ಗಂಗಾ ಕಲ್ಯಾಣ ಯೋಜನೆ 2026 : ಗಂಗಾ ಕಲ್ಯಾಣ ಯೋಜನೆ 2026ರ ಅಡಿಯಲ್ಲಿ ಎಸ್ ಸಿ (SC) ರೈತರಿಗೆ ಉಚಿತ ಬೋರ್ವೆಲ್ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಗಳು, ಬೇಕಾಗುವ ದಾಖಲೆಗಳು, ಪರಿಶೀಲನೆಯ ಹಂತಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಇಂದೇ ಓದಿ! ಕೊನೆಯ ದಿನಾಂಕ ನವೆಂಬರ್ 30, 2026.
ಕರ್ನಾಟಕ ಸರ್ಕಾರವು ರಾಜ್ಯದ ಪರಿಶಿಷ್ಟ ಜಾತಿ (SC) ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರ ಆರ್ಥಿಕ ಪ್ರಗತಿ ಮತ್ತು ಕೃಷಿ ಸಬಲೀಕರಣಕ್ಕಾಗಿ ಗಂಗಾ ಕಲ್ಯಾಣ ಯೋಜನೆ (Ganga Kalyana Yojana 2026-27) ಅಡಿಯಲ್ಲಿ ಹೊಸದಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯನ್ನು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಅತ್ಯಂತ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತದೆ.
ರೈತರು ತಮ್ಮ ಜಮೀನಿನಲ್ಲಿ ಕೃಷಿ ಇಳುವರಿ ಹೆಚ್ಚಿಸಿ ಸ್ವಾವಲಂಬಿಗಳಾಗಲು ಸರ್ಕಾರವು ಸಂಪೂರ್ಣ ಉಚಿತವಾಗಿ ಬೋರ್ವೆಲ್ ಕೊರೆಸಿ, ಪಂಪ್ ಸೆಟ್ ವಿತರಿಸಿ, ವಿದ್ಯುಧೀಕರಣ (Electrification) ಸೌಲಭ್ಯವನ್ನು ಮಾಡಿಕೊಡುತ್ತದೆ. ಎಸ್ ಸಿ (SC) ವರ್ಗದ ಅರ್ಹ ರೈತರು ಈ ಯೋಜನೆ ಅಡಿ ಉಚಿತ ಬೋರ್ವೆಲ್ ಪಡೆಯಲು ಸಬ್ಸಿಡಿ ಮೊತ್ತ, ಅಗತ್ಯ ದಾಖಲೆಗಳು, ಅರ್ಜಿ ಪರಿಶೀಲನೆಯ ಹಂತಗಳು ಮತ್ತು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ಗಂಗಾ ಕಲ್ಯಾಣ ಯೋಜನೆ 2026 : ಮುಖ್ಯಾಂಶಗಳು
1. ವೈಯಕ್ತಿಕ ಬೋರ್ವೆಲ್ (ಆಯ್ದ 6 ಜಿಲ್ಲೆಗಳು)
- ಒಟ್ಟು ಘಟಕ ವೆಚ್ಚ : ₹4,75,000
- ನಿಗಮ ನೀಡುವ ಸಹಾಯಧನ (Subsidy) : ₹4,25,000
- ಫಲಾನುಭವಿಯ ಸಾಲದ ಮೊತ್ತ : ₹50,000 (4% ಬಡ್ಡಿ)
2. ವೈಯಕ್ತಿಕ ಬೋರ್ವೆಲ್ (ಉಳಿದ 24 ಜಿಲ್ಲೆಗಳು)
- ಒಟ್ಟು ಘಟಕ ವೆಚ್ಚ : ₹3,75,000
- ನಿಗಮ ನೀಡುವ ಸಹಾಯಧನ (Subsidy) : ₹3,25,000
- ಫಲಾನುಭವಿಯ ಸಾಲದ ಮೊತ್ತ : ₹50,000 (4% ಬಡ್ಡಿ)
3. ಸಮುದಾಯ/ಏತ ನೀರಾವರಿ ಯೋಜನೆ
- ಒಟ್ಟು ಘಟಕ ವೆಚ್ಚ : ₹9,00,000 ವರೆಗೆ
- ನಿಗಮ ನೀಡುವ ಸಹಾಯಧನ (Subsidy) : 100% ಪೂರ್ಣ ಸಹಾಯಧನ.
- ಫಲಾನುಭವಿಯ ಸಾಲದ ಮೊತ್ತ : ಶೂನ್ಯ (₹0)
ಗಂಗಾ ಕಲ್ಯಾಣ ಯೋಜನೆ 2026 ರ ವಿವರವಾದ ಮಾಹಿತಿ (SC Category)
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಈ ಯೋಜನೆಯನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿ ಅರ್ಹ ಫಲ ಅನುಭವಿಗಳನ್ನು ಆಯ್ಕೆ ಮಾಡುತ್ತದೆ.
1. ವೈಯಕ್ತಿಕ ಕೊಳವೆ ಬಾವಿ ಯೋಜನೆ (Individual Borewell Scheme)
ಒಬ್ಬರೇ ಎಸ್ ಸಿ (SC) ರೈತರು ತಮ್ಮ ಸ್ವಂತ ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯ ಹೊಂದಲು ಈ ಯೋಜನೆ ಅಡಿ ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಭೌಗೋಳಿಕ ಮತ್ತು ಅಂತರ್ಜಲ ಮಟ್ಟಕ್ಕೆ ಇಲಾಖೆಯು ಘಟಕ ವೆಚ್ಚವನ್ನು ಎರಡು ಭಾಗ ಮಾಡಿದೆ.
- ಅಂತರ್ಜಲ ಕುಸಿದಿರುವ ಆಯ್ದ 6 ಜಿಲ್ಲೆಗಳು : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ನೀರಿನ ಮಟ್ಟ ತೀರಾ ಆಳದಲ್ಲಿರುವುದರಿಂದ ಇಲ್ಲಿ ಹುಟ್ಟು ಘಟಕ ವೆಚ್ಚ ₹4.75 ಲಕ್ಷ ಇರುತ್ತದೆ. ಇದರಲ್ಲಿ ₹4.25 ಲಕ್ಷ ಭಾರಿ ಸಹಾಯಧನ (Subsidy) ಸಿಗಲಿದ್ದು, ಫಲಾನುಭವಿಯ ಪಾಲು ಕೇವಲ ₹50,000 ಸಾಲದ ರೂಪದಲ್ಲಿರುತ್ತದೆ.
- ಉಳಿದ 24 ಜಿಲ್ಲೆಗಳು : ಒಟ್ಟು ಘಟಕ ವೆಚ್ಚ ₹3.75 ಲಕ್ಷ ಆಗಿದ್ದು, ಇದರಲ್ಲಿ ಸರ್ಕಾರವು ₹3.25 ಲಕ್ಷ ಸಹಾಯಧನ ನೀಡುತ್ತದೆ ಮತ್ತು ₹50,000 ಫಲಾನುಭವಿಯ ಸಾಲವಾಗಿರುತ್ತದೆ. ಈ ಸಾಲವನ್ನು ಕೇವಲ 4% ರಷ್ಟು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿಸಬೇಕಾಗುತ್ತದೆ.
2. ಸಮುದಾಯ ಅಥವಾ ಏತ ನೀರಾವರಿ ಯೋಜನೆ (Community Lift Irrigation)
ಜಮೀನಿನ ಪಕ್ಕದಲ್ಲಿ ನದಿ, ಹಳ್ಳ ಅಥವಾ ಸದಾ ನೀರಿರುವ ಕೆರೆಗಳಂತಹ ಮುಕ್ತ ಜಲ ಮೂಲಗಳು ಲಭ್ಯವಿದ್ದಾಗ ಈ ಯೋಜನೆಯನ್ನು ಬಳಸಿಕೊಳ್ಳಬಹುದು.
- ಕನಿಷ್ಟ 3 ಜನ ಪರಿಶಿಷ್ಟ ಜಾತಿಯ (SC) ರೈತರ ಜಮೀನುಗಳು ಒಟ್ಟಾಗಿ ಒಂದೇ ಕಡೆ ಕನಿಷ್ಠ 8 ಎಕರೆ ಇರಬೇಕು. (ಗರಿಷ್ಠ 15 ಎಕರೆ)
- ಇಂತಹ ರೈತರ ಗುಂಪುಗಳಿಗೆ ನಿಗಮವು 100% ಉಚಿತ ಸಹಾಯಧನದೊಂದಿಗೆ ಗರಿಷ್ಠ 9 ಲಕ್ಷದವರೆಗೆ ವೆಚ್ಚ ಭರಿಸಿ ನೀರಾವರಿ ಸೌಲಭ್ಯ ಒದಗಿಸುತ್ತದೆ.
ಗಂಗಾ ಕಲ್ಯಾಣ ಯೋಜನೆ 2026 : ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆಯಲು ಪರಿಶಿಷ್ಟ ಜಾತಿಯ (SC) ಅರ್ಜಿದಾರರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪೂರೈಸಬೇಕಾಗುತ್ತದೆ.
- ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿರಬೇಕು . (RD ಸಂಖ್ಯೆ ಹೊಂದಿರುವ ಸಕ್ಷಮ ಪ್ರಾಧಿಕಾರ ನೀಡಿದ ಜಾತಿ ಪ್ರಮಾಣ ಪತ್ರ ಕಡ್ಡಾಯ.)
- ಅರ್ಜಿದಾರರು ಕಡ್ಡಾಯವಾಗಿ ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.(Small & Marginal farmers)
- ಅರ್ಜಿದಾರರ ಹೆಸರಿನಲ್ಲಿ ಕನಿಷ್ಠ 1.5 ಎಕರೆ ಒಣ ಭೂಮಿ (Dry Land) ಇರಬೇಕು. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಾಗಿದ್ದರೆ ಕನಿಷ್ಠ 1 ಎಕರೆ ಇದ್ದರೆ ಸಾಕು. ಆದರೆ ಗರಿಷ್ಠ ಜನನು 5 ಎಕರೆ ಮೀರಿರಬಾರದು.
- ಕುಟುಂಬದ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹6 ಲಕ್ಷ ಮೀರಿರಬಾರದು.
- ವಯೋಮಿತಿ : ಕನಿಷ್ಠ 18 ವರ್ಷ ತುಂಬಿರಬೇಕು. (ಗಂಗಾ ಕಲ್ಯಾಣ ಯೋಜನೆಗೆ ಗರಿಷ್ಠ ವಯೋಮಿತಿಯನ್ನು ಸಡಿಲಗೊಳಿಸಲಾಗಿದೆ.)
ಗಂಗಾ ಕಲ್ಯಾಣ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಆನ್ಲೈನ್ ಲಾಗಿನ್ ಮಾಡುವ ಮುನ್ನ ಈ ಕೆಳಗಿನ ಎಲ್ಲಾ ಕಾಗದ ಪತ್ರಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಬೇಕು.
- ಚಾಲ್ತಿಯಲ್ಲಿರುವ ಎಸ್ ಸಿ (SC) ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ (RD ಸಂಖ್ಯೆ ಕಡ್ಡಾಯ.)
- ಫಲಾನುಭವಿಯ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು)
- ಇತ್ತೀಚಿನ ಜಮೀನಿನ ಪಹಣಿ ( RTC/Pahani)
- ತಹಶೀಲ್ದಾರರಿಂದ ಅಥವಾ ಕೃಷಿ ಇಲಾಖೆಯಿಂದ ಪಡೆದ ಸಣ್ಣ/ಅತಿ ಸಣ್ಣ ರೈತರ ಪ್ರಮಾಣ ಪತ್ರ.
- ಜಮೀನಿನ ನಕ್ಷೆ ಮತ್ತು ಮ್ಯುಟೇಶನ್ ಪ್ರತಿ (Mutation Copy)
- ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ (ಆಧಾರ್ ಸೀಡಿಂಗ್/ಲಿಂಕ್ ಆಗಿರಬೇಕು.)
- ಅರ್ಜಿದಾರರ ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಫೋಟೋ.
- ಬಿಪಿಎಲ್ ರೇಷನ್ ಕಾರ್ಡ್ (BPL Card)
ಇದನ್ನು ಓದಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (Step By Step Application Process)
ಗಂಗಾ ಕಲ್ಯಾಣ ಯೋಜನೆ 2026 ಕ್ಕೆ ಯಾವುದೇ ಆಫ್ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪಾರದರ್ಶಕತೆಗಾಗಿ ಕಡ್ಡಾಯವಾಗಿ ಡಿಜಿಟಲ್ ಪೋರ್ಟಲ್ ಮೂಲಕವೇ ಸಲ್ಲಿಸಬೇಕು.
- ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು (Seva Sindhu) ವೆಬ್ಸೈಟಿಗೆ ಭೇಟಿ ನೀಡಿ https://sevasindhu.karnataka.gov.in/Sevasindhu/Kannada?ReturnUrl=%2F ಅಥವಾ ನಿಮ್ಮ ಹತ್ತಿರದ ಗ್ರಾಮ 1 (Grama One) ಅಥವಾ ಸೈಬರ್ ಕೇಂದ್ರಗಳಿಗೆ ಹೋಗಿ.
- ಲಭ್ಯವಿರುವ ನಿಗಮಗಳ ಪಟ್ಟಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ “ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ” ವನ್ನು ಆಯ್ಕೆ ಮಾಡಿ.
- ಲಭ್ಯವಿರುವ ಸೇವೆಗಳ ಪಟ್ಟಿಯಲ್ಲಿ “ಗಂಗಾ ಕಲ್ಯಾಣ ಯೋಜನೆ 2026” (Ganga Kalyana Yojana 2026) ಲಿಂಕ್ ಮೇಲೆ ಕ್ಲಿಕ್ ಮಾಡಿ .
- ನಿಮ್ಮ ಆಧಾರ್ ಸಂಖ್ಯೆ ಮತ್ತು ಜಾತಿ/ಆದಾಯ ಪ್ರಮಾಣ ಪತ್ರದ Rd ಸಂಖ್ಯೆಯನ್ನು ನಮೂದಿಸಿ. ವೆಬ್ಸೈಟ್ ತಾನಾಗಿಯೇ ಕಂದಾಯ ಇಲಾಖೆಯ ಡೇಟಾದಿಂದ ನಿಮ್ಮ ವಿವರಗಳನ್ನು ಪರಿಶೀಲಿಸುತ್ತದೆ.
- ಕೇಳಲಾದ ಜಮೀನಿನ ಪಹಣಿ (RTC) ಮತ್ತು ಇತರೆ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಎಲ್ಲಾ ವಿವರಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಅರ್ಜಿಯನ್ನು “Submit ” ಮಾಡಿ. ಕೊನೆಯಲ್ಲಿ ಬರುವ ಅರ್ಜಿ ಸ್ವೀಕೃತಿ ಸಂಖ್ಯೆಯನ್ನು (acknowledgement Receipt) ಪ್ರಿಂಟ್ ತೆಗೆದು ಸುರಕ್ಷಿತವಾಗಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ (Verification )ಹೇಗೆ ನಡೆಯುತ್ತದೆ?
ಗಂಗಾ ಕಲ್ಯಾಣ ಯೋಜನೆ 2026 ಕ್ಕೆ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನಿಗಮದ ವತಿಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಈ ಕೆಳಗಿನ ಹಂತಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತದೆ.
- ದಾಖಲೆಗಳ ಪ್ರಾಥಮಿಕ ಪರಿಶೀಲನೆ : ಮೊದಲು ನಿಗಮದ ಅಧಿಕಾರಿಗಳು ಆನ್ಲೈನ್ ನಲ್ಲಿ ಸಲ್ಲಿಕೆಯಾಗಿರುವ ಜಾತಿ, ಆದಾಯ ಮತ್ತು ಜಮೀನಿನ ಪಹಣಿ (RTC) ಸರಿಯಾಗಿದೆ ಎಂದು ಡಿಜಿಟಲ್ ಡೇಟಾಬೇಸ್ ಮೂಲಕ ಪರಿಶೀಲಿಸುತ್ತಾರೆ.
- ಸ್ಥಳ ಪರಿಶೀಲನೆ (Field Verification) : ನಿಗಮದ ಜಿಲ್ಲಾ ವ್ಯವಸ್ಥಾಪಕರು (District Manager) ಅಥವಾ ನಿಯೋಜಿತ ಅಧಿಕಾರಿಗಳು ನಿಮ್ಮ ಜಮೀನಿಗೆ ಖುದ್ದಾಗಿ ಭೇಟಿ ನೀಡುತ್ತಾರೆ. ನಿಮ್ಮ ಜಮೀನಿನಲ್ಲಿ ಈಗಾಗಲೇ ಯಾವುದೇ ಬೋರ್ವೆಲ್ ಅಥವಾ ನೀರಾವರಿ ಸೌಲಭ್ಯ ಇಲ್ಲದಿರುವುದನ್ನು ಮತ್ತು ಅದು ನಿಜಕ್ಕೂ ಒಣ ಭೂಮಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
- ಜಿಲ್ಲಾ ಉಸ್ತುವಾರಿ ಸಮಿತಿ ಅನುಮೋದನೆ : ಸ್ಥಳ ಪರಿಶೀಲನೆ ಮುಗಿದ ನಂತರ, ಅರ್ಹ ರೈತರ ಪಟ್ಟಿಯನ್ನು ಜಿಲ್ಲಾಮಟ್ಟದ ಆಯ್ಕೆ ಸಮಿತಿಯ ಮುಂದೆ ಇಡಲಾಗುತ್ತದೆ. ಸಮಿತಿಯ ಅನುಮೋದನೆ ದೊರೆತ ಬಳಿಕವೇ ಫಲಾನುಭವಿಗಳ ಅಂತಿಮ ಲಿಸ್ಟ್ ಬಿಡುಗಡೆಯಾಗುತ್ತದೆ.
- ಕಾಮಗಾರಿ ಆದೇಶ (Work Order) : ಆಯ್ಕೆಯಾದ ರೈತರ ಜಮೀನಿನಲ್ಲಿ ಬೋರ್ವೆಲ್ ಕೊರೆಯಲು ನಿಗಮದ ವತಿಯಿಂದ ಮಾನ್ಯತೆ ಪಡೆದ ಏಜೆನ್ಸಿ ಗಳಿಗೆ ಕಾರ್ಯಾದೇಶ ನೀಡಲಾಗುತ್ತದೆ. ತದನಂತರ ಉಚಿತ ಬೋರ್ವೆಲ್ ಕೊರೆಯುವಿಕೆ, ಪಂಪ್ ಸೆಟ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date To Apply)
ಗಂಗಾ ಕಲ್ಯಾಣ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನವೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ. ಕೊನೆಯ ದಿನಗಳಲ್ಲಿ ವೆಬ್ ಸೈಟ್ ಸರ್ವರ್ ದಟ್ಟಣೆ ಹೆಚ್ಚಿರುವುದರಿಂದ ಅರ್ಹ ರೈತರು ಇಂದೇ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಲು ತಯಾರಿ ಮಾಡಿಕೊಳ್ಳಿ.
ಇದನ್ನು ಓದಿ
ಗಂಗಾ ಕಲ್ಯಾಣ ಯೋಜನೆ 2026 : FAQs
1. ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಗಂಗಾ ಕಲ್ಯಾಣ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ.
2. ಈ ಯೋಜನೆಯಡಿ ಉಚಿತ ಬೋರ್ವೆಲ್ ಪಡೆಯಲು ಎಷ್ಟು ಜಮೀನು ಇರಬೇಕು?
ಅರ್ಜಿದಾರರ ಹೆಸರಿನಲ್ಲಿ ಕನಿಷ್ಠ 1.5 ಎಕರೆ ಒಣ ಭೂಮಿ (Dry Land) ಇರಬೇಕು. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಾಗಿದ್ದರೆ ಕನಿಷ್ಠ 1 ಎಕರೆ ಇದ್ದರೂ ಸಾಕು. ಆದರೆ ಯಾವುದೇ ಕಾರಣಕ್ಕೂ ಒಟ್ಟು ಜಮೀನು 5 ಎಕರೆಗಿಂತ ಹೆಚ್ಚಿರಬಾರದು.
3. ಗಂಗಾ ಕಲ್ಯಾಣ ಯೋಜನೆಗೆ ವಾರ್ಷಿಕ ಆದಾಯದ ಮಿತಿ ಎಷ್ಟಿರಬೇಕು?
ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇದು ಗ್ರಾಮೀಣ ಮತ್ತು ನಗರ ಪ್ರದೇಶದ ಇಬ್ಬರಿಗೂ ಅನ್ವಯಿಸುತ್ತದೆ.
4. ನನ್ನ ಜಮೀನಿನಲ್ಲಿ ಈಗಾಗಲೇ ಒಂದು ಬೋರ್ವೆಲ್ ಇದ್ದರೆ ನಾನು ಮತ್ತೆ ಅರ್ಜಿ ಸಲ್ಲಿಸಬಹುದೇ?
ಇಲ್ಲ. ಈ ಯೋಜನೆಯು ಕೇವಲ ನೀರಾವರಿ ಸೌಲಭ್ಯವಿಲ್ಲದ ಒಣ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಸೀಮಿತವಾಗಿದೆ. ಅಧಿಕಾರಿಗಳ ಸ್ಥಳ ಪರಿಶೀಲನೆ (Field Verification) ವೇಳೆ ಈಗಾಗಲೇ ಬೋರ್ವೆಲ್ ಇರುವುದು ಪತ್ತೆಯಾದರೆ ಅರ್ಜಿ ತಿರಸ್ಕೃತಗೊಳ್ಳುತ್ತದೆ.
5. ಗಂಗಾ ಕಲ್ಯಾಣ ಯೋಜನೆಯ ಅರ್ಜಿ ಸ್ಥಿತಿಯನ್ನು (Application Status) ಪರಿಶೀಲಿಸುವುದು ಹೇಗೆ?
ನೀವು ಅರ್ಜಿ ಸಲ್ಲಿಸಿದ ನಂತರ ಸಿಗುವ ‘ಅರ್ಜಿ ಸ್ವೀಕೃತಿ ಸಂಖ್ಯೆಯನ್ನು’ (Acknowledgement Receipt) ಬಳಸಿ ಸೇವಾ ಸಿಂಧು ಪೋರ್ಟಲ್ ಅಥವಾ ಸಂಬಂಧಪಟ್ಟ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ಲಾಗಿನ್ ಐಡಿ ಮೂಲಕ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ಗಂಗಾ ಕಲ್ಯಾಣ ಯೋಜನೆ 2026 : Conclusion
ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಎಸ್ ಸಿ (SC) ರೈತರು ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನವೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ. ಕೊನೆಯ ದಿನಗಳಲ್ಲಿ ವೆಬ್ಸೈಟ್ ಸರ್ವರ್ ಬ್ಯುಸಿ ಆಗುವುದನ್ನು ತಪ್ಪಿಸಲು ಅರ್ಹ ರೈತರು ಇಂದೇ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ