Court Recruitment 2026: City Civil Court Bengaluru Recruitment , ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೇವಲ 10ನೇ ತರಗತಿ ಪಾಸ್ ಆಗಿದ್ದರ ಸಾಕು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಸರ್ಕಾರಿ ಕೆಲಸ ಸಿಗಲಿದೆ.. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಶೀಘ್ರ ಲಿಪಿಕಾರರು , ಬೆರಳಚ್ಚುಗಾರರು, ಚಾಲಕರು, ಆದೇಶ ಜಾರಿಕಾರ, ಜವನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತಿದೆ.
ಕಲ್ಯಾಣ ಕರ್ನಾಟಕ 371- ಜೆ ಮೀಸಲಾತಿ ಅಡಿಯಲ್ಲಿ ಈ ಹುದ್ದೆಗಳು ಲಭ್ಯವಿದ್ದು ನಿರುದ್ಯೋಗಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಅರ್ಜಿ ಸಲ್ಲಿಸುವುದು ಸಂಪೂರ್ಣ ಆನ್ಲೈನ್ ಮೂಲಕ ಮಾತ್ರ.
ಅಧಿಕೃತ ಅಧಿಸೂಚನೆಯನ್ನು 24 ಜೂನ್ 2026ರಂದು ಬಿಡುಗಡೆ ಮಾಡಲಾಗಿದೆ. ಎರಡು ಪ್ರತ್ಯೇಕ ಅಧಿಸೂಚನೆಗಳು (Residual parent carde and Kalyana Karnataka 371-J Local carde) ಬಂದಿದ್ದು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ಇದೆ.
Court Recruitment 2026: ನೇಮಕಾತಿ ವಿವರಗಳು?
ನೇಮಕಾತಿ ಸಂಸ್ಥೆ: (City Civil court Bengaluru) ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ.
ಒಟ್ಟು ಹುದ್ದೆಗಳು: ಕಲ್ಯಾಣ ಕರ್ನಾಟಕ 371- ಜೆ ಮೀಸಲಾತಿ ಅಡಿಯಲ್ಲಿ 16 ಹುದ್ದೆಗಳು (ಶೀಘ್ರ ಲಿಪಿ ಗಾರರು, ಬೆರಳಚ್ಚುಗಾರರು, ಚಾಲಕರು ಮತ್ತು ಆದೇಶ ಜಾರಿಕಾರ ಹಾಗೂ ಜವಾನ)
ಅರ್ಜಿ ವಿಧಾನ: ಸಂಪೂರ್ಣ ಆನ್ಲೈನ್
ಅರ್ಜಿ ಸಲ್ಲಿಕೆ ಆರಂಭ: 1 ಜುಲೈ 2026
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30 ಜುಲೈ 2026 (ರಾತ್ರಿ 11:59 ಗಂಟೆ ಒಳಗೆ)
ಅಧಿಕೃತ ಜಾಲತಾಣ
https://bengaluru.dcourts.gov.in/
ಈ ನೇಮಕಾತಿ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ನ್ಯಾಯಾಲಯದಲ್ಲಿ ಸ್ಥಿರ ಮತ್ತು ಗೌರವಯುತ ಸರ್ಕಾರಿ ಉದ್ಯೋಗವನ್ನು ನೀಡುತ್ತದೆ.
ವೇತನ ಶ್ರೇಣಿ ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕವಾಗಿದೆ ಮತ್ತು ಇತರ ಭತ್ಯೆಗಳು ಪಿಂಚಣಿ ಸೌಲಭ್ಯಗಳು ಲಭ್ಯವಿದೆ.
ಇದನ್ನು ಓದಿ
ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?
Court Recruitment 2026 : ಹುದ್ದೆಗಳು ಮತ್ತು ಅರ್ಹತೆಗಳು?
ಶೀಘ್ರ ಲಿಪಿ ಗಾರರು (ಗ್ರೇಡ್-|||)
ದ್ವಿತೀಯ ಪಿಯುಸಿ (2nd PUC) ಅಥವಾ ಮೂರು ವರ್ಷಗಳ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಹಾಗೂ ಶೀಘ್ರ ಲಿಪಿ ಹಿರಿಯ ದರ್ಜೆ (senior grade )ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಬೆರಳಚ್ಚುಗಾರರು
ದ್ವಿತೀಯ ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪಾಸ್ ಇರಬೇಕು. ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಚಾಲಕರು
ಎಸ್ ಎಸ್ ಎಲ್ ಸಿ (SSLC) ಪಾಸ್ ಆಗಿರಬೇಕು ಮತ್ತು ಭಾರಿ ವಾಹನ ಚಾಲನ ಪರವಾನಗಿ (heavy vehicle driving licence) ಹೊಂದಿರಬೇಕು.
ಆದೇಶ ಜಾರಿಕಾರ (process server)
ಎಸ್ ಎಸ್ ಎಲ್ ಸಿ (SSLC) ಉತ್ತೀರ್ಣರಾಗಿರಬೇಕು. ಲಘು ಅಥವಾ ಭಾರಿ ವಾಹನ ಚಾಲನ ಪರವಾನಗಿ ಹೊಂದಿರುವವರಿಗೆ ಮೊದಲ ಆದ್ಯತೆ.
ಜವಾನ (Peon /attender)
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
ಎಲ್ಲಾ ಹುದ್ದೆಗಳಿಗೆ ಕರ್ನಾಟಕದ ನಿವಾಸಿ ಅಭ್ಯರ್ಥಿಗಳು ಮಾತ್ರ ಅರ್ಹರು. ಮೀಸಲಾತಿ ಪ್ರಮಾಣ ಪತ್ರಗಳು (ಜಾತಿ ಗ್ರಾಮೀಣ ಮಹಿಳಾ ಅಂಗವಿಕಲತೆ ಇತ್ಯಾದಿ) ಅಗತ್ಯ.
Court Recruitment 2026 : ವಯೋಮಿತಿ ಎಷ್ಟಿರಬೇಕು?
- ಸಾಮಾನ್ಯ ವರ್ಗ (general): ಗರಿಷ್ಠ 40 ವರ್ಷ
- ಪ್ರವರ್ಗ 2A,2B,3A,3B: ಗರಿಷ್ಠ 43 ವರ್ಷ
- ಪರಿಶಿಷ್ಟ ಜಾತಿ(scheduled caste) ಪರಿಶಿಷ್ಟ ಪಂಗಡ (scheduled tribe) ಮತ್ತು ಪ್ರವರ್ಗ-1: ಗರಿಷ್ಠ 45 ವರ್ಷ
ಅಂಗವಿಕಲರು , ವಿಧವೆಯರು ಮತ್ತು ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇದೆ.
Court Recruitment 2026 : ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ ವರ್ಗ: ₹300
- ಪ್ರವರ್ಗ 2A,2B,3A,3B : 150
- SC/ST/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು : ಸಂಪೂರ್ಣ ವಿನಾಯಿತಿ
ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI Collect) ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೈನ್ನಲ್ಲಿ ಮಾತ್ರ ಪಾವತಿಸಬೇಕು. ಡಿಡಿ ಅಥವಾ ಚೆಕ್ ಸ್ವೀಕಾರವಾಗುವುದಿಲ್ಲ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
Court Recruitment 2026 : ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಆಯ್ಕೆ ಪ್ರಕ್ರಿಯೆ ಹುದ್ದೆಗಳಿಗೆ ಅನುಗುಣವಾಗಿ ವಿಭಿನ್ನವಾಗಿದೆ.
ಶೀಘ್ರ ಲಿಪಿಕಾರರು ಮತ್ತು ಬೆರಳಚ್ಚುಗಾರರು:
ಶೈಕ್ಷಣಿಕ ಅಂಕಗಳು + ಇಲಾಖೆ ನಡೆಸುವ 100 ಅಂಕಗಳ ಪ್ರಾಯೋಗಿಕ ಅರ್ಹತಾ ಪರೀಕ್ಷೆ (Typing Shorthand test). 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು 10 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಚಾಲಕರು
50 ಅಂಕಗಳ ಚಾಲನ ಅರ್ಹತಾ ಪರೀಕ್ಷೆ. ಬಳಿಕ 1:25 ಅನುಪಾತದಲ್ಲಿ 10 ಅಂಕಗಳ ಸಂದರ್ಶನ.
ಆದೇಶ ಜಾರಿಕಾರ ಮತ್ತು ಜವಾನ
ಎಸ್ ಎಸ್ ಎಲ್ ಸಿ ಅಂಕಗಳ ಶೇಕಡವಾರು ಆಧಾರದಲ್ಲಿ (ಆದೇಶ ಜಾರಿಕಾರ 1:25, ಜವಾನ 1:10 ಅನುಪಾತ) ನೇರವಾಗಿ 10 ಅಂಕಗಳ ಸಂದರ್ಶನಕ್ಕೆ ಕರೆದು ಆಯ್ಕೆ.
Court Recruitment 2026: ಅರ್ಜಿ ಸಲ್ಲಿಸುವ ವಿಧಾನ.
1. ಅಧಿಕೃತ ಜಾಲತಾಣ
https://bengaluru.dcourts.gov.in/ ಗೆ ಭೇಟಿ ನೀಡಿ.
2. ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
3. ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಮೀಸಲಾತಿ ಪ್ರಮಾಣ ಪತ್ರಗಳನ್ನು ನಿಖರವಾಗಿ ಭರ್ತಿ ಮಾಡಿ.
4. ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
5. ನಿಮ್ಮ ವರ್ಗಕ್ಕೆ ಅನ್ವಯಿಸುವ ಶುಲ್ಕವನ್ನು SBI Collect ಮೂಲಕ ಪಾವತಿಸಿ ರಶೀದಿ ಅಪ್ಲೋಡ್ ಮಾಡಿ.
6. ಅರ್ಜಿ ಪೂರ್ಣಗೊಂಡ ನಂತರ ಪ್ರಿಂಟ್ ಔಟ್ ತೆಗೆದು ಸುರಕ್ಷಿತವಾಗಿಟ್ಟುಕೊಳ್ಳಿ.
ಗಮನಿಸಿ: ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ 30 ಜುಲೈ 2026. ಯಾವುದೇ ತಪ್ಪು ಮಾಹಿತಿ ನೀಡಿದ್ದಾರೆ ಅರ್ಜಿ ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಸಂದರ್ಶನದ ಸಮಯದಲ್ಲಿ ಹಾಜರುಪಡಿಸಬೇಕು.
ಇದನ್ನು ಓದಿ
Court Recruitment 2026 : ಮುಖ್ಯ ಸಲಹೆಗಳು
ಈ ನೇಮಕಾತಿ ನಿರುದ್ಯೋಗಿಗಳಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಯುವ ಯುವತಿಯರಿಗೆ ಸುವರ್ಣ ಅವಕಾಶ.
ಕೇವಲ 10ನೇ ತರಗತಿ ಪಾಸಾದರು ಚಾಲಕ ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಹತೆ ಇರುವುದು ವಿಶೇಷ.
ಶೀಘ್ರ ಲಿಪಿ ಮತ್ತು ಬೆರಳಚ್ಚು ಪ್ರಮಾಣ ಪತ್ರ ಹೊಂದಿರುವವರು ತಮ್ಮ ಅನುಭವವನ್ನು ಬಳಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಜಾಲತಾಣದಲ್ಲಿ ಸಂಪೂರ್ಣ ಅಧಿ ಸೂಚನೆಯನ್ನು ಡೌನ್ಲೋಡ್ ಮಾಡಿ ಓದಿ.
ದಾಖಲೆಗಳನ್ನು ಸಿದ್ಧಪಡಿಸಿ ತಪ್ಪುಗಳನ್ನು ತಪ್ಪಿಸಿ ಮತ್ತು ಕೊನೆಯ ದಿನದ ವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ https://bengaluru.dcourts.gov.in/ ಅನ್ನು ನಿಯಮಿತವಾಗಿ ಪರಿಶೀಲಿಸಿ.
ಈ ಸರ್ಕಾರಿ ನೌಕರಿ ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದು. ಯೋಗ್ಯ ಅಭ್ಯರ್ಥಿಗಳು ಈ ಅವಕಾಶವನ್ನು ಕೈಬಿಡದೆ ಸದುಪಯೋಗ ಪಡಿಸಿಕೊಳ್ಳಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯ ಮುಖಾಂತರ ತಿಳಿದುಕೊಳ್ಳಿ.
ಕೋರ್ಟ್ನಲ್ಲಿ ಕೆಲಸವು ಕೇವಲ ಉದ್ಯೋಗವಲ್ಲ ನ್ಯಾಯ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಕಲಿಯುವ ಉತ್ತಮ ಅವಕಾಶ. ಪ್ರತಿದಿನ ಹೊಸದನ್ನು ಕಲಿಯುವ ಮನೋಭಾವ ಇಟ್ಟುಕೊಂಡು ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ.
ಉದ್ಯೋಗವನ್ನು ಪಡೆದ ನಂತರ ಈ ಕ್ರಮಗಳನ್ನು ಪಾಲಿಸಿ
- ಸಮಯ ಪಾಲನೆ ಮಾಡಿ
- ಹಿರಿಯ ವಕೀಲರು ಮತ್ತು ಸಿಬ್ಬಂದಿಯಿಂದ ಕಲಿಯಿರಿ
- ಕೋರ್ಟ್ ನ ಶಿಸ್ತು ಮತ್ತು ನಿಯಮಗಳನ್ನು ಪಾಲಿಸಿ
- ರಹಸ್ಯ ಮಾಹಿತಿಯನ್ನು ಗೌಪ್ಯವಾಗಿಡಿ
- ಗೌರವದಿಂದ ಮಾತನಾಡಿ ಮತ್ತು ವರ್ತಿಸಿ
- ಫೈಲ್ ಗಳು ಮತ್ತು ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ
- ಕಾನೂನುಗಳ ಬಗ್ಗೆ ನಿರಂತರವಾಗಿ ಓದಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ
- ಸಂದೇಹ ಬಂದರೆ ಹಿರಿಯರನ್ನು ಕೇಳಲು ಹಿಂಜರಿಯಬೇಡಿ
- ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಾಪಾಡಿಕೊಳ್ಳಿ
- ಕೆಲಸದ ಅನುಭವವನ್ನು ಭವಿಷ್ಯದ ವೃತ್ತಿ ಜೀವನಕ್ಕೆ ಉಪಯೋಗಿಸಿಕೊಳ್ಳಿ.