಯ್ಕೆ ಪ್ರಕ್ರಿಯೆ
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ಕಾರ್ಯಾನುಭವವನ್ನು ಆದರಿಸಿ ಮೊದಲ ಹಂತದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಹೀಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಚೇರಿಯಲ್ಲಿ ನೇರ ಸಂದರ್ಶನ ಅಥವಾ ವಿಡಿಯೋ ಕಾನ್ಫರೆನ್ಸಿವ್ ಮೂಲಕ ಸಂದರ್ಶನ ನಡೆಸಿ ಅಂತಿಮವಾಗಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
HMT Limited ನೇಮಕಾತಿ 2026 : ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ
- ಮೊದಲು ಹೆಚ್ ಎಂ ಟಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಅರ್ಜಿಯಲ್ಲಿ ಕೇಳಲಾದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ನಂತರ ನಿಮ್ಮ ವಿದ್ಯಾರ್ಹತೆ, ವಯಸ್ಸಿನ ದಾಖಲೆ ಹಾಗೂ ಅನುಭವ ಪ್ರಮಾಣ ಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ.
- ಅರ್ಜಿ ಇಟ್ಟಿರುವ ಲಕೋಟೆಯ ಮೇಲೆ Application For The Post Of -ಎಂದು ಸ್ಪಷ್ಟವಾಗಿ ಬರೆಯುವುದು ಕಡ್ಡಾಯ.
HMT Limited ನೇಮಕಾತಿ 2026 : ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬೇಕಾದ ವಿಳಾಸ
ದಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸಿ ಎಚ್ ಆರ್) ಹೆಚ್ ಎಂ ಟಿ ಲಿಮಿಟೆಡ್, ನಂ 59 ಹೆಚ್ ಎಂ ಟಿ ಭವನ , ಬಳ್ಳಾರಿ ರಸ್ತೆ , ಬೆಂಗಳೂರು – 560032
ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
https://www.hmtindia.com/wp-content/uploads/2026/05/Application-Format-HMT-Limited.pdf
- ಎಚ್ ಎಮ್ ಟಿ ಯನ್ನು 1953ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರದ Central Public sector Enterprises ಆಗಿದ್ದು, Ministry of heavy Industries ಅಡಿಯಲ್ಲಿ ಬರುತ್ತದೆ.
- ಹೆಚ್ಎಂಟಿ ಭಾರತದ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. Machine tools, watches, tractors, printing machinery, dairy machinery ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ.
- ಈಗ ಹೆಚ್ ಎಂ ಟಿ ಮುಖ್ಯವಾಗಿ machine tools, food processing machinery, watches and international projects/services ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ.
- HMT machine tools ತಯಾರಿಸುವ ಯಂತ್ರಗಳು defence, Railway, nuclear, aerospace, automobile ಮುಂತಾದ ಸ್ಟ್ರಾಟೆಜಿಕ್ ಸೆಕ್ಟರ್ಗಳಲ್ಲೂ ಬಳಸಲಾಗುತ್ತದೆ.
ಹೆಚ್ ಎಂ ಟಿ ನಲ್ಲಿ ಉದ್ಯೋಗ ಸಿಕ್ಕರೆ ಅದು government sector experience ನೀಡುವ ಅವಕಾಶವಾಗಿರಬಹುದು. ವಿಶೇಷವಾಗಿ engineering, production, mechanical, electrical, CNC/machine tools, administration ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಕೈಗಾರಿಕಾ ಅನುಭವ ಸಿಗುತ್ತದೆ.
ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ಮಾಹಿತಿಗೆ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ
