Bidar Anganwadi Recruitment 2026: 441 ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ .Important Big ಮಾಹಿತಿ ಇಲ್ಲಿದೆ.

Bidar Anganwadi Recruitment 2026Bidar Anganwadi Recruitment 2026 : ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 441 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ 2026ರ ಸಂಪೂರ್ಣ ವಿವರ. ವಿದ್ಯಾರ್ಹತೆ, ವಯೋಮಿತಿ, ತಾಲೂಕು ವಾರು ಹುದ್ದೆಗಳು ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ತಿಳಿಯಿರಿ. 

ಬೀದರ್ ಜಿಲ್ಲೆಯ ಮಹಿಳಾ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶ ಒಂದು ಒದಗಿ ಬಂದಿದೆ. ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (DWCD Bidar) ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಒಟ್ಟು 441 ಅಂಗನವಾಡಿ ಕಾರ್ಯಕರ್ತೆ (Anganwadi workers) ಅಂಗನವಾಡಿ ಸಹಾಯಕಿ (Anganwadi Helpers) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ನಿಮ್ಮ ಹತ್ತನೇ ತರಗತಿ (SSLC) ಅಥವಾ ಪಿಯುಸಿ (PUC) ಪಾಸಾಗಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದರೆ ಈ ನೇಮಕಾತಿಗೆ ತಕ್ಷಣವೇ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ಹಂತಗಳನ್ನು ವಿವರಿಸಲಾಗಿದೆ.

Bidar Anganwadi Recruitment 2026 : ಸಂಕ್ಷಿಪ್ತ ವಿವರ 

  • ನೇಮಕಾತಿ ಇಲಾಖೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ್ (DWCD Bidar)
  • ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.
  • ಒಟ್ಟು ಹುದ್ದೆಗಳು : 441(110 ಕಾರ್ಯಕರ್ತೆ+331 ಸಹಾಯಕಿ)
  • ಉದ್ಯೋಗದ ಸ್ಥಳ : ಬೀದರ್ ಜಿಲ್ಲೆ (ಕರ್ನಾಟಕ)
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
  • ಅರ್ಜಿ ಪ್ರಾರಂಭದ ದಿನಾಂಕ : ನವೆಂಬರ್ 11, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 11, 2026
  • ಅಧಿಕೃತ ವೆಬ್ಸೈಟ್ : bidar.nic.in/karnemakaone.kar.nic.in

ಹುದ್ದೆಗಳ ವಿವರ (Post Wise Vacancy)

Bidar Anganwadi Recruitment 2026 , 441 ಹುದ್ದೆಗಳನ್ನು ಎರಡು ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತಿದೆ.

  • ಅಂಗನವಾಡಿ ಕಾರ್ಯಕರ್ತೆ (Anganwadi workers) : ಒಟ್ಟು 110 ಹುದ್ದೆಗಳು
  • ಅಂಗನವಾಡಿ ಸಹಾಯಕಿ (Anganwadi Helpers) : ಒಟ್ಟು 331 ಹುದ್ದೆಗಳು.
  • ಒಟ್ಟು ಖಾಲಿ ಹುದ್ದೆಗಳು : 441 ಹುದ್ದೆಗಳು

ತಾಲೂಕುವಾರು ಖಾಲಿ ಹುದ್ದೆಗಳ ವಿವರ ( Taluk Wise Vacancy Details) 

ಬೀದರ್ ಜಿಲ್ಲೆಯ ಒಟ್ಟು 8 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಈ ಕೆಳಗಿನಂತೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

  1. ಬೀದರ್ : ಅಂಗನವಾಡಿ ಕಾರ್ಯಕರ್ತೆ 27, ಅಂಗನವಾಡಿ ಸಹಾಯಕಿ 103.
  2. ಔರಾದ್: ಅಂಗನವಾಡಿ ಕಾರ್ಯಕರ್ತೆ 27, ಅಂಗನವಾಡಿ ಸಹಾಯಕಿ 56
  3. ಬಸವಕಲ್ಯಾಣ : ಅಂಗನವಾಡಿ ಕಾರ್ಯಕರ್ತೆ 25, ಅಂಗನವಾಡಿ ಸಹಾಯಕಿ 47.
  4. ಭಾಲ್ಕಿ : ಅಂಗನವಾಡಿ ಕಾರ್ಯಕರ್ತೆ 16, ಅಂಗನವಾಡಿ ಸಹಾಯಕಿ 43.
  5. ಹುಮನಾಬಾದ್: ಅಂಗನವಾಡಿ ಕಾರ್ಯಕರ್ತೆ 6, ಅಂಗನವಾಡಿ ಸಹಾಯಕಿ 34
  6. ಚಿಟ್ಟಗುಪ್ಪ : ಅಂಗನವಾಡಿ ಕಾರ್ಯಕರ್ತೆ 3, ಅಂಗನವಾಡಿ ಸಹಾಯಕಿ 25.
  7. ಕಮಲ ನಗರ: ಅಂಗನವಾಡಿ ಕಾರ್ಯಕರ್ತೆ 5, ಅಂಗನವಾಡಿ ಸಹಾಯಕಿ 12 .
  8. ಹುಲಸೂರು : ಅಂಗನವಾಡಿ ಕಾರ್ಯಕರ್ತೆ 1, ಅಂಗನವಾಡಿ ಸಹಾಯಕಿ 11.
  9. ಒಟ್ಟು ಹುದ್ದೆಗಳು : 441

Bidar Anganwadi Recruitment 2026 : ಅರ್ಹತಾ ಮಾನದಂಡಗಳು 

Bidar Anganwadi Recruitment 2026 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

1. ಶೈಕ್ಷಣಿಕ ಅರ್ಹತೆ (Educational Qualification) 

  • ಅಂಗನವಾಡಿ ಕಾರ್ಯಕರ್ತೆ : ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ (12th) ಉತ್ತೀರ್ಣರಾಗಿರಬೇಕು.
  • ಅಂಗನವಾಡಿ ಸಹಾಯಕಿ : ಮಾನ್ಯತೆ ಪಡೆದ ಮಂಡಳಿಯಿಂದ ಎಸ್ ಎಸ್ ಎಲ್ ಸಿ (SSLC) ಉತ್ತೀರ್ಣರಾಗಿರಬೇಕು.

2. ವಯೋಮಿತಿ (Age Limit)

  • ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ತುಂಬಿರಬೇಕು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ : ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.(ಅಂದರೆ 45 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು)

3. ಇತರೆ ಪ್ರಮುಖ ನಿಯಮಗಳು

  • ಲಿಂಗ : ಸ್ಥಳೀಯ ಮಹಿಳೆಯರು ಮತ್ತು ತೃತೀಯ ಲಿಂಗಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಸ್ಥಳೀಯ ನಿವಾಸಿ : ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಅಂಗನವಾಡಿ ಕೇಂದ್ರವಿರುವ ಗ್ರಾಮ ಅಥವಾ ವಾರ್ಡ್ ನ ಖಾಯಂ ನಿವಾಸಿಯಾಗಿರಬೇಕು.

ಅರ್ಜಿ ಶುಲ್ಕ (Application Fee)

ಬೀದರ್ ಅಂಗನವಾಡಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ (Selection Process)

Bidar Anganwadi Recruitment 2026 ಕ್ಕೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆಯು ಸಂಪೂರ್ಣವಾಗಿ ಈ ಕೆಳಗಿನ ಅಂಶಗಳ ಆಧಾರದ ಮೇಲೆ ನಡೆಯುತ್ತದೆ.

  1. ಮೆರಿಟ್ ಪಟ್ಟಿ : ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡವಾರು ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
  2. ಆದ್ಯತೆ : ಆಸಿಡ್ ದಾಳಿಗೆ ತುತ್ತಾದವರು, ವಿಧವೆಯರು, ವಿಕಲಚೇತನರು ಹಾಗೂ ಸ್ಥಳೀಯ ನಿವಾಸಿಗಳಿಗೆ ಸರ್ಕಾರದ ನಿಯಮಾನುಸಾರ ವಿಶೇಷ ಆದ್ಯತೆ ನೀಡಲಾಗುತ್ತದೆ.
  3. ದಾಖಲೆಗಳ ಪರಿಶೀಲನೆ : ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)

Bidar Anganwadi Recruitment 2026 ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ.

  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ.
  • ವಿದ್ಯಾರ್ಹತೆಯ ಅಂಕಪಟ್ಟಿಗಳು (SSLC, PUC Marks Card)
  • ಜನ್ಮ ದಿನಾಂಕ ದೃಡೀಕರಣ ಪತ್ರ.
  • ತಹಶೀಲ್ದಾರರಿಂದ ಪಡೆದ ಇತ್ತೀಚಿನ ವಾಸ ಸ್ಥಳ ದೃಡೀಕರಣ ಪತ್ರ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Income Certificate and Caste Certificate)
  • ವಿಧವೆಯಾಗಿದ್ದರೆ ಪತಿಯ ಮರಣ ಪ್ರಮಾಣ ಪತ್ರ.
  • ವಿಕಲಚೇತನರಾಗಿದ್ದರೆ, ಅಂಗವಿಕಲತೆ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How To Apply Online)

Bidar Anganwadi Recruitment 2026 ಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

  1. ಮೊದಲಿಗೆ ಕರ್ನಾಟಕ ಸರ್ಕಾರದ ಅಧಿಕೃತ ಅಂಗನವಾಡಿ ನೇಮಕಾತಿ ಪೋರ್ಟಲ್ karnemakaone.kar.nic.in ಅಥವಾ ಬೀದರ್ ಜಿಲ್ಲಾಧಿಕಾರಿಗಳ ವೆಬ್ಸೈಟ್ bidar.nic.in ಗೆ ಭೇಟಿ ನೀಡಿ.
  2. ಮುಖಪುಟದಲ್ಲಿರುವ “Recruitment of Anganwadi workers & Helpers – Bidar District” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನೀವು ಅರ್ಜಿ ಸಲ್ಲಿಸಲು ಬಯಸುವ ಜಿಲ್ಲೆ, ತಾಲೂಕು, ಗ್ರಾಮ ಅಥವಾ ವಾರ್ಡ್ ಮತ್ತು ಹುದ್ದೆಯನ್ನು ಆಯ್ಕೆ ಮಾಡಿ.
  4. ಅರ್ಜಿ ನಮೂನೆಯಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರಗಳು, ವಿಳಾಸ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.
  5. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಅಪ್ಲೋಡ್ ಮಾಡಿ.
  6. ಎಲ್ಲಾ ವಿವರಗಳನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
  7. ಅರ್ಜಿ ಸಲ್ಲಿಕೆಯಾದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಪತ್ರದ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನು ಓದಿ

KSRTC Recruitment 2026 : ಹೊರಗುತ್ತಿಗೆ ಚಾಲಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿಯ ಬಗ್ಗೆ Important update.

Bidar Anganwadi Recruitment 2026 : FAQ

1.Bidar Anganwadi Recruitment 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 11, 2026 ಕೊನೆಯ ದಿನಾಂಕ ವಾಗಿದೆ.

2. ಈ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ? 

ಒಟ್ಟು 441 ಹುದ್ದೆಗಳು ಖಾಲಿ ಇವೆ. (110 ಅಂಗನವಾಡಿ ಕಾರ್ಯಕರ್ತೆ ಮತ್ತು 331 ಅಂಗನವಾಡಿ ಸಹಾಯಕಿ ಹುದ್ದೆಗಳು.)

3. ಅಂಗನವಾಡಿ ಸಹಾಯಕಿ ಹುದ್ದೆಗೆ ವಿದ್ಯಾರ್ಹತೆ ಏನು? 

ಅಂಗನವಾಡಿ ಸಹಾಯಕ್ಕೆ ಹುದ್ದೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತನೇ ತರಗತಿ (SSLC) ಉತ್ತೀರ್ಣರಾಗಿರಬೇಕು.

4. ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೆ? 

ಇಲ್ಲ, ಕೇವಲ ಸ್ಥಳೀಯ ಮಹಿಳೆಯರು ಮತ್ತು ತೃತೀಯ ಲಿಂಗಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಕೊನೆಯ ಮಾತು : ಅರ್ಜಿ ದಿನಾಂಕ ಮುಕ್ತಾಯವಾಗುವುದರ ಒಳಗೆ ಈ ಹುದ್ದೆಗಳಿಗೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ನಿಮ್ಮ ವೃತ್ತಿ ಜೀವನವನ್ನು ಆರಂಭಿಸಿಕೊಳ್ಳಿ. ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿಕೊಳ್ಳಿ.

ಇದನ್ನು ಓದಿ

Bank Of Baroda Jobs 2026 : ಒಟ್ಟು 837 ವೆಲ್ತ್ ಮ್ಯಾನೇಜ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವಿ ವಿದ್ಯಾರ್ಥಿಗಳಿಗೆ Important update.

Leave a Comment