ನವೋದಯ ವಿದ್ಯಾಲಯ ಪ್ರವೇಶ 2027: 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ. 2027- 28ನೇ ಶೈಕ್ಷಣಿಕ ಸಾಲಿನ ಜವಹರ್ ನವೋದಯ ವಿದ್ಯಾಲಯ (JNVST) 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಇತರೆ ಸೌಲಭ್ಯಗಳು ಲಭ್ಯ. ಅರ್ಹತೆ, ಅಗತ್ಯ ದಾಖಲೆಗಳು, ಪ್ರಮುಖ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
- 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ.
- ಜುಲೈ 31 , 2026 ಅರ್ಜಿ ಸಲ್ಲಿಸಲು ಕಡೆಯ ದಿನ.
- ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ.
ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಜವಾಹರ್ ನವೋದಯ ವಿದ್ಯಾಲಯ (JNV) 2027- 28ನೇ ಶೈಕ್ಷಣಿಕ ಸಾಲಿನ ಆರನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ದೇಶದಾದ್ಯಂತ ಇರುವ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.
ನವೋದಯ ವಿದ್ಯಾಲಯಗಳಲ್ಲಿ ಸಿಬಿಎಸ್ಇ (CBSE) ಪಠ್ಯಕ್ರಮದ ಶಿಕ್ಷಣದ ಜೊತೆಗೆ ಉಚಿತ ವಸತಿ, ಪೌಷ್ಟಿಕ ಆಹಾರ, ಪಠ್ಯಪುಸ್ತಕಗಳು, ಸಮವಸ್ತ್ರ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ. ಪ್ರಸ್ತುತ 5ನ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳ ಪೋಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಲೇಖನದಲ್ಲಿ ಅರ್ಹತೆ, ವಯೋಮಿತಿ, ಅಗತ್ಯ ದಾಖಲೆಗಳು, ಪ್ರಮುಖ ದಿನಾಂಕಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ತಿಳಿಯಬಹುದು.
ನವೋದಯ ವಿದ್ಯಾಲಯ ಪ್ರವೇಶ 2027 : ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕದ ವಿವರ
ನವೋದಯ ವಿದ್ಯಾಲಯ ಸಮಿತಿಯು ಪ್ರವೇಶಾತಿ ಪ್ರಕ್ರಿಯೆಗೆ ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ ಗೂಗಲ್ ಡಿಸ್ಕವರ್ ಅಥವಾ ಇತರ ಜಾಲತಾಣಗಳ ಮೂಲಕ ಈ ಮಾಹಿತಿ ಓದುತ್ತಿರುವ ಪೋಷಕರು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗನೆ ಅರ್ಜಿ ಸಲ್ಲಿಸುವುದು ಉತ್ತಮ .
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: ಪ್ರಕ್ರಿಯೆಯು ಈಗಾಗಲೇ ಚಾಲ್ತಿಯಲ್ಲಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2026.
- ಅರ್ಜಿ ಶುಲ್ಕ: ಈ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ
ನವೋದಯ ವಿದ್ಯಾಲಯ ಪ್ರವೇಶ 2027 : ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? (Eligibility Criteria)
ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಸಮಿತಿಯು ಸ್ಪಷ್ಟವಾದ ಅರ್ಹತ ಮಾನದಂಡಗಳನ್ನು ನಿಗದಿಪಡಿಸಿದೆ.
- ಪ್ರಸ್ತುತ ವ್ಯಾಸಂಗ: ಅಭ್ಯರ್ಥಿಯು 2026- 27ನೇ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಶಾಲೆಯ ಮಾನ್ಯತೆ: ವಿದ್ಯಾರ್ಥಿಯು ಸರ್ಕಾರಿ ಶಾಲೆ, ಸರ್ಕಾರಿ ಅನುದಾನಿತ ಶಾಲೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಖಾಸಗಿ ಶಾಲೆಯಲ್ಲಿ ಓದುತ್ತಿರಬೇಕು.
- ಜಿಲ್ಲಾ ನಿಯಮ: ವಿದ್ಯಾರ್ಥಿಯು ಯಾವ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಬಯಸುತ್ತಾನೋ, ಅದೇ ಜಿಲ್ಲೆಯ ಶಾಲೆಯಲ್ಲಿಯೇ ಐದನೇ ತರಗತಿಯನ್ನು ವ್ಯಾಸಾಂಗ ಮಾಡುತ್ತಿರಬೇಕು. ಬೇರೆ ಜಿಲ್ಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ.
ಇದನ್ನು ಓದಿ
ನವೋದಯ ವಿದ್ಯಾಲಯ ಪ್ರವೇಶ 2027 : ಪ್ರವೇಶ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ನವೋದಯ ವಿದ್ಯಾಲಯದಲ್ಲಿ ಯಾವುದೇ ನೇರ ಪ್ರವೇಶ ಇರುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ರಾಷ್ಟ್ರಮಟ್ಟದಲ್ಲಿ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ನಡೆಸಲಾಗುತ್ತದೆ.
ಈ ಪರಿಚಯ ವಿದ್ಯಾರ್ಥಿಗಳ ಮೂಲಭೂತ ಜ್ಞಾನ, ತಾರ್ಕಿಕ ಚಿಂತನೆ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಅಳೆಯುತ್ತದೆ. ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (Multiple Choice Questions) ಒಳಗೊಂಡಿರುತ್ತದೆ.
ನವೋದಯ ವಿದ್ಯಾಲಯ ಪ್ರವೇಶ 2027 : JNVST ಪರೀಕ್ಷಾ ಮಾದರಿ (Exam Pattern)
- ಮಾನಸಿಕ ಸಾಮರ್ಥ್ಯ (Mental Ability): ಚಿತ್ರಗಳು, ತರ್ಕ ಮತ್ತು ಆಲೋಚನ ಸಾಮರ್ಥ್ಯ ಆಧಾರಿತ ಪ್ರಶ್ನೆಗಳು.
- ಗಣಿತ (Mathematics): ಮೂಲಭೂತ ಗಣಿತ, ಲೆಕ್ಕಾಚಾರ, ಮತ್ತು ಅಂಕಗಣಿತ.
- ಭಾಷಾ ಕೌಶಲ್ಯ (Language): ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ಭಾಷೆಯಲ್ಲಿ ಓದುವಿಕೆ ಮತ್ತು ಗ್ರಹಿಕೆ.
ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸುವ ವಿದ್ಯಾರ್ಥಿಗಳನ್ನು ಮಾತ್ರ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ
KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ
ನವೋದಯ ವಿದ್ಯಾಲಯ ಪ್ರವೇಶ 2027 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಸಲ್ಲಿಕೆಯು ಸಂಪೂರ್ಣವಾಗಿ ಆನ್ಲೈನ್ ಆಗಿದ್ದು, ಪೋಷಕರು ತಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಬಳಸಿ ಸುಲಭವಾಗಿ ನೋಂದಣಿ ಮಾಡಬಹುದು ಈ ಕೆಳಗಿನ ಹಂತಗಳನ್ನು ಅನುಸರಿಸಿ
Step 1. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಮೊದಲು ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್ಸೈಟ್ ಗ navodaya.gov.in ಗೆ ಭೇಟಿ ನೀಡಿ.
https://cbseitms.rcil.gov.in/nvs/
Step 2. ನೋಂದಣಿ ಲಿಂಕ್ ಕ್ಲಿಕ್ ಮಾಡಿ. ಮುಖಪುಟದಲ್ಲಿ ಕಾಣುವ ‘JNVST class Admission 2027’ ಲಿಂಕ್ ಮೇಲೆ ಕ್ಲಿಕ್ ಮಾಡಿ
Step 3. ವಿವರಗಳ ಭರ್ತಿ, ವಿದ್ಯಾರ್ಥಿಯ ಹೆಸರು, ಪೋಷಕರ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಪ್ರಸ್ತುತ ಓದುತ್ತಿರುವ ಶಾಲೆಯ ಸಂಪೂರ್ಣ ವಿವರಗಳನ್ನು ನಿಖರವಾಗಿ ನಮೂದಿಸಿ.
Step 4. ದಾಖಲೆಗಳ ಅಪ್ಲೋಡ್, ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ನಿಗದಿತ ಅಳತೆಯಲ್ಲಿ ಅಪ್ಲೋಡ್ ಮಾಡಿ.
Step 5. ಪರಿಶೀಲನೆ ಮತ್ತು ಸಲ್ಲಿಕೆ, ಎಲ್ಲ ಮಾಹಿತಿಯನ್ನು ಒಮ್ಮೆ ಕೂಲಂಕುಶವಾಗಿ ಪರಿಶೀಲಿಸಿದ ನಂತರ ಅರ್ಜಿಯನ್ನು Submit ಮಾಡಿ.
Step 6. ಪ್ರಿಂಟ್ ಔಟ್ ಪಡೆಯಿರಿ, ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಹಾಗೂ ಪ್ರವೇಶ ಪತ್ರ ಪಡೆಯಲು ಅನುಕೂಲವಾಗುವಂತೆ ಅರ್ಜಿಯ ಪ್ರಿಂಟ್ ಔಟ್ ತೆಗೆದು ಸುರಕ್ಷಿತವಾಗಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವಾಗ ಸಿದ್ದವಾಗಿಟ್ಟು ಕೊಳ್ಳಬೇಕಾದ ಪ್ರಮುಖ ದಾಖಲೆಗಳು
- ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ.
- ವಿದ್ಯಾರ್ಥಿಯ ಸಹಿ (ಸ್ಕ್ಯಾನ್ ಮಾಡಲಾದ ಪ್ರತಿ).
- ಪೋಷಕರ ಸಹಿ (ಸ್ಕ್ಯಾನ್ ಮಾಡಲಾದ ಪ್ರತಿ)
- 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿದ ಶಾಲಾ ಪ್ರಮಾಣ ಪತ್ರ (Study Certificate).
- ಆಧಾರ್ ಕಾರ್ಡ್ ಅಥವಾ ನಿವಾಸ ದೃಢೀಕರಣ ಪತ್ರ.
ನವೋದಯ ವಿದ್ಯಾಲಯ ದ ಉತ್ತಮ ಪ್ರಯೋಜನಗಳು.
ಗ್ರಾಮೀಣ ಭಾಗದ ಪೋಷಕರಿಗೆ ಇದೊಂದು ವರದಾನವಾಗಿದೆ. ಇಲ್ಲಿನ ಪ್ರಮುಖ ವಿಶೇಷತೆಗಳು:
- 6 ರಿಂದ 12ನೇ ತರಗತಿವರೆಗೆ ಶಿಕ್ಷಣ, ವಸತಿ, ಪೌಷ್ಟಿಕ ಆಹಾರ, ಸಮವಸ್ತ್ರ ಸಂಪೂರ್ಣ ಉಚಿತ.
- ಸ್ಮಾರ್ಟ್ ತರಗತಿಗಳು, ಅತ್ಯಾಧುನಿಕ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು.
- ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಎನ್ ಸಿ ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಸರ್ವಾಂಗಿನ ಅಭಿವೃದ್ಧಿಗೆ ಒತ್ತು.
- ಜೆಇಇ (JEE) , ನೀಟ್ (NEET), ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ.
ಹಲವು ಐಎಎಸ್ (IAS) , (KAS) ಕೆ ಎ ಎಸ್ ಅಧಿಕಾರಿಗಳು, ವೈದ್ಯರು ಮತ್ತು ತಂತ್ರಜ್ಞರು ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಆದ್ದರಿಂದ ನಿಮ್ಮ ಮಗುವಿನ ಉಜ್ವಲ ಭವಿಷ್ಯವನ್ನು ರೂಪಿಸುವ ಈ ಮಹತ್ವದ ಅವಕಾಶವನ್ನು ಯಾವುದೇ ಕಾರಣಕ್ಕೂ ಕೈ ಚೆಲ್ಲಬೇಡಿ ತಕ್ಷಣವೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸಿ.
ಸೂಚನೆ : ಪ್ರಿಯ ವಿದ್ಯಾರ್ಥಿಗಳೇ ನೀವು ಬರೆಯಲಿರುವ ನವೋದಯ ಪ್ರವೇಶ ಪೂರ್ವ ಪರೀಕ್ಷೆ ನಿಮ್ಮ ಜೀವನದ ಒಂದು ಉತ್ತಮ ಅವಕಾಶವಾಗಿದೆ. ಈ ಪರೀಕ್ಷೆಯನ್ನು ಭಯದಿಂದ ಅಲ್ಲ ಆತ್ಮವಿಶ್ವಾಸದಿಂದ ಬರೆಯಿರಿ
ಪ್ರತಿದಿನ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಟ್ಟು, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಗಣಿತ, ಕನ್ನಡ ಮತ್ತು ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಗಮನವಿಟ್ಟು ಅಭ್ಯಾಸ ಮಾಡಿ. ಸಮಯದ ಮೌಲ್ಯ ಅರಿತು, ಪರೀಕ್ಷೆಯಲ್ಲಿ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ.
ಪರೀಕ್ಷೆಯ ದಿನ ಶಾಂತ ಮನಸ್ಸಿನಿಂದ, ಧೈರ್ಯದಿಂದ ಪ್ರಶ್ನೆಗಳನ್ನು ಓದಿ ಉತ್ತರಿಸಿ. ನಿಮಗೆ ತಿಳಿದಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ನಿಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನಿಮ್ಮ ದೊಡ್ಡ ಶಕ್ತಿ.
‘ಕನಸು ಕಾಣಿರಿ ಕಷ್ಟಪಟ್ಟು ಓದಿರಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಯಶಸ್ಸು ಖಂಡಿತ ನಿಮ್ಮದಾಗುತ್ತದೆ.’
ನಿಮ್ಮೆಲ್ಲರಿಗೂ ನವೋದಯ ಪ್ರವೇಶ ಪೂರ್ವ ಪರೀಕ್ಷೆಗೆ ಹೃತ್ಪೂರ್ವಕ ಶುಭಾಶಯಗಳು. ಉತ್ತಮ ಸಾಧನೆ ಮಾಡಿ ನಿಮ್ಮ ಶಾಲೆ, ಪೋಷಕರು ಮತ್ತು ಶಿಕ್ಷಕರಿಗೆ ಹೆಮ್ಮೆ ತಂದು ಕೊಡಿ.