HAL ನೇಮಕಾತಿ 2026 : ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಮಹಾರತ್ನ ಸಂಸ್ಥೆಯಾದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಉದ್ಯೋಗ ಗಿಟ್ಟಿಸಿಕೊಳವುದು ಪ್ರತಿಯೊಬ್ಬ ಇಂಜಿನಿಯರಿಂಗ್ ಪದವೀಧರ ಹಾಗೂ ತಾಂತ್ರಿಕ ಅಭ್ಯರ್ಥಿಗಳ ದೊಡ್ಡ ಕನಸಾಗಿರುತ್ತದೆ.
ದೇಶದ ಹೆಮ್ಮೆಯ ವೈಮಾನಿಕ ಸಂಸ್ಥೆಯಾಗಿರುವ HAL ನಿಯತಕಾಲಿಕವಾಗಿ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಗಳನ್ನು ಹೊರಡಿಸಿರುತ್ತದೆ. ಇತ್ತೀಚಿನ ಪ್ರಮುಖ ನೇಮಕಾತಿ ಅಪ್ಡೇಟ್ ಎಂದರೆ HAL ಸಂಸ್ಥೆಯು 150 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಇಂಜಿನಿಯರಿಂಗ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
ಇದನ್ನು ಓದಿ
HAL ನೇಮಕಾತಿ 2026 : ಖಾಲಿ ಇರುವ ಹುದ್ದೆಗಳ ವಿವರಗಳು
ಒಟ್ಟು 150 ಹುದ್ದೆಗಳನ್ನು ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ.
- ಮೆಕಾನಿಕಲ್ (mechanical) : 78 ಹುದ್ದೆಗಳು
- ಎಲೆಕ್ಟ್ರಿಕಲ್(electrical) : 25 ಹುದ್ದೆಗಳು
- ಎಲೆಕ್ಟ್ರಾನಿಕ್ಸ್(electronics) : 21 ಹುದ್ದೆಗಳು
- ಸಿವಿಲ್(civil) : 07 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್(computer science) : 06 ಹುದ್ದೆಗಳು
- ಪ್ರೊಡಕ್ಷನ್(production) : 06 ಹುದ್ದೆಗಳು
- ಮೆಟರ್ಲಜಿ(metallurgy) : 03 ಹುದ್ದೆಗಳು
- ಏರೋನಾಟಿಕಲ್(aeronautical) : 02 ಹುದ್ದೆಗಳು
- ಕೆಮಿಕಲ್(chemical) : 02 ಹುದ್ದೆಗಳು
ಅರ್ಹತಾ ಮಾನದಂಡಗಳು (Eligibility Criteria)
- ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧ ಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣ ಸಮಯದ B.E/B.Tech ಪದವಿ ಹೊಂದಿರಬೇಕು. ಸಾಮಾನ್ಯ/OBC /EWS ಅಭ್ಯರ್ಥಿಗಳಿಗೆ ಕನಿಷ್ಠ 60% ಮತ್ತು SC, ST, pwbd ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು ಕಡ್ಡಾಯ.
- ವಯೋಮಿತಿ: ಗರಿಷ್ಠ ವಯಸ್ಸು 28 ವರ್ಷಗಳಿರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ SC, ST ಮತ್ತು OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
HAL ನೇಮಕಾತಿ 2026 : ವೇತನ ಶ್ರೇಣಿ ಮತ್ತು ಉದ್ಯೋಗದ ಅವಧಿ
- ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹30,000 ರಿಂದ ₹1,20,000 ವರೆಗೆ ವೇತನ ಶ್ರೇಣಿ ಸಿಗಲಿದ್ದು, ಇದರೊಂದಿಗೆ DA,HRA ಮತ್ತು ಕೆಫೆಟೇರಿಯಾ ಭತ್ಯೆ ಗಳು ಲಭ್ಯವಿರುತ್ತವೆ.
- ಉದ್ಯೋಗದ ಅವಧಿ : ಇದು ಶಾರ್ಟ್ ಟರ್ಮ್ ಬೇಸಿಸ್ (ತಾತ್ಕಾಲಿಕ) ಆಧಾರದ ಮೇಲೆ ಗರಿಷ್ಠ 3 ವರ್ಷಗಳ ಅವಧಿಯ ನೇಮಕಾತಿಯಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ? (Selection Process)
HAL ನೇಮಕಾತಿ 2026: ಈ ನೇಮಕಾತಿಯ ಅತ್ಯಂತ ಆಕರ್ಷಕ ವಿಷಯವೆಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
- ಅಭ್ಯರ್ಥಿಗಳು B.E/B.Tech ನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ನೇರವಾಗಿ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅರ್ಜಿ ಶುಲ್ಕ (Application Fee)
- ಸಾಮಾನ್ಯ , OBC & EWS ಅಭ್ಯರ್ಥಿಗಳಿಗೆ ₹500 ಶುಲ್ಕ ಇರುತ್ತದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕ
- HAL ನೇಮಕಾತಿ 2026 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 17 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿದೆ.
- ಕೊನೆಯ ದಿನದ ಸರ್ವ ಸಮಸ್ಯೆಗಳನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
ಅಗತ್ಯವಿರುವ ದಾಖಲೆಗಳು (Required Documents)
HAL ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿ
- B.E/B.Tech ಪದವಿ ಪ್ರಮಾಣ ಪತ್ರ ಮತ್ತು ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿಗಳು.
- ಎಸ್ ಎಸ್ ಎಲ್ ಸಿ ಅಂಕಪಟ್ಟಿ (ವಯಸ್ಸಿನ ಪುರಾವೆಗಾಗಿ)
- ಜಾತಿ ಪ್ರಮಾಣ ಪತ್ರ .(SC ST OBC) ಅಭ್ಯರ್ಥಿಗಳಿಗೆ ಅನ್ವಯಿಸಿದರೆ .
ಅರ್ಜಿ ಸಲ್ಲಿಸುವ ವಿಧಾನ (How to Apply)
- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ : ಮೊದಲಿಗೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ careers ವಿಭಾಗಕ್ಕೆ ಭೇಟಿ ನೀಡಿ. https://hal-india.co.in/career
- ನೇಮಕಾತಿ ಲಿಂಕ್ ಆಯ್ಕೆ ಮಾಡಿ : ವೆಬ್ಸೈಟ್ನಲ್ ಕಾಣಿಸುವ Recruitment OF Junior executive (Fixed Tenure Basis) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಪ್ರಕಟವಾಗಿರುವ ಸೂಚನೆಗಳನ್ನು ಓದಿ Apply Online ಬಟನ್ ಒತ್ತಿ.
- ನೋಂದಣಿ ಮಾಡಿಕೊಳ್ಳಿ : ನಿಮ್ಮ ಹೆಸರು, ಸಕ್ರಿಯವಾಗಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ. ಆಗ ನಿಮ್ಮ ಇಮೇಲ್ ಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬರುತ್ತದೆ.
- ಅರ್ಜಿ ನಮೂನೆ ಭರ್ತಿ ಮಾಡಿ : ನಿಮ್ಮ ಫೋಟೋ, ಸಹಿ ಮತ್ತು ಇಂಜಿನಿಯರಿಂಗ್ ಅಂಕ ಪಟ್ಟಿಗಳನ್ನು ಕೇಳಲಾದ ಸೈಜ್ ನಲ್ಲಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ : ನೀವು ಸಾಮಾನ್ಯ, (General, OBC/EWS ವರ್ಗಕ್ಕೆ ಸೇರಿದವರಾಗಿದ್ದರೆ, ₹500 ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್ಲೈನ್ ನಲ್ಲೆ ಪಾವತಿಸಿ. (SC ST pwbd ಅಭ್ಯರ್ಥಿಗಳಿಗೆ ಉಚಿತ ಇರುತ್ತದೆ.)
- ಅರ್ಜಿಸಲ್ಲಿಕೆ : ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಕೊನೆಯದಾಗಿ submit ಬಟನ್ ಕ್ಲಿಕ್ ಮಾಡಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಅಕ್ಟೋಬರ್ 2026, ಕೊನೆಯ ನಿಮಿಷದ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಹಿಂದೆ ಅರ್ಜಿ ಸಲ್ಲಿಸಿ.
- ಅರ್ಜಿಯಲ್ಲಿ ಯಾವುದೇ ತಪ್ಪು ಮಾಹಿತಿ ನೀಡಬೇಡಿ. ಏಕೆಂದರೆ ಲಿಖಿತ ಪರೀಕ್ಷೆ ಇಲ್ಲದ ಕಾರಣ ನಿಮ್ಮ ಅಂಕಗಳ ಆಧಾರದ ಮೇಲೆ ನೇರ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಭಾರತದ ರಕ್ಷಣ ಮತ್ತು ಏರೋಸ್ಪೇಸ್ ವಲಯದಲ್ಲಿ ಕೆಲಸ ಮಾಡುವ ಮೂಲಕ ಉತ್ತಮ ಅನುಭವ ಹಾಗೂ ಗೌರವಾನ್ವಿತ ವೃತ್ತಿ ಜೀವನವನ್ನು ಆರಂಭಿಸಲು ಇದು ಅತ್ಯುತ್ತಮ ಸುವರ್ಣ ಅವಕಾಶ. ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿಯನ್ನು ಸಲ್ಲಿಸಿ.
HAL ನೇಮಕಾತಿ 2026 ಇಲ್ಲಿ ನೀಡಿರುವ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಕೂಡ ಹಂಚಿಕೊಂಡು ಉಪಯುಕ್ತ ಮಾಹಿತಿಯನ್ನು ನೀಡಿ.
ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿಕೊಳ್ಳಿ.
ಇದನ್ನು ಓದಿ
HAL ನೇಮಕಾತಿ 2026 ಈ ಹುದ್ದೆಯ ಪ್ರಯೋಜನಗಳು
ಭಾರತೀಯ ರಕ್ಷಣಾ ವಲಯದಲ್ಲಿ ಕೆಲಸ ಮಾಡುವುದು ಕೇವಲ ಒಂದು ಉದ್ಯೋಗವಲ್ಲ, ಅದೊಂದು ಹೆಮ್ಮೆಯ ವಿಷಯ. ಭಾರತದ ಹೆಮ್ಮೆಯ ನವರತ್ನ ಸಂಸ್ಥೆಯಾದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ HAL ನಲ್ಲಿ ಈ ಜೂನಿಯರ್ ಎಕ್ಸಿಕ್ಯೂಟಿವ್ ಕೆಲಸಕ್ಕೆ ಸೇರುವುದರಿಂದ ನಿಮಗೆ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ.
1. ಜಾಗತಿಕ ಮಟ್ಟದ ಅನುಭವ (Elite Work Experience)
- ಈ ಸಂಸ್ಥೆಯು ಭಾರತೀಯ ಸೇನೆಗೆ ಬೇಕಾದ ಸುಖೋಯ್, ತೇಜಸ್ ಯುದ್ಧ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳನ್ನು ತಯಾರಿಸುತ್ತದೆ.
- ಇಲ್ಲಿ ಕೆಲಸ ಮಾಡುವುದರಿಂದ ನಿಮಗೆ ಅತ್ಯಾಧುನಿಕ ವೈಮಾಲಿಕ ತಂತ್ರಜ್ಞಾನ (Aerospace Technology) ಮತ್ತು ವಿಶ್ವ ದರ್ಜೆಯ ಇಂಜಿನಿಯರಿಂಗ್ ಪ್ರಕ್ರಿಯೆಗಳನ್ನು ಹತ್ತಿರದಿಂದ ಕಲಿಯುವ ಮತ್ತು ಕೆಲಸ ಮಾಡುವ ಮಹತ್ವದ ಅವಕಾಶ ಸಿಗುತ್ತದೆ.
2. ವೃತ್ತಿಜೀವನಕ್ಕೆ ಬಲವಾದ ಅಡಿಪಾಯ (Career Growth)
- ಇದು ಮೂರು ವರ್ಷಗಳ ತಾತ್ಕಾಲಿಕ ಅವಧಿಯ ಕೆಲಸವಾಗಿದ್ದರು, ಈ ಸಂಸ್ಥೆಯಂತಹ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಪಡೆದ ಅನುಭವದ ಪ್ರಮಾಣ ಪತ್ರಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುತ್ತದೆ.
- ಈ ಮೂರು ವರ್ಷಗಳ ಅನುಭವದ ನಂತರ ನೀವು ಇಸ್ರೋ (ISRO),(DRDO),(BEL) ಅಥವಾ ಖಾಸಗಿ ಏರೋ ಸ್ಪೇಸ್ ಸಂಸ್ಥೆಗಳಲ್ಲಿ ಹುದ್ದೆಗಳಿಗೆ ಸುಲಭವಾಗಿ ಆಯ್ಕೆಯಾಗಬಹುದು.
3. ಆಕರ್ಷಕ ವೇತನ ಮತ್ತು ಸೌಲಭ್ಯಗಳು (Financial Stability)
- ಆರಂಭಿಕ ಹಂತದ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ತಿಂಗಳಿಗೆ ₹30,000 ರಿಂದ ₹1,20,000 ವರೆಗಿನ ವೇತನ ಶ್ರೇಣಿ ಸಿಗುತ್ತದೆ.
- ಇದರೊಂದಿಗೆ DA, HRA ಮತ್ತು ಕಂಪನಿಯ ನಿಯಮಾವಳಿಗಳ ಪ್ರಕಾರ ಇತರ ವೈದ್ಯಕೀಯ ಹಾಗೂ ಕ್ಯಾಂಟೀನ್ ಸೌಲಭ್ಯಗಳು ಲಭ್ಯವಿರುತ್ತದೆ.
4. ದೇಶ ಸೇವೆ ಮಾಡುವ ಹೆಮ್ಮೆ (Pride and Job Satisfaction)
- ದೇಶದ ರಕ್ಷಣೆ ಮತ್ತು ಭದ್ರತೆಗೆ ನೇರವಾಗಿ ಕೊಡುಗೆ ನೀಡುವ ಹೆಮ್ಮೆ ಈ ಕೆಲಸದಲ್ಲಿದೆ.
- ಭಾರತೀಯ ರಕ್ಷಣಾ ಪಡೆಗಳನ್ನು ಸಶಕ್ತಗೊಳಿಸುವ ಉತ್ಪಾದನಾ ಪ್ರಕ್ರಿಯೆಯಲ್ಲಿ ನೀವು ಭಾಗಿಯಾಗುತ್ತೀರಿ.
5. ಸುಲಭವಾದ ಆಯ್ಕೆ ಪ್ರಕ್ರಿಯೆ ( Direct Gateway)
- ಸಾಮಾನ್ಯವಾಗಿ ಇಂತಹ ದೊಡ್ಡ ಸಂಸ್ಥೆಗಳಿಗೆ ಸೇರಲು ಕಠಿಣವಾದ ಗೇಟ್ ಪರೀಕ್ಷೆ ಅಥವಾ ಕಠಿಣ ಲಿಖಿತ ಪರೀಕ್ಷೆಗಳನ್ನು ಪಾಸ್ ಮಾಡಬೇಕಾಗುತ್ತದೆ.
- ಆದರೆ ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ನಿಮ್ಮ ಇಂಜಿನಿಯರಿಂಗ್ ಅಂಕಗಳು ಮತ್ತು ಸಂದರ್ಶನದ ಆಧಾರದ ಮೇಲೆ ನೇರವಾದ ಆಯ್ಕೆ ಮಾಡಲಾಗುತ್ತಿರುವುದು ಅಭ್ಯರ್ಥಿಗಳಿಗೆ ಸಿಕ್ಕಿರುವ ಅತಿ ದೊಡ್ಡ ಸುಲಭ ಅವಕಾಶವಾಗಿದೆ.
ಅರ್ಜಿ ಸಲ್ಲಿಕೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಅರ್ಜಿಯನ್ನು ಆದಷ್ಟು ಬೇಗ ಸಲ್ಲಿಸಲು ಪ್ರಯತ್ನಿಸಿ ಏಕೆಂದರೆ ಕೊನೆಯ ದಿನದಲ್ಲಿ ಉಂಟಾಗುವ ಸರ್ವ ಸಮಸ್ಯೆಗಳನ್ನು ತಪ್ಪಿಸಲು ಇದು ಮುಖ್ಯವಾಗುತ್ತದೆ. HAL ನೇಮಕಾತಿ 2026 ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕಾಗಲಿ ಎಂದು ಆಶಿಸುತ್ತಾ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಶುಭವಾಗಲಿ.
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ
Scholarship: Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.