SBI Sthree Shakti Package Loan: ಎಸ್ ಬಿ ಐ ಸ್ತ್ರೀ ಶಕ್ತಿ ಪ್ಯಾಕೇಜ್ ಮೂಲಕ ಮಹಿಳೆಯರಿಗೆ 10 ಲಕ್ಷದವರೆಗೆ ಮೇಲಾಧರ ರಹಿತ ಸಾಲ ಸೌಲಭ್ಯ. ಅರ್ಹತೆ, ಬಡ್ಡಿದರ, ದಾಖಲೆಗಳು ಮತ್ತು ಅರ್ಜಿ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ.
SBI Sthree Shakti Package Loan: ಸ್ತ್ರೀ ಶಕ್ತಿ ಪ್ಯಾಕೇಜ್ ಎಂದರೇನು?
ಎಸ್ ಬಿ ಐ ಸ್ತ್ರೀ ಶಕ್ತಿ ಪ್ಯಾಕೇಜ್ ಎನ್ನುವುದು ಮಹಿಳೆಯರನ್ನು ಸ್ವಉದ್ಯೋಗ (self employment) ಹಾಗೂ ಉದ್ಯಮಶೀಲತೆ (women entrepreneurship) ಕಡೆಗೆ ಪ್ರೇರೇಪಿಸುವ ಸಾಲ ಯೋಜನೆಯಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ, ಮಹಿಳೆಯರು ಮನೆಯಲ್ಲಿಯೇ ಅಥವಾ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದಾಗಿದೆ.
ಗೃಹ ಉದ್ಯಮಗಳು (home based business) ಸಣ್ಣ ವ್ಯಾಪಾರ (small business), ವೃತ್ತಿಪರ ಸೇವೆಗಳು (professional service) ಆರಂಭಿಸಲು ಈ ಸಾಲ ಅತ್ಯಂತ ಸಹಕಾರಿಯಾಗಿದೆ.
ಮಹಿಳಾ ಸಬಲೀಕರಣ (women empowerment) ಎಂಬುದು ಕೇವಲ ಘೋಷಣೆಯಾಗದೆ, ಕಾರ್ಯರೂಪಕ್ಕೆ ಬರಬೇಕು ನಿಮ್ಮ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ.
ಅದರಲ್ಲೂ ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳು (5 guarantee scheme) ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.
ಇದೇ ಸಾಲಿನಲ್ಲಿ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank of India) ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ತ್ರೀಶಕ್ತಿ ಪ್ಯಾಕೇಜ್ ಎಂಬ ವಿಶೇಷ ಸಾಲ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಮೂಲಕ ಮಹಿಳೆಯರು ಯಾವುದೇ ಆಸ್ತಿ ಮೇಲಾದಾರವಿಲ್ಲದೆ (Collateral free loan) ಉದ್ಯಮ ಆರಂಭಿಸಲು ಅವಕಾಶ ದೊರೆಯುತ್ತದೆ.
ಇದನ್ನು ಓದಿ
KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ
SBI Sthree Shakti Package Loan: ಯೋಜನೆಯಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು.
ಸ್ತ್ರೀ ಶಕ್ತಿ ಪ್ಯಾಕೇಜ್ ನಲ್ಲಿ ಮಹಿಳೆಯರಿಗೆ ಹಲವು ವಿಶೇಷ ಸೌಲಭ್ಯಗಳು ನೀಡಲಾಗಿದೆ.
ಮಹಿಳೆಯರು ₹25 ಲಕ್ಷದವರೆಗೆ (up to 25 lakh loan) ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
ಕೆಲವು ವೃತ್ತಿಪರ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ₹50 ಲಕ್ಷದವರೆಗೆ (loan up to 50 lakh) ಸಾಲ ಸೌಲಭ್ಯವು ಲಭ್ಯವಿದೆ.
ಸಾಲದ ಮೊತ್ತ ₹2 ಲಕ್ಷಕ್ಕಿಂತ ಹೆಚ್ಚಿದರೆ ಸಾಮಾನ್ಯ ಬಡ್ಡಿದರಕ್ಕಿಂತ ಶೇಕಡ 0.5% ರಷ್ಟು ಕಡಿಮೆ ಬಡ್ಡಿ ( interest rate concession) ವಿಧಿಸಲಾಗುತ್ತದೆ.
ಗರಿಷ್ಠ ₹10 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಆಸ್ತಿ ಮನೆ ಪತ್ರ ಅಥವಾ ಶೂರಿಟಿ ಅಗತ್ಯವಿಲ್ಲ (collateral free loan up to 10 lakh).
ಈ ಸಾಲವನ್ನು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE- credit guarantee fund trust) ಅಡಿಯಲ್ಲಿ ಮಂಜೂರು ಮಾಡಲಾಗುತ್ತದೆ.
SBI Sthree Shakti Package Loan: ಯಾರಿಗೆ ಈ ಯೋಜನೆ ಅನ್ವಯಿಸುತ್ತದೆ?
ಈ ಯೋಜನೆ ವಿವಿಧ ವೃತ್ತಿ ಹಾಗೂ ವ್ಯಾಪಾರಗಳಲ್ಲಿ ತೊಡಗಿರುವ ಮಹಿಳೆಯರಿಗೆ ಮೀಸಲಾಗಿದೆ. ಉದಾಹರಣೆಗೆ:
- ಬೀದಿ ಬದಿ ವ್ಯಾಪಾರಿಗಳು
- ಚಿಲ್ಲರೆ ವ್ಯಾಪಾರಿಗಳು
- ಕೃಷಿ ಆಧಾರಿತ ಉದ್ಯಮಗಳು
- ವೈದ್ಯರು, ದಂತ ವೈದ್ಯರು.
- ಬ್ಯೂಟಿ ಪಾರ್ಲರ್, ಸಲೂನ್ ಉದ್ಯಮ
- ಕೈಗಾರಿಕಾ ಹಾಗೂ ಗೃಹ ಉದ್ಯಮಗಳು.
ಸಾಲದ ಪ್ಯಾಕೇಜ್ ಗಳ ವಿವರ (loan amount details)
ಸ್ತ್ರೀ ಶಕ್ತಿ ಪ್ಯಾಕೇಜ್ ಅಡಿಯಲ್ಲಿ ವಿವಿಧ ಉದ್ಯಮಗಳಿಗೆ ಅನುಗುಣವಾಗಿ ಸಾಲದ ಮೊತ್ತ ನಿಗದಿಪಡಿಸಲಾಗಿದೆ.
- ಚಿಲ್ಲರೆ ವ್ಯಾಪಾರ ಮಾಡುವ ಮಹಿಳೆಯರಿಗೆ ₹50,000 ರಿಂದ ₹2 ಲಕ್ಷದವರೆಗೆ ಸಾಲ.
- ವೈದ್ಯರು , ಚಾರ್ಟೆಡ್ ಅಕೌಂಟ್ ಗಳು, ವೃತ್ತಿಪರ ಉದ್ಯಮಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ₹50,000 ರಿಂದ ₹25 ಲಕ್ಷದವರೆಗೆ ಸಾಲ ಸೌಲಭ್ಯ.
ಇದನ್ನು ಓದಿ
SBI Sthree Shakti Package Loan: ಯಾವ ಉದ್ಯಮಗಳಿಗೆ ಸಾಲ ಸೌಲಭ್ಯ ಸಿಗುತ್ತದೆ?
ಈ ಯೋಜನೆ ಅಡಿ ಕೆಳಕಂಡ ಉದ್ಯಮಗಳಿಗೆ ಸಾಲ ಪಡೆಯಬಹುದು.
- ಸಿದ್ದ ಉಡುಪುಗಳ ತಯಾರಿಕೆ
- ಬಟ್ಟೆ ವ್ಯಾಪಾರ
- ಡೈರಿ ಉತ್ಪನ್ನಗಳ ಮಾರಾಟ
- ಮತ್ತೆ ಮತ್ತು ಕೋಳಿ ವ್ಯಾಪಾರ
- ಬೀಜ, ಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಮಾರಾಟ
- ಮನೆಯಲ್ಲಿಯೇ ತಯಾರಿಸುವ ದಿನ ಬಳಕೆ ವಸ್ತುಗಳು
- ಗುಡಿ ಕೈಗಾರಿಕೆಗಳು.
SBI Sthree Shakti Package Loan: ಸಾಲ ಪಡೆಯಲು ಬೇಕಾದ ಪ್ರಮುಖ ದಾಖಲೆಗಳು.
ಸ್ತ್ರೀಶಕ್ತಿ ಪ್ಯಾಕೇಜ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ.
- ಆಧಾರ್ ಕಾರ್ಡ್ (Aadhar card)
- ಪ್ಯಾನ್ ಕಾರ್ಡ್ (PAN card)
- ಮತದಾರರ ಗುರುತಿನ ಚೀಟಿ (voter ID)
- ವಿದ್ಯುತ್ ಬಿಲ್ ಅಥವಾ ವಿಳಾಸದ ಪುರಾವೆ (address proof)
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ (passport size photo)
- ಉದ್ಯಮದ ನೋಂದಣಿ ಪತ್ರ.(Business registration certificate).
ಅರ್ಜಿ ಸಲ್ಲಿಸುವ ವಿಧಾನ (how to apply for SBI Sthree Shakti Package Loan)
ಸ್ತ್ರೀಶಕ್ತಿ ಪ್ಯಾಕೇಜ್ ಪಡೆಯಲು ಆನ್ ಲೈನ್ ಅರ್ಜಿ ವ್ಯವಸ್ಥೆ ಇಲ್ಲ. ಅರ್ಜಿ ಸಲ್ಲಿಸಲು ಮಹಿಳೆಯರು ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಬೇಕು.
ಬ್ಯಾಂಕ್ ಅಧಿಕಾರಿಗಳಿಂದ ಯೋಜನೆಯ ಮಾಹಿತಿ ಪಡೆದು ಅರ್ಜಿ ಫಾರಂ ಭರ್ತಿ ಮಾಡಬೇಕು.
ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಮತ್ತು ಅರ್ಹತೆ ದೃಢಪಟ್ಟ ಬಳಿಕ ಸಾಲ ಮಂಜೂರಾಗುತ್ತದೆ (loan approval process).
ಒಟ್ಟಾರೆ ಯಾವುದೇ ಆಸ್ತಿ ಮೇಲಾದಾರವಿಲ್ಲದೆ ₹10 ಲಕ್ಷದವರೆಗೆ ಸಾರಾ ಸಿಗುವ ಎಸ್ ಬಿ ಐ ಸ್ತ್ರೀಶಕ್ತಿ ಪ್ಯಾಕೇಜ್ (SBI Women Loan Scheme) ಮಹಿಳೆಯರಿಗೆ ಅತ್ಯುತ್ತಮ ಅವಕಾಶವಾಗಿದೆ. ಸರಿಯಾದ ಯೋಜನೆ ಮತ್ತು ಪರಿಶ್ರಮ ಇದ್ದರೆ ಈ ಸಾಲ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು.
ಇದನ್ನು ಓದಿ
Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
SBI Sthree Shakti Package Loan: ಉದ್ದೇಶ ಮತ್ತು ಪ್ರಯೋಜನ
ಎಸ್ ಬಿ ಐ ಸ್ತ್ರೀಶಕ್ತಿ ಪ್ಯಾಕೇಜ್ ಲೋನ್ ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಆರಂಭಿಸಲು ಅಥವಾ ವಿಸ್ತರಿಸಲು ನೀಡುವ ಸಾಲ ಯೋಜನೆ ಯಾಗಿದೆ. ಮಹಿಳೆಯರಿಗೆ ಸಂಸ್ಥಾಗತ ಸಾಲವನ್ನು ಸುಲಭವಾಗಿ ಮತ್ತು ಅನುಕೂಲಕರ ಶರತ್ತುಗಳಲ್ಲಿ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಉದ್ದೇಶ:
- ಮಹಿಳೆಯರನ್ನು ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯತ್ತ ಪ್ರೋತ್ಸಾಹಿಸುವುದು.
- ಹೊಸ ವ್ಯವಹಾರ ಆರಂಭಿಸಲು ಅಥವಾ ಈಗಿರುವ ವ್ಯವಹಾರವನ್ನು ವಿಸ್ತರಿಸಲು ಹಣಕಾಸಿನ ನೆರವು ನೀಡುವುದು.
- ಉತ್ಪಾದನೆ, ವ್ಯಾಪಾರ, ಸೇವಾ ಕ್ಷೇತ್ರ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬೆಂಬಲ ನೀಡುವುದು.
ಪ್ರಯೋಜನಗಳು
- ಮಹಿಳಾ ಉದ್ಯಮಿಗಳಿಗೆ ವಿಶೇಷವಾಗಿ ರೂಪಿಸಲಾದ ವ್ಯವಹಾರ ಸಾಲ.
- ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.
- ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಅಗತ್ಯವಾದ ಬಂಡವಾಳ ಒದಗಿಸುತ್ತದೆ.
- ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ.
- ಕೆಲವು ಸಂದರ್ಭಗಳಲ್ಲಿ ತರಬೇತಿ ಮತ್ತು ತಾಂತ್ರಿಕ ಸಹಾಯವು ಲಭ್ಯವಾಗಬಹುದು.
ಸಾಲದ ವಿವರಗಳನ್ನು ಆನ್ಲೈನ್ ಮೂಲಕ ತಿಳಿಯಲು ಎಸ್ ಬಿ ಐ ಅಫೀಶಿಯಲ್ ವೆಬ್ಸೈಟ್
ಇದನ್ನು ಓದಿ
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?