Swavalambai Sarathi Yojana 2026 : ಸ್ವಂತ ವಾಹನ ಖರೀದಿಸಲು ಸರ್ಕಾರದಿಂದ ₹4 ಲಕ್ಷದವರೆಗೆ ಭರ್ಜರಿ ಸಬ್ಸಿಡಿ! ಅರ್ಜಿ ಸಲ್ಲಿಸುವ Important ಮಾಹಿತಿ.

Swavalambai Sarathi Yojana 2026Swavalambai Sarathi Yojana 2026 : ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆ 2026ರ ಸಂಪೂರ್ಣ ಮಾಹಿತಿ. ಟ್ಯಾಕ್ಸಿ, ಆಟೋ, ಗೂಡ್ಸ್ ವಾಹನ ಖರೀದಿಗೆ ಶೇಕಡ 75% ಅಥವಾ ₹4 ಲಕ್ಷದವರೆಗೆ ಸಬ್ಸಿಡಿ ಪಡೆಯಲು ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ. 

ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಮಹತ್ವಕಾಂಕ್ಷಿ ಯೋಜನೆಯೇ ” ಸ್ವಾವಲಂಬಿ ಸಾರಥಿ ಯೋಜನೆ” ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ (ADCL) ಮೂಲಕ ಪರಿಶಿಷ್ಟ ಜಾತಿಯ (SC) ನಿರುದ್ಯೋಗಿಗಳಿಗೆ ಟ್ಯಾಕ್ಸಿ, ಆಟೋರಿಕ್ಷಾ ಅಥವಾ ಸರಕು ಸಾಗಾಣಿಕೆ (Goods) ವಾಹನಗಳನ್ನು ಖರೀದಿಸಲು ಸರ್ಕಾರವು ಬೃಹತ್ ಮೊತ್ತದ ಸಹಾಯಧನವನ್ನು (Subsidy) ನೀಡುತ್ತಿದೆ.

ನೀವು ಕೂಡ ಚಾಲನ ಪರವಾನಗಿ (Driving Licence) ಹೊಂದಿದ್ದು, ಸ್ವಂತ ವಾಹನ ಖರೀದಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುತ್ತಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇಲ್ಲಿ ಯೋಜನೆಯ ಅರ್ಹತೆ, ಸಬ್ಸಿಡಿ ವಿವರ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ನೀಡಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆ ಎಂದರೇನು? (What is Swavalambai Sarathi Yojana?)

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆ ಅಡಿ ಫಲಾನುಭವಿಗಳು ಹಳದಿ ಬೋರ್ಡ್ (Yellow Board) ವಾಣಿಜ್ಯ ವಾಹನಗಳಾದ ಕಾರು (Taxi) , ಗೂಡ್ಸ್ ವಾಹನ ಅಥವಾ ಆಟೋರಿಕ್ಷಾ ಖರೀದಿಸಲು ಬ್ಯಾಂಕ್ ಸಾಲದ ಜೊತೆಗೆ ಸರ್ಕಾರದಿಂದ ಶೇಕಡ 75 ರಷ್ಟು ಸಹಾಯಧನವನ್ನು ಪಡೆಯಬಹುದು.

Swavalambai Sarathi Yojana 2026 : ಯೋಜನೆಯ ಪ್ರಮುಖ ಮುಖ್ಯಾಂಶಗಳು 

  • ಯೋಜನೆಯ ಹೆಸರು : ಸ್ವಾವಲಂಬಿ ಸಾರಥಿ ಯೋಜನೆ (Swavalambai Sarathi Yojana)
  • ಅನುಷ್ಠಾನ ಇಲಾಖೆ : ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ (ADCL) ಕರ್ನಾಟಕ ಸರ್ಕಾರ
  • ಫಲಾನುಭವಿಗಳು : ಪರಿಶಿಷ್ಟ ಜಾತಿ (SC) ನಿರುದ್ಯೋಗಿ ಅಭ್ಯರ್ಥಿಗಳು
  • ಸಹಾಯಧನ (Subsidy) : ವಾಹನದ ಮೌಲ್ಯದ ಶೇಕಡ 75% ಅಥವಾ ಗರಿಷ್ಠ ₹4,00,000
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (ಸೇವಾ ಸಿಂಧು ಪೋರ್ಟಲ್/ಗ್ರಾಮ ಓನ್/ಕರ್ನಾಟಕ ಓನ್)
  • ಕೊನೆಯ ದಿನ : ನವೆಂಬರ್ 30, 2026 (ಸ್ಥಳೀಯ ಸೇವ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯಂತೆ ತಕ್ಷಣ ಅರ್ಜಿ ಸಲ್ಲಿಸುವುದು ಉತ್ತಮ)

ಎಷ್ಟು ಸಹಾಯಧನ (Subsidy) ಸಿಗುತ್ತದೆ? 

Swavalambai Sarathi Yojana 2026 ಈ ಯೋಜನೆಯಡಿ ವಾಹನದ ಒಟ್ಟು ಮೌಲ್ಯದ ಶೇಕಡ 75 ರಷ್ಟು ಅಥವಾ ಗರಿಷ್ಠ ₹4 ಲಕ್ಷದವರೆಗೆ (ಯಾವುದು ಕಡಿಮೆಯೂ ಅದು) ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಉಳಿದ ಮೊತ್ತವನ್ನು ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲದ (Bank Loan) ರೂಪದಲ್ಲಿ ಪಡೆಯಬೇಕಾಗುತ್ತದೆ.

  • ಕಾರು (Taxi) ಮತ್ತು  ಗೂಡ್ಸ್ ವಾಹನಗಳಿಗೆ : ವಾಹನದ ಬೆಲೆಯ ಶೇಕಡಾ 75% ಅಥವಾ ಗರಿಷ್ಠ ₹4,00,000 ಸಬ್ಸಿಡಿ ದೊರೆಯುತ್ತದೆ. ಉದಾಹರಣೆಗೆ, ನೀವು ₹8 ಲಕ್ಷದ ಕಾರು ಖರೀದಿಸಿದರೆ ₹4 ಲಕ್ಷ ಸರ್ಕಾರದ ಸಬ್ಸಿಡಿ ಸಿಗುತ್ತದೆ, ಉಳಿದ ₹4 ಲಕ್ಷವನ್ನು ಬ್ಯಾಂಕ್ ಸಾಲದ ಮೂಲಕ ಪಾವತಿಸಬೇಕು.
  • ಆಟೋರಿಕ್ಷಾ (Auto Rickshaw) : ವಾಹನದ ಮೌಲ್ಯದ ಶೇಕಡ 75% ರಷ್ಟು (ಗರಿಷ್ಠ ₹3 ಲಕ್ಷದಿಂದ ₹4 ಲಕ್ಷದ ಮಿತಿಯೊಳಗೆ) ಸಬ್ಸಿಡಿ ಲಭ್ಯವಿರುತ್ತದೆ.
  • ಎಲೆಕ್ಟ್ರಿಕ್ ವಾಹನಗಳಿಗೆ (EV) : ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಖರೀದಿಗೂ ಶೇಕಡ 75% ಅಥವಾ ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.

Swavalambai Sarathi Yojana 2026 : ಅರ್ಹತೆಗಳು 

ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. ನಿವಾಸಿ : ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  2. ಜಾತಿ : ಅರ್ಜಿದಾರರು ಪರಿಶಿಷ್ಟ ಜಾತಿಗೆ (SC) ಸೇರಿದವರಾಗಿರಬೇಕು.
  3. ವಯೋಮಿತಿ : ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 56 ವರ್ಷದ ಒಳಗೆ ಇರಬೇಕು.
  4. ಚಾಲನ ಪರವಾನಗಿ (DL) : ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (RTO) ಪಡೆದ ಚಾಲ್ತಿಯಲ್ಲಿರುವ ಲಘು ಮೋಟಾರ್ ವಾಹನ (LMV) ಅಥವಾ ಟ್ರಾನ್ಸ್ಪೋರ್ಟ್ ಚಾಲನ ಪರವಾನಗಿ ಹೊಂದಿರಬೇಕು.
  5. ಆದಾಯ ಮಿತಿ : ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ₹1,50,000 ಹಾಗೂ ನಗರ ಪ್ರದೇಶದವರಿಗೆ ₹2,00,000 ಮಿತಿಯೊಳಗೆ ಇರಬೇಕು.
  6. ಹಿಂದಿನ ಸೌಲಭ್ಯ : ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಈ ಹಿಂದೆ ನಿಗಮದ ಯಾವುದೇ ಯೋಜನೆ ಅಡಿ ₹1 ಲಕ್ಷಕ್ಕಿಂತ ಹೆಚ್ಚಿನ ಸಬ್ಸಿಡಿ ಸೌಲಭ್ಯ ಪಡೆದಿರಬಾರದು.
  7. ಸರ್ಕಾರಿ ನೌಕರಿ : ಕುಟುಂಬದಲ್ಲಿ ಯಾರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

ಬೇಕಾಗುವ ಅಗತ್ಯ ದಾಖಲೆಗಳು (Required Documents) 

Swavalambai Sarathi Yojana 2026 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

  • ಅರ್ಜಿದಾರರ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು)
  • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Rd ಸಂಖ್ಯೆ ಇರುವುದು ಕಡ್ಡಾಯ)
  • ಮಾನ್ಯ ಚಾಲನ ಪರವಾನಗಿ (Driving Licence Xerox)
  • ಬ್ಯಾಂಕ್ ಪಾಸ್ ಬುಕ್ ಪ್ರತಿ (ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು)
  • ಖರೀದಿಸಲು ಉದ್ದೇಶಿಸಿರುವ ವಾಹನದ ಅಂದಾಜು ದರ ಪಟ್ಟಿ (Vehicle Quotation From Authorised Dealer)
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ (Passport size Photo)
  • ರೇಷನ್ ಕಾರ್ಡ್ (ಪಡಿತರ ಚೀಟಿ) ಪ್ರತಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How To Apply Online)

Swavalambai Sarathi Yojana 2026 ಕ್ಕೆ ಅರ್ಹ ಅಭ್ಯರ್ಥಿಗಳು ಮನೆಯಿಂದಲೇ ಅಥವಾ ಹತ್ತಿರದ ಸೇವಾ ಕೇಂದ್ರಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

  1. ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ (Seva Sindhu Portal) ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಗ್ರಾಮ ಓನ್, ಕರ್ನಾಟಕ ಓನ್ ಅಥವಾ ಸೈಬರ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ.
  2. ಪೋರ್ಟಲ್ ನಲ್ಲಿ “Dr B.R Ambedkar Development Corporation” ಅಡಿಯಲ್ಲಿರುವ “Swavalambai Sarathi Scheme” ಆಯ್ಕೆ ಮಾಡಿ.
  3. ನಿಮ್ಮ ಆಧಾರ್ ಸಂಖ್ಯೆ, RD ಸಂಖ್ಯೆ, ಚಾಲನಾ ಪರವಾನಗಿ ವಿವರ ಮತ್ತು ವಾಹನದ ಕೊಟೇಶನ್ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.
  4. ಕೇಳಲಾದ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  5. ಅರ್ಜಿಯನ್ನು ಸಲ್ಲಿಸಿದ (Submit) ನಂತರ ಸಿಗುವ ಸ್ವೀಕೃತಿ ಪತ್ರವನ್ನು (Acknowledgement Receipt) ಪ್ರಿಂಟ್ ತೆಗೆದುಕೊಂಡು ಭವಿಷ್ಯದ ಉಲ್ಲೇಖಕ್ಕಾಗಿ ಸುರಕ್ಷಿತವಾಗಿಟ್ಟುಕೊಳ್ಳಿ.

(ಗಮನಿಸಿ : 2023-24 ರಿಂದ 2025-26 ನೇ ಸಾಲಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆಯಾಗದೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ)

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process) 

Swavalambai Sarathi Yojana 2026 ಕ್ಕೆ ಅರ್ಜಿ ಸಲ್ಲಿಕೆ ಅವಧಿ ಮುಗಿದ ನಂತರ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸುತ್ತದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬ್ಯಾಂಕುಗಳಿಗೆ ಕಳುಹಿಸಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಅಭ್ಯರ್ಥಿಯ ದಾಖಲೆ ಮತ್ತು ಕ್ರೆಡಿಟ್ (CIBIL )ಸ್ಕೋರ್ ಪರಿಶೀಲಿಸಿ ಸಾಲ ಮಂಜೂರು ಮಾಡಿದ ತಕ್ಷಣ, ನಿಗಮದಿಂದ ಸಬ್ಸಿಡಿ ಮೊತ್ತವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿ

ಗಂಗಾ ಕಲ್ಯಾಣ ಯೋಜನೆ 2026 : ಪರಿಶಿಷ್ಟ ಜಾತಿ (SC) ರೈತರಿಗೆ ಉಚಿತ ಬೋರ್ವೆಲ್ ಸೌಲಭ್ಯ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನದ Important update.

Swavalambai Sarathi Yojana 2026 : FAQs 

1. Swavalambai Sarathi Yojana 2026 ಈ ಯೋಜನೆ ಅಡಿ ಗರಿಷ್ಠ ಎಷ್ಟು ಸಬ್ಸಿಡಿ ಸಿಗುತ್ತದೆ? 

ವಾಹನದ ಒಟ್ಟು ಮೌಲ್ಯದ ಶೇ 75% ರಷ್ಟು ಅಥವಾ ಗರಿಷ್ಠ ₹4 ಲಕ್ಷದವರೆಗೆ ಸಹಾಯಧನ ಸಿಗುತ್ತದೆ.

2. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? 

ಗ್ರಾಮ ಓನ್, ಕರ್ನಾಟಕ ಓನ್ ಮತ್ತು ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ನವೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣ ಅರ್ಜಿ ಸಲ್ಲಿಸಿ.

3. ಸ್ವಂತ ಬಳಕೆಗೆ (white Board) ಕಾರು ಖರೀದಿಸಲು ಈ ಯೋಜನೆ ಅನ್ವಯಿಸುತ್ತದೆಯೇ?

ಇಲ್ಲ, ಇದು ಸ್ವಯಂ ಉದ್ಯೋಗ ಯೋಜನೆ ಯಾಗಿರುವುದರಿಂದ ಕೇವಲ ವಾಣಿಜ್ಯ ಉದ್ದೇಶದ ಹಳದಿ ಬೋರ್ಡ್ (Yellow Board) ವಾಹನಗಳಿಗೆ ಮಾತ್ರ ಸಬ್ಸಿಡಿ ಸಿಗುತ್ತದೆ.

4. ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ನಿಮ್ಮ ಸ್ವೀಕೃತಿ ಸಂಖ್ಯೆಯನ್ನು (Acknowledgement Receipt Number) ನಮೂದಿಸಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

ಕೊನೆಯ ಮಾತು : ಸ್ವಂತ ದುಡಿಮೆಯ ಮೂಲಕ ಆರ್ಥಿಕವಾಗಿ ಸಬಲರಾಗಲು ಬಯಸುವ ಪರಿಶಿಷ್ಟ ಜಾತಿಯ ಯುವಕರಿಗೆ  ” ಸ್ವಾವಲಂಬಿ ಸಾರಥಿ ಯೋಜನೆ” ಒಂದು ಸುವರ್ಣ ಅವಕಾಶವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆಗಳು ಎದುರಾಗುವುದು ರಿಂದ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಲು ಪ್ರಯತ್ನಿಸಿ ಕೊನೆಯ ದಿನದ ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಿ.

ಇದನ್ನು ಓದಿ

Sujnananidhi Scholarship 2026-27 : ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧರ್ಮಸ್ಥಳ ಯೋಜನೆಯ ಆರ್ಥಿಕ ನೆರವು! Important ಮಾಹಿತಿ ಇಲ್ಲಿದೆ.

 

Leave a Comment