DRDO GTRE ನೇಮಕಾತಿ 2026 : ನೀವು ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶವಿದೆ. ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಒಡೆತನದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಡಿಯಲ್ಲಿ ಬರುವ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (GTRE ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ಬೆಂಗಳೂರಿನಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಲೇಖನದಲ್ಲಿ ನಾವು DRDO GTRE ನೇಮಕಾತಿ 2026 ರ ಹುದ್ದೆಗಳ ವಿವರ, ಸಂಬಳ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ತಿಳಿದುಕೊಳ್ಳೋಣ.
DRDO GTRE ನೇಮಕಾತಿ 2026 : ಸಂಕ್ಷಿಪ್ತ ವಿವರ
- ಸಂಸ್ಥೆ ಹೆಸರು : ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ ,(DRDO GTRE)
- ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಕೆಲಸ (ಕರ್ನಾಟಕ)
- ಹುದ್ದೆಯ ಹೆಸರು : ಕನ್ಸಲ್ಟೆಂಟ್ (Consultant)
- ಒಟ್ಟು ಹುದ್ದೆಗಳು : 03
- ಉದ್ಯೋಗದ ಸ್ಥಳ : ಬೆಂಗಳೂರು, ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆಫ್ಲೈನ್ (offline)
ಹುದ್ದೆಗಳ ವಿವರ (Post Name)
DRDO GTRE ನೇಮಕಾತಿ 2026 ಕ್ಕೆ 3 ವಿಭಿನ್ನ ವಿಭಾಗಗಳಲ್ಲಿ ಕನ್ಸಲ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
- Technical – Data Acquisition and Monitoring system ( ತಾಂತ್ರಿಕ ಡೇಟಾ ಸಂಗ್ರಹಣೆ ಮತ್ತು ಉಸ್ತುವಾರಿ ವ್ಯವಸ್ಥೆ)
- Technical – Photographer (ತಾಂತ್ರಿಕ ಛಾಯಾಗ್ರಾಹಕ)
- Admin & Allied – HRD Activities (ಆಡಳಿತ ಮತ್ತು ಸಂಬಂಧಿತ ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳು)
ಮಾಸಿಕ ಸಂಬಳದ ವಿವರ (Salary Details)
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅರ್ಹತೆ ಮತ್ತು ಹುದ್ದೆಯ ಆಧಾರದ ಮೇಲೆ ಪ್ರತಿ ತಿಂಗಳು ₹30,000 ರಿಂದ ₹60,000 ವರೆಗೆ ಆಕರ್ಷಕ ಸಂಬಳವನ್ನು ನೀಡಲಾಗುತ್ತದೆ.
ಇದನ್ನು ಓದಿ
DRDO GTRE ನೇಮಕಾತಿ 2026 : ಅರ್ಹತಾ ಮಾನದಂಡಗಳು
1. ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇದರ ಸಂಪೂರ್ಣ ವಿವರಗಳನ್ನು DRDO GTRE ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಅಧಿಕೃತ ಅಧಿಸೂಚನೆಯಲ್ಲಿ (official notification) ಪರಿಶೀಲಿಸಬಹುದು. Official Notification https://drive.google.com/file/d/1ZaAVv9oTm2HVht7pQMdpJksY-sijp9kL/view?usp=drivesdk
2. ವಯೋಮಿತಿ ಮತ್ತು ಸಡಿಲಿಕೆ
- ಗರಿಷ್ಠ ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 63 ವರ್ಷಗಳು ಮೀರಿರಬಾರದು.
- ವಯೋಮಿತಿ ಸಡಿಲಿಕೆ : DRDO ನಿಯಮಾವಳಿಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಪ್ರಮುಖ ದಿನಾಂಕಗಳು (Important Dates)
DRDO GTRE ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಈ ಕೆಳಗಿನಂತಿದೆ.
- ಆಫ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ : 9 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಅಕ್ಟೋಬರ್ 2026
ಅರ್ಜಿ ಸಲ್ಲಿಸುವ ವಿಧಾನ (How to Apply)
DRDO GTRE ನೇಮಕಾತಿ 2026 ಕ್ಕೆ ಕೇವಲ ಆಫ್ ಲೈನ್ (ಅಂಚೆ ಮೂಲಕ) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ.
- ಅಧಿ ಸೂಚನೆ ಓದಿ : ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
- ದಾಖಲೆಗಳನ್ನು ಸಿದ್ಧಪಡಿಸಿ : ಸಂಪರ್ಕಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ. ಇದರೊಂದಿಗೆ ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು, ಇತ್ತೀಚಿನ ಪಾಸ್ ಪೋರ್ಟ್ ಅಳತೆಗೆ ಫೋಟೋ, ರೆಸ್ಯೂಮ್ ಮತ್ತು ಅನುಭವದ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ : ಅಧಿಕೃತ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ನಿಗದಿತ ಫಾರ್ಮೆಟ್ ನಲ್ಲಿ ನಿಖರವಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕ : ನಿಮ್ಮ ವರ್ಗಕ್ಕೆ ಶುಲ್ಕ ಅನ್ವಯವಾಗುವುದಾದರೆ (ಅಧಿಸೂಚನೆಯ ಪ್ರಕಾರ ) ಪಾವತಿಸಿ.
- ಮರುಪರಿಶೀಲನೆ : ಫಾರ್ಮ್ ಬರ್ತಿ ಮಾಡಿದ ನಂತರ ಎಲ್ಲಾ ವಿವರಗಳು ಸರಿಯಾಗಿವೆ ಎಂದು ಮತ್ತೊಮ್ಮೆ ಪರಿಶೀಲಿಸಿ
- ಅರ್ಜಿ ಕಳುಹಿಸಿ : ಭರ್ತಿ ಮಾಡಿದ ಅರ್ಜಿ ಮತ್ತು ನಿಮ್ಮ ಎಲ್ಲಾ ಸ್ವಯಂ ದೃಢೀಕರಿಸಿದ (self attested) ದಾಖಲೆಗಳ ನಕಲನ್ನು ಲಕೋಟೆಯಲ್ಲಿ ಹಾಕಿ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗಾಗಿ ತಲುಪುವಂತೆ ಕಳುಹಿಸಿ.
ಅರ್ಜಿ ಕಳುಹಿಸಬೇಕಾದ ಅಧಿಕೃತ ವಿಳಾಸ
- The Director, Gas Turbine Research Establishment, Government OF India, Ministry of Defence, Defence Research & Development Organisation , C.V Raman Nagar, Post No, 9302 , Bengaluru – 560093.
ನಿಮ್ಮ ಅರ್ಜಿಗಳು 29 ಅಕ್ಟೋಬರ್ 2026ರ ಒಳಗೆ ಈ ವಿಳಾಸಕ್ಕೆ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಅಧಿಕೃತ ಲಿಂಕ್ ಗಳು ಮತ್ತು ಇತ್ತೀಚಿನ ಅಪ್ಡೇಟ್ಗಳಿಗಾಗಿ DRDO ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
ಇದನ್ನು ಓದಿ
FAQs
DRDO GTRE ನೇಮಕಾತಿ 2026 ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು 29 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿದೆ.
2. ಈ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 63 ವರ್ಷಗಳು ಮೀರಿರಬಾರದು.
3. ಈ ಹುದ್ದೆಗಳು ಖಾಯಂ ಕೆಲಸಗಳೇ?
ಇಲ್ಲ. ಇವುಗಳು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲಿರುವ ತಾತ್ಕಾಲಿಕ ಹುದ್ದೆಗಳಾಗಿವೆ, ಆರಂಭದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ, ನಂತರ ಅಗತ್ಯಕ್ಕೆ ತಕ್ಕಂತೆ ಅವಧಿಯನ್ನು ವಿಸ್ತರಿಸಬಹುದು.
4. ಈ ಉದ್ಯೋಗಕ್ಕೆ ಮಾಸಿಕ ಸಂಬಳ ಎಷ್ಟು ಸಿಗುತ್ತದೆ?
ಪಿಂಚಣಿ ರಹಿತ ನಿವೃತ್ತ ನೌಕರರಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ಸಂಬಳ ಈ ಕೆಳಗಿನಂತಿರುತ್ತದೆ.
- ಟೆಕ್ನಿಕಲ್ (ಡೇಟಾ ಸಿಸ್ಟಮ್) : ₹60,000
- ಟೆಕ್ನಿಕಲ್ (ಫೋಟೋಗ್ರಾಫರ್) : ₹50,000
- ಅಡ್ಮಿನ್ & ಅಲೈಡ್: ₹30,000
5. ಸಂಬಳದ ಜೊತೆಗೆ ಇತರ ಭತ್ಯೆ ಗಳು ಸಿಗುತ್ತವೆ?
ಇಲ್ಲ. ಆಯ್ಕೆಯಾದ ಕನ್ಸಲ್ಟೆಂಟ್ ಗಳಿಗೆ ಯಾವುದೇ ತರಹದ ಭತ್ಯೆ ಗಳು, ಮನೆ ಬಾಡಿಗೆ ಅಥವಾ ವೈದ್ಯಕೀಯ ಸೌಲಭ್ಯಗಳು ಸಿಗುವುದಿಲ್ಲ ಕೇವಲ ನಿಗದಿಪಡಿಸಿದ ಮಾಸಿಕ ಮೊತ್ತವನ್ನು ಮಾತ್ರ ನೀಡಲಾಗುತ್ತದೆ.
6. ಅರ್ಜಿ ಸಲ್ಲಿಸುವುದು ಹೇಗೆ ? ಆನ್ಲೈನ್ ವಿಧಾನ ಇದೆಯೇ?
ಇದಕ್ಕೆ ಯಾವುದೇ ಆನ್ಲೈನ್ ಲಿಂಕ್ ಇರುವುದಿಲ್ಲ. ನೀವು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮೇಲೆ ನೀಡಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಬಹುದು.
7. ಆಯ್ಕೆಯಲ್ಲಿ ಯಾರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ?
ಹಿಂದೆ DRDO ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಮತ್ತು ಸಂಬಂಧಪಟ್ಟ ವಿಭಾಗದಲ್ಲಿ ಉತ್ತಮ ಸೇವಾ ದಾಖಲೆ ಹಾಗೂ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ.
ಇದೇ ರೀತಿಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಯೋಜನೆಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಫಾಲೋ ಮಾಡಿ.
ಇದನ್ನು ಓದಿ