Kotak Kanya Scholarship 2026: 2026 27 ನೇ ಸಾಲಿನ ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಅಡಿಯಲ್ಲಿ ಹಿಂದುಳಿದ ವಿದ್ಯಾರ್ಥಿನಿಯರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಕೋಟಕ್ ಶಿಕ್ಷಣ ಪ್ರತಿಷ್ಠಾನ ದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿ ವೇತನವು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಪ್ರತಿಷ್ಠಿತ ವೃತ್ತಿಪರ ಪದವಿ ಕೋರ್ಸ್ ಗಳಲ್ಲಿ ಸೇರಲು ಬಯಸುವ ಅರ್ಹ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದ್ದು, ಈ ವಿದ್ಯಾರ್ಥಿ ವೇತನವನ್ನು ಪಡೆದು ಶಿಕ್ಷಣವನ್ನು ಮುಂದುವರಿಸಲು ಸಹಕಾರಿಯಾಗಿದೆ.
ಪ್ರಸ್ತುತ ಈ ಲೇಖನದಲ್ಲಿ ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರೆಲ್ಲ ಅರ್ಹರು? ವಿದ್ಯಾರ್ಥಿ ವೇತನವನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಯಾವೆಲ್ಲ ಪ್ರಯೋಜನ ಪಡೆಯಬಹುದು? ಅಂತಿಮ ದಿನಾಂಕ ಯಾವುದು? ಅರ್ಜಿ ಸಲ್ಲಿಸುವ ಹಂತಗಳಾವುವು? ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Kotak Kanya Scholarship 2026: ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಲಾಗುತ್ತದೆ?
ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಅವರ ವೃತ್ತಿಪರ ಪದವಿ ಕೋರ್ಸ್/ಪದವಿ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವಿರುತ್ತದೆ.
ಇದನ್ನು ಓದಿ
Kotak Kanya Scholarship 2026: ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಅರ್ಜಿದಾರ ವಿದ್ಯಾರ್ಥಿನಿಯು ಭಾರತದ ಖಾಯಂ ನಿವಾಸಿ ಆಗಿರಬೇಕು.
- ವಿದ್ಯಾರ್ಥಿಯು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6,00,000 ಮೀರಿರಬಾರದು.
- 2026 27ನೇ ಶೈಕ್ಷಣಿಕ ವರ್ಷದಲ್ಲಿ NIRF/NAAC ನಂತಹ ವೃತ್ತಿಪರ ಪದವಿ ಪದವಿಗಳಿಗೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ, ಉದಾಹರಣೆಗೆ ISER,IISC (ಬೆಂಗಳೂರು) ನಲ್ಲಿ ಇಂಜಿನಿಯರಿಂಗ್,MBBS, ಇಂಟಿಗ್ರೇಟೆಡ್ LLB(ಐದು ವರ್ಷಗಳು), ಇಂಟಿಗ್ರೇಟೆಡ್BS-MS/BS- ಸಂಶೋಧನೆ ಅಥವಾ ಇತರ ವೃತ್ತಿಪರ ಕೋರ್ಸ್ ಗಳಲ್ಲಿ (ವಿನ್ಯಾಸ, ವಾಸ್ತು ಶಿಲ್ಪ ,ಇತ್ಯಾದಿ) ಮೊದಲ ವರ್ಷದ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರು.
- ಕೋಟಕ್ ಮಹೀಂದ್ರಾ ಗ್ರೂಪ್, ಕೋಟಕ್ ಎಜುಕೇಶನ್ ಫೌಂಡೇಶನ್ ಮತ್ತು ಬಡ್ಡಿ 4 ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಇದನ್ನು ಓದಿ
Kotak Kanya Scholarship 2026: ಅರ್ಜಿ ಸಲ್ಲಿಸಲು ದಾಖಲಾತಿಗಳು ಯಾವುವು?
- ವಿದ್ಯಾರ್ಥಿನಿಯ ಆಧಾರ್ ಕಾರ್ಡ್ (Aadhar card)
- 12ನೇ ತರಗತಿಯ ಪರೀಕ್ಷೆಯ ಅಂಕಪಟ್ಟಿ (12th marks card)
- ಆದಾಯ ಪ್ರಮಾಣ ಪತ್ರ (income certificate)
- ಕಾಲೇಜು ಸೀಟು ಹಂಚಿಕೆ ದಾಖಲೆ
- ಬ್ಯಾಂಕ್ ಪಾಸ್ ಬುಕ್ (bank passbook)
- ಫೋಟೋ (passport size photo)
Kotak Kanya Scholarship 2026: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಆಗಸ್ಟ್ 2026.
ಕೊನೆಯ ದಿನಾಂಕದವರೆಗೆ ಕಾಯದೆ ವಿದ್ಯಾರ್ಥಿನಿಯರು ಮುಂಚಿತವಾಗಿ ಅರ್ಜಿ ಸಲ್ಲಿಸಿ.
ಕೊನೆಯ ದಿನದಂದು ಸರ್ವರ್ busy ಇರುವ ಕಾರಣ ಅಪ್ಲಿಕೇಶನ್ ಸಬ್ಮಿಟ್ ಆಗದೇ ಇರಬಹುದು ಆದ್ದರಿಂದ ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಿ.
Kotak Kanya Scholarship 2026: ಅರ್ಜಿ ಸಲ್ಲಿಸುವ ವಿಧಾನಗಳು ಯಾವುವು?
ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Step 1. ಆಸಕ್ತಿ ಇರುವ ಅರ್ಹ ವಿದ್ಯಾರ್ಥಿಗಳು ಮೊದಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಟ್ ಗೆ ಭೇಟಿ ನೀಡಿ.
https://www.buddy4study.com/page/kotak-kanya-scholarship
Step 2. ನಂತರ Apply Now ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈ ಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ, Create an Account ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.
Step 3. ತದನಂತರ Login ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step 4. ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ, ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ
Kotak Kanya Scholarship 2026: ಕೊಟಕ್ ಕನ್ಯಾ ಸ್ಕಾಲರ್ಶಿಪ್ ನ ಪ್ರಯೋಜನಗಳು?
ಕೋಟಕ್ ಕನ್ಯಾ ಸ್ಕಾಲರ್ಶಿಪ್ ( Kotak Kanya Scholarship)ಎನ್ನುವುದು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ನೆರವಾಗಲು ನೀಡುವ ಅತ್ಯಂತ ಪ್ರಯೋಜನಕಾರಿ ವಿದ್ಯಾರ್ಥಿ ವೇತನವಾಗಿದೆ.
ಈ ಸ್ಕಾಲರ್ ಶಿಪ್ ನ ಪ್ರಮುಖ ಪ್ರಯೋಜನಗಳು ಈ ಕೆಳಗಿನಂತಿವೆ.
1. ಗಣನೀಯ ಆರ್ಥಿಕ ಸಹಾಯ
- ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ವರ್ಷಕ್ಕೆ 1.5 ಲಕ್ಷದವರೆಗೆ ಆರ್ಥಿಕ ನೆರವು ಸಿಗುತ್ತದೆ.
- ವೃತ್ತಿಪರ ಪದವಿ (professional graduation) ಮುಗಿಯುವವರೆಗೆ ಪ್ರತಿ ವರ್ಷವೂ ಈ ಹಣವನ್ನು ನೀಡಲಾಗುತ್ತದೆ.
2. ಶೈಕ್ಷಣಿಕ ವೆಚ್ಚಗಳ ಭರ್ತಿ
ಈ ವಿದ್ಯಾರ್ಥಿವೇತನದ ಹಣವನ್ನು ಕೇವಲ ಕಾಲೇಜು ಫೀಸ್ ಕಟ್ಟಲು ಮಾತ್ರವಲ್ಲದೆ, ಈ ಕೆಳಗಿನ ಅಗತ್ಯಗಳಿಗಾಗಿ ಬಳಸಬಹುದು.
- ಕಾಲೇಜು ಬೋಧನಾ ಶುಲ್ಕ (tuition fees) ಮತ್ತು ಹಾಸ್ಟೆಲ್ ವೆಚ್ಚಗಳು.
- ಆನ್ಲೈನ್ ಕಲಿಕೆಗೆ ಉಪಯುಕ್ತವಾಗುವ ಲ್ಯಾಪ್ಟಾಪ್ ಮತ್ತು ಇಂಟರ್ನೆಟ್ ಸೌಲಭ್ಯ.
- ಪುಸ್ತಕಗಳು, ಸ್ಟೇಷನರಿ ಮತ್ತು ದಿನನಿತ್ಯದ ಸಾರಿಗೆ (transportation) ವೆಚ್ಚಗಳು.
3. ವೃತ್ತಿಪರ ಕೋರ್ಸ್ ಗಳಿಗೆ ಪ್ರೋತ್ಸಾಹ
ಇಂಜಿನಿಯರಿಂಗ್, MBBS, ಇಂಟಿಗ್ರೇಟೆಡ್ ಎಲ್ ಎಲ್ ಬಿ, ಆರ್ಕಿಟೆಕ್ಚರ್, ವಿನ್ಯಾಸ ಮತ್ತು ಬಿ ಎಸ್ ಸಿ ನರ್ಸಿಂಗ್ಗಳಂತಹ ಉನ್ನತ ವೃತ್ತಿಪರ ಕೋರ್ಸ್ ಗಳನ್ನು ಮುಂದುವರಿಸಲು ಇದು ಹೆಣ್ಣು ಮಕ್ಕಳಿಗೆ ಧೈರ್ಯ ನೀಡುತ್ತದೆ.
4. ಸಮಗ್ರ ವಿಕಸನ ಮತ್ತು ಮಾರ್ಗದರ್ಶನ
ಕೇವಲ ಹಣಕಾಸಿನ ನೆರವು ಅಷ್ಟೇ ಅಲ್ಲದೆ, ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಲು ಈ ಕೆಳಗಿನ ಸೌಲಭ್ಯಗಳು ವಿವರಿಸುತ್ತದೆ.
- ಪರಿಣಿತರಿಂದ ವೃತ್ತಿ ಮಾರ್ಗದರ್ಶನ (career guidance) ಮತ್ತು ಕೋಚಿಂಗ್.
- ಉದ್ಯಮದ ಜ್ಞಾನಕ್ಕಾಗಿ ಇಂಡಸ್ಟ್ರಿ ಎಕ್ಸ್ಪೋಶರ್ ಹಾಗೂ ಮೆಂಟರಿಂಗ್.
ಇದನ್ನು ಓದಿ