ಬೆಳಗಾವಿ TCO ನೇಮಕಾತಿ 2026 : ಕರ್ನಾಟಕ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಜಿಲ್ಲಾ ಕ್ಷಯಾ ರೋಗ ನಿಯಂತ್ರಣ ಕಚೇರಿ ಬೆಳಗಾವಿ (District Tuberculosis Control Office Belagavi) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ (offline) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಳಗಾವಿಯಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿಯ ಹುದ್ದೆಗಳ ವಿವರ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.
ಇದನ್ನು ಓದಿ
ಬೆಳಗಾವಿ TCO ನೇಮಕಾತಿ 2026: ನೇಮಕಾತಿಯ ಸಂಕ್ಷಿಪ್ತ ವಿವರ
- ಸಂಸ್ಥೆ ಹೆಸರು : ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿ, ಬೆಳಗಾವಿ
- ಉದ್ಯೋಗ ಪ್ರಕಾರ : ಕರ್ನಾಟಕ ಸರ್ಕಾರಿ ಉದ್ಯೋಗ (Government job)
- ಒಟ್ಟು ಹುದ್ದೆಗಳ ಸಂಖ್ಯೆ : 06
- ಉದ್ಯೋಗ ಸ್ಥಳ : ಬೆಳಗಾವಿ, ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್ (ಅಂಚೆ ಮೂಲಕ)
ಹುದ್ದೆಗಳ ವಿವರ ಮತ್ತು ಮಾಸಿಕ ವೇತನ (Vaccancy and Salary Details)
ಬೆಳಗಾವಿ TCO ನೇಮಕಾತಿ 2026 ರಲ್ಲಿ ಒಟ್ಟು 6 ಹುದ್ದೆಗಳಿದ್ದು, ಲಭ್ಯವಿರುವ ಪ್ರಮುಖ ಹುದ್ದೆಗಳು ಮತ್ತು ಅವುಗಳ ಮಾಸಿಕ ಸಂಬಳದ ವಿವರ ಹೀಗಿದೆ.
1. ಎಕ್ಸ್ ರೇ ಟೆಕ್ನಿಷಿಯನ್/ರೇಡಿಯೋಗಫರ್ಸ್ (X-ray Technician/radiographers)
- ಒಟ್ಟು ಹುದ್ದೆಗಳು : 04
- ಮಾಸಿಕ ವೇತನ : ₹18,940
- ಮೀಸಲಾತಿ : SC -1, ST -1, GM-1, GM -1 Female
2. ಲ್ಯಾಬ್ ಟೆಕ್ನಿಷಿಯನ್ (Lab Tecnician)
- ಒಟ್ಟು ಹುದ್ದೆಗಳು : 01
- ಮಾಸಿಕ ವೇತನ : ₹16,100
- ಮೀಸಲಾತಿ : GM -1
3. ಸ್ಟಾಫ್ ನರ್ಸ್ (Staff Nurse)
- ಒಟ್ಟು ಹುದ್ದೆಗಳು : 01
- ಮಾಸಿಕ ವೇತನ : ₹22,000
- ಮೀಸಲಾತಿ : GM -1
ಬೆಳಗಾವಿ TCO ನೇಮಕಾತಿ 2026 : ಶೈಕ್ಷಣಿಕ ಅರ್ಹತೆಗಳು
1. ಎಕ್ಸ್ – ರೇ ಟೆಕ್ನಿಷಿಯನ್ಸ್/ರೇಡಿಯೋಗ್ರಾಫರ್ಸ್
- ಹತ್ತನೇ ತರಗತಿ (SSLC ) ಜೊತೆಗೆ RUGHS ಅಥವಾ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎಕ್ಸ್ ರೇ/ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೋಮ (Diploma )ಮುಗಿಸಿರಬೇಕು.
- ಅಥವಾ 12ನೇ ತರಗತಿ (PUC science – phisics, chemistry, Biology) ಜೊತೆಗೆ ಎಕ್ಸ್ ರೇ/ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮುಗಿಸಿರಬೇಕು.
2. ಲ್ಯಾಬ್ ಟೆಕ್ನಿಷಿಯನ್
- ಪಿಯುಸಿ (10+2) ಉತ್ತೀರ್ಣರಾಗಿರಬೇಕು ಮತ್ತು ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೋಮಾ (DMLT) ಅಥವಾ ತತ್ಸಮಾನ ಪ್ರಮಾಣ ಪತ್ರ ಹೊಂದಿರಬೇಕು. NTEP ಅಥವಾ ಕಫ ತಪಾಸಣೆಯಲ್ಲಿ (Sputum Smear Microscopy ) ಒಂದು ವರ್ಷದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
3. ಸ್ಟಾಫ್ ನರ್ಸ್
- ಜಿ ಎನ್ ಎಮ್ ನರ್ಸಿಂಗ್ (GNM Nursing) ಅಥವಾ ಬಿ ಎಸ್ ಸಿ ನರ್ಸಿಂಗ್ (B.SC Nursing )ಪದವಿ ಹೊಂದಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಾಯಿಸಿಕೊಂಡಿರಬೇಕು. ಕನಿಷ್ಠ 2 ವರ್ಷಗಳ ಸೇವಾ ಅನುಭವ ಇರಬೇಕು.
ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ (Age Limit and Select Process)
- ವಯೋಮಿತಿ : 5/10/2026 ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳನ್ನು ಮೀರಿರಬಾರದು.
- ಆಯ್ಕೆ ವಿಧಾನ: ಒಂದು ವೇಳೆ ಅರ್ಹ ಅಭ್ಯರ್ಥಿಗಳಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಲ್ಲಿ, ಲಿಖಿತ ಪರೀಕ್ಷೆ (Written exam)ಮತ್ತು ಸಂದರ್ಶನದ (Interview ) ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
- ವಿಶೇಷ ಸೂಚನೆ : ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಪರಿಜ್ಞಾನ ಹಾಗೂ ಕನಿಷ್ಠ 6 ತಿಂಗಳ ಕಂಪ್ಯೂಟರ್ ಸಾಕ್ಷರತೆ ಮತ್ತು ಪ್ರಮಾಣ ಪತ್ರ ಇರುವುದು ಕಡ್ಡಾಯವಾಗಿದೆ.
ಪ್ರಮುಖ ದಿನಾಂಕಗಳು (Important Date)
ಬೆಳಗಾವಿ TCO ನೇಮಕಾತಿ 2026 ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
- ಅರ್ಜಿ ನಮೂನೆ ವಿತರಿಸುವ ದಿನಾಂಕಗಳು : 06/10/2026 ರಿಂದ 17/10/2026 ರವರೆಗೆ (ಕಚೇರಿ ಅವಧಿಯಲ್ಲಿ, ರಜಾ ದಿನಗಳನ್ನು ಹೊರತುಪಡಿಸಿ.)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (19/10/2026)
ಅರ್ಜಿ ಸಲ್ಲಿಸಬೇಕಾದ ವಿಳಾಸ (Postal Address)
ಬೆಳಗಾವಿ TCO ನೇಮಕಾತಿ 2026 ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅಧಿಕೃತ ವಿಳಾಸಕ್ಕೆ ತಲುಪಿಸಬೇಕು ಅಗತ್ಯ ದಾಖಲೆಗಳೊಂದಿಗೆ.
District Tuberculosis Control Officer , District Tuberculosis Control Center, M.Vadagaon, Belagavi – 590005, Karnataka.
ಅರ್ಜಿ ಸಲ್ಲಿಸುವುದು ಹೇಗೆ ? How to Apply
- ಅಧಿಸೂಚನೆ ಪರಿಶೀಲನೆ : ಮೊದಲು ಬೆಳಗಾವಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿಯ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
- ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿhttps://drive.google.com/file/d/1pp7zo1lbqMOCUIjo91fs4qAIHJ3B9RL_/view?usp=drivesdk
- ದಾಖಲೆಗಳ ಸಿದ್ಧತೆ : ನಿಮ್ಮ ಇತ್ತೀಚಿನ ಭಾವಚಿತ್ರ, resume, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ವಯಸ್ಸಿನ ಪುರಾವೆ, ಗುರುತಿನ ಚೀಟಿ, ಮತ್ತು ಅನುಭವದ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಸ್ವಯಂ ದೃಢೀಕರಣ : ನಿಮ್ಮ ಎಲ್ಲಾ ಅಗತ್ಯ ದಾಖಲೆಗಳ ನಕಲು ಪ್ರತಿಗಳ ಮೇಲೆ ಸ್ವಯಂ ದೃಢೀಕರಣ (Self Attested)ಸಹಿ ಮಾಡಿ.
- ಅರ್ಜಿ ಭರ್ತಿ: ಅಧಿಕೃತ ಲಿಂಕ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ನಿಗದಿತ ಮಾದರಿಯಲ್ಲಿ ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.
- ಅರ್ಜಿ ಶುಲ್ಕ : ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವಿದ್ದರೆ ಪಾವತಿಸಿ.
- ಮರು ಪರಿಶೀಲನೆ : ಅರ್ಜಿಯನ್ನು ಲಕೋಟೆಯಲ್ಲಿ ಹಾಕುವ ಮುನ್ನ ಭರ್ತಿ ಮಾಡಿದ ಎಲ್ಲಾ ಮಾಹಿತಿಗಳು ನಿಖರವಾಗಿದೆ ಎಂಬುದನ್ನು ಕ್ರಾಸ್ ವೆರಿಫೈ ಮಾಡಿ.
- ಅಂಚೆ ಮೂಲಕ ಕಳುಹಿಸಿ : ಅಂತಿಮವಾಗಿ ಭರ್ತಿ ಮಾಡಿದ ಅರ್ಜಿಯನ್ನು ಮೇಲ್ಕಂಡ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ (Register Post), ಸ್ಪೀಡ್ ಪೋಸ್ಟ್ (Speed Post) ಅಥವಾ ವಿಶ್ವಸಾರ್ಹ ಕೊರಿಯರ್ ಸೇವೆಗಳ ಮೂಲಕ ಕೊನೆಯ ದಿನಾಂಕದ ಒಳಗೆ ತಲುಪುವಂತೆ ಕಳುಹಿಸಿ.
ಬೆಳಗಾವಿ TCO ನೇಮಕಾತಿ 2026 : ಸಂವಹನಕ್ಕೆ ನಿಮ್ಮ ಚಾಲ್ತಿಯಲ್ಲಿರುವ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದನ್ನು ಮರೆಯಬೇಡಿ.
ಇದನ್ನು ಓದಿ
ಬೆಳಗಾವಿ TCO ನೇಮಕಾತಿ 2026 : FAQ
1. ಬೆಳಗಾವಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 06 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಎಕ್ಸ್ ರೇ ಟೆಕ್ನಿಷಿಯನ್ 4 ಹುದ್ದೆಗಳು, ಲ್ಯಾಬ್ ಟೆಕ್ನಿಷಿಯನ್ 1 ಹುದ್ದೆ, ಸ್ಟಾಫ್ ನರ್ಸ್ 1 ಹುದ್ದೆ.
2. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಅಕ್ಟೋಬರ್ 2026 ಆಗಿದೆ.
3. ಅರ್ಜಿ ಸಲ್ಲಿಸುವ ವಿಧಾನ ಯಾವುದು? ನಾನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದೇ?
ಇಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಫ್ಲೈನ್ ಮೂಲಕ ಅಂದರೆ ಅಂಚೆ ಮೂಲಕ ನೇರವಾಗಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
4. ಸ್ಟಾಫ್ ನರ್ಸ್ ಹುದ್ದೆಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು?
ಸ್ಟಾಫ್ ನರ್ಸ್ ಹುದ್ದೆಗೆ ಜಿ ಎನ್ ಎಮ್ (GNM Nursing )ನರ್ಸಿಂಗ್ ಅಥವಾ ಬಿ ಎಸ್ ಸಿ (B.SC Nursing) ನರ್ಸಿಂಗ್ ಮುಗಿಸಿರಬೇಕು. ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು ಮತ್ತು ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
5. ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಎಷ್ಟು ಸಿಗುತ್ತದೆ ?
ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿಗದಿಪಡಿಸಲಾಗಿದೆ.
- ಎಕ್ಸ್ ರೇ ಟೆಕ್ನಿಷಿಯನ್ಸ್: 18,940
- ಸ್ಟಾಫ್ ನರ್ಸ್ : 22,000
- ಲ್ಯಾಬ್ ಟೆಕ್ನಿಷಿಯನ್ : 16,000
6. ಈ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳು ಆಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
7. ಅರ್ಜಿಗಳನ್ನು ಯಾವ ವಿಳಾಸಕ್ಕೆ ಕಳುಹಿಸಬೇಕು?
ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
- ಜಿಲ್ಲಾ ಕ್ಷಯಾ ರೋಗ ನಿಯಂತ್ರಣ ಅಧಿಕಾರಿಗಳು, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ, ಎಂ ವಡಗಾಂವಿ, ಬೆಳಗಾವಿ -590005 , ಕರ್ನಾಟಕ.
ಬೆಳಗಾವಿ TCO ನೇಮಕಾತಿ 2026 : ಕೊನೆಯ ಮಾತು
ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶ. ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಇರಲಿದ್ದು, ಆಸಕ್ತರು ಕೊನೆಯ ದಿನಾಂಕ ವಾದ 19 ಅಕ್ಟೋಬರ್ 2026ರ ಒಳಗೆ ತಮ್ಮ ಅರ್ಜಿಗಳನ್ನು ಕಚೇರಿಗೆ ತಲುಪಿಸಬೇಕಾಗುತ್ತದೆ. ಕೊನೆಯ ದಿನಗಳಲ್ಲಿ ಅಂಚೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಅರ್ಹ ಅಭ್ಯರ್ಥಿಗಳು ಹಿಂದೆ ಅರ್ಜಿ ನಮೂನೆಯನ್ನು ಪಡೆದು ಇಲಾಖೆಗೆ ಸಲ್ಲಿಸಲು ಸಲಹೆ ನೀಡಲಾಗಿದೆ.
ಇದೇ ರೀತಿಯ ಇನ್ನು ಹೆಚ್ಚಿನ ಕರ್ನಾಟಕ ಸರ್ಕಾರಿ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ